ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.
ಕ್ವಿಜ್-23
Question 1 |
1. ಸಾಮಾನ್ಯವಾಗಿ ಮನೆಗಳಲ್ಲಿ ಬಳಸುವ ಟಂಗ್ ಸ್ಟನ್ ಹೊಂದಿರುವ (ಬುರುಡೆ ಬಲ್ಬ್) ವಿದ್ಯುತ್ ದೀಪಗಳು ಪ್ಲೋರಸೆಂಟ್ ದೀಪಗಳಿಗಿಂತ ಕಡಿಮೆ ಜೀವಾವಧಿಯನ್ನು ಹೊಂದಿರಲು ಕಾರಣವೇನೆಂದರೆ
1. ಟಂಗ್ ಸ್ಟನ್ ತಂತಿಯ ಎಳೆಯಲ್ಲಿ (ಫಿಲಮೆಂಟ್ ವೈರ್ ನಲ್ಲಿ) ಏಕರೂಪತೆ ಇರುವುದಿಲ್ಲ
2. ಬಲ್ಬ್ ನ ಒಳಗಡೆ ಸಂಪೂರ್ಣ ನಿರ್ವಾತ ಮಾಡಲು ಸಾಧ್ಯವಿಲ್ಲ
3. ಟಂಗ್ ಸ್ಟನ್ ಹಿಡಿದಿರುವ ತಂತಿಗಳು ಅಧಿಕ ತಾಪಮಾನದಲ್ಲಿ ಕರಗಿ ಹೋಗುತ್ತದೆ
ಮೇಲ್ಕಂಡ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ:-
1 ಮತ್ತು 2 | |
1 ಮತ್ತು 3 | |
2 ಮತ್ತು 3 | |
ಮೇಲಿನ ಎಲ್ಲವೂ |
Question 2 |
2.ನೇತ್ರದಾನಕ್ಕೆ ಸಂಬಂಧಿಸಿದಂತೆ, ಕಣ್ಣುಗಳನ್ನು ವ್ಯಕ್ತಿಯು ಮೃತಪಟ್ಟ 4 ರಿಂದ 6 ಗಂಟೆಗಳೊಳಗಾಗಿ ದಾನ ಮಾಡಬೇಕಾಗುತ್ತದೆ. ನೇತ್ರದಾನದ ಸಂದರ್ಭದಲ್ಲಿ ಕಣ್ಣಿನ ಈ ಕೆಳಕಂಡ ಯಾವ ಭಾಗವನ್ನು ಸಂರಕ್ಷಿಸಿಡುತ್ತಾರೆ.
ಪಾರದರ್ಶಕ ಪಟಲ (ಕಾರ್ನಿಯಾ) | |
ಕಣ್ಣು ಗುಡ್ಡೆಯ ಸುತ್ತಲಿರುವ ವೃತ್ತಾಕಾರದ ಪೊರೆ (ಐರಿಸ್) | |
ಮಸೂರ (ಲೆನ್ಸ್) | |
ಅಕ್ಷಿ ಪಟಲ (ರೆಟಿನಾ) |
Question 3 |
3. ಯೂರೋಪಿನ ಒಕ್ಕೂಟಕ್ಕೆ ಸಂಬಂಧಿಸಿದಂತೆ (European Union) ಈ ಹೇಳಿಕೆಗಳನ್ನು ಗಮನಿಸಿ
1. ಯೂರೋಪಿನ ಒಕ್ಕೂಟದಲ್ಲಿ ಒಟ್ಟು 27 ಸದಸ್ಯ ರಾಷ್ಟ್ರಗಳಿವೆ
2. ಯೂರೋಪಿನ ಒಕ್ಕೂಟದ ರಾಷ್ಟ್ರಗಳ ಪೌರರು ದ್ವಿಪೌರತ್ವವನ್ನು ಹೊಂದಿರುತ್ತಾರೆ
3. ಸ್ವಿಟ್ಜರ್ ಲ್ಯಾಂಡ್ ಯೂರೋಪಿನ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ
4. 1999 ರಲ್ಲಿ ಯೂರೋ ವಲಯ ಅಸ್ತಿತ್ವಕ್ಕೆ ಬಂತು
ಈ ಹೇಳಿಕೆಗಳಲ್ಲಿ ಸರಿಯಾದವು ಯಾವುವು
1, 2 ಮತ್ತು 3 | |
2, 3 ಮತ್ತು 4 | |
1, 2 ಮತ್ತು 4 | |
ಮೇಲಿನ ಎಲ್ಲವೂ |
Question 4 |
4.ಭಾರತದಲ್ಲಿ ಬ್ರಿಟನ್ನಿನ ಸಂವಿಧಾನಾತ್ಮಕ ಪ್ರಯೋಗಗಳಲ್ಲಿ ಅತ್ಯಂತ ಅಲ್ಪಾವಧಿಯದ್ದೆಂದರೆ
1861 ರ ಭಾರತೀಯ ಕೌನ್ಸಿಲ್ ಗಳ ಕಾಯಿದೆ | |
1892 ರ ಭಾರತೀಯ ಕೌನ್ಸಿಲ್ ಗಳ ಕಾಯಿದೆ | |
1909 ರ ಭಾರತೀಯ ಕೌನ್ಸಿಲ್ ಗಳ ಕಾಯಿದೆ | |
1919 ರ ಭಾರತೀಯ ಕೌನ್ಸಿಲ್ ಗಳ ಕಾಯಿದೆ |
Question 5 |
5. ಟೆನ್ನಿಸ್ ನಲ್ಲಿ ಒಬ್ಬ ಆಟಗಾರನು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳಿಸಲು ಈ ಕೆಳಗಿನ ಯಾವ ಪಂದ್ಯಾವಳಿಗಳಲ್ಲಿ ವಿಜಯಿಯಾಗಬೇಕಾಗುತ್ತದೆ
1. ಆಸ್ಟ್ರೇಲಿಯನ್ ಓಪನ್
2. ಫ್ರೆಂಚ್ ಓಪನ್
3. ಜಪಾನ್ ಓಪನ್
4. ವಿಂಬಲ್ಡನ್ ಓಪನ್
5. ಯು.ಎಸ್.ಓಪನ್
6. ಡೇವಿಸ್ ಕಪ್ ಓಪನ್
1, 2, 5 ಮತ್ತು 6 | |
1, 2, 4 ಮತ್ತು 5 | |
1, 2, 3, 4 ಮತ್ತು 5 | |
ಮೇಲಿನ ಎಲ್ಲವೂ |
(ಟೆನ್ನಿಸ್ ನಲ್ಲಿ ಆಟಗಾರನೊಬ್ಬ “ಗ್ರ್ಯಾಂಡ್ ಸ್ಲಾಮ್ “ ಪ್ರಶಸ್ತಿಗಳಿಸಲು ಒಂದೇ ವರ್ಷದಲ್ಲಿ ನಾಲ್ಕು ಪ್ರಮುಖ ಪಂದ್ಯಾವಳಿಗಳಾದ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಓಪನ್ ಮತ್ತು ಯು.ಎಸ್.ಓಪನ್ ಪಂದ್ಯಗಳಲ್ಲಿ ಚಾಂಪಿಯನ್ ಪಟ್ಟ ಪಡೆಯಬೇಕಾಗುತ್ತದೆ.)
Question 6 |
6. ಭಾರತದಲ್ಲಿ ವಾಸವಿರುವ ಈ ಕೆಳಗಿನ ಯಾರಿಗೆ ಸಂವಿಧಾನದಲ್ಲಿ ಮೀಸಲಾತಿ ಮತ್ತು ಇತರೆ ಸೌಲಭ್ಯ ನೀಡಲು ಮಾನ್ಯ ಮಾಡಿದೆ.
ಧಾರ್ಮಿಕ ಅಲ್ಪಸಂಖ್ಯಾತರನ್ನು ಮಾತ್ರ | |
ಭಾಷಾ ಅಲ್ಪಸಂಖ್ಯಾತರನ್ನು ಮಾತ್ರ | |
ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರನ್ನು | |
ಭಾಷಾ ಮತ್ತು ಜನಾಂಗೀಯ ಅಲ್ಪಸಂಖ್ಯಾತರನ್ನು |
Question 7 |
7. ಪಟ್ಟಿ I ರಲ್ಲಿ ಕೊಟ್ಟಿರುವ ಹಾರ್ಮೋನ್ ಗಳನ್ನು ಪಟ್ಟಿ II ರಲ್ಲಿರುವ ಅದರ ಅಂಶಗಳೊಂದಿಗೆ ಹೊಂದಿಸಿ, ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
ಪಟ್ಟಿ I ಪಟ್ಟಿ II
A. ಅಡ್ರಿನಲಿನ್ 1. ವಾಸನಾಯುಕ್ತ ಪ್ರಜ್ಞಾವಾಹಿಯ ಮೂಲಕ ಸಂಗಾತಿಗಳನ್ನು ಆಕರ್ಷಿಸುವುದು
B. ಈಸ್ಟ್ರೋಜನ್ 2. ಕೋಪ, ಭಯ, ಅಪಾಯ
C. ಇನ್ಸುಲಿನ್ 3. ಸ್ತ್ರೀಯರು
D. ಫರ್ಮೋನ್ಸ್ 4. ಗ್ಲೂಕೋಸ್
ಸಂಕೇತಗಳು:
A-2, B-3, C-4, D-1 | |
A-4, B-3, C-1, D-2 | |
A-1, B-4, C-3, D-2 | |
A-3, B-1, C-2, D-4 |
Question 8 |
8. ಭಾರತ ಸಂವಿಧಾನಕ್ಕೆ ತಿದ್ದುಪಡಿ ಕಾರ್ಯವಿಧಾನವನ್ನು ಇವರು ಆರಂಭಿಸಬಹುದಾಗಿದೆ
1. ರಾಷ್ಟ್ರಪತಿ
2. ಲೋಕಸಭೆ
3. ರಾಜ್ಯಸಭೆ
4. ರಾಜ್ಯ ಶಾಸಕಾಂಗಗಳು
ಈ ಮೇಲ್ಕಂಡ ಹೇಳಿಕೆಗಳಲ್ಲಿ ಯಾವುದು ಸರಿ
2 ಮಾತ್ರ | |
1 ಮತ್ತು 2 | |
1, 2 ಮತ್ತು 4 | |
2 ಮತ್ತು 3 |
Question 9 |
9.ಆದಾಯ ತೆರಿಗೆ ವಿಧಿಸುವಿಕೆ, ಸಂಗ್ರಹಣೆ ಮತ್ತು ಹಂಚಿಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ
ಕೇಂದ್ರವು ಆದಾಯ ತೆರಿಗೆಯನ್ನು ವಿಧಿಸುತ್ತದೆ, ಸಂಗ್ರಹಿಸುತ್ತದೆ ಮತ್ತು ಬಂದ ವರಮಾನವನ್ನು ತನ್ನ ಮತ್ತು ರಾಜ್ಯಗಳ ನಡುವೆ ಹಂಚುತ್ತದೆ | |
ಕೇಂದ್ರವು ಆದಾಯ ತೆರಿಗೆಯನ್ನು ವಿಧಿಸುತ್ತದೆ, ಸಂಗ್ರಹಿಸುತ್ತದೆ ಹಾಗೂ ಎಲ್ಲಾ ವರಮಾನವನ್ನು ತಾನೆ ಇಟ್ಟುಕೊಳ್ಳುತ್ತದೆ | |
ಕೇಂದ್ರವು ಆದಾಯ ತೆರಿಗೆಯನ್ನು ವಿಧಿಸುತ್ತದೆ ಮತ್ತು ವಸೂಲಿ ಮಾಡುತ್ತದೆ, ಆದರೆ ಬಂದ ಎಲ್ಲಾ ವರಮಾನವು ರಾಜ್ಯಗಳ ನಡುವೆ ಹಂಚಲ್ಪಡುತ್ತದೆ | |
ಆದಾಯ ತೆರಿಗೆಯ ಮೇಲೆ ವಿಧಿಸುವ ಸರ್ಚಾರ್ಜ್ ಮಾತ್ರ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯಾಗುತ್ತದೆ |
ಕೇಂದ್ರವು ಆದಾಯ ತೆರಿಗೆಯನ್ನು ವಿಧಿಸುತ್ತದೆ, ಸಂಗ್ರಹಿಸುತ್ತದೆ ಮತ್ತು ಬಂದ ವರಮಾನವನ್ನು ತನ್ನ ಮತ್ತು ರಾಜ್ಯಗಳ ನಡುವೆ ಹಂಚುತ್ತದೆ
Question 10 |
10.ಭಾರತದಲ್ಲಿ ನೆಲೆಸಿರುವ ಯಾವುದೇ ಒಬ್ಬ ವಿದೇಶಿ ಪೌರನು ಭಾರತ ಸಂವಿಧಾನದಲ್ಲಿ ನೀಡಿರುವ ಯಾವ ಹಕ್ಕನ್ನು ಚಲಾಯಿಸುವಂತಿಲ್ಲ
ವ್ಯಾಪಾರ ಮತ್ತು ವೃತ್ತಿ ಸ್ವಾತಂತ್ರ್ಯ ಹಕ್ಕು | |
ಕಾನೂನಿನ ಮುಂದೆ ಸಮಾನತೆ ಹಕ್ಕು | |
ಪ್ರಾಣ ಮತ್ತು ವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯ ಹಕ್ಕು | |
ಧಾರ್ಮಿಕ ಸ್ವಾತಂತ್ರ್ಯದ ಹಕ್ಕು |
Good. Questions sir
Sir , super. pls paste daily current affairs affairs qstns r vimp fr exam purpose purpose. Thanku sir namasthe
superrrrrrrrrrrrrrrr
Nice