ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,3, 2017

Question 1

1. “ರಾಷ್ಟ್ರೀಯ ಕ್ರೀಡಾ ಅಭಿವೃದ್ದಿ ಸಂಹಿತೆ (National Sports Development Code)” ಸುಧಾರಣೆಗೆ ಶಿಫಾರಸ್ಸು ಮಾಡಲು ಕೇಂದ್ರ ಸರ್ಕಾರ ಯಾವ ಸಮಿತಿಯನ್ನು ರಚಿಸಿದೆ?

A
ಇನ್ಜೆತಿ ಶ್ರೀನಿವಾಸ ಸಮಿತಿ
B
ಎನ್. ಎಮ್. ಸಿನ್ಹಾ ಸಮಿತಿ
C
ಕೆ. ಎಸ್. ರಾಥೋರ್ ಸಮಿತಿ
D
ಸುರೇಶ್ ಬಸು ಸಮಿತಿ
Question 1 Explanation: 
ಇನ್ಜೆತಿ ಶ್ರೀನಿವಾಸ ಸಮಿತಿ

ರಾಷ್ಟ್ರೀಯ ಕ್ರೀಡಾ ಅಭಿವೃದ್ದಿ ಸಂಹಿತೆ (NSDC)ಗೆ ಸುಧಾರಣೆ ತರುವ ಸಲುವಾಗಿ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ ಕಾರ್ಯಕ್ಷಮತೆಯನ್ನು ಸುಧಾರಿಸುವ ಸಲುವಾಗಿ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಇಂಜೇತಿ ಶ್ರೀನಿವಾಸ ನೇತೃತ್ವದ ಸಮಿತಿಯನ್ನು ರಚಿಸಿದೆ. ಈ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಪ್ರಸ್ತುತ ಇರುವ ರಾಷ್ಟ್ರೀಯ ಕ್ರೀಡಾ ಅಭಿವೃದ್ದಿ ಸಂಹಿತಿಗೆ ಸುಧಾರಣೆ ತರಲಾಗುವುದು.

Question 2

2. ಈ ಕೆಳಗಿನ ಯಾವ ರಾಜ್ಯ ಇತ್ತೀಚೆಗೆ “NTR ಆರೋಗ್ಯ ರಕ್ಷಾ” ಹೆಸರಿನ ನೂತನ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿದೆ?

A
ತೆಲಂಗಣ
B
ಆಂಧ್ರ ಪ್ರದೇಶ
C
ಗೋವಾ
D
ಮಹಾರಾಷ್ಟ್ರ
Question 2 Explanation: 
ಆಂಧ್ರ ಪ್ರದೇಶ

ಆಂಧ್ರ ಪ್ರದೇಶ ಸರ್ಕಾರ ಇತ್ತೀಚೆಗೆ “NTR ಆರೋಗ್ಯ ರಕ್ಷಾ”ನೂತನ ಆರೋಗ್ಯ ಯೋಜನೆಗೆ ವಿಜಯವಾಡದಲ್ಲಿ ಚಾಲನೆ ನೀಡಿದೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಆರೋಗ್ಯ ಯೋಜನೆಯಡಿ ನೋಂದಾಯಿಸಿಕೊಂಡಿಲ್ಲದವರು ಈ ಯೋಜನೆಯ ಫಲಾನುಭವಿಗಳಾಗಬಹುದಾಗಿದೆ. ಯೋಜನೆಯಡಿ ಎಪಿಎಲ್ ರೇಖೆಗಿಂತ ಕೆಳಗಿರುವವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ದೊರೆಯಲಿದೆ. ರೂ 2 ಲಕ್ಷದ ವರೆಗೆ ವೈದ್ಯಕೀಯ ಚಿಕಿತ್ಸೆಯನ್ನು ಉಚಿತವಾಗಿ ರಾಜ್ಯದ 432 ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ.

Question 3

3. ಭಾರತದ ಮೊದಲ ಲೇಸರ್ ತಂತ್ರಜ್ಞಾನ ಆಧರಿತ ಸುಧಾರಿತ “AVMS RTO” ಚೆಕ್ ಪೋಸ್ಟ್ ಅನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?

A
ಗುಜರಾತ್
B
ಹರಿಯಾಣ
C
ಪಂಜಾಬ್
D
ರಾಜಸ್ತಾನ
Question 3 Explanation: 
ಗುಜರಾತ್

ದೇಶದ ಮೊದಲ ಲೇಸರ್ ತಂತ್ರಜ್ಞಾನ ಆಧರಿತ ಆಟೋಮ್ಯಾಟಿಕ್ ವೆಹಿಕಲ್ ಮಾನಿಟರಿಂಗ್ ಸಿಸ್ಟಂ (AVMS) RTO ಚೆಕ್ ಪೋಸ್ಟ್ ಗುಜರಾತಿನ ಅರಾವಳಿ ಜಿಲ್ಲೆಯ ಶಾಮ್ಲಜಿ ಬಳಿ ಸ್ಥಾಪಿಸಲಾಗಿದೆ. ಸುಮಾರು 4.72 ಕೋಟಿ ವೆಚ್ಚದಲ್ಲಿ ಸುಧಾರಿತ ರೇ ತಂತ್ರಜ್ಞಾನವನ್ನು ಈ ಚೆಕ್ ಪೋಸ್ಟ್ ನಲ್ಲಿ ಅಳವಡಿಸಲಾಗಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಹಾಯವಾಗಲಿದೆ.

Question 4

4. ಇತ್ತೀಚೆಗೆ ನಿಧನರಾದ ಜಾನ್ ಬರ್ಗರ್ ರವರು ಯಾವ ದೇಶದ ಲೇಖಕರು?

A
ಯುಕೆ
B
ಅಮೆರಿಕ
C
ಫ್ರಾನ್ಸ್
D
ಜರ್ಮನಿ
Question 4 Explanation: 
ಯುಕೆ

ಬ್ರಿಟಿಷ್ ಕಲಾ ವಿಮರ್ಶಕ, ಪ್ರವರ್ತಕ, ಬೌದ್ಧಿಕ ಮತ್ತು ಅಸಾಧಾರಣ ಲೇಖಕ ಜ್ಹಾನ್ ಬರ್ಗರ್ ನಿಧನರಾದರು. ವಿಮರ್ಶಕ, ಕಾದಂಬರಿ, ಕವಿತೆ, ನಾಟಕ ಮತ್ತು ವಿಶಿಷ್ಟ ಪುಸ್ತಕಗಳ ಬರವಣಿಗೆಗೆ ಹೆಸರಾಗಿರುವ ಬರ್ಗರ್ 20ನೇ ಶತಮಾನದ ಚಿಂತಕರ ಮೇಲೆ ಪ್ರಭಾವ ಬೀರಿದ್ದರು. ಸತತವಾಗಿ, ಪ್ರಚೋದನಾತ್ಮಕವಾಗಿ ಕಲೆ ಮತ್ತು ಸಮಾಜದ ಸಾಂಪ್ರದಾಯಿಕ ವ್ಯಾಖ್ಯಾನಗಳು ಸವಾಲುಗಳು ಮತ್ತು ಅವುಗಳ ನಡುವಿನ ಸಂಬಂಧವನ್ನು ತಮ್ಮ ಬರಹಗಳಲ್ಲಿ ತೋರಿಸುತ್ತಿದ್ದರು. ಅವರ 1972 ಪುಸ್ತಕ ಮತ್ತು ಬಿಬಿಸಿ ಸರಣಿ “ವೇಸ್ ಆಫ್ ಸೀಯಿಂಗ್” ಒಂದು ತಲೆಮಾರಿನ ಕಲೆಗೆ ಮರು ವ್ಯಾಖ್ಯಾನ ನೀಡಿದ್ದವು.

Question 5

5. ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ ಸಿ)ದ ನೂತನ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿದೆ?

A
ರವೀಂದ್ರ ಕುಲಕರ್ಣಿ
B
ಡೇವಿಡ್ ಸೈಮ್ಲಿ
C
ಅನುರಾಧ ಭಂಡಾರಿ
D
ಕಿರಣ್ ಶುಕ್ಲಾ
Question 5 Explanation: 
ಡೇವಿಡ್ ಸೈಮ್ಲಿ

ಪ್ರೊಫೆಸರ್ ಡೇವಿಡ್ ಸೈಮ್ಲಿ ರವರು ಕೇಂದ್ರ ಲೋಕ ಸೇವಾ ಆಯೋಗದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಮೇಘಾಲಯದವರಾದ ಸೈಮ್ಲಿ ರವರು ಯುಪಿಎಸ್ ಸಿ ಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಸೈಮ್ಲಿ ರವರ ಅಧಿಕಾರ ಅವಧಿ ಜನವರಿ 4, 2017ರಿಂದ ಜನವರಿ 21, 2018ರವರೆಗೆ ಇರಲಿದೆ.

Question 6

6. ____________ ರಂದು ವಿಶ್ವ ಬ್ರೈಲಿ ದಿನವನ್ನು ಆಚರಿಸಲಾಗುತ್ತದೆ?

A
ಜನವರಿ 2
B
ಜನವರಿ 3
C
ಜನವರಿ 4
D
ಜನವರಿ 5
Question 6 Explanation: 
ಜನವರಿ 4

ವಿಶ್ವ ಬ್ರೈಲಿ ದಿನವನ್ನು ಜನವರಿ 4 ರಂದು ಪ್ರತಿವರ್ಷ ಆಚರಿಸಲಾಗುತ್ತದೆ. ಬ್ರೈಲಿ ಲಿಫಿ ಅನ್ವೇಷಣಕಾರ ಲೂಯಿಸ್ ಬ್ರೈಲಿ ರವರ ಜನ್ಮದಿನವನ್ನು ಬ್ರೈಲಿ ದಿನವನ್ನಾಗಿ ಆಚರಿಸಲಾಗುತ್ತದೆ.

Question 7

7. ಯಾವ ಬ್ಯಾಂಕ್ ಇತ್ತೀಚೆಗೆ ಖಾತೆದಾರರಿಗೆ ಫೇಸ್ ಬುಕ್ ಮೆಸೆಂಜರ್ ಮೂಲಕ ಹಣ ಪಾವತಿಸುವ “ಆನ್ ಚಾಟ್ (On chat)” ಸೇವೆಯನ್ನು ಆರಂಭಿಸಿದೆ?

A
ಐಸಿಐಸಿಐ ಬ್ಯಾಂಕ್
B
ಆಕ್ಸಿಸ್ ಬ್ಯಾಂಕ್
C
ಹೆಚ್ ಡಿ ಎಫ್ ಸಿ ಬ್ಯಾಂಕ್
D
ಕಾರ್ಪೋರೇಶನ್ ಬ್ಯಾಂಕ್
Question 7 Explanation: 
ಹೆಚ್ ಡಿ ಎಫ್ ಸಿ ಬ್ಯಾಂಕ್

ಹೆಚ್ ಡಿ ಎಫ್ ಸಿ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಹೆಚ್ ಡಿ ಎಫ್ ಸಿ “ಆನ್ ಚಾಟ್” ಸೇವೆಯನ್ನು ಆರಂಭಿಸಿದ್ದು, ಬಳಕೆದಾರರು ಫೇಸ್ ಬುಕ್ ಮೆಸೆಂಜರ್ ಮೂಲಕ ಹಣ ಪಾವತಿ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಮೊಬೈಲ್ ರಿಜಾರ್ಜ್, ನೀರು, ವಿದ್ಯುತ್ ಮತ್ತು ಗ್ಯಾಸ್ ಬಿಲ್ ಗಳನ್ನು ಈ ಸೇವೆ ಮೂಲಕ ಪಾವತಿ ಮಾಡಬಹುದಾಗಿದೆ.

Question 8

8. 2016 ವಿಶ್ವ ಬ್ಲಿಜ್ಟ್ ಚೆಸ್ ಚಾಂಪಿಯನ್ಷಿಪ್ (World Blitz Chess Championship)” ಪ್ರಶಸ್ತಿಯನ್ನು ಗೆದ್ದುಕೊಂಡವರು ಯಾರು?

A
ಸೆರ್ಗೆ ಕರ್ಜಕಿನ್
B
ಮ್ಯಾಗ್ನಸ್ ಕಾರ್ಲಸೆನ್
C
ವಿಶ್ವನಾಥನ್ ಆನಂದ್
D
ಡನಿಲ್ ದಬೊವ್
Question 8 Explanation: 
ಸೆರ್ಗೆ ಕರ್ಜಕಿನ್

ರಷ್ಯಾದ ಸೆರ್ಗೆ ಕರ್ಜಕಿನ್ ರವರು 2016 ವಿಶ್ವ ಬ್ಲಿಜ್ಟ್ ಚೆಸ್ ಚಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡರು. ಕತಾರ್ ನ ದೋಹಾದಲ್ಲಿ ನಡೆದ ಪಂದ್ಯದಲ್ಲಿ ಸೆರ್ಗೆ ಕರ್ಜಕಿನ್ ರವರು ಮ್ಯಾಗ್ನಸ್ ಕಾರ್ಲಸೆನ್ ರವರನ್ನು ಟೈ-ಬ್ರೇಕ್ ನಲ್ಲಿ ಮಣಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡರು. ಇದು ಕರ್ಜಕಿನ್ ರವರಿಗೆ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್ಷಿಪ್ ನಲ್ಲಿ ಮೊದಲ ಪ್ರಶಸ್ತಿ.

Question 9

9. ಯಾವ ದೇಶ ಜಗತ್ತಿನಲ್ಲೆ ಮೊದಲ ಬಾರಿಗೆ ಉದ್ಯೋಗ ವಂಚಿತರಿಗೆ ಮಾಸಿಕ ಸಹಾಯ ಧನ ನೀಡುವ ಯೋಜನೆ ಜಾರಿಗೆ ತಂದಿದೆ?

A
ಸ್ವಿಟ್ಜರ್ಲ್ಯಾಂಡ್
B
ಫಿನ್ ಲ್ಯಾಂಡ್
C
ನೆದರ್ ಲ್ಯಾಂಡ್
D
ಕೆನಡಾ
Question 9 Explanation: 
ಫಿನ್ ಲ್ಯಾಂಡ್

ಸರ್ಕಾರ ಉದ್ಯೋಗ ವಂಚಿತರಿಗೆ ತಿಂಗಳಿಗೆ 560 ಯುರೋಸ್ ಅಂದ್ರೆ 40,000 ರೂಪಾಯಿ ಸಹಾಯ ಧನ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಮೂಲಕ ಬಡತನ ನಿವಾರಣೆ ಮಾಡುವುದು ಸರ್ಕಾರದ ಉದ್ದೇಶ. 25 ರಿಂದ 58 ವರ್ಷ ವಯಸ್ಸಿನ 2000 ಜನರನ್ನು ಈ ಯೋಜನೆಗೆ ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗಿದ್ದು, ಅವರು 2 ವರ್ಷದವರೆಗೆ ಸರ್ಕಾರದಿಂದ ಪ್ರತಿ ತಿಂಗಳು 40,000 ರೂಪಾಯಿ ಸಹಾಯಧನ ಪಡೆಯಲಿದ್ದಾರೆ. ಅದನ್ನು ಹೇಗೆ ಖರ್ಚು ಮಾಡಿದ್ದಾರೆ ಎಂಬ ಬಗ್ಗೆ ಲೆಕ್ಕ ಕೊಡಬೇಕಾಗಿಲ್ಲ.

Question 10

10. “Death Under the Deodars: The Adventures of Miss Ripley-Bean” ಪುಸ್ತಕದ ಲೇಖಕರು ಯಾರು?

A
ರಸ್ಕಿನ್ ಬಾಂಡ್
B
ಜುಂಪಾ ಲಹರಿ
C
ಅಮಿತಾವ್ ಘೋಷ್
D
ಅರವಿಂದ್ ಅಡಿಗ
Question 10 Explanation: 
ರಸ್ಕಿನ್ ಬಾಂಡ್
There are 10 questions to complete.

[button link=”http://www.karunaduexams.com/wp-content/uploads/2017/01/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ3-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.