ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-7, 2016
Question 1 |
1.ಭಾರತದ ಮೊಟ್ಟ ಮೊದಲ “ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (International Arbitration Centre)” ಯಾವ ನಗರದಲ್ಲಿ ಸ್ಥಾಪಿಸಲಾಗಿದೆ?
ನವ ದೆಹಲಿ | |
ಬೆಂಗಳೂರು | |
ಮುಂಬೈ | |
ಪುಣೆ |
ದೇಶದ ಮೊಟ್ಟ ಮೊದಲ “ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ”ವನ್ನು ಮುಂಬೈನಲ್ಲಿ ಸ್ಥಾಪಿಸಲಾಗಿದೆ. ಮುಂಬೈ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಅವರು ಉದ್ಘಾಟಿಸಿದರು. ವಿಶ್ವದಾದ್ಯಂತ ವಿವಿಧ ಕಂಪನಿಗಳು ಮತ್ತು ವ್ಯಕ್ತಿಗಳ ನಡುವೆ ವಿವಾದಗಳನ್ನು ಬಗೆಹರಿಸಲು ಈ ಕೇಂದ್ರ ಸಹಾಯ ಮಾಡಲಿದೆ.
Question 2 |
2. ಭಾರತ ಮತ್ತು ಸಿಂಗಾಪುರ ಇತ್ತೀಚೆಗೆ ಈ ಕೆಳಗಿನ ಯಾವ ಕ್ಷೇತ್ರಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕಿವೆ?
I) ಪ್ರವಾಸೋದ್ಯಮ
II) ಕೌಶಲ್ಯ ಅಭಿವೃದ್ದಿ
III) ಕೈಗಾರಿಕಾ ಆಸ್ತಿ ಸಹಕಾರ
ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ:
I & II | |
II & III | |
I & III | |
I, II & III |
ಭಾರತ ಮತ್ತು ಸಿಂಗಾಪುರ ನಡುವೆ ಮೂರು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕೌಶಲ್ಯ ಅಭಿವೃದ್ದಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎರಡು ಒಪ್ಪಂದಗಳು ಸೇರಿದಂತೆ ಒಟ್ಟು ಮೂರು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ ದಿಲ್ಲಿಗೆ ಭೇಟಿ ನೀಡಿರುವ ಸಿಂಗಾಪುರದ ಪ್ರಧಾನಿ ಲೀ ಹ್ಸೀನ್ ಲೂಂಗ್ ನೇತೃತ್ವದ ನಿಯೋಗಗಳ ಮಟ್ಟದ ಮಾತುಕತೆಯ ಬಳಿಕ, ಉಭಯ ದೇಶಗಳು ನವದೆಹಲಿಯಲ್ಲಿ ಮೂರು ಒಪ್ಪಂದಗಳಿಗೆ ಸಹಿ ಹಾಕಿವೆ. ಕೈಗಾರಿಕಾ ಆಸ್ತಿ ಸಹಕಾರ ಒಪ್ಪಂದ: ಕೈಗಾರಿಕ ನೀತಿ ಮತ್ತು ಪ್ರಚಾರ ಇಲಾಖೆ ಹಾಗೂ ಭೌದ್ದಿಕ ಆಸ್ತಿ ಕಚೇರಿ, ಸಿಂಗಾಪುರ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ತಾಂತ್ರಿಕ, ವೃತ್ತಿ ಶಿಕ್ಷಣ ಮತ್ತು ತರಬೇತಿ ಕ್ಷೇತ್ರದಲ್ಲಿ ಒಪ್ಪಂದ: ಸಿಂಗಾಪುರದ ತಾಂತ್ರಿಕ ಶಿಕ್ಷಣ ಸಂಸ್ಥೆ(ಐಟಿಇ) ಶಿಕ್ಷಣ ಸೇವೆಗಳು(ಐಟಿಇಇಎಸ್) ಹಾಗೂ ಭಾರತದ ಕೌಶಲಾಭಿವೃದ್ಧಿ ನಿಗಮಗಳು ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣ ಮತ್ತು ತರಬೇತಿಯ ಸಂಬಂಧ ತಿಳುವಳಿಕೆ ಪತ್ರವೊಂದಕ್ಕೆ ಸಹಿ ಹಾಕಿವೆ.
Question 3 |
3.ದೇಶದ “ಅತಿ ಸ್ವಚ್ಚ ಸಾಂಪ್ರದಾಯಿಕ ಸ್ಥಳ (Cleanest Iconic Place)” ಪ್ರಶಸ್ತಿಯನ್ನು ಪಡೆದುಕೊಂಡ ವಿಶ್ವ ಪರಂಪರಿಕ ತಾಣ ಯಾವುದು?
ರಾಣಿ-ಕಿ-ವಾವ್ | |
ತಾಜ್ ಮಹಲ್ | |
ಖುಜರಾಹೋ ದೇವಸ್ಥಾನ | |
ಕೆಂಪು ಕೋಟೆ |
900 ವರ್ಷ ಇತಿಹಾಸ ಹೊಂದಿರುವ ವಿಶ್ವ ಪರಂಪರಿಕ ತಾಣವಾದ ಗುಜರಾತಿನ “ರಾಣಿ-ಕಿ-ವಾವ್” ಅನ್ನು ದೇಶದ 25 ಆದರ್ಶ ಸ್ಮಾರಕಗಳ ಪೈಕಿ ಅತಿ ಸ್ವಚ್ಚ ಸಾಂಪ್ರದಾಯಿಕ ಸ್ಥಳ (Cleanest Iconic Place)ವೆಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಘೋಷಿಸಿದೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತ ನೈಮರ್ಲ್ಯ ಸಮ್ಮೇಳನ (ಇಂಡೋಸಾನ್)ದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು. ರಾಣಿ-ಕಿ-ವಾವ್ ಅನ್ನು 11ನೇ ಶತಮಾನದಲ್ಲಿ ರಾಣಿ ಉದಯಮತಿ ರವರು ರಾಜನ ನೆನಪಿಗಾಗಿ ನಿರ್ಮಿಸಿದ್ದಾರೆ. 2014 ರಲ್ಲಿ ಇದನ್ನು ವಿಶ್ವ ಪರಂಪರಿಕ ತಾಣ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಇದು ಉತ್ತರ ಗುಜರಾತ್ ನ ಪಠಾಣ್ ಜಿಲ್ಲೆಯಲ್ಲಿದೆ.
Question 4 |
4.ದೇಶದ ಮೊದಲ ಮೆಡಿಕಲ್ ಪಾರ್ಕ್ ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
ಆಂಧ್ರ ಪ್ರದೇಶ | |
ತೆಲಂಗಣ | |
ತಮಿಳುನಾಡು | |
ಮಹಾರಾಷ್ಟ್ರ |
ದೇಶದ ಮೊದಲ ವೈದ್ಯಕೀಯ ಉಪಕರಣಗಳ ತಯಾರಿಕೆ ಪಾರ್ಕ್ ಚೆನ್ನೈ ಸಮೀಪದ ಚೆಂಗಲ್ಪಟ್ಟು ಎಂಬಲ್ಲಿ ಸ್ಥಾಪನೆ ಆಗಲಿದೆ. ಇದಕ್ಕಾಗಿ 330.10 ಎಕರೆ ಭೂಮಿಯನ್ನು ಉಪಗುತ್ತಿಗೆ ಆಧಾರದಲ್ಲಿ ನೀಡಲು ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ಕ್ಷೇತ್ರದ ಉದ್ಯಮ ಎಚ್ಎಲ್ಎಲ್ ಲೈಫ್ಕೇರ್ಗೆ ಸರಕಾರವು ಬುಧವಾರ ಹಸಿರು ನಿಶಾನೆಯನ್ನು ತೋರಿಸಿದೆ. ಎಚ್ಎಲ್ಎಲ್ ಶೇ.50ರಷ್ಟು ಪಾಲು ಬಂಡವಾಳದೊಂದಿಗೆ ಅಸ್ತಿತ್ವಕ್ಕೆ ಬರಲಿರುವ ಹೊಸ ಕಂಪನಿಯೊಂದರ ಮೂಲಕ ಮೆಡಿಕಲ್ ಪಾರ್ಕ್ ತಲೆಯೆತ್ತಲಿದೆ. ಮೆಡಿಪಾರ್ಕ್ ಯೋಜನೆಯು ದೇಶದ ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲ ತಯಾರಿಕಾ ಘಟಕಗಳ ಸಮೂಹವಾಗಲಿದೆ.
Question 5 |
5.ಈ ಕೆಳಗಿನ ನದಿಗಳನ್ನು ಗಮನಿಸಿ:
I) ತಪತಿ ನದಿ
II) ನರ್ಮದಾ ನದಿ
III) ಮಾಹಿ
IV) ಸಬರಮತಿ
ಮೇಲಿನ ಯಾವ ನದಿಗಳು “ಗಲ್ಫ್ ಆಫ್ ಖಂಬತ್ (Gulf of Khambat)”ಗೆ ಹರಿಯುತ್ತವೆ?
I & II | |
I, II & III | |
II, III & IV | |
I, II, III & IV |
Question 6 |
6.“2016 ಚೀನಾ ಒಪನ್ ಮಹಿಳೆಯರ ಸಿಂಗಲ್ಸ್” ವಿಭಾಗದಲ್ಲಿ ಪ್ರಶಸ್ತಿ ಗೆದ್ದವರು ಯಾರು?
ಅಗ್ನೆಸ್ಕಾ ರಾಂಡ್ವಾಂಸ್ಕಾ | |
ಜೊಹನ್ನಾ ಕಾಂಟಾ | |
ವಿಕ್ಟೋರಿಯಾ ಅಜೆರೆಂಕ | |
ಮಾರ್ಟೀನ ಹಿಂಗೀಸ್ |
ಪೊಲೆಂಡ್ನ ಅಗ್ನೆಸ್ಕಾ ರಾಂಡ್ವಾಂಸ್ಕಾ ಚೀನಾ ಓಪನ್ನಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ರಾಂಡ್ವಾಂಸ್ಕಾ ಅವರು ಅಮೆರಿಕದ ಜೊಹನ್ನಾ ಕಾಂಟಾರನ್ನು 6-4, 6-2 ನೇರ ಸೆಟ್ಗಳಿಂದ ಮಣಿಸಿದರು. ಈ ಮೂಲಕ ವೃತ್ತಿಜೀವನದಲ್ಲಿ 20ನೇ ಹಾಗೂ ಬೀಜಿಂಗ್ನಲ್ಲಿ 2ನೇ ಪ್ರಶಸ್ತಿ ಮುಡಿಗೇರಿಸಿಕೊಂಡರು.
Question 7 |
7.ಇತ್ತೀಚೆಗೆ “ವಿಶಾಖಪಟ್ಟಣ ಸ್ಟೀಲ್ (Vizag Steel)”ನ ಬ್ರಾಂಡ್ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ?
ವಿ ವಿ ಎಸ್ ಲಕ್ಷಣ್ | |
ಪಿ ವಿ ಸಿಂಧು | |
ಪ್ರಕಾಶ್ ರಾಜ್ | |
ಮಹೇಶ್ ಬಾಬು |
ರಿಯೋ ಒಲಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ರವರನ್ನು ವಿಝಾಗ್ ಸ್ಟೀಲ್ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ರಾಷ್ಟ್ರೀಯ ಇಸ್ಪತ್ ನಿಗಮ ಲಿಮಿಟೆಡ್ ಚೇರಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಪಿ ಮಧುಸೂದನ್ ಅವರು ಈ ವಿಷಯವನ್ನು ಖಚಿತಪಡಿಸಿದ್ದಾರೆ.
Question 8 |
8.ಯುರೋಪ್ ನ ಅತಿ ದೊಡ್ಡ ಬಂದರು _______?
ರಾಟರ್ಡಾಮ್ ಬಂದರು | |
ಆಂಟ್ವರ್ಪ್ ಬಂದರು | |
ಹಂಬರ್ಗ್ ಬಂದರು | |
ಅಮ್ಸ್ಟರ್ಡ್ಯಾಮ್ ಬಂದರು |
ರಾಟರ್ಡಾಮ್ ಬಂದರು ಯುರೋಪ್ನ ಅತಿ ದೊಡ್ಡ ಬಂದರು. ನೆದರ್ಲ್ಯಾಂಡ್ ನ ರಾಟರ್ಡಾಮ್ ನಗರದಲ್ಲಿರುವ ಈ ಬಂದರು 1962 ರಿಂದ 2004 ರವರೆಗೆ ವಿಶ್ವದ ಹೆಚ್ಚು ದಟ್ಟಣೆ ಇರುವ ಬಂದರು ಎನಿಸಿತ್ತು.
Question 9 |
9.ಈ ಕೆಳಗಿನ ಸಂಸ್ಥೆಗಳನ್ನು ಗಮನಿಸಿ:
I) WHO
II) OPEC
III) IMF
IV) FAO
ಈ ಮೇಲಿನವುಗಳಲ್ಲಿ ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಗಳು ಯಾವುವು?
I, II & IV | |
I, III & IV | |
I, II & III | |
I, II, III & IV |
ವಿಶ್ವ ಆರೋಗ್ಯ ಸಂಸ್ಥೆ (WHO), ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ಆಹಾರ ಮತ್ತು ಕೃಷಿ ಸಂಸ್ಥೆ (FAO) ವಿಶ್ವಸಂಸ್ಥೆಯ ವಿಶೇಷ ಸಂಸ್ಥೆ (Specialized Agencies)ಗಳಾಗಿವೆ.
Question 10 |
10. ಪ್ರತಿಷ್ಠಿತ “ಐಎಎಫ್ ಹಾಲ್ ಆಫ್ ಫೇಮ್” ಗೌರವಕ್ಕೆ ಸೇರ್ಪಡೆಗೊಂಡ ಭಾರತದ ಮೊಟ್ಟ ಮೊದಲ ವಿಜ್ಞಾನಿ ಯಾರು?
ಮಾಧವನ್ ನಾಯರ್ | |
ರಾಧಕೃಷ್ಣನ್ | |
ಯು. ಆರ್. ರಾವ್ | |
ಸತೀಶ್ ಚಂದ್ರ |
ಇಸ್ರೋದ ಮಾಜಿ ಅಧ್ಯಕ್ಷ ಹಾಗೂ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್ ಅವರು ಪ್ರತಿಷ್ಠಿತ ‘ಐಎಎಫ್ ಹಾಲ್ ಆಫ್ ಫೇಮ್’ ಸೇರ್ಪಡೆ ಗೌರವಕ್ಕೆ ಪಾತ್ರರಾಗಿದ್ದಾರೆ. ಆ ಮೂಲಕ ಈ ಗೌರವಕ್ಕೆ ಪಾತ್ರರಾದ ಭಾರತದ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೆ. 30 ರಂದು ಮೆಕ್ಸಿಕೊದಲ್ಲಿ ನಡೆದ 67ನೇ ಇಂಟರ್ ನ್ಯಾಷನಲ್ ಏರೋನಾಟಿಕಲ್ ಕಾಂಗ್ರೆಸ್ ಸಮಾವೇಶದಲ್ಲಿ ರಾವ್ ಅವರ ಹೆಸರನ್ನು ಹಾಲ್ ಆಫ್ ಫೇಮ್ ಗೆ ಸೇರ್ಪಡೆ ಮಾಡಲಾಯಿತು. ಇಂಟರ್ನ್ಯಾಷನಲ್ ಏರೋನಾಟಿಕಲ್ ಫೆಡರೇಷನ್ (ಐಎಎಫ್) ನೀಡುವ ಈ ಗೌರವ ಅಂತರಿಕ್ಷ ವಿಜ್ಞಾನಿಗಳ ಪಾಲಿಗೆ ಅತ್ಯುನ್ನತವಾದುದು.
[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-7.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Nice information….