ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 30, 2016

Question 1

1.ಭಾರತೀಯ ಸಸ್ಯಸರ್ವೇಕ್ಷಣಾ ಇಲಾಖೆ (Botanical Survey of India) ಪ್ರಕಾರ ದೇಶದಲ್ಲಿ ಅತಿ ಹೆಚ್ಚು ಹೂ ಬಿಡುವ ಸಸ್ಯ ಪ್ರಬೇಧಗಳನ್ನು ಹೊಂದಿರುವ ರಾಜ್ಯ ಯಾವುದು?

A
ಕೇರಳ
B
ಮಹಾರಾಷ್ಟ್ರ
C
ತಮಿಳುನಾಡು
D
ಕರ್ನಾಟಕ
Question 1 Explanation: 
ತಮಿಳುನಾಡು:

ಭಾರತೀಯ ಸಸ್ಯಸರ್ವೇಕ್ಷಣಾ ಇಲಾಖೆ (Botanical Survey of India) ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ತಮಿಳುನಾಡು ದೇಶದಲ್ಲಿ ಅತಿ ಹೆಚ್ಚು ಹೂಬಿಡುವ ಸಸ್ಯ ಪ್ರಬೇಧಗಳನ್ನು ಹೊಂದಿದೆ. “ಎಂಡಮಿಕ್ ವ್ಯಾಸ್ಕುಲರ್ ಪ್ಲಾಂಟ್ಸ್ ಆಫ್ ಇಂಡಿಯಾ (Endemic Vascular Plants of India)” ಎಂಬ ಶೀರ್ಷಿಕೆಯಡಿ ಬಿಡುಗಡೆಗೊಂಡಿರುವ ವರದಿಯ ಪ್ರಕಾರ ದೇಶದಲ್ಲಿ ಕಾಣಸಿಗುವ ಪ್ರತಿ ನಾಲ್ಕು ಹೂಬಿಡುವ ಸಸ್ಯ ಪ್ರಬೇಧಗಳ ಪೈಕಿ ಒಂದು ದೇಶದ ಸ್ಥಳೀಯ ಪ್ರಬೇಧವಾಗಿದೆ. ಭಾರತದಲ್ಲಿ ಒಟ್ಟು 18,259 ಹೂ ಬಿಡುವ ಸಸ್ಯಗಳು ಕಂಡುಬಂದಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಇವುಗಳ ಪೈಕಿ 4,303 ಸಸ್ಯಗಳು (ಶೇ 23%) ಕೇವಲ ಭಾರತದಲ್ಲಿ ಮಾತ್ರ ಕಾಣಬಹುದಾಗಿದೆ. ಈ 4,303 ಸಸ್ಯಗಳ ಪೈಕಿ ತಮಿಳುನಾಡಿ ಅತಿ ಹೆಚ್ಚು ಅಂದರೆ 410 ಪ್ರಬೇಧಗಳು ವರದಿಯಾಗಿವೆ. ಕೇರಳದಲ್ಲಿ 357 ಪ್ರಬೇಧಗಳು ಮತ್ತು ಮಹಾರಾಷ್ಟ್ರದಲ್ಲಿ 278 ಪ್ರಬೇಧಗಳು ಕಂಡುಬಂದಿವೆ.

Question 2

2.ಈ ಕೆಳಗಿನ ಯಾವ ರಾಷ್ಟ್ರ “ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ (OPEC)”ಯ ಸದಸ್ಯ ರಾಷ್ಟ್ರವಲ್ಲ?

A
ಆಸ್ಟ್ರೀಯಾ
B
ವೆನೆಜುವೆಲ
C
ನೈಜೀರಿಯಾ
D
ಕುವೈತ್
Question 2 Explanation: 
ಆಸ್ಟ್ರೀಯಾ:

ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆಯನ್ನು 1960 ರಲ್ಲಿ ಬಾಗ್ದದ್ ನಲ್ಲಿ ಸ್ಥಾಪಿಸಲಾಗಿದೆ. 14 ರಾಷ್ಟ್ರಗಳು ಈ ಸಂಘಟನೆಯ ಸದಸ್ಯತ್ವವನ್ನು ಹೊಂದಿವೆ. ಒಪೆಕ್ ನ ಕೇಂದ್ರ ಕಚೇರಿ ಆಸ್ಟ್ರೇಯಾದ ವಿಯೆನ್ನಾದಲ್ಲಿದೆ. ಆದರೆ ಆಸ್ಟ್ರೀಯಾ ಸದಸ್ಯ ರಾಷ್ಟ್ರವಲ್ಲ. ಅಲ್ಜೀರಿಯಾ, ಅಂಗೋಲಾ, ಈಕ್ವಡಾರ್, ಗಬಾನ್, ಇಂಡೋನೇಷಿಯಾ, ಇರಾನ್, ಇರಾಕ್, ಕುವೈತ್, ಲಿಬಿಯಾ, ನೈಜೀರಿಯಾ, ಖತಾರ್, ಸೌಧಿ ಅರೇಬಿಯಾ, ಯುಎಇ ಮತ್ತು ವೆನೆಜುವೆಲಾ ಒಪೆಕ್ ಸದಸ್ಯ ರಾಷ್ಟ್ರಗಳಾಗಿವೆ.

Question 3

3.ಅಂತಾರಾಷ್ಟ್ರೀಯ ಭಾಷಾಂತರ ದಿನವನ್ನು ______ದಿನದಂದು ಆಚರಿಸಲಾಗುತ್ತದೆ?

A
ಸೆಪ್ಟೆಂಬರ್ 29
B
ಸೆಪ್ಟೆಂಬರ್ 30
C
ಅಕ್ಟೋಬರ್ 1
D
ಅಕ್ಟೋಬರ್ 2
Question 3 Explanation: 
ಸೆಪ್ಟೆಂಬರ್ 30:

ಅಂತಾರಾಷ್ಟ್ರೀಯ ಭಾಷಾಂತರ ದಿನ (International Translation Day)ವನ್ನು ಪ್ರತಿ ವರ್ಷ ಸೆಪ್ಟೆಂಬರ್ 30ರಂದು ಆಚರಿಸಲಾಗುತ್ತದೆ. ಸುಮಾರು 4ನೇ ಶತಮಾನದಲ್ಲಿ ಇತಿಹಾಸಕಾರ ಸೇಂಟ್ ಜೆರೋಮ್ ಎಂಬುವವರು ನಿಧನ ಹೊಂದಿದ ದಿನವನ್ನು ಸೆಪ್ಟಂಬರ್ 30 ವಿಶ್ವ ಭಾಷಾಂತರ ದಿನವನ್ನಾಗಿ ಆಚರಿಸಲಾಗುತ್ತಿದೆ. ಜೊರೊಮ್ ಅವರು ಕ್ರೈಸ್ತರ ಗ್ರಂಥ ಬೈಬಲನ್ನು ಇತರ ಭಾಷೆಗೆ ಅನುವಾದಿಸಿದರು. ಈ ಕಾರಣಕ್ಕಾಗಿ ಅವರನ್ನು ಜಗತ್ತು ಈಗಲೂ ಶ್ರೇಷ್ಟ ಭಾಷಾಂತರಗಾರರಾಗಿ ಗುರುತಿಸುತ್ತಿದೆ.

Question 4

4. ಕಾಗ್ನಿಜಂಟ್ ಟೆಕ್ನಾಲಜಿ ಸರ್ವೀಸಸ್ ನ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?

A
ವಿನಯ್ ಚಂದ್ರಶೇಖರ್
B
ರಾಜೀವ್ ಮೆಹ್ತಾ
C
ಸ್ವರೂಪ್ ಕುಲಕರ್ಣಿ
D
ವಿರಾಟ್ ದಂಡೇಕರ್
Question 4 Explanation: 
ರಾಜೀವ್ ಮೆಹ್ತಾ:

ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾಗಿರುವ ಕಾಗ್ನಿಜಂಟ್ ಟೆಕ್ನಾಲಜಿ ಸರ್ವಿಸಸ್ನ ಹೊಸ ಅಧ್ಯಕ್ಷರನ್ನಾಗಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ (ಐ.ಟಿ ಸೇವೆ) ಭಾರತ ಸಂಜಾತ ರಾಜೀವ್ ಮೆಹ್ತಾ ಅವರನ್ನು ನೇಮಿಸಲಾಗಿದೆ. ಗೋರ್ಡನ್ ಕೋಬರ್ನ್ ಅವರು ರಾಜೀನಾಮೆ ನೀಡಿದ್ದರಿಂದ ಮೆಹ್ತಾ ಅವರನ್ನು ನೇಮಿಸಲಾಗಿದೆ.

Question 5

5.ಕಾರ್ಮಿಕ ಮಂಡಳಿ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ದೇಶದಲ್ಲಿ ಅತಿ ಹೆಚ್ಚು ನಿರುದ್ಯೋಗ ಪ್ರಮಾಣವನ್ನು ಹೊಂದಿರುವ ರಾಜ್ಯ ಯಾವುದು?

A
ತ್ರಿಪುರ
B
ಅಸ್ಸಾಂ
C
ಕೇರಳ
D
ಮಹಾರಾಷ್ಟ್ರ
Question 5 Explanation: 
ತ್ರಿಪುರ:

2015-16ನೇ ಸಾಲಿನಲ್ಲಿ ದೇಶದ ನಿರುದ್ಯೋಗ ಪ್ರಮಾಣ ಶೇ. 5ರಷ್ಟು ಹೆಚ್ಚಿರುವ ಅಘಾತಕಾರಿ ವಿಷಯವನ್ನು ಕಾರ್ಮಿಕ ಮಂಡಳಿ ವರದಿ ಮಾಡಿದೆ. ಕಳೆದ ಐದು ವರ್ಷಗಳಿಂದ ಉದ್ಯೋಗ ಮತ್ತು ನಿರುದ್ಯೋಗ ಪ್ರಮಾಣ ಅಳೆಯುವ ವರದಿಯನ್ನು ತಯಾರಿಸಲಾಗುತ್ತಿದೆ. ಕಾರ್ಮಿಕ ಮಂಡಳಿ ರಾಷ್ಟ್ರ ಮಟ್ಟದಲ್ಲಿ ಪ್ರತಿವರ್ಷ ವರದಿ ಸಿದ್ದಪಡಿಸುತ್ತಿದ್ದು, ಇದು ಐದನೇ ವರದಿಯಾಗಿದೆ. 2015-16ರಲ್ಲಿ ನಗರ ಪ್ರದೇಶದಲ್ಲಿ ಶೇ. 4.9ರಷ್ಟಿದ್ದು, ಗ್ರಾಮೀಣ ಭಾಗದ ನಿರುದ್ಯೋಗ ಪ್ರಮಾಣ ಶೇ. 5.1ರಷ್ಟಿದೆ. ತ್ರಿಪುರಾ ರಾಜ್ಯ ಅತ್ಯಂತ ಹೆಚ್ಚು ನಿರುದ್ಯೋಗ ಪ್ರಮಾಣ ಶೇ. 19.7ರಷ್ಟು ಹೊಂದಿದೆ.

Question 6

6. ನಾಲ್ಕನೇ ಭೌದ್ದ ಸಮ್ಮೇಳನ ನಡೆದದ್ದು ______?

A
ಕಪಿಲವಸ್ತು
B
ಕಾಶ್ಮೀರ
C
ಸಾರನಾಥ
D
ಬೋದಗಯಾ
Question 6 Explanation: 
ಕಾಶ್ಮೀರ:

ಮೊದಲ ಭೌದ್ದ ಸಮ್ಮೇಳನ ರಾಜಗಿರ್, ಎರಡನೇ ಭೌದ್ದ ಸಮ್ಮೇಳನ ವೈಶಾಲಿ, ಮೂರನೇ ಭೌದ್ದ ಸಮ್ಮೇಳನ ಪಾಟಲಿಪುತ್ರ ಮತ್ತು ನಾಲ್ಕನೇ ಭೌದ್ದ ಸಮ್ಮೇಳನ ಕಾಶ್ಮೀರದಲ್ಲಿ ನಡೆಯಿತು.

Question 7

7. 2016-WTA ವುಹಾನ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದವರು ಯಾರು?

A
ಪೆಟ್ರಾ ಕ್ವಿಟೋವಾ
B
ಡೊಮಿನಿಕಾ ಸಿಬುಲ್ಕೋವಾ
C
ಬಾರ್ಬರಾ ಸ್ಟ್ರೈಕೋವಾ
D
ಲೂಸಿಯಾ ಸಫರೋವಾ
Question 7 Explanation: 
ಪೆಟ್ರಾ ಕ್ವಿಟೋವಾ:

ಪೆಟ್ರಾ ಕ್ವಿಟೋವಾ ರವರು ಡಬ್ಲ್ಯುಟಿಎ ವುಹಾನ್ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ನಲ್ಲಿ ಚಾಂಪಿಯನ್ ಆದರು. ಸಿಂಗಲ್ಸ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ಕ್ವಿಟೋವಾ 6-1, 6-1ರಲ್ಲಿ ಸ್ಲೋವೇಕಿಯಾದ ಡೊಮಿನಿಕಾ ಸಿಬುಲ್ಕೋವಾ ಅವರನ್ನು ಮಣಿಸಿದರು. ಕ್ವಿಟೋವಾ ವಿಂಬಲ್ಡನ್ ಟೂರ್ನಿಯಲ್ಲಿ ಎರಡು ಸಲ ಪ್ರಶಸ್ತಿ ಜಯಿಸಿದ್ದಾರೆ.

Question 8

8.ಇತ್ತೀಚೆಗೆ ನಿಧನರಾದ ಸೈಯದ್ ಶಾಂಸುಲ್ ಹಕ್ (Syed Shamsul Haq) ಯಾವ ದೇಶದ ಪ್ರಸಿದ್ದ ಲೇಖಕರು?

A
ಪಾಕಿಸ್ತಾನ
B
ಬಾಂಗ್ಲದೇಶ
C
ಶ್ರೀಲಂಕಾ
D
ಇಂಡೋನೇಷ್ಯಾ
Question 8 Explanation: 
ಬಾಂಗ್ಲದೇಶ:

ಬಾಂಗ್ಲದ ಪ್ರಮುಖ ಲೇಖಕರಾಗಿದ್ದ ಸೈಯದ್ ಶಾಂಸುಲ್ ಹಕ್ ನಿಧನರಾದರು. ಕಾದಂಬರಿ, ಕಾವ್ಯ, ಪ್ರಬಂಧಕಗಳು ಮತ್ತು ನಾಟಕಗಳ ಮೇಲೆ ತಮ್ಮ ಪಾಂಡಿತ್ಯದಿಂದ ಹೆಸರುವಾಸಿಯಾಗಿದ್ದರು. ಸೈಯದ್ ಅವರು ಧಾರ್ಮಿಕ ಮೂಲಭೂತವಾದ ವಿರುದ್ದ ಧ್ವನಿ ಎತ್ತುವ ಮೂಲಕ ಪ್ರಸಿದ್ದರಾಗಿದ್ದರು. ಸಾಹಿತ್ಯ ಕ್ಷೇತ್ರಕ್ಕೆ ಅಗಣನೀಯ ಸೇವೆ ನೀಡಿದ್ದ ಸೈಯದ್ ಅವರಿಗೆ ಬಾಂಗ್ಲದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳು ಸಂದಿವೆ.

Question 9

9. ಈ ಕೆಳಗಿನ ಯಾವ ಸಾಗರವನ್ನು “ಹೆರ್ರಿಂಗ್ ಪಾಂಡ್ (Herring Pond)” ಎಂತಲೂ ಕರೆಯಲಾಗುವುದು?

A
ಹಿಂದೂ ಮಹಾಸಾಗರ
B
ಅಟ್ಲಾಂಟಿಕ್ ಸಾಗರ
C
ಅರ್ಕಟಿಕ್ ಸಾಗರ
D
ಬೆಂಗಾಳ ಕೊಲ್ಲಿ
Question 9 Explanation: 
ಅಟ್ಲಾಂಟಿಕ್ ಸಾಗರ
Question 10

10.ಹಾರ್ವರ್ಡ್ ವಿಶ್ವವಿದ್ಯಾಲಯದ ದತ್ತಿ ನಿಧಿ ವಿಭಾಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ (ಸಿಇಒ) ನೇಮಕಗೊಂಡ ಭಾರತೀಯ ಮೂಲದ ಹೂಡಿಕೆದಾರ ಯಾರು?

A
ಅಭಿಜಿತ್ ಸಿಂಗ್
B
ರಮಣಸಿಂಗ್ ಚೌಧರಿ
C
ಎನ್ ಪಿ ನಾರ್ವೇಕರ್
D
ಜ್ಯೋತಿ ಆರಾಧ್ಯ
Question 10 Explanation: 
ಎನ್ ಪಿ ನಾರ್ವೇಕರ್:

ಭಾರತ ಮೂಲದ ಬೃಹತ್ ಹೂಡಿಕೆದಾರ ಎನ್.ಪಿ.ನಾರ್ವೆಕರ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ದತ್ತಿ ನಿಧಿ ವಿಭಾಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ (ಸಿಇಒ) ನೇಮಕಗೊಂಡಿದ್ದಾರೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ವಿಶ್ವವಿದ್ಯಾಲಯದ ದತ್ತಿ ನಿಧಿ ವಿಭಾಗವು ಶೇಕಡ 2ರಷ್ಟು ನಷ್ಟ ಅನುಭವಿಸಿದೆ ಎಂಬ ವರದಿಯ ಕಾರಣ ನಾರ್ವೆಕರ್ ಅವರನ್ನು ಮುಖ್ಯಸ್ಥರಾಗಿ ನೇಮಿಸಲಾಗಿದೆ. ನಾರ್ವೆಕರ್ ಅವರಿಗೂ ಮುನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟೀಫನ್ ಬ್ಲಿತ್ ಅವರು ಕಳೆದ ಜುಲೈ 18ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಾರ್ವೆಕರ್ ಅವರು ಡಿಸೆಂಬರ್ ತಿಂಗಳಿನಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯ ದತ್ತಿ ನಿಧಿ ವಿಭಾಗದ ನಾಲ್ಕನೇ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಸೆಪ್ಟೆಂಬರ್-ಕ್ವಿಜ್-30.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 30, 2016”

  1. ramachandra d desunagi

    So dibicult

  2. Nagaraj

    This type of questions are very helpful to kannada aspirants. .please put some application level questions..lot of thanks karunadu exam team

  3. Bagura Raghava

    thank u

Leave a Comment

This site uses Akismet to reduce spam. Learn how your comment data is processed.