ಭಾರತ ಹಕ್ಕಿ ಜ್ವರ (H5N1) ಮುಕ್ತ ರಾಷ್ಟ್ರ: ಸರ್ಕಾರದಿಂದ ಸ್ವಯಂ ಘೋಷಣೆ

ಭಾರತ ಹಕ್ಕಿ ಜ್ವರದಿಂದ ಮುಕ್ತಿ (Avian Influenza (H5N1))ಹೊಂದಿದೆ ಎಂದು ಸ್ವಯಂ ಘೋಷಣೆ ಹೊರಡಿಸಿದೆ. ಅದರಂತೆ ಈ ವಿಷಯವನ್ನು ಪ್ರಾಣೆ ಆರೋಗ್ಯ ವಿಶ್ವ ಸಂಸ್ಥೆ (OIE)ಗೂ ತಿಳಿಸಿದೆ. ಈ ವಿಷಯವನ್ನು ಕೇಂದ್ರ ಕೃಷಿ ಸಚಿವಾಲಯದ ಪಶುಸಂಗೋಪನೆ, ಡೈರಿ ಮತ್ತು ಮೀನುಗಾರಿಕೆ ಇಲಾಖೆ ತಿಳಿಸಿದೆ. ಕಳೆದ ಜೂನ್ 2016, ಬೀದರ್ ನ ಹುಮ್ನಾಬಾದ್ ನಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ ಪ್ರಕರಣ ದೇಶದಲ್ಲಿ ಪತ್ತೆಯಾದ ಕೊನೆಯ ಪ್ರಕರಣವಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಭಾರತವನ್ನು ಹಕ್ಕಿ ಜ್ವರ ಮುಕ್ತವೆಂದು ಘೋಷಿಸಿದೆ.

ಹಕ್ಕಿ ಜ್ವರ ನಿರ್ಮೂಲನೆಗೆ ಕೈಗೊಂಡ ಕ್ರಮಗಳು:

  • ಸೋಕಿಂತ ಕೋಳಿಗಳು ಮತ್ತು ಮೊಟ್ಟೆಗಳನ್ನು ನಾಶಪಡಿಸಲು ಸರ್ಕಾರ ಕ್ರಮಕೈಗೊಂಡಿತ್ತು.
  • ಸೋಂಕು ಕಾಣಿಸಿಕೊಂಡ ಪ್ರದೇಶಗಳಲ್ಲಿ ಕೋಳಿ ಮತ್ತು ಅವುಗಳ ಉತ್ಪನ್ನದ ಸಾಗಾಣಿಕೆ ಮೇಲೆ ನಿಷೇದ ಹೇರಲಾಗಿತ್ತು. ಸೋಂಕು ಕಾಣಿಸಿಕೊಂಡ ಪ್ರದೇಶದಲ್ಲಿ ಸ್ವಚ್ಚತೆ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು.
  • ಇದಾದ ನಂತರ ಸರ್ಕಾರ ರಾಷ್ಟ್ರವ್ಯಾಪ್ತಿ ಹಕ್ಕಿ ಜ್ವರ ಸಮೀಕ್ಷೆಯನ್ನು ಕೈಗೊಂಡಿತ್ತು. ಸಮೀಕ್ಷೆಯಲ್ಲಿ ಹೊಸ ಪ್ರಕರಣಗಳು ಕಂಡುಬರದ ಕಾರಣ ಹಕ್ಕಿ ಜ್ವರ ನಿರ್ಮೂಲನೆ ಮಾಡಲಾಗಿದೆಯೆಂದು ಘೋಷಿಸಿದೆ.

ಹಕ್ಕಿ ಜ್ವರದ ಬಗ್ಗೆ:

  • ಹಕ್ಕಿ ಜ್ವರ ಅಥವಾ H5N1 (Humato Glitamin Nutomeridace Lipid) ವೈರಸ್ ಮೂಲಕ ಹರಡುವ ರೋಗ. ಕೋಳಿ, ಬಾತು ಕೋಳಿ ಮತ್ತು ಗೀಜುಗಳಲ್ಲಿ ಈ ರೋಗ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ.
  • ಈ ರೋಗದ ಸೋಂಕು ಕಂಡು ಬಂದರೆ ಸಾಮೂಹಿಕವಾಗಿ ಕೋಳಿಗಳನ್ನು ನಾಶಪಡಿಸಬೇಕಾಗುತ್ತದೆ.
  • ಮನುಷ್ಯಗೆ ಎಲ್ಲಾ ತರದ ಹಕ್ಕಿ ಜ್ವರ ವೈರಸ್ ಗಳು ರೋಗ ತರುವ ಸಾಮರ್ಥ್ಯವನ್ನು ಹೊಂದಿಲ್ಲ. ಆದರೆ A H7N1 ಮತ್ತು A H5N1 ವೈರಸ್ ಮನುಷ್ಯರಲ್ಲಿ ಸೋಂಕು ಹರಡಬಲ್ಲವಾಗಿವೆ. ಸೋಂಕಿತ ಹಕ್ಕಿಗಳ ಸಂಪರ್ಕಕ್ಕೆ ಬಂದಾಗ ಮನುಷ್ಯರಲ್ಲಿ ಈ ರೋಗ ಹರಡಬಲ್ಲದಾಗಿದೆ. ಸೋಂಕಿತ ಪಕ್ಷಿಗಳ ಬೇಯಿಸಿದ ಮಾಂಸ ಸೇವೆನೆಯಿಂದ ಈ ರೋಗ ಮನುಷ್ಯರಿಗೆ ಹರಡುತ್ತದೆ ಎಂಬುದು ಧೃಡಪಟ್ಟಿಲ್ಲ.

ಸ್ವಚ್ಚ ಭಾರತ ಅಭಿಯಾನದ ಸಂಕೇತವಾಗಿ (Mascot) ಕುನ್ವರ್ ಬಾಯಿ

ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ “ಸ್ವಚ್ಚ ಭಾರತ ಅಭಿಯಾನ”ಕ್ಕೆ ಸಂಕೇತವಾಗಿ 105 ವರ್ಷದ ಹಿರಿಯ ಮಹಿಳೆ ಕುನ್ವರ್ ಬಾಯಿ ಅವರನ್ನು ಆಯ್ಕೆಮಾಡಲಾಗಿದೆ. ಕುನ್ವರ್ ಬಾಯಿ ಚತ್ತೀಸ್ ಘರ್ ನ ಧಾಂತರಿ ಜಿಲ್ಲೆಯವರು. ಸ್ವಚ್ಚತಾ ದಿವಸವಾದ ಸೆಪ್ಟೆಂಬರ್ 17 ರಂದು ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಕುನ್ವರ್ ಬಾಯಿ ಅವರನ್ನು ಸನ್ಮಾನಿಸಿದರು.

ಪ್ರಮುಖಾಂಶಗಳು:

  • ಕುನ್ವರ್ ಬಾಯಿ ರವರು ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ತಾವು ಸಾಕಿದ್ದ 8-10 ಮೇಕೆಗಳನ್ನು ಮಾರಾಟ ಮಾಡಿದ್ದರು. ಬಂದ ಹಣದಿಂದ ಎರಡು ಶೌಚಾಲಯಗಳನ್ನು ನಿರ್ಮಿಸಿ ದೇಶಕ್ಕೆ ಮಾದರಿ ಎನಿಸಿ ಸುದ್ದಿಮಾಡಿದ್ದರು.
  • ಅಷ್ಟೇ ಅಲ್ಲದೇ, ಶೌಚಾಲಯ ನಿರ್ಮಿಸಿ ಹಳ್ಳಿಯ ಇತತರಿಗೂ ಶೌಚಾಲಯದ ಬಳಕೆ ಮತ್ತು ಅದರ ಮಹತ್ವವನ್ನು ತಿಳಿಸಿಕೊಡುವ ಕಾರ್ಯವನ್ನು ಅವರು ಮಾಡಿದ್ದಾರೆ.
  • ಈ ಸಾಧನೆಯಿಂದ ಅವರ ಹಳ್ಳಿಯಲ್ಲಿ ಪ್ರತಿಯೊಂದು ಕುಟುಂಬ ಶೌಚಾಲಯ ನಿರ್ಮಿಸಿಕೊಂಡು ಈಗ ಬಯಲು ಮಲ ವಿಸರ್ಜನೆ ಮುಕ್ತ ಹಳ್ಳಿಯಾಗಿದೆ.

ಸ್ವಚ್ಚತಾ ಸಪ್ತಾಹ”ಕ್ಕೆ ಚಾಲನೆ ನೀಡಿದ ಭಾರತೀಯ ರೈಲ್ವೆ

ಸ್ವಚ್ಚ ಪರಿಸರ ದಿನದ ಅಂಗವಾಗಿ ಭಾರತೀಯ ರೈಲ್ವೆ ಸ್ವಚ್ಚತಾ ಸಪ್ತಾಹಕ್ಕೆ ಚಾಲನೆ ನೀಡಿತು. ಸೆಪ್ಟೆಂಬರ್ 17 ರಿಂದ 25 ರವರೆಗೆ ಏಳು ದಿನಗಳ ಕಾಲ ನಡೆಯಲಿರುವ ದೊಡ್ಡ ಸ್ವಚ್ಚತಾ ಕಾರ್ಯಕ್ರಮ ಇದಾಗಿದ್ದು, ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ರವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಮುಖಾಂಶಗಳು:

  • ನೈರ್ಮಲ್ಯತೆಯ ಬಗ್ಗೆ ರೈಲು ಪ್ರಯಾಣಿಕರಲ್ಲಿ ಅರಿವು ಮೂಡಿಸಿ, ರೈಲ್ವೆ ಆವರಣದಲ್ಲಿ ಸ್ವಚ್ಚತೆ ಕಾಪಾಡುವುದು ಈ ಸಪ್ತಾಹದ ಉದ್ದೇಶವಾಗಿದೆ.
  • ಸ್ವಚ್ಚ ರೈಲು ಸ್ವಚ್ಚ ಭಾರತ ಅಭಿಯಾನದಡಿ ರೈಲ್ವೆ ಇಲಾಖೆ ತೆಗೆದುಕೊಂಡಿರುವ ನಿರ್ಣಯದಂತೆ ನಡೆದುಕೊಳ್ಳಲು ಇದು ಸಹಕಾರಿಯಾಗಲಿದೆ.
  • ಈ ಸಪ್ತಾಹದಡಿ ಪ್ರತಿ ದಿನ ನಿರ್ದಿಷ್ಟಪಡಿಸಿದ ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಇದರಲ್ಲಿ ಸ್ವಚ್ಚ ನಿಲ್ದಾಣ, ಸ್ವಚ್ಚ ನೀರು, ಸ್ವಚ್ಚ ರೈಲು, ಸ್ವಚ್ಚ ಪರಿಸರ, ಸ್ವಚ್ಚ ಸಹಯೋಗ ಮತ್ತು ಸ್ಚಚ್ಚ ಆಹಾರ ಸೇರಿವೆ.

Leave a Comment

This site uses Akismet to reduce spam. Learn how your comment data is processed.