ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -24
Question 1 |
1. ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ “ಇ-ಆಡಳಿತ ವ್ಯವಹಾರ (e-governance transaction)” ವರದಿಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?
9 | |
10 | |
12 | |
15 |
ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿ ಪ್ರಕಾರ ಕರ್ನಾಟಕ ಇ-ಆಡಳಿತ ವ್ಯವಹಾರದಲ್ಲಿ 12ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತ 4 ಸ್ಥಾನ ಕುಸಿತ ಕಂಡಿರುವ ಕರ್ನಾಟಕ, ಈ ವರ್ಷದಲ್ಲಿ 5.67 ಕೋಟಿ ರೂ. ಇ-ವ್ಯವಹಾರ ನಡೆಸಿದೆ. 101 ಕೋಟಿ ಇ-ವ್ಯವಹಾರ ನಡೆಸುವ ಮೂಲಕ ಆಂಧ್ರ ಪ್ರದೇಶ ದೇಶದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.
Question 2 |
2. ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ “‘ಔಟ್ ಸ್ಟ್ಯಾಂಡಿಂಗ್ ಲೀಡರ್ಷಿಪ್ ಇನ್ ರೂರಲ್ ಡೆವಲೆಪ್ವೆುಂಟ್ ಆಂಡ್ ವುಮೆನ್ ಎಂಪವರ್ವೆುಂಟ್’ ಪ್ರಶಸ್ತಿಯನ್ನು ಇತ್ತೀಚೆಗೆ ಯಾರಿಗೆ ನೀಡಲಾಯಿತು?
ಪಂಡಿತ್ ರವಿಶಂಕರ್ ಗುರೂಜಿ | |
ಡಾ. ವೀರೇಂದ್ರ ಹೆಗ್ಗಡೆ | |
ಡಾ. ಅಶೋಖ್ ಖೇಣಿ | |
ಹೆಚ್.ಸಿ.ಪರಮೇಶ್ವರ್ |
ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆರವರಿಗೆ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ “‘ಔಟ್ ಸ್ಟ್ಯಾಂಡಿಂಗ್ ಲೀಡರ್ಷಿಪ್ ಇನ್ ರೂರಲ್ ಡೆವಲೆಪ್ವೆುಂಟ್ ಆಂಡ್ ವುಮೆನ್ ಎಂಪವರ್ವೆುಂಟ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರದ ವಿಶೇಷ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
Question 3 |
3. ಇತ್ತೀಚೆಗೆ ಮೈಸೂರಿನ ಮೃಗಾಲಯದಲ್ಲಿ ಕಂಡು ಬಂದ ಹಕ್ಕಿಜ್ವರ ವೈರಾಣು ವಿಧ ____?
ಎಚ್5ಎನ್1 | |
ಎಚ್5ಎನ್8 | |
ಎಚ್7ಎನ್2 | |
ಎಚ್7ಎನ್7 |
ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಹಕ್ಕಿಜ್ವರ (ಎಚ್5ಎನ್8 ವೈರಾಣು) ಪತ್ತೆಯಾಗಿದೆ. ಹಕ್ಕಿಜ್ವರದ ಹಿನ್ನಲೆಯಲ್ಲಿ 125 ವರ್ಷಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಮೃಗಾಲಯವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಜ.4 ರಿಂದ ಫೆ.2ರವರೆಗೆ ಬಂದ್ ಮಾಡಲಾಗುತ್ತಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಆಂಡ್ ಅನಿಮಲ್ ಡಿಸೀಸ್ (ಎನ್ಐಎಚ್ಎಸ್ಎಡಿ) ಸಂಸ್ಥೆಯು ಮೃತಪಟ್ಟ ಹಕ್ಕಿಗಳಲ್ಲಿ ಎಚ್5ಎನ್8 ವೈರಾಣು ಇರುವುದನ್ನು ದೃಢಪಡಿಸಿದೆ.
Question 4 |
4. ಈ ಕೆಳಗಿನ ಯಾವ ಜಿಲ್ಲೆಯಲ್ಲಿ ದಕ್ಷಿಣ ಭಾರತದಲ್ಲೆ ಮೊದಲು ಎನಿಸಿರುವ “ಕೆನಲ್ ಸೋಲಾರ್” ಸೌರಶಕ್ತಿ ಯೋಜನೆ ನಿರ್ಮಾಣವಾಗಲಿದೆ?
ಬಳ್ಳಾರಿ | |
ವಿಜಯಪುರ | |
ದಾವಣಗೆರೆ | |
ಧಾರಾವಾಡ |
ವಿಜಯಪುರ ಜಿಲ್ಲೆಯ ನಾರಾಯಣಪುರ ಜಲಾಶಯದ ಕೊಪ್ಪಳ್ ನೀರಾವರಿ ಯೋಜನೆಯಲ್ಲಿ ಸೋಲಾರ್ ಪ್ಯಾನಲ್ಗಳನ್ನು ಅಳವಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸೋಲಾರ್ ವಿದ್ಯುತ್ ಉತ್ಪಾದನೆಗೆ ಪ್ಯಾನಲ್ಗಳ ಅಳವಡಿಕೆಗೆ ಜಾಗದ ಸಮಸ್ಯೆಯ ಕಾರಣ ವಿದ್ಯುತ್ ಉತ್ಪಾದನೆಗೆ ಸಮಸ್ಯೆಗಳಾಗಿದ್ದು, ಸರ್ಕಾರ ರೈತರ ಜತೆ ಒಡಂಬಡಿಕೆ ಮಾಡಿಕೊಂಡು ಯೋಜನೆ ಜಾರಿ ಮಾಡಲು ಮುಂದಾಗಿದೆ. ದಕ್ಷಿಣ ಭಾರತದಲ್ಲೆ ನಾಲೆ ಮೇಲೆ ಸೌರ ಫಲಕ ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ಮೊದಲ ಯೋಜನೆ ಇದಾಗಿದೆ.
Question 5 |
5. ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತರಲಿರುವ “ಭೂಮಾಲೀಕ ಯೋಜನೆ”ಯ ಉದ್ದೇಶ ______?
ಪರಿಶಿಷ್ಠ ಕೃಷಿ ಕಾರ್ಮಿಕರಿಗೆ ಭೂಮಿಯನ್ನು ನೀಡುವುದು | |
ಅಲ್ಪಸಂಖ್ಯಾತ ಕೃಷಿ ಕಾರ್ಮಿಕರಿಗೆ ಭೂಮಿಯನ್ನು ನೀಡುವುದು | |
ವಿಧವೆಯರು, ಮಹಿಳಾ ಕೃಷಿ ಕಾರ್ಮಿಕರಿಗೆ ಭೂಮಿಯನ್ನು ನೀಡುವುದು | |
ಮೇಲಿನ ಎಲ್ಲವೂ |
ರಾಜ್ಯ ಸರ್ಕಾರ ಭೂ ರಹಿತ ಪರಿಶಿಷ್ಟರನ್ನು ಭೂ ಮಾಲೀಕರನ್ನಾಗಿ ಮಾಡುವ “ಭೂ ಮಾಲೀಕ” ಯೋಜನೆಗ ಶೀಘ್ರವೇ ಚಾಲನೆ ನೀಡಲಿದೆ. ಈ ಯೋಜನೆಯಡಿ ಪರಿಶಿಷ್ಟರಲ್ಲದ ಇತರೆ ಜನಾಂಗಗಳಿಗೆ ಸೇರಿದ ವ್ಯಕ್ತಿಗಳ ಅನುಭೋಗದಲ್ಲಿರುವ ಖಾಸಗಿ ಜಮೀನನ್ನು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಖರೀದಿಸಿ ಅದನ್ನು ಪರಿಶಿಷ್ಟ ಭೂ ಕಾರ್ಮಿಕರಿಗೆ (ಭೂ ರಹಿತರಿಗೆ) ನೀಡಲಾಗುವುದು. ಇದಕ್ಕಾಗಿ ಮಾಲೀಕ ಯೋಜನೆ ಅಡಿ 30 ಸಾವಿರ ಎಕರೆ ಜಮೀನನ್ನು ಖರೀದಿ ಮಾಡಲಾಗುವುದು. ಈ ಜಮೀನನ್ನು ತಲಾ ಎರಡು ಎಕರೆಯಂತೆ ಭೂ ರಹಿತರಿಗೆ ವಿತರಿಸಲಾಗುವುದು.
Question 6 |
6. ಪ್ರಸ್ತಕ ಸಾಲಿನ “ಗಂಗೂಬಾಯಿ ಹಾನಗಲ್ ಪ್ರಶಸ್ತಿ”ಯನ್ನು ಯಾರಿಗೆ ನೀಡಲಾಗಿದೆ?
ಪಂ. ಅಜಯ್ ಪೊಹಣಕರ್ | |
ಪಂ. ವಿಜಯ ಮುರಳಿ | |
ಪಂ. ಬಾಲಸುಬ್ರಮಣಿ ಶಾಸ್ತ್ರಿ | |
ಪಂ. ನಿರಂಜನ್ ಶಾಸ್ತ್ರಿ |
ಪಂ. ಅಜಯ್ ಪೊಹಣಕರ್ ರವರಿಗೆ ಗಂಗೂಬಾಯಿ ಹಾನಗಲ್ ಅವರ 9ನೇ ಸಂಗೀತ ಮಹೋತ್ಸವದಲ್ಲಿ ‘ಗಂಗೂಬಾಯಿ ಹಾನಗಲ್ ರಾಷ್ಟ್ರೀಯ ಪುರಸ್ಕಾರ’ ವನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ಲಕ್ಷ ರೂ. ನಗದನ್ನು ಒಳಗೊಂಡಿದೆ.
Question 7 |
7. ಬೆಂಗಳೂರು ಪ್ರೆಸ್ ಕ್ಲಬ್ ನೀಡುವ 2016ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ಎಸ್. ಎಂ. ಕೃಷ್ಣ | |
ಎಚ್. ಡಿ. ದೇವೇಗೌಡ | |
ಸಿದ್ದರಾಮಯ್ಯ | |
ಕುಮಾರ ಸ್ವಾಮಿ |
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರವರನ್ನು ಬೆಂಗಳೂರು ಪ್ರೆಸ್ ಕ್ಲಬ್ ನೀಡುವ 2016ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಕೃಷಿ ಸಾಧಕಿ ಪ್ರಶಸ್ತಿಗೆ ಹಾವೇರಿಯ ಕೃಷಿ ತಜ್ಞೆ ಜಯಮ್ಮ ನಿಂಗನಗೌಡ ಚನ್ನಗೌಡರ್ ಮತ್ತು ಜೀವಮಾನ ಸಾಧಕಿ ಪ್ರಶಸ್ತಿಗೆ ಪತ್ರಕರ್ತೆ ಸಿ.ಜಿ.ಮಂಜುಳಾ ಆಯ್ಕೆಯಾಗಿದ್ದಾರೆ.
Question 8 |
8. ಬೆಂಗಳೂರು ಮೂಲಕ ಯಾವ ಖಾಸಗಿ ಸಂಸ್ಥೆ ಡಿಸೆಂಬರ್ 2017ರ ಅಂತ್ಯಕ್ಕೆ ಚಂದ್ರನ ಮೇಲೆ ತನ್ನ ನೌಕೆಯನ್ನು ಇಳಿಸಲು ಯೋಜನೆ ರೂಪಿಸಿದೆ?
ಟೀಂ ಇಂಡಸ್ | |
ಮೂನ್ ರೇಕರ್ | |
ಮೂನ್ ಗ್ಲೈಡರ್ | |
ಟೀಂ ಮೂನ್ |
ಬೆಂಗಳೂರು ಮೂಲದ ಖಾಸಗಿ ಸಂಸ್ಥೆ ‘ಟೀಂ ಇಂಡಸ್’ ಚಂದ್ರನ ಮೇಲೆ ತನ್ನ ರೋವರ್ ನೌಕೆಯನ್ನು 2017ರ ಡಿಸೆಂಬರ್ ಅಂತ್ಯದ ವೇಳೆಗೆ ಇಳಿಸಲು ಸಿದ್ಧತೆ ನಡೆಸಿದೆ. ಗೂಗಲ್ ಲೂನಾರ್ ಎಕ್ಸ್ಪ್ರೈಸ್ ಸ್ಪರ್ಧೆಯ ಅಂಗವಾಗಿ ಟೀಂ ಇಂಡಸ್ ಈ ಸಾಹಸಕ್ಕೆ ಕೈಹಾಕಿದೆ. ಗೂಗಲ್ ಲೂನಾರ್ ಎಕ್ಸ್ಪ್ರೈಸ್ ಸ್ಪರ್ಧೆಗೆ ಪ್ರವೇಶ 2010ರಲ್ಲೇ ಮುಗಿದಿದೆ. ಸ್ಪರ್ಧೆಗೆ ಪ್ರವೇಶ ಪಡೆದಿರುವ ಮೊದಲ ನಾಲ್ಕು ತಂಡಗಳಲ್ಲಿ ಟೀಂ ಇಂಡಸ್ ನಾಲ್ಕನೆಯದು. ಒಟ್ಟಾರೆ 16 ತಂಡಗಳು ಈ ಸ್ಪರ್ಧೆಗೆ ತಮ್ಮನ್ನು ನೋಂದಾಯಿಸಿಕೊಂಡಿವೆ. ಖಾಸಗಿ ಸಂಸ್ಥೆಗಳಷ್ಟೇ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
Question 9 |
9. ಇತ್ತೀಚೆಗೆ ನಿಧನರಾದ ಚೇತನ್ ರಾಮ್ ರಾವ್ ರವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?
ಸಿನಿಮಾ | |
ಕ್ರೀಡೆ | |
ಸಾಹಿತ್ಯ | |
ಕಲೆ |
ಹಿರಿಯ ಸಿನಿಮಾ ನಟ ಚೇತನ್ ರಾಮ್ ರಾವ್ ನಿಧನರಾದರು. ರಾಮ್ ರಾವ್ ರವರು ರಾಜ್ಕುಮಾರ್, ಡಾ.ವಿಷ್ಣುವರ್ಧನ್ ಅಭಿನಯದ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದರು. ಡಾ. ರಾಜ್ಕುಮಾರ್ ಅಭಿನಯದ ‘ಮಾರ್ಗದರ್ಶಿ’ ಚಿತ್ರದ ಮೂಲಕ 1968ರಲ್ಲಿ ಚಿತ್ರರಂಗ ಪ್ರವೇಶಿಸಿದ ಅವರು ಸುಮಾರು 350 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚೇತನ್ ರಾಮರಾವ್ ಅವರಿಗೆ ರಾಜ್ಯೋತ್ಸವ, ಕಲಾರತ್ನ, ಕಲಾಭೀಷ್ಮ, ಕಲಾದ್ರೋಣ, ನಟ ಚತುರ ಮುಂತಾದ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು. ಆಪರೇಷನ್ ಡೈಮಂಡ್ ರಾಕೆಟ್, ಹುಲಿಯ ಹಾಲಿನ ಮೇವು, ಆಪ್ತರಕ್ಷಕ, ಒಲವೇ ಗೆಲುವು, ಬಾಳು ಬೆಳಗಿತು, ರಾಜ ನನ್ನ ರಾಜ, ಲಗ್ನ ಪತ್ರಿಕೆ ಮುಂತಾದ ಚಿತ್ರಗಳಲ್ಲಿ ಅವರು ನಟಿಸಿದ್ದರು.
Question 10 |
10. ಇತ್ತೀಚೆಗೆ ಐಎಸ್ಓ ಮಾನ್ಯತೆ ಪಡೆದ ಕರ್ನಾಟಕದ ಮೊದಲ ಗ್ರಾಮ ಪಂಚಾಯತಿ “ಲೈಲಾ” ಯಾವ ಜಿಲ್ಲೆಯಲ್ಲಿದೆ?
ಉತ್ತರ ಕನ್ನಡ | |
ದಕ್ಷಿಣ ಕನ್ನಡ | |
ಚಿಕ್ಕಮಗಳೂರು | |
ಬೀದರ್ |
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಲೈಲಾ ಗ್ರಾಮ ಪಂಚಾಯಿತಿಗೆ ಅಂತಾರಾಷ್ಟ್ರೀಯ ಸ್ಟಾಂಡರ್ಡ್ ಆರ್ಗನೈಸೇಷನ್(ಐಎಸ್ಓ)ನ ಪ್ರಶಸ್ತಿ ಪತ್ರ ದೊರೆತಿದೆ. ಈ ಮೂಲಕ ಐಎಸ್ಓ ಮಾನ್ಯತೆ ಪಡೆದ ರಾಜ್ಯದ ಪ್ರಥಮ ಪಂಚಾಯತ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಆಸನಗಳ ವ್ಯವಸ್ಥೆ ಸರ್ವಜನಿಕರ ಸೇವೆ, ಕುಡಿಯುವ ನೀರು, ಶೌಚಾಲಯ, ದಿನಪತ್ರಿಕೆ, ಗ್ರಂಥಾಲಯ, ಸಭಾಂಗಣ ಮುಂತಾದ ಗುಣಮಟ್ಟವನ್ನು ಪರಿಗಣಿಸಿ ಈ ಪ್ರಶಸ್ತಿ ಪತ್ರ ನೀಡಲಾಗಿದೆ.
[button link=”http://www.karunaduexams.com/wp-content/uploads/2017/01/ರಾಜ್ಯ-ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-24.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
good questions, please provide article related to karnataka government scheme
THANK YOU SIR
Good efforts
Comment
Basappa.madanor.
kodla
Comment