ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-1, 2016
Question 1 |
1.ಈ ಕೆಳಗಿನ ಯಾವ ಧಾರ್ಮಿಕ ಕ್ಷೇತ್ರ ದೇಶದಲ್ಲಿಯೇ ಅತಿ ಸ್ವಚ್ಚ ಧಾರ್ಮಿಕ ಕ್ಷೇತ್ರ ಎಂಬ ಪ್ರಶಸ್ತಿಗೆ ಆಯ್ಕೆಯಾಗಿದೆ?
ತಿರುಪತಿ | |
ಧರ್ಮಸ್ಥಳ | |
ಶಿರಡಿ | |
ಕುಕ್ಕೆ ಸುಬ್ರಮಣ್ಯ |
ಕರ್ನಾಟಕದ ಶ್ರೀ ಧರ್ಮಸ್ಥಳದ ಮಂಜುನಾಥ ಕ್ಷೇತ್ರ ದೇಶದಲ್ಲಿಯೇ ಅತಿ ಸ್ವಚ್ಛ ಧಾರ್ಮಿಕ ಕ್ಷೇತ್ರ ಎಂಬ ಪ್ರಶಸ್ತಿಗೆ ಆಯ್ಕೆಯಾಗಿದೆ. ಇಂಗ್ಲೀಷ್ ಪತ್ರಿಕೆ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯಲ್ಲಿ ಧರ್ಮಸ್ಥಳ ಈ ಕೀರ್ತಿಗೆ ಪಾತ್ರವಾಗಿದೆ. ಇಂಡಿಯಾ ಟುಡೇ ಪತ್ರಿಕಾ ಬಳಗದವರು ನೀಡುತ್ತಿರುವ ಪ್ರಥಮ ರಾಷ್ಟ್ರೀಯ 'ಸಫಾಯಿಗಿರಿ ಪ್ರಶಸ್ತಿ'ಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ನೀಡಲಾಗಿದೆ. ಈ ಸಫಾಯಿಗಿರಿ ಪ್ರಶಸ್ತಿಯನ್ನು ಹೊಸದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಎಂ. ವೆಂಕಯ್ಯನಾಯ್ಡುವರಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪರವಾಗಿ ಅವರ ಸಹೋದರ ಡಿ. ಹರ್ಷೆಂದ್ರ ಕುಮಾರ್ ಸ್ವೀಕರಿಸಿದರು./p>
Question 2 |
2.2016-ಮಲೇಷಿಯಾ ಫಾರ್ಮೂಲ ಓನ್ ಗ್ರಾಂಡ್ ಪ್ರಿಕ್ಸ್ ನಲ್ಲಿ ಪ್ರಶಸ್ತಿ ಗೆದ್ದವರು ಯಾರು?
ಡನಿಯಲ್ ರಿಕ್ಕಿಯಾರ್ಡೊ | |
ಸೆಬಾಸ್ಟಿಯನ್ ವೆಟ್ಟಲ್ | |
ನಿಕೊ ರೋಸ್ಬರ್ಗ್ | |
ಲೆವಿಸ್ ಹ್ಯಾಮಿಲ್ಟನ್ |
ರೆಡ್ ಬುಲ್ ಚಾಲಕ ಆಸ್ಟ್ರೇಲಿಯಾದ ಡನಿಯಲ್ ರಿಕ್ಕಿಯಾರ್ಡೊ 2016-ಮಲೇಷಿಯಾ ಫಾರ್ಮೂಲ ಓನ್ ಗ್ರಾಂಡ್ ಪ್ರಿಕ್ಸ್ ನಲ್ಲಿ ವಿಜೇತರಾದರು. ರಿಕ್ಕಿಯರ್ಡೊ ಅವರಿಗೆ ಇದು ನಾಲ್ಕನೇ ಫಾರ್ಮೂಲ ಓನ್ ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿ.
Question 3 |
3.18 ವರ್ಷದೊಳಗಿನವರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಯಾವ ದೇಶವನ್ನು ಸೋಲಿಸಿ ಭಾರತ ಪ್ರಶಸ್ತಿಯನ್ನು ಗೆದ್ದುಕೊಂಡಿತು?
ಪಾಕಿಸ್ತಾನ | |
ಬಾಂಗ್ಲದೇಶ | |
ಶ್ರೀಲಂಕಾ | |
ಜಪಾನ್ |
18 ವರ್ಷದೊಳಗಿನವರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಬಾಂಗ್ಲದೇಶವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತದ ಅಭಿಷೇಕ್ ಅವರ ಅಮೋಘ ಆಟದಿಂದಾಗಿ ಫೈನಲ್ ನಲ್ಲಿ ಭಾರತ 5-4 ಗೋಲುಗಳಿಂದ ಬಾಂಗ್ಲದೇಶವನ್ನು ಮಣಿಸಿತು.
Question 4 |
4.“ದಿ ಮಿನಿಸ್ಟ್ರಿ ಆಫ್ ಅಟ್ಮೋಸ್ಟ್ ಹ್ಯಾಪಿನೆಸ್ (The Ministry of Utmost Happiness)” ಪುಸ್ತಕದ ಲೇಖಕರು _____?
ಅರುಂಧತಿ ರಾಯ್ | |
ಕಿರಣ್ ದೇಸಾಯಿ | |
ಶೋಭಾ ಡೆ | |
ರವೀಂದ್ರ ಸಿಂಗ್ |
“ದಿ ಮಿನಿಸ್ಟ್ರಿ ಆಫ್ ಅಟ್ಮೋಸ್ಟ್ ಹ್ಯಾಪಿನೆಸ್” ಇದು ಲೇಖಕಿ ಅರುಂಧತಿ ರಾಯ್ ಅವರು ಮುಂದಿನ ಪುಸ್ತಕವಾಗಿದೆ. ಜೂನ್, 2017 ರಲ್ಲಿ ಈ ಪುಸ್ತಕ ಬಿಡುಗಡೆಗೊಳ್ಳಲಿರುವುದಾಗಿ ಅರುಂಧತಿ ಅವರು ತಿಳಿಸಿದ್ದಾರೆ. ಅರುಂಧತಿ ರವರು “ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್” ಬಿಡುಗಡೆಗೊಂಡ 19 ವರ್ಷಗಳ ನಂತರ ಅವರ ಇನ್ನೊಂದು ಪುಸ್ತಕ ಬಿಡುಗಡೆಗೊಳ್ಳುತ್ತಿದೆ. ಹಮಿಶ್ ಹಮಿಲ್ಟನ್ ಮತ್ತು ಪೆಂಗ್ವಿನ್ ಇಂಡಿಯಾ ಈ ಪುಸ್ತಕವನ್ನು ಹೊರತರುತ್ತಿವೆ.
Question 5 |
5.2016 ಕೊರಿಯಾ ಗಾಲ್ಪ್ ಓಪನ್ ನಲ್ಲಿ ಪ್ರಶಸ್ತಿ ಗೆದ್ದ ಭಾರತದ ಗಾಲ್ಫ್ ಆಟಗಾರ ಯಾರು?
ಚಿಕ್ಕರಂಗಪ್ಪ | |
ಗಗನ್ ಜೀತ್ ಬುಲ್ಲರ್ | |
ಅರ್ಜುನ್ ಅತ್ವಲ್ | |
ಜ್ಯೋತಿ ರಾಂದ್ವ |
ಐದು ಬಾರಿ ಏಷ್ಯನ್ ಟೂರ್ ಚಾಂಪಿಯನ್ ಆಗಿರುವ ಗಗನ್ ಜೀತ್ ಬುಲ್ಲರ್ ಅವರು 2016 ಕೊರಿಯಾ ಗಾಲ್ಪ್ ಓಪನ್ ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು. ಬುಲ್ಲರ್ ಅವರು ಒಟ್ಟು 269 ಅಂಕಗಳನ್ನು ಗಳಿಸುವ ಮೂಲಕ ಅಗ್ರಸ್ಥಾನವನ್ನು ಕಾಯ್ದುಕೊಂಡರು.
Question 6 |
6.ಬಾಹ್ಯಕಾಶಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುದ್ದಿಯಲ್ಲಿದ್ದ ‘ಎಲ್ಎಂಸಿ ಪಿ3” ________?
ಧೂಮಕೇತು | |
ಕ್ಷುದ್ರಗ್ರಹ | |
ಪ್ರಕಾಶಮಾನವಾದ ಅವಳಿ ನಕ್ಷತ್ರ | |
ಅತಿ ದೊಡ್ಡ ಕಪ್ಪು ರಂಧ್ರ |
'ಎಲ್ಎಂಸಿ ಪಿ3' ಪ್ರಕಾಶಮಾನವಾದ ಅವಳಿ ನಕ್ಷತ್ರ. 'ಎಲ್‌ಎಂಸಿ ಪಿ3' ಯನ್ನು ನಮ್ಮ ಆಕಾಶ ಗಂಗೆಗೆ (ಮಿಲ್ಕಿ ವೇ) ಸಮೀಪದ ನಕ್ಷತ್ರ ಪುಂಜದಲ್ಲಿ ಕಂಡುಹಿಡಿಯಲಾಗಿದೆ. ಗ್ಯಾಮಾ ಕಿರಣಗಳನ್ನು ಸೂಸುವ, ಅತ್ಯಂತ ಪ್ರಕಾಶಮಾನವಾದ ಅವಳಿ ನಕ್ಷತ್ರ ಇದಾಗಿದೆ. ಹತ್ತಿರದ ತಾರಾಪುಂಜವೊಂದರಲ್ಲಿ ಅವಳಿ ನಕ್ಷತ್ರಗಳು (ಬೈನರಿ) ಪತ್ತೆಯಾಗಿರುವುದು ಇದೇ ಮೊದಲು. ಜೊತೆಗೆ, ಇಷ್ಟು ಪ್ರಕಾಶಮಾನವಾಗಿ ಪ್ರಜ್ವಲಿಸುವ ಯುಗಳ ನಕ್ಷತ್ರಗಳು ಇದುವರೆಗೆ ಕಂಡುಬಂದಿರಲಿಲ್ಲ. 'ಎಲ್‌ಎಂಸಿ ಪಿ3' ಯಲ್ಲಿರುವ ಒಂದು ನಕ್ಷತ್ರ ದೊಡ್ಡದಾಗಿದ್ದರೆ, ಮತ್ತೊಂದು ತೀರಾ ಕುಗ್ಗಿರುವ ನಕ್ಷತ್ರ. ಇವೆರಡೂ ಪರಸ್ಪರ ಪ್ರಭಾವ ಬೀರುತ್ತಾ ಗ್ಯಾಮಾ ಕಿರಣಗಳ ಪ್ರವಾಹವನ್ನೇ ಹರಿಸುತ್ತಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
Question 7 |
7. ಇತ್ತೀಚೆಗೆ ಭಾರತ ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಅನುಮೋದಿಸಿದೆ. ಈ ಒಪ್ಪಂದವನ್ನು ಅನುಮೋದಿಸಿದ ಎಷ್ಟನೇ ರಾಷ್ಟ್ರವಾಗಿದೆ?
59 | |
62 | |
43 | |
66 |
ಮಹಾತ್ಮಗಾಂಧಿ ಅವರ 147ನೇ ಜನ್ಮದಿನದಂದು ಭಾರತ ಐತಿಹಾಸಿಕ ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಅನುಮೋದಿಸಿತು. ಈ ಒಪ್ಪಂದವನ್ನು ಅನುಮೋದಿಸಿದ 62ನೇ ರಾಷ್ಟ್ರ ಭಾರತ ಆಗಿದೆ. ಇಂಗಾಲ ಹೊರಸೂಸುವಿಕೆಯ ಒಟ್ಟು ಪ್ರಮಾಣದಲ್ಲಿ ಭಾರತದ ಪಾಲು ಶೇ 4.1% ರಷ್ಟಿದೆ.
Question 8 |
8.ಈ ಕೆಳಗಿನ ಯಾವ ವರ್ಷ “ಪ್ರಾಜೆಕ್ಟ್ ಟೈಗರ್ (Project Tiger)” ಅನ್ನು ಭಾರತದಲ್ಲಿ ಆರಂಭಿಸಲಾಗಿದೆ?
1963 | |
1970 | |
1973 | |
1980 |
ಏಪ್ರಿಲ್ 1, 1973 ರಂದು ಭಾರತದಲ್ಲಿ ಪ್ರಾಜೆಕ್ಟ್ ಟೈಗರ್ ಅನ್ನು ಆರಂಭಿಸಲಾಯಿತು.
Question 9 |
9.ಸ್ವಚ್ಛ ಭಾರತ ಆಂದೋಲದ ಅಂಗವಾಗಿ ನಡೆದ ಕಿರು ಚಲನ ಚಿತ್ರೋತ್ಸವದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡ ಚಲನಚಿತ್ರ ಯಾವುದು?
ಮುರ್ಗ | |
ಸ್ಚಚ್ಚತ್ | |
ಶ್ರಮದಾನ್ | |
ಮೇರ ಭಾರತ್ |
ಸ್ವಚ್ಛ ಭಾರತ ಆಂದೋಲದ ಅಂಗವಾಗಿ ನಡೆದ ಕಿರು ಚಲನ ಚಿತ್ರೋತ್ಸವದಲ್ಲಿ ಮಹಾರಾಷ್ಟ್ರ ಮೂಲದ ಯುವ ನಿರ್ದೇಶಕ ಕಾತ್ಯಾಯನ್ ಶಿವಪುರಿ ಅವರ ಚಿತ್ರ 'ಮುರ್ಗ' ಪ್ರಥಮ ಬಹುಮಾನ ಪಡೆದುಕೊಂಡಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಶಿವಪುರಿ ಅವರಿಗೆ ಪ್ರಮಾಣಪತ್ರ ಮತ್ತು ರೂ 10 ಲಕ್ಷ ನಗದು ಬಹುಮಾನ ನೀಡಿ ಗೌರವಿಸಿದರು. ನಾಗರಿಕರು ಮತ್ತು ಮಕ್ಕಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದ ಕಾರಣ ಹೇಗೆ ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಎಂಬ ವಸ್ತು ವಿಷಯ ಆಧರಿಸಿ 'ಮುರ್ಗ' ಚಲನಚಿತ್ರ ರೂಪುಗೊಂಡಿತ್ತು.
Question 10 |
10. ಈ ಕೆಳಗಿನ ನದಿಗಳನ್ನು ಗಮನಿಸಿ:
I) ಗಂಗಾ
II) ಬ್ರಹ್ಮಪುತ್ರ
III) ಸಿಂಧೂ
IV) ಮಹಾನದಿ
ಈ ಮೇಲಿನ ಯಾವ ನದಿಗಳು ಹಿಮಾಲಯ ನದಿ ವ್ಯವಸ್ಥೆಗೆ ಸಂಬಂಧಿಸಿವೆ?
I & III | |
I, II & III | |
II & III | |
I, II, III & IV |
ಹಿಮಾಲಯ ನದಿ ವ್ಯವಸ್ಥೆಯು ಗಂಗಾ, ಬ್ರಹ್ಮಪುತ್ರ, ಸಿಂಧೂ ಮತ್ತು ಇವುಗಳ ಉಪನದಿಗಳನ್ನು ಒಳಗೊಂಡಿದೆ.
[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-1.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
ಧನ್ಯವಾದಗಳು ಸರ್
thannks sir
Very useful sir.thanks sir