ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 19, 2016

Question 1

1.ಇತ್ತೀಚೆಗೆ ಪರೀಕ್ಷಿಸಲಾದ ಅತ್ಯಾಧುನಿಕ ಭೂಮಿಯಿಂದ ಗಾಳಿಗೆ ಚಿಮ್ಮುವ ದೂರವ್ಯಾಪ್ತಿಯ “ಬಾರಕ್-8 ಕ್ಷಿಪಣಿ (Barak Missile)”ಯನ್ನು ಭಾರತ ಯಾವ ದೇಶದ ಸಹಾಯದೊಂದಿಗೆ ಅಭಿವೃದ್ದಿಪಡಿಸಿದೆ?

A
ರಷ್ಯಾ
B
ಅಮೆರಿಕಾ
C
ಇಸ್ರೇಲ್
D
ಮೆಕ್ಸಿಕೊ
Question 1 Explanation: 
ಇಸ್ರೇಲ್:

ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಅಭಿವೃದ್ದಿಪಡಿಸಿರುವ ದೂರವ್ಯಾಪ್ತಿಯ “ಬಾರಕ್-8 ಕ್ಷಿಪಣಿ”ಯನ್ನು ಒಡಿಶಾದ ಬಾಲಸೋರ್ ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಮುಂದಿನ ದಿನಗಳಲ್ಲಿ ಹಲವು ಹಂತಗಳ ಪರೀಕ್ಷೆಯನ್ನು ನಡೆಸಲಾಗುವುದುದಾಗಿ DRDO ತಿಳಿಸಿದೆ. ಕಳೆದ ಜೂನ್ ಮತ್ತು ಜುಲೈ ತಿಂಗಳಲ್ಲಿ ಮಧ್ಯಮ ಶ್ರೇಣಿಯ ಬಾರಕ್ ಕ್ಷಿಪಣಿಗಳ ಪರೀಕ್ಷೆಯನ್ನು ಕೈಗೊಳ್ಳಲಾಗಿತ್ತು.

Question 2

2. ಈ ಕೆಳಗಿನ ಯಾರು ಭಾರತೀಯ ಜೀವಾ ವಿಮಾ ನಿಗಮ (LIC)ದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?

A
ವಿ ಕೆ ಶರ್ಮಾ
B
ಸುಪ್ರಿಯಾ ಚೌಧರಿ
C
ಎಸ್.ಕೆ. ಮಾಥಯ್
D
ಚರಣ್ ರಾಥೋಡ್
Question 2 Explanation: 
ವಿ ಕೆ ಶರ್ಮಾ:

ಭಾರತೀಯ ಜೀವಾ ವಿಮಾ ನಿಗಮ (LIC)ದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ವಿ ಕೆ ಶರ್ಮಾ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಎಸ್.ಕೆ.ರಾಯ್ ಅವರಿಂದ ತೆರವಾಗಿದ್ದ ಸ್ಥಾನವನ್ನು ಶರ್ಮಾ ತುಂಬಲಿದ್ದಾರೆ. ಹರಣವೊಂದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕಾರಣ ಎಸ್.ಕೆ. ಶರ್ಮಾ ಅವರ ವಿರುದ್ದ ಪ್ರಕರಣ ದಾಖಲಾಗಿದ್ದು, ರಾಜೀನಾಮೆ ನೀಡಿದ್ದರು.

Question 3

3. “ಡೆಮೋಕ್ರಾಟ್ಸ್ ಅಂಡ್ ಡಿಸೆಂಟರ್ಸ್ (Democrats and Dissenters)” ಪುಸ್ತಕದ ಲೇಖಕರು ______?

A
ಶೇಖರ್ ಭಾಟಿಯಾ
B
ರಾಮಚಂದ್ರ ಗುಹಾ
C
ಮನೀಶ್ ಅಗರವಾಲ್
D
ಸುರೇಶ್ ಸಿಸೋಡಿಯಾ
Question 3 Explanation: 
ರಾಮಚಂದ್ರ ಗುಹಾ:

ಖ್ಯಾತ ಇತಿಹಾಸಗಾರ ರಾಮಚಂದ್ರ ಗುಹಾ ಅವರು “ಡೆಮೋಕ್ರಾಟ್ಸ್ ಅಂಡ್ ಡಿಸೆಂಟರ್ಸ್” ಪುಸ್ತಕದ ಲೇಖಕರು. ಪುಸ್ತವು ಹದಿನಾರು ಪ್ರಬಂಧಗಳನ್ನು ಒಳಗೊಂಡಿದ್ದು, ನೆರೆಹೊರೆ ದೇಶಗಳೊಂದಿಗೆ ಭಾರತದ ಸಂಬಂಧ, ಅಭಿವ್ಯಕ್ತಿ ಸ್ವಾಂತಂತ್ರ್ಯ ಮತ್ತು ಬುಡಕಟ್ಟು ಜನರ ಮೇಲಾಗುತ್ತಿರುವ ತಾರತಮ್ಯದ ಬಗ್ಗೆ ಪುಸ್ತಕದಲ್ಲಿ ಹೇಳಲಾಗಿದೆ.

Question 4

4. “2016 ಸಿಂಗಾಪುರ ಗ್ರಾಂಡ್ ಪ್ರಿಕ್ಸ್ ಫಾರ್ಮುಲಾ-1” ರೇಸ್ ನಲ್ಲಿ ಪ್ರಶಸ್ತಿ ಗೆದ್ದವರು ಯಾರು?

A
ನಿಕೊ ರೋಸ್ಬರ್ಗ್
B
ಡೇನಿಯಲ್ ರಿಕಿಯಾರ್ಡೊ
C
ಸೆಬೆಸ್ಟಿಯನ್ ವೆಟ್ಟಲ್
D
ಲೆವಿಸ್ ಹ್ಯಾಮಿಲ್ಟನ್
Question 4 Explanation: 
ನಿಕೊ ರೋಸ್ಬರ್ಗ್:

ಮರ್ಸಿಡೀಸ್ನ ಜರ್ಮನಿಯ ಚಾಲಕ ನಿಕೊ ರೋಸ್ಬರ್ಗ್ ಅವರು 2016ರ ಸಿಂಗಪುರ ಗ್ರಾಂಡ್ ಪ್ರೀಯಲ್ಲಿ ವಿಜೇತರಾಗಿದ್ದಾರೆ. ಈ ರೇಸ್ನಲ್ಲಿ ಗೆಲ್ಲುವ ಮೂಲಕ ಫಾರ್ಮ್ಯೂಲಾ ಒನ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ತಮ್ಮದೇ ತಂಡದ ಲೂಯಿಸ್ ಹ್ಯಾಮಿಲ್ಟನ್ ಅವರನ್ನು ಎರಡನೇ ಸ್ಥಾನಕ್ಕೆ ದೂಡಿದ್ದಾರೆ. ಚಾಲಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಮರ್ಸಿಡಿಸ್ ನ ಹ್ಯಾಮಿಲ್ಟನ್ ಅವರು 8.038 ಸೆಕೆಂಡುಗಳು ತಡವಾಗಿ ಮೂರನೇ ಸ್ಥಾನದಲ್ಲಿ ರೇಸ್ ಮುಗಿಸಿದರು.

Question 5

5. ಇತ್ತೀಚೆಗೆ ನಡೆದ ರಷ್ಯಾದ ಸಂಸತ್ತು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಕ್ಷ ಯಾವುದು?

A
ಯುನೈಟೆಡ್ ರಷ್ಯಾ ಪಕ್ಷ
B
ಲಿಬರಲ್ ಡೆಮಾಕ್ರೆಟಿಕ್ ಪಕ್ಷ
C
ಕಮ್ಯುನಿಷ್ಟ್ ಪಕ್ಷ
D
ಜಸ್ಟ್ ರಷ್ಯಾ ಪಕ್ಷ
Question 5 Explanation: 
ಯುನೈಟೆಡ್ ರಷ್ಯಾ ಪಕ್ಷ:

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೇತೃತ್ವದ ಆಡಳಿತರೂಢ “ಯುನೈಟೆಡ್ ರಷ್ಯಾ ಪಕ್ಷ” ಗೆಲುವು ಸಾಧಿಸಿದ್ದು, ನಾಲ್ಕನೇ ಬಾರಿಗೆ ಪುಟಿನ್ ಅಧ್ಯಕ್ಷರಾಗಿ ನೇಮಕಗೊಳ್ಳವುದು ಖಚಿತವಾಗಿದೆ. ಕಮ್ಯುನಿಷ್ಟ್ ಪಕ್ಷ ಎರಡನೇ ಸ್ಥಾನವನ್ನು ಪಡೆದುಕೊಂಡರೆ, ಲಿಬರಲ್ ಡೆಮಾಕ್ರೆಟಿಕ್ ಪಕ್ಷ ಮತ್ತು ಜಸ್ಟ್ ರಷ್ಯಾ ಪಕ್ಷ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದುಕೊಂಡಿವೆ.

Question 6

6. ಕೇಂದ್ರ ಲೋಕ ಸೇವಾ ಆಯೋಗ (UPSC)ಯ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?

A
ದೀಪಕ್ ಗುಪ್ತಾ
B
ರಮೇಶ್ ಕುಲಕರ್ಣಿ
C
ಅಲಾಕ ಸಿರೋಹಿ
D
ಮಮತಾ ಪಾಂಡೆ
Question 6 Explanation: 
ಅಲಾಕ ಸಿರೋಹಿ:

ನಿವೃತ್ತ ಐಎಎಸ್ ಅಧಿಕಾರಿ ಅಲಕಾ ಸಿರೋಹಿ ಅವರು ಕೇಂದ್ರ ಲೋಕಸೇವಾ (ಯುಪಿಎಸ್ಸಿ) ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅಲಕಾ ಅವರು ಪ್ರಸ್ತುತ ಕೇಂದ್ರ ಲೋಕಸೇವಾ ಆಯೋಗದ ಹಾಲಿ ಸದಸ್ಯರು. ಇವರ ಅಧಿಕಾರ ಅವಧಿ 2017 ಜನವರಿ 3 ರವರೆಗೂ ಇರಲಿದೆ .ದೀಪಕ್ ಗುಪ್ತಾ ಅವರ ರಾಜೀನಾಮೆಯಿಂದ ಯುಪಿಎಸ್ಸಿ ಅಧ್ಯಕ್ಷ ಸ್ಥಾನ ತೆರವಾಗಿತ್ತು.

Question 7

7. ಜಗತ್ತಿನ ಅತಿ ಎತ್ತರದ ದೇವಾಲಯ ಎನಿಸಲಿರುವ “ಚಂದ್ರೋದಯ ದೇವಾಲಯ” ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?

A
ಮಹಾರಾಷ್ಟ್ರ
B
ಕರ್ನಾಟಕ
C
ಉತ್ತರ ಪ್ರದೇಶ
D
ಗುಜರಾತ್
Question 7 Explanation: 
ಉತ್ತರ ಪ್ರದೇಶ:

ಜಗತ್ತಿನಲ್ಲೇ ಅತೀ ಎತ್ತರದ ದೇವಾಲಯ ಉತ್ತರ ಪ್ರದೇಶದ ವೃಂದಾವನದಲ್ಲಿ ಸ್ಥಾಪನೆಯಾಗುತ್ತಿದೆ. ವಿಶ್ವದ ಎತ್ತರ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾಗಿರುವ ದುಬೈನ ಬುರ್ಜ್ ಖಲೀಫಾಗಿಂತ ಇದು ಎತ್ತರವಿರಲಿದೆ. ಬೆಂಗಳೂರು ಮೂಲದ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ಈ ಅತಿ ಎತ್ತರದ ಚಂದ್ರೋದಯ ಮಂದಿರ ನಿರ್ಮಾಣ ಮಾಡುತ್ತಿದೆ. ದೇಗುಲದ ಗೋಪುರ 700 ಅಡಿ ಎತ್ತರವಿರಲಿದ್ದು, ದುಬೈನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾಗಿಂತ 5 ಅಡಿ ಹೆಚ್ಚು ಆಳದ ಅಡಿಪಾಯ ಈ ಮಂದಿರಕ್ಕಿರಲಿದೆ.ಮೂಲಗಳ ಪ್ರಕಾರ ಬುರ್ಜ್ ಖಲೀಫಾ ಕಟ್ಟಡಕ್ಕೆ 50 ಮೀಟರ್ ಆಳದ ಅಡಿಪಾಯ ಹಾಕಲಾಗಿದ್ದು, ಪ್ರಸ್ತುತ ನಿರ್ಮಾಣವಾಗುತ್ತಿರುವ ಚಂದ್ರೋದಯ ಮಂದಿರಕ್ಕೆ 55 ಮೀಟರ್ ಆಳದ ಅಡಿಪಾಯ ಹಾಕಲಾಗುತ್ತಿದೆ. ಈ ವಿಶೇಷ ಅಡಿಪಾಯದಲ್ಲಿ 511 ಅಂಕಣಗಳಿದ್ದು, ಅಡಿಪಾಯದಲ್ಲಿನ 140 ಅಂಕಣಗಳ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಅಂಕಣಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮುಂದಿನ ವರ್ಷದ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಇಸ್ಕಾನ್ ಆಡಳಿತ ಮಂಡಳಿ ತಿಳಿಸಿದೆ.

Question 8

8. ಈ ಕೆಳಗಿನ ಯಾವ ಐಐಟಿಯಲ್ಲಿ “ಪರಂ ಇಶಾನ್ (Param Ishan)” ಹೆಸರಿನ ಸೂಪರ್ ಕಂಪ್ಯೂಟರ್ ಗೆ ಚಾಲನೆ ನೀಡಲಾಯಿತು?

A
ಐಐಟಿ ಖರಗಪುರ್
B
ಐಐಟಿ ಕಾನ್ಪುರ
C
ಐಐಟಿ ಗುವಾಹಟಿ
D
ಐಐಟಿ ರಾಂಚಿ
Question 8 Explanation: 
ಐಐಟಿ ಗುವಾಹಟಿ:

ಈಶಾನ್ಯ ಭಾರತದ ಅತ್ಯಂತ ವೇಗದ ಮತ್ತು ಅಧಿಕ ಸಾಮರ್ಥ್ಯದ ಸೂಪರ್ ಕಂಪ್ಯೂಟರ್ “ಪರಂ ಇಶಾನ್”ಗೆ ಐಐಟಿ ಗುವಾಹಟಿಯಲ್ಲಿ ಚಾಲನೆ ನೀಡಲಾಯಿತು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ಪ್ರಕಾಶ್ ಜಾವೇದಕರ್ ಅವರು ಉದ್ಘಾಟಿಸಿದರು. ಗಣಕೀಕೃತ ರಸಾಯನಶಾಸ್ತ್ರ, ಗಣಕೀಕೃತ ಪ್ಲೂಯಿಡ್ ಡೈನಾಮಿಕ್ಸ್, ಸಿವಿಲ್ ಇಂಜನಿಯರಿಂಗ್ ವಿಭಾಗದಲ್ಲಿ ಈ ಸೂಪರ್ ಕಂಪ್ಯೂಟರ್ ಬಳಸಬಹುದಾಗಿದೆ. ಅಲ್ಲದೇ ಈಶಾನ್ಯ ರಾಜ್ಯಗಳಲ್ಲಿ ಅಧಿಕ ಮಳೆಯಿಂದ ಉಂಟಾಗುವ ಪ್ರವಾಹ, ಭೂಕುಸಿತ ಮತ್ತು ಹವಾಮಾನ ಬದಲಾವಣೆ ಅಧ್ಯಕನಕ್ಕೂ ಇದರ ಬಳಕೆಯಾಗಲಿದೆ. ಗಾಳಿಯಲ್ಲಿ ಶತ್ರು ಕ್ಷಿಪಣೆ, ಹೆಲಿಕಾಪ್ಟರ್ ನಂತಹವುಗಳನ್ನು ನಿಖರವಾಗಿ ಹೊಡೆದು ಉರುಳಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ.

Question 9

9. ಬೌದ್ದರ ಪ್ರಸಿದ್ದ ಹಬ್ಬ “ನರೋಪ ಹಬ್ಬ (Naropa Festival)” ಇತ್ತೀಚೆಗೆ ಯಾವ ರಾಜ್ಯದಲ್ಲಿ ಆರಂಭಗೊಂಡಿತು?

A
ಮಹಾರಾಷ್ಟ್ರ
B
ಗುಜರಾತ್
C
ಜಮ್ಮು ಮತ್ತು ಕಾಶ್ಮೀರ
D
ರಾಜಸ್ತಾನ
Question 9 Explanation: 
ಜಮ್ಮು ಮತ್ತು ಕಾಶ್ಮೀರ:

ಬೌದ ದರ್ಮದ ಪ್ರಸಿದ್ದ ಹಬ್ಬ “ನರೋಪ” ಜಮ್ಮು ಮತ್ತು ಕಾಶ್ಮೀರದ ಬೌದ್ದ ಧಾರ್ಮಿಕ ಕೇಂದ್ರ ಹೆಮಿಸ್ ನಲ್ಲಿ ಆರಂಭಗೊಂಡಿದೆ. ನರೋಪ ಹಬ್ಬವನ್ನು ಪ್ರತಿ 12 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಈ ವರ್ಷ ಬೌದ್ದ ದಾರ್ಮಿಕ ಗುರು ನರೋಪ ಅವರ 1000 ನೇ ಜನ್ಮ ವಾರ್ಷಿಕೋತ್ಸವ ಹಬ್ಬದ ಮುಖ್ಯ ಆಕರ್ಷಣೆಯಾಗಿದೆ.

Question 10

10. ಯಾವ ದೇಶ “2017 ಆಫ್ರಿಕಾ ಅಭಿವೃದ್ದಿ ಬ್ಯಾಂಕ್ (African Development Bank)”ನ ವಾರ್ಷಿಕ ಸಭೆಯನ್ನು ಆಯೋಜಿಸಲಿದೆ?

A
ಕೀನ್ಯಾ
B
ಭಾರತ
C
ಶ್ರೀಲಂಕಾ
D
ನೈಜೀರಿಯಾ
Question 10 Explanation: 
ಭಾರತ:

2017 ಆಫ್ರಿಕಾ ಅಭಿವೃದ್ದಿ ಬ್ಯಾಂಕ್ (African Development Bank)ನ ವಾರ್ಷಿಕ ಸಭೆ ಭಾರತದಲ್ಲಿ ನಡೆಯಲಿದೆ. ಈ ಸಂಬಂಧ ಭಾರತ ಮತ್ತು ಆಫ್ರಿಕಾ ಅಭಿವೃದ್ದಿ ಬ್ಯಾಂಕ್ ಒಪ್ಪಂದಕ್ಕೆ ಇತ್ತೀಚೆಗೆ ಸಹಿ ಹಾಕಿವೆ. ಗುಜರಾತ್ ನ ಅಹಮದಬಾದನಲ್ಲಿರುವ ಮಹಾತ್ಮ ಗಾಂಧಿ ಭವನದಲ್ಲಿ ಮೇ 22-26 ರಂದು ನಡೆಯಲಿದೆ. ಈ ಸಭೆಯಲ್ಲಿ ಆಫ್ರಿಕಾ ಅಭಿವೃದ್ದಿ ಬ್ಯಾಂಕ್ 80 ಸದಸ್ಯ ರಾಷ್ಟ್ರಗಳ ಗವರ್ನರ್ಗಳು, ಉದ್ಯಮಿಗಳು, ಆರ್ಥಿಕ ಚಿಂತಕರು ಸೇರಿದಂತೆ ಸುಮಾರು 5000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

There are 10 questions to complete.

[button link=”http://www.karunaduexams.com/wp-content/uploads/2016/09/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಸೆಪ್ಟೆಂಬರ್-ಕ್ವಿಜ್-19.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 19, 2016”

Leave a Comment

This site uses Akismet to reduce spam. Learn how your comment data is processed.