ಪಿಡಿಓ ಮತ್ತು ಕಾರ್ಯದರ್ಶಿ ಸೇರಿ ಸುಮಾರು 1400ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದೆಂದು ತಿಳಿದು ಬಂದಿದೆ. ಕನ್ನಡದ ಮೊದಲ ಅಂತರ್ಜಾಲ ಆಧಾರಿತ ಸ್ಪರ್ಧಾತ್ಮಕ ಪರೀಕ್ಷ ತಾಣವಾಗಿರುವ ಕರುನಾಡು ಎಗ್ಸಾಂ ತಂಡ ಪಿಡಿಓ ಆಕಾಂಕ್ಷಿಗಳಿಗೆ ಅತ್ಯುತ್ತಮ ಗುಣಮಟ್ಟದ ಹಾಗೂ ಪರೀಕ್ಷೆಯಲ್ಲಿ ನಿರೀಕ್ಷಿಸಬಹುದಾದ ಪ್ರಶ್ನೋತ್ತರಗಳನ್ನು ಇಂದಿನಿಂದ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳುಸುತ್ತಿದೆ.

 

ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-12

Question 1

1.ಈ ಕೆಳಗಿನವುಗಳಲ್ಲಿ ಗ್ರಾಮ ಪಂಚಾಯತಿಯಲ್ಲಿ ತೆರಿಗೆ ಮೇಲೆ ವಿಧಿಸಬಹುದಾದ ಉಪಕರಗಳ(ಸೆಸ್) ಸರಿಯಾದ ಪ್ರಮಾಣವನ್ನು ಗುರುತಿಸಿ?

A

ಶಿಕ್ಷಣ ಕರ (ಶೇ 10), ಆರೋಗ್ಯ ಕರ (ಶೇ 15), ಗ್ರಂಥಾಲಯ ಕರ (ಶೇ 6), ಬಿಕ್ಷುಕರ ಕರ (ಶೇ 3)

B

ಶಿಕ್ಷಣ ಕರ (ಶೇ 15), ಆರೋಗ್ಯ ಕರ (ಶೇ 10), ಗ್ರಂಥಾಲಯ ಕರ (ಶೇ 6), ಬಿಕ್ಷುಕರ ಕರ (ಶೇ 3)

C

ಶಿಕ್ಷಣ ಕರ (ಶೇ 10), ಆರೋಗ್ಯ ಕರ (ಶೇ 15), ಗ್ರಂಥಾಲಯ ಕರ (ಶೇ 3), ಬಿಕ್ಷುಕರ ಕರ (ಶೇ 6)

D

ಶಿಕ್ಷಣ ಕರ (ಶೇ 15), ಆರೋಗ್ಯ ಕರ (ಶೇ 10), ಗ್ರಂಥಾಲಯ ಕರ (ಶೇ 3), ಬಿಕ್ಷುಕರ ಕರ (ಶೇ 6)

Question 1 Explanation: 

ಶಿಕ್ಷಣ ಕರ (ಶೇ 10), ಆರೋಗ್ಯ ಕರ (ಶೇ 15), ಗ್ರಂಥಾಲಯ ಕರ (ಶೇ 6), ಬಿಕ್ಷುಕರ ಕರ (ಶೇ 3):

ಗಮನಿಸಿ: ಗ್ರಾಮ ಪಂಚಾಯತಿಯಲ್ಲಿ ಭೂಕಂದಾಯದ ಎಲ್ಲಾ ಬಾಬ್ತುಗಳಿಗೆ ವಿಧಿಸಲಾಗುವ ಭೂ ಕಂದಾಯಕ್ಕೆ ಸಮಾನವಾದ ದರದಲ್ಲಿ ಸ್ಥಳೀಯ ಉಪಕರವನ್ನು ವಿಧಿಸಲು ಕಾಯಿದೆಯಲ್ಲಿ ಅವಕಾಶವಿದೆ. ಈ ರೀತಿ ವಿಧಿಸಬೇಕಾದ ಉಪಕರಗಳ ಪ್ರಮಾಣ ಇಂತಿವೆ ಶಿಕ್ಷಣ ಕರ (ಶೇ 10), ಆರೋಗ್ಯ ಕರ (ಶೇ 15), ಗ್ರಂಥಾಲಯ ಕರ (ಶೇ 6), ಬಿಕ್ಷುಕರ ಕರ (ಶೇ 3) ಒಟ್ಟು 34%. ಉದಾಹರಣೆ ನೀವು ರೂ 100 ಕಂದಾಯವನ್ನು ಗ್ರಾಮ ಪಂಚಾಯತಿಗೆ ಪಾವತಿಸಿದರೆ ಅದರಲ್ಲಿ ಶಿಕ್ಷಣಕ್ಕೆ ರೂ 10, ಆರೋಗ್ಯಕ್ಕೆ ರೂ 15, ಗ್ರಂಥಾಲಯಕ್ಕೆ ರೂ 6 ಮತ್ತು ಭಿಕ್ಷಕರ ಕಲ್ಯಾಣಕ್ಕೆ ರೂ 3 ಒಟ್ಟು 34 ರೂಪಾಯಿ ಆಯಾ ಲೆಕ್ಕಕ್ಕೆ ಜಮೆ ಆಗುತ್ತದೆ. ಇಂತಹ ಉಪಕರಗಳನ್ನು ಸಂಬಂಧಪಟ್ಟ ಖಾತೆಗೆ ಜಮೆ ಮಾಡುವುದು ಕಡ್ಡಾಯವಾಗಿದೆ. ಇದಲ್ಲದೇ ಗ್ರಾಮ ಪಂಚಾಯತಿಯಲ್ಲಿ ಕೈಗೊಳ್ಳುವ ಕಾಮಗಾರಿಗಳ (ಕಾರ್ಮಿಕರು ಭಾಗಿಯಾಗುವ ಕಾಮಗಾರಿಗಳು ಉದಾ: ಚರಂಡಿ, ರಸ್ತೆ, ಕಟ್ಟಡ ನಿರ್ಮಾಣ ಇತ್ಯಾದಿ) ಮೊತ್ತದಲ್ಲಿ ಶೇ 1% ಅನ್ನು ಕಾರ್ಮಿಕರ ನಿಧಿಗೆ ಪಾವತಿಸಬೇಕು.

Question 2

2.ಬ್ರಿಟಿಷರ ಕಾಲದಲ್ಲಿ ಸ್ಥಳೀಯ ಸರ್ಕಾರಕ್ಕೆ ಆಡಳಿತಾತ್ಮಕ ರೂಪ ಕೊಡುವ ಸಲುವಾಗಿ ಒಂದು ಜಿಲ್ಲೆಯನ್ನು ಘಟಕವನ್ನಾಗಿಸಲಾಗಿತ್ತು. ಇದಕ್ಕೆ ______ ಎಂದು ಕರೆಯಲಾಗುತ್ತಿತ್ತು?

A
ಲೋಕಲ್ ಫಂಡ್ ಸಮಿತಿ
B
ಲೋಕಲ್ ಡೆವೆಲಫ್ಮೆಂಟ್ ಸಮಿತಿ
C
ಲೋಕಲ್ ರೂರಲ್ ಸಮಿತಿ
D
ಲೋಕಲ್ ಜನರಲ್ ಸಮಿತಿ
Question 2 Explanation: 
ಲೋಕಲ್ ಫಂಡ್ ಸಮಿತಿ:

1884 ರಲ್ಲಿ ಬ್ರಿಟಿಷರ ಕಾಲದಲ್ಲಿ ಸ್ಥಳೀಯ ಸರ್ಕಾರಕ್ಕೆ ಆಡಳಿತಾತ್ಮಕ ರೂಪ ಕೊಡುವ ಪ್ರಯತ್ನ ಮಾಡಲಾಗಿತ್ತು. ಅದರಂತೆ ಒಂದು ಜಿಲ್ಲೆಯನ್ನು ಆಡಳಿತ ಘಟಕವಾಗಿ ರೂಪಿಸಿದರು. ಈ ವ್ಯವಸ್ಥೆಗೆ ಲೋಕಲ್ ಫಂಡ್ ಸಮಿತಿ ಎಂದು ಕರೆಯಲಾಯಿತು. ಈ ಸಮಿತಿಗೆ ಜಿಲ್ಲಾ ಕಮೀಷನರ್ ಅಧ್ಯಕ್ಷರಾಗಿದ್ದರು. ಅಧಿಕಾರಿಗಳು, ಇನಾಂದಾರಾರು ಮತ್ತು ಜನಪ್ರತಿನಿಧಿಗಳು ಸದಸ್ಯರಾಗಿದ್ದರು.

Question 3

3.ಅಂದಿನ ಮೈಸೂರು ಸರ್ಕಾರ “ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆ”ಯನ್ನು ಜಾರಿಗೆ ತಂದ ವರ್ಷ_______?

A
1916
B
1914
C
1919
D
1920
Question 3 Explanation: 
1919:

ಅಂದಿನ ಮೈಸೂರು ಸರ್ಕಾರ 1919ರಲ್ಲಿ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆಯನ್ನು ಜಾರಿಗೆ ತಂದಿತು. ನಂತರ 1926 ರಲ್ಲಿ ಮತ್ತೊಂದು ಕಾಯಿದೆಯನ್ನು ಜಾರಿಗೆ ತರಲಾಯಿತು. [ಇದರಲ್ಲಿ 21 ವರ್ಷ ದಾಟಿದ ಪುರುಷರಿಗೆ ಮಾತ್ರ ಮತದಾನ ಅವಕಾಶ ಕಲ್ಪಿಸಲಾಗಿತ್ತು]. ಚುನಾಯಿತರ ಒಬ್ಬರಲ್ಲಿ ಕಾರ್ಯದರ್ಶಿ ನೇಮಕ ಮಾಡುವ ಅಧಿಕಾರ ಈ ಕಾಯಿದೆ ನೀಡಿತ್ತು. ಅಲ್ಲದೇ ತೆರಿಗೆಗಳ ಪ್ರಮಾಣವನ್ನು ನಿರ್ಧರಿಸಬಹುದಿತ್ತು. 1926 ರಲ್ಲಿ ಜಾರಿಗೆ ಬಂದ ಈ ಕಾಯಿದೆ 1952 ರವರೆಗೆ

Question 4

4. ಸಂವಿಧಾನ 73ನೇ ತಿದ್ದುಪಡಿ ಈ ಕೆಳಗಿನ ಯಾವುದಕ್ಕೆ ಅವಕಾಶ ಕಲ್ಪಿಸಿದೆ?

I) ಗ್ರಾಮ ಸಭೆಗೆ ಸಾಂವಿಧಾನಿಕ ಅಸ್ಥಿತ್ವ ನೀಡಲಾಗಿದೆ

II) ರಾಜ್ಯ ಹಣಕಾಸು ಆಯೋಗದ ಸ್ಥಾಪನೆ

III) ಜಿಲ್ಲಾ ಯೋಜನಾ ಸಮಿತಿ ಸ್ಥಾಪನೆ

IV) ನೇರ ಚುನಾವಣೆ ಮೂಲಕ ಪ್ರತಿನಿಧಿಗಳ ಆಯ್ಕೆ

ಸರಿಯಾದ ಉತ್ತರಗಳನ್ನು ಈ ಕೆಳಗೆ ನೀಡಿರುವ ಕೋಡ್ ಮೂಲಕ ಆರಿಸಿ:

A
I & II
B
II & III
C
I, II & III
D
ಮೇಲಿನ ಎಲ್ಲವೂ
Question 4 Explanation: 
ಮೇಲಿನ ಎಲ್ಲವೂ:

ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಪ್ರಧಾನಿ ಪಿ ವಿ ನರಸಿಂಹ ರಾವ್’ಅದರಲ್ಲಿ ಸಣ್ಣ ಪುಟ್ಟ ಮಾರ್ಪಾಡುಗಳನ್ನು ಹೊಂದಿರುವ 73 ನೇ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿ, 1992 ರಲ್ಲಿ ಸಂಸತ್ತು ಒಪ್ಪಿಗೆ ಪಡೆದರು. ಅದು 24 ಏಪ್ರಿಲ್ 1993 ರಲ್ಲಿ ಜಾರಿಗೆ ಬಂದಿದೆ.

1993 ಕಾಯಿದೆಯ ಪ್ರಮುಖ ಅಂಶಗಳು ಹೀಗೆ ಇವೆ:

• ಈ ಕಾಯಿದೆಯಂತೆ ಪ್ರತಿ ಗ್ರಾಮಪಂಚಾಯತಿಯಲ್ಲಿ ಗ್ರಾಮ ಸಭಾ ಸ್ಥಾಪನೆಗೆ ಅವಕಾಶ ಒದಗಿಸಲಾಗಿದೆ. ಇದು ಪಂಚಾಯತ್ ಭಾಗದ ಎಲ್ಲಾ ನೋಂದಾಯಿತ ವಯಸ್ಕ ಸದಸ್ಯರನ್ನು ಒಳಗೊಂಡಿದೆ.

• ಮೂರು ಹಂತದ ಆಡಳಿತ: ಅ) ಗ್ರಾಮ ಪಂಚಾಯತ್ ಆ) ಜಿಲ್ಲಾ ಪಂಚಾಯತ್ ಮತ್ತು ಇ) ಮಧ್ಯಂತರ ಮಟ್ಟದಲ್ಲಿ ಒಂದು ಪಂಚಾಯಿತಿ ವ್ಯವಸ್ಥೆ; ಹೀಗೆ ಮೂರು ಹಂತದಲ್ಲಿ ಇರತಕ್ಕದ್ದು. ಸಣ್ಣ ರಾಜ್ಯಗಳು 20 ಲಕ್ಷಕ್ಕೆ ಕಡಿಮೆ ಜನಸಂಖ್ಯೆ ಇದ್ದರೆ ಮಧ್ಯಂತರ ಪಂಚಾಯತ್ ಮಟ್ಟದ ಆಯ್ಕೆಯನ್ನು ಹೊಂದಿರುವುದು ಕಡ್ಡಾಯವಲ್ಲ.

• ಎಲ್ಲಾ ಹಂತದ ಮೂರು ಪಂಚಾಯತ್ ಸ್ಥಾನಗಳನ್ನು ನೇರ ಚುನಾವಣೆಯ ಮೂಲಕ ತುಂಬಬೇಕು. ಇದಕ್ಕೆ ಹೆಚ್ಚುವರಿಯಾಗಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದವರನ್ನು ಮಧ್ಯಂತರ ಮಟ್ಟದಲ್ಲಿ ಮಾಡಿದ ಪಂಚಾಯತಿಯ ಸದಸ್ಯರನ್ನಾಗಿ ಮಾಡಬಹುದು.

• ಎಲ್ಲಾ ಪಂಚಾಯತ್ ಗಳಲ್ಲಿ ಪರಿಶಿಷ್ಟ ಜಾತಿಗೆ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ; ಮತ್ತು ಮಹಿಳೆಯರಿಗೆ 1/3 ಅನುಪಾತದಲ್ಲಿ ಸ್ಥಾನಗಳು ಮೀಸಲಾಗಿವೆ (ಕರ್ನಾಟಕದಲ್ಲಿ ಈಗ ಶೇ.50% ಮೀಸಲಾತಿ ನೀಡಲಾಗಿದೆ).ಅವರ ಸಂಖ್ಯೆ ಮತ್ತು ಒಟ್ಟು ಸೀಟುಗಳು 1/3 ಅನುಪಾತದಲ್ಲಿ ಇರಬೇಕು, ರಾಜ್ಯದಲ್ಲಿ ಎಲ್ಲಾ ಹಂತಗಳಲ್ಲಿ ಅವರಿಗೆ ಪಂಚಾಯತ್ ಅಧ್ಯಕ್ಷ ಸ್ಥಾನಗಳಲ್ಲಿ ಮೂರನೇ ಒಂದು ಭಾಗ (ಮಹಿಳೆಯರಿಗೆ) ಮೀಸಲಾತಿ ಕೊಟ್ಟಿದೆ..

• ಪಂಚಾಯತ್ ಏಕರೂಪದಲ್ಲಿ ಐದು ವರ್ಷಗಳ ಅವಧಿಗೆ ಇರುವುದು. ವಿಸರ್ಜನೆಯ ಸಂದರ್ಭದಲ್ಲಿ ಹೊಸ ಮಂಡಳಿಗಳನ್ನು ಚುನಾವಣೆಯ ಮೂಲಕ ಆರು ತಿಂಗಳ [ಎಷ್ಟು ತಿಂಗಳೊಳಗೆ?] ಒಳಗೆ ಕಡ್ಡಾಯವಾಗಿ ಆಯ್ಕೆ ಮಾಡುವುದು. ಪುನಾರಚಿತ ಪಂಚಾಯತ್ ಐದು ವರ್ಷಗಳ ಅವಧಿಯ ಕಾಲ ಕಾರ್ಯ ನಿರ್ವಹಿಸುವರು. ಅವಧಿಯ ಮುಕ್ತಾಯದ ಮೊದಲು ಯಾವುದೇ ಕಾಯಿದೆಯ ತಿದ್ದುಪಡಿಯ ಮೂಲಕ, ಅಸ್ತಿತ್ವದಲ್ಲಿರುವ ಪಂಚಾಯತ್'ನ್ನು ವಿಸರ್ಜಿಸಲು ಸಾಧ್ಯವಾಗುವುದಿಲ್ಲ. .

• ಮೇಲ್ವಿಚಾರಣೆ, ನಿರ್ದೇಶನ, ಮತ್ತು ಚುನಾವಣಾ ಪ್ರಕ್ರಿಯೆಯ ಮತ್ತು ಮತದಾರರ ಅಧಿಕೃತ ಪಟ್ಟಿಗಳ ತಯಾರಿಕೆಗೆ ರಾಜ್ಯದ ಸ್ವತಂತ್ರ ಚುನಾವಣಾ ಆಯೋಗ ಸ್ಥಾಪಿಸಲಾಗುವುದು.

• ನಿರ್ದಿಷ್ಟ ಜವಾಬ್ದಾರಿಗಳನ್ನು ಪಂಚಾಯತ್’ಗಳಿಗೆ ಒಪ್ಪಿಸಲಾಗಿದೆ.

• 11ನೇ ಪಟ್ಟಿ ವಿಷಯಗಳಿಗೆ ಸಂಬಂಧಿಸಿದಂತೆ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಯೋಜನೆಗಳ ವೇಳಾಪಟ್ಟಿ ತಯಾರಿಸುವುದು.

• ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ, ಪಂಚಾಯತ್ ‘ಗಳಿಗೆ ಮುಖ್ಯ ಜವಾಬ್ದಾರಿ ಒಪ್ಪಿಸಲಾಯಿತು. ಪಂಚಾಯತ್ ತಮ್ಮ ಯೋಜನೆಗಳನ್ನು ನಡೆಸಲು ಸಾಕಷ್ಟು ಹಣವನ್ನು ರಾಜ್ಯ ಸರ್ಕಾರದಿಂದ ಧನಸಹಾಯ ಪಡೆಯುವುವು.

• ಪ್ರತಿ ರಾಜ್ಯದಲ್ಲಿ, ಹಣಕಾಸು ಆಯೋಗವನ್ನು ಒಂದು ವರ್ಷದೊಳಗೆ ಸ್ಥಾಪಿಸುವುದು.

• ಪಂಚಾಯಿತಿಗಳು ಸಾಕಷ್ಟು ಆರ್ಥಿಕ ಸಂಪನ್ಮೂಲ ಹೊಂದಲು ತತ್ವಗಳ ಆಧಾರದ ಮೇಲೆ ನಿರ್ಧರಿಸಲು,ಪ್ರತಿ ಐದು ವರ್ಷಗಳಿಗೊಮ್ಮೆ ಅದರ ಪುನಸ್ಥಾಪನೆ.

Question 5

5. ಕರ್ನಾಟಕ ಪಂಚಾಯತ್ ರಾಜ್ ಕಾಯಿದೆಗೆ ಯಾವ ವರ್ಷದಲ್ಲಿ ತಿದ್ದುಪಡಿ ತರುವ ಮೂಲಕ ವಾರ್ಡ್ ಸಭೆಗಳನ್ನು ಅಸ್ಥಿತ್ವಕ್ಕೆ ತರಲಾಗಿದೆ?

A
1999
B
2000
C
2002
D
2006
Question 5 Explanation: 
2002:

ಕರ್ನಾಟಕ ಪಂಚಾಯತ್ ರಾಜ್ ಕಾಯಿದೆಗೆ 2002ರಲ್ಲಿ ತಿದ್ದುಪಡಿ ತರುವ ಮೂಲಕ ವಾರ್ಡ್ ಸಭೆಗಳನ್ನು ಅಸ್ಥಿತ್ವಕ್ಕೆ ತರಲಾಗಿದೆ.

Question 6

6. ಗ್ರಾಮ ಪಂಚಾಯತಿಯಲ್ಲಿ ಆಯವ್ಯಯ (ಬಜೆಟ್) ಮಂಡನೆ ಕುರಿತಾದ ವಿವರಣೆಯನ್ನು ಈ ಪ್ರಕರಣದಡಿ ನೀಡಲಾಗಿದೆ _____?

A
ಪಕ್ರರಣ 240
B
ಪ್ರಕರಣ-241
C
ಪ್ರಕರಣ-244
D
ಪ್ರಕರಣ-245
Question 6 Explanation: 
ಪ್ರಕರಣ 241:

ಈ ಪಕ್ರರಣದಡಿ ಆರ್ಥಿಕ ವರ್ಷದ ಆಯವ್ಯಯವನ್ನು ಫೆಬ್ರವರಿ 1ನೇ ದಿನದಿಂದ ಮಾರ್ಚ್ 10ನೇ ದಿನಾಂಕದೊಳಗೆ ಮಂಡಿಸಿ ಅಂಗೀಕರಿಸಿ ತಾಲ್ಲೂಕು ಪಂಚಾಯತ್ ಗೆ ಮಾಹಿತಿ ಕಳುಹಿಸಬೇಕಾಗಿರುತ್ತದೆ.

Question 7

7. ಈ ಕೆಳಗಿನ ಯಾವುವು ಲೆಕ್ಕಪರಿಶೋಧನಾ ವರದಿಯ ಮೇಲೆ ಕ್ರಮ ತೆಗೆದುಕೊಳ್ಳಬೇಕಾದ ಪ್ರಾಧಿಕಾರಗಳಾಗಿವೆ?

A
ಗ್ರಾಮ ಪಂಚಾಯತಿ
B
ಗ್ರಾಮ ಪಂಚಾಯತ್ ಲೆಕ್ಕ ಪರಿಶೋಧನಾ ಸಮಿತಿ
C
ಕಾರ್ಯನಿರ್ವಾಹಕ ಅಧಿಕಾರಿ
D
ಮೇಲಿನ ಎಲ್ಲವೂ
Question 7 Explanation: 
ಮೇಲಿನ ಎಲ್ಲವೂ:

ಲೆಕ್ಕಪರಿಶೋಧನೆ ವರದಿ ಬಂದ ಕೂಡಲೇ ವರದಿಯಲ್ಲಿ ಸೂಚಿಸಿರುವ ಆಕ್ಷೇಪಣೆ ಮತ್ತು ವಸೂಲಾತಿ ಬಗ್ಗೆ ಕಾರ್ಯದರ್ಶಿ/ಪಿಡಿಓ ದಾಖಲಿಸಿಕೊಳ್ಳಬೇಕು. ಆ ನಂತರ ಗ್ರಾಮ ಪಂಚಾಯತ್ ಲೆಕ್ಕ ಪರಿಶೋಧನಾ ಸಮಿತಿ ಮುಂದೆ ವರದಿಯನ್ನು ಮಂಡಿಸಬೇಕು. ಹೀಗೆ ಲೆಕ್ಕ ಪರಿಶೋಧನಾ ಸಮಿತಿ ಪರಾಮರ್ಶಿಸಿದ ವರದಿಯನ್ನು ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸುವುದು. ಇಲ್ಲಿ ಗಮನಿಸಿ ಒಂದು ವೇಳೆ ಯಾವುದೇ ಹಣ ಕಾನೂನು ಬಾಹಿರವಾಗಿದೆಯೆಂದು ಕಾರ್ಯನಿರ್ವಾಹಕ ಅಧಿಕಾರಿ ಅಭಿಪ್ರಾಯಪಟ್ಟರೆ ಆಂತಹ ವ್ಯಕ್ತಿಯ ಮೇಲೆ ಋಣಭಾರ ಹೊರಿಸಬಹುದು. ಶೇ.15 ರಂತೆ ಬಡ್ಡಿ ಸಹಿತ ಬಾಕಿ ಮೊಬಲಗಿನೊಂದಿಗೆ ಗ್ರಾ.ಪಂ ಪಾವತಿಸಲು ಸೂಚಿಸಬಹುದು.

Question 8

8. ಗ್ರಾಮ ಪಂಚಾಯತಿಗಳ ಲೆಕ್ಕ ಪರಿಶೋಧನಾ ವರದಿಗಳ ಆಕ್ಷೇಪಣೆ ತೀರುವಳಿ ಸಂಬಂಧ ರಚಿಸಲಾಗುವು “ಆಡ್ ಹಾಕ್” ಸಮಿತಿಯ ಅಧ್ಯಕ್ಷರು ಯಾರಾಗಿರುತ್ತಾರೆ?

A
ಮುಖ್ಯಕಾರ್ಯನಿರ್ವಾಹಣಾಧಿಕಾರಿ
B
ಮುಖ್ಯ ಲೆಕ್ಕಾಧಿಕಾರಿ
C
ಕಾರ್ಯನಿರ್ವಾಹಕ ಅಧಿಕಾರಿ
D
ಮುಖ್ಯ ಯೋಜನಾಧಿಕಾರಿ
Question 8 Explanation: 
ಕಾರ್ಯನಿರ್ವಾಹಕ ಅಧಿಕಾರಿ:

ಗ್ರಾಮ ಪಂಚಾಯತಿಗಳ ಲೆಕ್ಕಪರಿಶೋಧನಾ ವರದಿಯಲ್ಲಿ ಕಂಡು ಬರುವ ದೋಷಗಳನ್ನು ಕಾಲಕಾಲಕ್ಕೆ ಸರಿಪಡಿಸಿಕೊಳ್ಳುವ ಸಲುವಾಗಿ “ಆಡ್ ಹಾಕ್”ಸಮಿತಿಗಳನ್ನು ರಚಿಸಬೇಕಿರುತ್ತದೆ. ಅಂದರೆ ಈ ಸಮಿತಿಯಲ್ಲಿ ಆಕ್ಷೇಪಣೆ ಮತ್ತು ವಸೂಲಾತಿ ಸೂಚಿಸಿರುವ ಮೊತ್ತಗಳಿಗೆ ಬಿಲ್ ವೋಚರ್ ಅಥವಾ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ ಅಂತಹ ಆಕ್ಷೇಪಣೆ/ವಸೂಲಾತಿಗಳನ್ನು ವರದಿಯಿಂದ ಕೈಬಿಡಬಹುದು. ಇಂತಹ ಆಡ್ ಹಾಕ್ ಸಮಿತಿಗೆ ಕಾರ್ಯನಿರ್ವಾಹಕ ಅಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಲೆಕ್ಕ ಪರಿಶೋಧನಾ ಇಲಾಖೆಯ ಪ್ರತಿನಿಧಿ, ಲೆಕ್ಕಾಧಿಕಾರಿಗಳು, ಜಿಲ್ಲಾಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ ನಿಯೋಜಿಸಿದ ಒಬ್ಬ ತಾಲ್ಲೂಕ್ ಮಟ್ಟದ ಅಧಿಕಾರಿ ಇದರ ಸದಸ್ಯರಾಗಿರುತ್ತಾರೆ.

Question 9

9. ಈ ಕೆಳಗಿನ ಯಾವ ಸಮಿತಿ ಮತ್ತು ಅವು ರಚನೆಯಾದ ವರ್ಷ ಸರಿಯಾಗಿ ಹೊಂದಾಣಿಕೆಯಾಗಿಲ್ಲ?

A
ಬಲವಂತರಾಯ್ ಮೆಹ್ತಾ ಸಮಿತಿ - 1957
B
ಅಶೋಕ್ ಮೆಹ್ತಾ ಸಮಿತಿ - 1977
C
ಜಿ ವಿ ಕೆ ರಾವ್ ಸಮಿತಿ - 1983
D
ಎಲ್ ಎಂ ಸಿಂಘ್ವಿ ಸಮಿತಿ – 1986
Question 9 Explanation: 
ಜಿ ವಿ ಕೆ ರಾವ್ ಸಮಿತಿ - 1983:

ಮೇಲಿನ ಎಲ್ಲವು ದೇಶದಲ್ಲಿ ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ಬಲಗೊಳಿಸಲು ಸರ್ಕಾರ ರಚಸಿದ್ದ ಸಮಿತಿಗಳಾಗಿವೆ. ಬಲವಂತರಾಯ್ ಸಮಿತಿಯನ್ನು 1957 ರಲ್ಲಿ ರಚಿಸಲಾಗಿತ್ತು (ಬಲವಂತರಾಯ್ ಗುಜರಾತ್ನ ಮಾಜಿ ಮುಖ್ಯಮಂತ್ರಿಗಳು). ಈ ಸಮಿತಿ ಶಿಫಾರಸ್ಸುಗಳು 1ನೇ ಏಪ್ರಿಲ್ 1958 ರಿಂದ ಜಾರಿಗೆ ಬರುವ ಮೂಲಕ ಮೂರು ಹಂತದ ಪಂಚಾಯತ್ ರಾಜ್ಯ ವ್ಯವಸ್ಥೆ ಜಾರಿಗೆ ಬಂತು. 2ನೇ ಅಕ್ಟೋಬರ್ 1959 ರಂದು ರಾಜಸ್ಥಾನದ ನಾಗೋರ್ ನಲ್ಲಿ ದೇಶದ ಮೊದಲ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂತು. ಆದ್ದರಿಂದ ರಾಜಸ್ಥಾನ ಬಲವಂತ್ ರಾಯ್ ಸಮಿತಿ ಶಿಫಾರಸುಗಳನ್ನು ಕಾರ್ಯಗತಗೊಳಿಸಿದ ಪ್ರಥಮ ರಾಜ್ಯವಾಗಿದೆ. 1977 ರಲ್ಲಿ ಅಂದಿನ ಮೊರಾರ್ಜಿ ದೇಸಾಯಿ ಪ್ರಧಾನಿ ಅವಧಿಯಲ್ಲಿ ಅಶೋಕ್ ಮೆಹ್ತಾ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ಎರಡು ಹಂತದ ಪಂಚಾಯತ್ ರಾಜ್ ವ್ಯವಸ್ಥೆ (ಮಂಡಲ ಪಂಚಾಯತ್, ಜಿಲ್ಲಾ ಪರಿಷತ್) ಜಾರಿಗೆ ತರಲು ಶಿಫಾರಸ್ಸು ಮಾಡಿತ್ತು. ಆದರೆ ಸರ್ಕಾರ ಪತನವಾದ ಕಾರಣ ಈ ಸಮಿತಿಯ ಶಿಫಾರಸ್ಸುಗಳು ಅನುಷ್ಟಾನಗೊಳ್ಳಲಿಲ್ಲ. ಕೇವಲ ಪಶ್ಚಿಮ ಬಂಗಾಳ ಮತ್ತು ಕರ್ನಾಟಕ (ರಾಮಕೃಷ್ಣ ಹೆಗ್ಗಡೆ ಮುಖ್ಯಮಂತ್ರಿ) ಮಾತ್ರ ಅಳವಡಿಸಿಕೊಂಡವು. 1985 ರಲ್ಲಿ, .ಜಿ.ವಿ.ಕೆ ರಾವ್ ಸಮಿತಿ ಮತ್ತು 1986 ರಲ್ಲಿ ಡಾ ಎಲ್.ಎಂ. ಸಿಂಘ್ವಿ ಸಮಿತಿಗಳು ರಚನೆಗೊಂಡವು. ದಿ ಜಿ.ವಿ.ಕೆ ಏ ರಾವ್ ಸಮಿತಿಗಳು ಪಂಚಾಯತ್ ರಾಜ್ಯ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸಲು ಶಿಫಾರಸು ಮಾಡಿದವು. ಸಿಂಘ್ವಿ ಸಮಿತಿಯು ಪಂಚಾಯತಿ ರಾಜ್'ಗೆ ಸಾಂವಿಧಾನಿಕವಾಗಿ ರಕ್ಷಣೆ ಕೊಡಲು ಶಿಫಾರಸು ಮಾಡಿತು. ಸಂವಿಧಾನದಲ್ಲಿ ಹೊಸ ಅಧ್ಯಾಯವನ್ನು ನಿಯಮವನ್ನು ರೂಪಿಸಲು ತಿದ್ದುಪಡಿ ಮಾಡಬೇಕು. ಅಧಿಕಾರ ಮತ್ತು ಕ್ರಿಯೆಗಳನ್ನು ರೂಪಿಸಬೆಕು. ಚುನಾವಣಾ ಆಯೋಗದ ಮೂಲಕ ಸಮಿತಿ ರಚಿಸಲು ನ್ಯಾಯಯುತ ಚುನಾವಣೆ ನಡೆಸಬೇಕು.

Question 10

10.ಗ್ರಾಮ ಪಂಚಾಯತ್ ಗಳ ಲೆಕ್ಕಪರಿಶೋಧನೆ (ಆಡಿಟ್), ವಿಧಾನ, ವರದಿಗಳು, ವರದಿಗಳ ತೀರುವಳಿಗಳ ಬಗ್ಗೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಎಷ್ಟನೇ ಪ್ರಕರಣದಲ್ಲಿ ವಿವರಿಸಲಾಗಿದೆ?

A
ಪ್ರಕರಣ 220
B
ಪ್ರಕರಣ 224
C
ಪ್ರಕರಣ 246
D
ಪ್ರಕರಣ 228
Question 10 Explanation: 
ಪ್ರಕರಣ 226:

ಗ್ರಾಮ ಪಂಚಾಯತ್ ಗಳ ಲೆಕ್ಕಪರಿಶೋಧನೆ ಬಗ್ಗೆ ಕ.ಪ.ರಾ. ಅಧಿನಿಯಮದ ಅಧ್ಯಾಯ XVII ರ ಪ್ರಕರಣ 246 ರಲ್ಲಿ ನೀಡಲಾಗಿದೆ. ಅದರಂತೆ ಪ್ರತಿ ಗ್ರಾಮ ಪಂಚಾಯತಿ ಪ್ರತಿ ವರ್ಷ ರಾಜ್ಯ ಲೆಕ್ಕಪತ್ರ ನಿಯಂತ್ರಕರು ಅಧಿಕಾರ ನೀಡಿರುವ ಲೆಕ್ಕಪರಿಶೋಧಕರಿಂದ ಲೆಕ್ಕ ಪರಿಶೋಧನೆ ಮಾಡಿಸಬೇಕು. ಇಲ್ಲಿ ಗಮನಿಸಿ

o ಲೆಕ್ಕಪರಿಶೋಧಕನು ಲೆಕ್ಕಪರಿಶೋಧನೆ ಮುಕ್ತಾಯವಾದ ವರದಿಯ ಒಂದು ಪ್ರತಿಯನ್ನು ಒಂದು ತಿಂಗಳೊಳಗೆ (ಎಷ್ಟು ತಿಂಗಳೊಳಗೆ?) ವರದಿಯನ್ನು ಪಂಚಾಯತಿಗೆ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಬೇಕು.

o ಲೆಕ್ಕಪರಿಶೋಧನೆಯಲ್ಲಿ ತೋರಿದ ದೋಷಗಳು, ಅಕ್ರಮಗಳನ್ನು ಪಂಚಾಯತಿಗಳು ಸರಿಪಡಿಸಿಕೊಂಡು ಮೂರು ತಿಂಗಳೊಳಗೆ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಬೇಕು.

There are 10 questions to complete.

[button link=”http://www.karunaduexams.com/wp-content/uploads/2016/09/ಗ್ರಾ-ಪಂ-ಅ-ಅಧಿಕಾರಿ-ಮತ್ತು-ಕಾರ್ಯದರ್ಶಿ-ಗ್ರೇಡ್-ಕ್ವಿಜ್-12.pdf”] ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

 

19 Thoughts to “ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-12”

  1. Sir quation number 10 wrong ide.
    Adhyaya17 ralli 226 ne prakarana barutta sir.
    Pls correct ans madi sir….

  2. 226ne prakarana.jilla pan.nidhiya abhirakshe mattu hoodike..
    Alwa sir…
    (Puliani book).

    1. Karunaduexams

      Jagane u r correct…adyaya XVII 246 article s for audit

  3. ಸಂತೋಷ್ ಗೌಡರ

    ಧನ್ಯವಾದಗಳು ಸರ್

  4. mahesha r

    sir next update yavaga i mean pdo quiz

  5. mahesha r

    next update yavaga pdo du

    1. Karunaduexams

      After mock test only..mock test ellirada hecchu questions eralive

  6. prakash

    Jagan nimddu sariyada answer

    Thanks

  7. mahesha r

    we wait for daily quiz and daily news update

  8. mahesha r

    sir please add mock test key answer

  9. Mohan kumar

    Good very helpful

  10. Bagura Raghava

    thank u sir

  11. Santhosh

    Sir paper 2 du link sigtila plz help us

  12. Santhosh

    Dec 29 na updated mock test link

  13. Ravi Kumar v

    Very useful

Leave a Comment

This site uses Akismet to reduce spam. Learn how your comment data is processed.