ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,7,8,2017

Question 1

1. “My Odyssey: Memoirs of the Man behind the Mangalyaan Mission” ಪುಸ್ತಕದ ಲೇಖಕರು ಯಾರು?

A
ಕೆ ರಾಧಕೃಷ್ಣನ್
B
ಕಿರಣ್ ಕುಮಾರ್
C
ಮಾಧವನ್ ನಾಯರ್
D
ನರಸಿಂಹನ್
Question 1 Explanation: 
ಕೆ ರಾಧಕೃಷ್ಣನ್

“My Odyssey: Memoirs of the Man behind the Mangalyaan Mission” ಪುಸ್ತಕವನ್ನು ಇಸ್ರೋದ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ರವರು ಬರೆದಿದ್ದಾರೆ.

Question 2

2. ಭಾರತದ “ಶ್ರೇಯಸ್ ಮೆಹ್ತಾ” ರವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

A
ಸ್ಕ್ವಾಷ್
B
ಟೆನ್ನಿಸ್
C
ಹಾಕಿ
D
ಕ್ರಿಕೆಟ್
Question 2 Explanation: 
ಸ್ಕ್ವಾಷ್

ಶ್ರೇಯಸ್ ಮೆಹ್ತಾ ರವರು ಭಾರತದ U-19 ಸ್ಕ್ವಾಷ್ ಆಟಗಾರ. ಮೆಹ್ತಾ ರವರು ಸ್ಕಾಟ್ಲ್ಯಾಂಡ್ ನಲ್ಲಿ ನಡೆದ 2017 ಸ್ಕಾಟಿಷ್ ಜೂನಿಯರ್ ಸ್ಕ್ವಾಷ್ ಚಾಂಪಿಯನ್ ಷಿಪ್ನಲ್ಲಿ ಕೊಲೊಂಬಿಯಾದ ಜಾನ್ ಜೊಸ್ ಟೊರೆಸ್ ಲಾರಾ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡರು.

Question 3

3. ಇತ್ತೀಚೆಗೆ ನಿಧನರಾದ “ಜಿಗ್ಮಂಟ್ ಬಾವ್ಮನ್ (Zygmunt Bauman)” ಯಾವ ದೇಶದ ಪ್ರಸಿದ್ದ ಸಮಾಜಶಾಸ್ತ್ರಜ್ಞ?

A
ಕೆನಡಾ
B
ಅಮೆರಿಕ
C
ಪೊಲೆಂಡ್
D
ನಾರ್ವೆ
Question 3 Explanation: 
ಪೊಲೆಂಡ್

ಪೊಲೆಂಡ್ನ ಪ್ರಸಿದ್ದ ಸಮಾಜಶಾಸ್ತ್ರಜ್ಞ “ಜಿಗ್ಮಂಟ್ ಬಾವ್ಮನ್” ಇಂಗ್ಲೆಂಡ್ಸ್ ನ ಲೀಡ್ಸ್ ನಲ್ಲಿ ನಿಧನರಾದರು. ಬಾವ್ಮನ್ ರವರು ಐರೋಪ್ಯದ ಪ್ರಮುಖ ಸಮಾಜಶಾಸ್ತ್ರಕಾರರಲ್ಲಿ ಒಬ್ಬರಾಗಿದ್ದರು.

Question 4

4. “ಗ್ಲೋಬಲ್ ರಿಸ್ಕ್ ರಿಪೋರ್ಟ್ (Global Risk Report)-2017” ಹೊರತಂದ ಸಂಸ್ಥೆ _________?

A
ವಿಶ್ವಸಂಸ್ಥೆ
B
ಅಂತಾರಾಷ್ಟ್ರೀಯ ಹಣಕಾಸು ನಿಧಿ
C
ವಿಶ್ವ ಆರ್ಥಿಕ ವೇದಿಕೆ
D
ಏಷ್ಯಾ ಅಭಿವೃದ್ದಿ ಬ್ಯಾಂಕ್
Question 4 Explanation: 
ವಿಶ್ವ ಆರ್ಥಿಕ ವೇದಿಕೆ

ವಿಶ್ವ ಆರ್ಥಿಕ ವೇದಿಕೆ ಗ್ಲೋಬಲ್ ರಿಸ್ಕ್ ರಿಪೋರ್ಟ್ ಅನ್ನು ಪ್ರತಿ ವರ್ಷ ಹೊರತರುತ್ತಿದೆ. ಗ್ಲೋಬಲ್ ರಿಸ್ಕ್ ರಿಪೋರ್ಟ್ನ12ನೇ ಆವೃತ್ತಿಯನ್ನು ಇತ್ತೀಚೆಗೆ ಹೊರತರಲಾಗಿದ್ದು, ವಿಶ್ವದ ಗಮನಾರ್ಹ ದೀರ್ಘಕಾಲದ ರಿಸ್ಕ್ ಅನ್ನು ಹೆಸರಿಸಲಾಗಿದೆ.

Question 5

5. ವಿಶ್ವಸಂಸ್ಥೆಯ ಪ್ರಕಾರ 2017ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಪಗ್ರತಿ ಎಷ್ಟಿರಲಿದೆ?

A
7.1%
B
7.5%
C
7.7%
D
8.0%
Question 5 Explanation: 
7.7%:

ನೋಟು ಅಪನಗದೀಕರಣದ ಹೊರತಾಗಿಯೂ ಭಾರತ ಅತ್ಯಂತ ವೇಗದಲ್ಲಿ ಅಭಿವೃದ್ಧಿಹೊಂದುತ್ತಿರುವ ವಿಶ್ವದ ಬೃಹತ್ ಆರ್ಥಿಕತೆಯಾಗಿ 2017ರ ಹಣಕಾಸು ವರ್ಷದಲ್ಲಿ ಇದು ಶೇ.7.7ರ ಬೆಳವಣಿಗೆಯನ್ನು ಕಾಣಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ವಿಶ್ವಸಂಸ್ಥೆಯ ಜಾಗತಿಕ ಆರ್ಥಿಕ ಮತ್ತು ಭವಿಷ್ಯ ಕುರಿತಾದ 2017ರ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಈವರದಿಯಲ್ಲಿ 2017ರ ಭಾರತದ ಆರ್ಥಿಕಾಭಿವೃದ್ಧಿಯು ಶೇ.7.7ರ ಬೆಳವಣಿಗೆಯನ್ನು ಕಾಣಲಿದೆ. ಇದರ ಪರಿಣಾಮವಾಗಿ ಖಾಸಗಿ ಬಳಕೆಯೂ ಬಲಗೊಳ್ಳಲಿದ್ದು, ಈ ಮೂಲಕ ಗಮನಾರ್ಹ ಆತಂಕರಿಕ ಸುಧಾರಣೆಗಳು ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ

Question 6

6. ಈ ಕೆಳಗಿನ ಯಾವ ರಾಜ್ಯ ನಗದು ರಹಿತ ವ್ಯವಹಾರಕ್ಕೆ “ಟೊಕಪೊಯಿಸ.ಇನ್ (Tokapoisa.in)” ಎಂಬ ಇ-ವ್ಯಾಲೆಟ್ ಅನ್ನು ಜಾರಿಗೆ ತರಲಿದೆ?

A
ಅಸ್ಸಾಂ
B
ಮಣಿಪುರ
C
ತ್ರಿಪುರ
D
ಜಾರ್ಖಂಡ್
Question 6 Explanation: 

ಅಸ್ಸಾಂ ಸರ್ಕಾರ ನಗದು ರಹಿತ ವ್ಯವಸ್ಥೆಗಾಗಿ ಸ್ಥಳೀಯವಾಗಿ ಅಭಿವೃದ್ದಿಪಡಿಸಿರುವ ಟೊಕಪೊಯಿಸ.ಇನ್ ಹೆಸರಿನ ಇ-ವ್ಯಾಲೆಟ್ ಅನ್ನು ಪರಿಚಯಿಸಲಿದೆ. ಈ ಇ-ವ್ಯಾಲೆಟ್ ಅನ್ನು ಅಸ್ಸಾಂ ಎಲೆಕ್ಟ್ರಾನಿಕ್ಸ್ ಡೆವೆಲಫ್ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ಅಭಿವೃದ್ದಿಪಡಿಸಿದ್ದು, ಸ್ಥಳೀಯ ಭಾಷೆಯಲ್ಲಿ ಲಭ್ಯವಿದೆ. ಇದರ ಮೂಲಕ ವ್ಯಾಪಾರಸ್ಥರು, ಮಾರಾಟಗಾರರು ಹಾಗೂ ಸಣ್ಣ ಅಂಗಡಿ ಮಾಲೀಕರು ವ್ಯವಹಾರ ನಡೆಸಬಹುದಾಗಿದೆ.

Question 7

7. “2017 ವಿಶ್ವ ಆರ್ಥಿಕ ವೇದಿಕೆ (World Economic Forum)”ವಾರ್ಷಿಕ ಸಭೆ ಎಲ್ಲಿ ನಡೆಯಲಿದೆ?

A
ಸ್ವಿಟ್ಜರ್ಲ್ಯಾಂಡ್
B
ಭಾರತ
C
ಆಸ್ಟ್ರೇಲಿಯಾ
D
ರಷ್ಯಾ
Question 7 Explanation: 
ಸ್ವಿಟ್ಜರ್ಲ್ಯಾಂಡ್

2017 ವಿಶ್ವ ಆರ್ಥಿಕ ವೇದಿಕೆ ಸ್ವಿಟ್ಜರ್ಲ್ಯಾಂಡ್ ನ ದಾವೋಸ್ ನಲ್ಲಿ ಜನವರಿ 17 ರಿಂದ 20 ರವರೆಗೆ ನಡೆಯಲಿದೆ. “ರೆಸ್ಪಾನ್ಸಿಬಲ್ ಅಂಡ್ ರೆಸ್ಪಾನ್ಸಿವ್ ಲೀಡರ್ ಪಿಪ್” ಇದು ಈ ವರ್ಷದ ಧ್ಯೇಯವಾಕ್ಯ. ಜಗತ್ತು ಎದುರಿಸುತ್ತಿರುವ ಗಮನಾರ್ಹ ವಿಷಯಗಳ ಬಗ್ಗೆ ಚರ್ಚಿಸುವುದು ಹಾಗೂ ಜಗತ್ತನ್ನು ಪ್ರಸ್ತುತ ಸ್ಥಿತಿಯನ್ನು ಉತ್ತಮಪಡಿಸುವುದು ಸಭೆಯ ಉದ್ದೇಶ.

Question 8

8. “ಜಿಗ್ಮೆ ದೊರ್ಜಿ ರಾಷ್ಟ್ರೀಯ ಉದ್ಯಾನವನ (Jigme Dorji National Park)” ಎಲ್ಲಿದೆ?

A
ಭೂತಾನ್
B
ನೇಪಾಳ
C
ಶ್ರೀಲಂಕಾ
D
ಬಾಂಗ್ಲದೇಶ
Question 8 Explanation: 
ಭೂತಾನ್

ಜಿಗ್ಮೆ ದೊರ್ಜಿ ರಾಷ್ಟ್ರೀಯ ಉದ್ಯಾನವನ ಭೂತಾನ್ ನಲ್ಲಿದೆ. ಇದು ಭೂತಾನದ ಎರಡನೇ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದ್ದು, ಭೂತಾನದ ಮೂರನೇ ದೊರೆ ಜಿಗ್ಮೆ ದೊರ್ಜಿ ವಾಂಗ್ ಚುಕ್ ರವರ ಹೆಸರನ್ನು ಈ ಉದ್ಯಾನವಕ್ಕೆ ಇಡಲಾಗಿದೆ. ಈ ಉದ್ಯಾನವ 4316 ಚದರ ಕಿ.ಮೀ ಇದ್ದು, ಬಂಗಾಳದ ಹುಲಿ, ಹಿಮ ಚಿರತೆ, ಹಿಮಾಲಯದ ನೀಲಿ ಕುರಿ ಸೇರಿದಂತೆ 37 ಸಸ್ತನಿಗಳನ್ನು ಒಳಗೊಂಡಿದೆ.

Question 9

9. “2017 ವೈಬ್ರಂಟ್ ಗುಜರಾತ್ ಜಾಗತಿಕ ಹೂಡಿಕೆದಾರರ ಸಮಾವೇಶ” ಯಾವ ನಗರದಲ್ಲಿ ಆಯೋಜಿಸಲಾಗಿತ್ತು?

A
ಸೂರತ್
B
ಅಹಮದಾಬಾದ್
C
ಗಾಂಧೀನಗರ
D
ರಾಜ್ ಕೋಟ್
Question 9 Explanation: 
ಅಹಮದಾಬಾದ್

ಪ್ರಧಾನಿ ನರೇಂದ್ರ ಮೋದಿ ರವರು 8ನೇ ವೈಬ್ರಂಟ್ ಗುಜರಾತ್ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಗುಜರಾತಿನ ಗಾಂಧೀನಗರದ ಮಹಾತ್ಮ ಮಂದಿರದಲ್ಲಿ ಚಾಲನೆ ನೀಡಿದರು. “ಸುಸ್ಥಿರ ಅಭಿವೃದ್ದಿ ಮತ್ತು ಸಾಮಾಜಿಕ ಅಭಿವೃದ್ದಿ” ಇದು 2017 ವೈಬ್ರಂಟ್ ಗುಜರಾತ್ ಜಾಗತಿಕ ಹೂಡಿಕೆದಾರರ ಸಮಾವೇಶದ ಧ್ಯೇಯವಾಗಿದೆ.

Question 10

10. 2017 ರ ರಾಷ್ಟ್ರೀಯ ಯುವಜನ ಉತ್ಸವವನ್ನು ಯಾವ ರಾಜ್ಯದಲ್ಲಿ ಆಯೋಜಿಸಲಾಗಿತ್ತು?

A
ಕರ್ನಾಟಕ
B
ಒಡಿಸ್ಸಾ
C
ಜಾರ್ಖಂಡ್
D
ಹರಿಯಾಣ
Question 10 Explanation: 
ಹರಿಯಾಣ

21ನೇ ರಾಷ್ಟ್ರೀಯ ಯುವಜನ ಉತ್ಸವ ಹರಿಯಾಣದ ರೋಹತಕ್ ನಲ್ಲಿ ಜನವರಿ 12 ರಿಂದ 16 ರವರೆಗೆ ನಡೆಯಲಿದೆ. “ಯುಥ್ ಫಾರ್ ಡಿಜಿಟಲ್ ಇಂಡಿಯಾ” ಇದು ಈ ವರ್ಷದ ಯುವಜನ ಉತ್ಸವದ ಧ್ಯೇಯವಾಕ್ಯ. ರಾಷ್ಟ್ರೀಯ ಯುವಜನ ಉತ್ಸವವನ್ನು ಪ್ರತಿವರ್ಷ ಸ್ವಾಮಿ ವಿವೇಕಾನಂದ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತದೆ.

There are 10 questions to complete.

[button link=”http://www.karunaduexams.com/wp-content/uploads/2017/01/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಜನವರಿ-7.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,7,8,2017”

  1. At post:-Balabatti TQ:-Muddebihal Dist:-Vijayapur

  2. pavithra j j

    sir i will intresting of your question thank you very much sir

  3. Hanu Yadav

    Thank u karunadu exams .so very usefuly

  4. Thanks sir so very very useful computative exam’s

Leave a Comment

This site uses Akismet to reduce spam. Learn how your comment data is processed.