ಸಾಮಾನ್ಯ ಜ್ಞಾನ ಕ್ವಿಜ್ 2 ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಿವೆ.
ಕ್ವೀಜ್ 2
Question 1 |
1. ಭಾರತದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದಂತೆ “ಐಎನ್ಎಸ್ ವಿಕ್ರಮಾದಿತ್ಯ” ಎಂಬುದು___________?
ಸಮುದ್ರ ಕಣ್ಗಾವಲು ನೌಕೆ | |
ವಿಮಾನ ಹೊತ್ತಯ್ಯೊಬಲ್ಲ ನೌಕೆ | |
ಸಮುದ್ರದ ತಳದಿಂದ ಹಾರಿಸಬಲ್ಲ ಕ್ಷಿಪಣಿ | |
ಇದ್ಯಾವುದು ಅಲ್ಲ |
Question 1 Explanation:
ವಿಮಾನ ಹೊತ್ತಯ್ಯೊಬಲ್ಲ ನೌಕೆ:ಐಎನ್ಎಸ್ ವಿಕ್ರಮಾದಿತ್ಯ ವಿಮಾನವನ್ನು ಹೊತ್ತಯ್ಯೊಬಲ್ಲ ನೌಕೆ. ರಷ್ಯಾ ಇದನ್ನು ನಿರ್ಮಿಸಿದ್ದು, ಭಾರತಕ್ಕೆ ಹಸ್ತಾಂತರಿಸಿದೆ,
Question 2 |
2. ಅಂತರರಾಷ್ಟ್ರೀಯ ವಿಕಲಚೇತನರ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ನವೆಂಬರ್ 29 | |
ನವೆಂಬರ್ 30 | |
ಡಿಸೆಂಬರ್ 1 | |
ಡಿಸೆಂಬರ್ 3 |
Question 2 Explanation:
ಡಿಸೆಂಬರ್ 3:ಅಂತರರಾಷ್ಟ್ರೀಯ ವಿಕಲಚೇತನರ ದಿನವನ್ನು ಡಿಸೆಂಬರ್ 3 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಕಲಚೇತನರ ಹಕ್ಕು ಮತ್ತು ಘನತೆಯನ್ನು ಕಾಪಾಡಿ ಅವರನ್ನು ಪ್ರೋತ್ಸಾಹಿಸುವುದು ಈ ದಿನದ ಮುಖ್ಯ ಧ್ಯೇಯ. ವಿಶ್ವಸಂಸ್ಥೆ 1981 ರಿಂದ ವಿಕಲಚೇತನರ ದಿನವನ್ನು ಆಚರಿಸುತ್ತಿದೆ,
Question 3 |
3. “ಸೆನಕಾಕು” ದ್ವೀಪ ಪ್ರದೇಶದ ಮೇಲಿನ ಸಾರ್ವಭೌಮತ್ವಕ್ಕಾಗಿ ಈ ಕೆಳಗಿನ ಯಾವ ಎರಡು ರಾಷ್ಟ್ರಗಳು ಸೆಣಸುತ್ತಿವೆ?
ಚೀನಾ ಮತ್ತು ದಕ್ಷಿಣ ಕೊರಿಯಾ | |
ಚೀನಾ ಮತ್ತು ಜಪಾನ್ | |
ಜಪಾನ್ ಮತ್ತು ಇಂಡೋನೇಷಿಯಾ | |
ಚೀನಾ ಮತ್ತು ರಷ್ಯಾ |
Question 3 Explanation:
ಚೀನಾ ಮತ್ತು ಜಪಾನ್: ಸೆನಕಾಕು ದ್ವೀಪ ಪ್ರದೇಶದ ಮೇಲಿನ ಹಿಡಿತಕ್ಕಾಗಿ ಚೀನಾ ಮತ್ತು ಜಪಾನ ದೇಶಗಳು ಸೆಣಸುತ್ತಿವೆ.
Question 4 |
4. ಟ್ರಾನ್ಸ್ ಫರೆನ್ಸಿ ಇಂಟರ್ ನ್ಯಾಷನಲ್ ಇತ್ತೀಚೆಗೆ ಹೊರತಂದಿರುವ ಮಾಹಿತಿಯಲ್ಲಿ ಭಾರತ ಭ್ರಷ್ಟಾಚಾರದಲ್ಲಿ 94 ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಸಮೀಕ್ಷೆಯ ಪ್ರಕಾರ ಭ್ರಷ್ಟಾಚಾರ ಶೂನ್ಯ ರಾಷ್ಟ್ರಗಳು ಯಾವುವು?
ಡೆನ್ಮಾರ್ಕ್ ಮತ್ತು ನ್ಯೂಜಿಲ್ಯಾಂಡ್ | |
ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ | |
ಸ್ವಿಟ್ಜರ್ಲ್ಯಾಂಡ್ ಮತ್ತು ಡೆನ್ಮಾರ್ಕ್ | |
ನಾರ್ವೆ ಮತ್ತು ನ್ಯೂಜಿಲ್ಯಾಂಡ್ |
Question 4 Explanation:
ಡೆನ್ಮಾರ್ಕ್ ಮತ್ತು ನ್ಯೂಜಿಲ್ಯಾಂಡ್:ಡೆನ್ಮಾರ್ಕ್ ಮತ್ತು ನ್ಯೂಜಿಲ್ಯಾಂಡ್ ವಿಶ್ವದಲ್ಲೇ ಅತ್ಯಂತ ಕಡಿಮೆ ಭ್ರಷ್ಟಾಚಾರವನ್ನು ಹೊಂದಿರುವ ರಾಷ್ಟ್ರಗಳು ಎನಿಸಿವೆ. ಈ ಸಮೀಕ್ಷೆಯಲ್ಲಿ ಭಾರತ 94 ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷ ಸಹ ಭಾರತ 94 ನೇ ಸ್ಥಾನವನ್ನು ಪಡೆದುಕೊಂಡಿತ್ತು.
Question 5 |
5. ಈ ಕೆಳಗಿನ ಯಾವ ವಿಮಾನಯಾನ ಸಂಸ್ಥೆ ವಿಶ್ವದ ಅಗ್ಗ ದರದ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ವರ್ಲ್ಡ್ ಟ್ರಾವೆಲ್ ಆವಾರ್ಡ್ಸ್-2013 ಪಡೆದುಕೊಂಡಿದೆ?
ಏರ್ ಏಷ್ಯಾ | |
ಏರ್ ಬರ್ಲಿನ್ | |
ಕಿಂಗ್ ಫಿಶರ್ | |
ಸಹರಾ ಏರ್ ಲೈನ್ಸ್ |
Question 5 Explanation:
ಏರ್ ಏಷ್ಯಾ
Question 6 |
6. ಭಾರತದ ಗಗನ್ ಜಿತ್ ಬುಲ್ಲರ್ ಅವರು ಯಾವ ಕ್ರೀಡೆಯಲ್ಲಿ ಪ್ರಸಿದ್ದಿ ಹೊಂದಿದ್ದಾರೆ?
ಟೆನ್ನಿಸ್ | |
ಗಾಲ್ಪ್ | |
ಬಾಸ್ಕೆಟ್ ಬಾಲ್ | |
ಪುಟ್ ಬಾಲ್ |
Question 6 Explanation:
ಗಾಲ್ಪ್: ಗಗನ್ ಜಿತ್ ಬುಲ್ಲರ್ ಅವರು ಗಾಲ್ಪ್ ಕ್ರೀಡೆಯಲ್ಲಿ ಪ್ರಸಿದ್ದಿ ಹೊಂದಿದ್ದಾರೆ, ಇತ್ತೇಚೆಗೆ ಇಂಡೋನೇಷಿಯಾ ಓಪನ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಈ ಪ್ರಶಸ್ತಿಯನ್ನು ಗೆದ್ದ ಭಾರತದ ಮೊದಲಿಗರು ಎನಿಸಿದರು.
Question 7 |
7. ಅಮೆರಿಕಾದ ಬಾಹ್ಯಕಾಶ ಸಂಸ್ಥೆ “ನಾಸಾ” ಈ ಕೆಳಗಿನ ಯಾವ ಗ್ರಹ/ಉಪಗ್ರಹ ದ ಮೇಲೆ ಗಿಡಗಳನ್ನು ಬೆಳೆಸುವ ಯೋಜನೆಯನ್ನು ಹಾಕಿಕೊಂಡಿದೆ?
ಮಂಗಳ | |
ಚಂದ್ರ | |
ಟೈಟಾನ್ | |
ಗುರು |
Question 7 Explanation:
ಚಂದ್ರ: ನಾಸಾ ಸಂಸ್ಥೆ ಚಂದ್ರನ ಮೇಲೆ ಬೆಸಿಲ್, ಟರ್ನಿಪ್ ಸೇರಿದಂತೆ ವಿವಿಧ ಗಿಡಗಳನ್ನು ಬೆಳೆಸುವ ಯೋಜನೆಯನ್ನು ರೂಪಿಸಿಕೊಂಡಿದೆ. ಈ ಯೋಜನೆ 2015 ರ ಹೊತ್ತಿಗೆ ಸಕಾರಗೊಳಿಸುವ ನಿಟ್ಟಿನಲ್ಲಿ ನಾಸಾ ಗುರಿ ಇಟ್ಟಿದೆ.
Question 8 |
8. ಕರ್ನಾಟಕದಲ್ಲಿ ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ರಕ್ಷಣಾ ಧಾಮಗಳನ್ನು ಹೊಂದಿರುವ ಜಿಲ್ಲೆ
ಮೈಸೂರು | |
ಉತ್ತರ ಕನ್ನಡ | |
ಕೊಡಗು | |
ಚಿಕ್ಕಮಗಳೂರು |
Question 8 Explanation:
ಮೈಸೂರು
Question 9 |
9. ವಿಶ್ವ ಪ್ರಶಂಸೆಗಳಿಸಿರುವ “ದಿ ಲೊಲ್ಯಾಂಡ್ (The Lowland)” ಕೃತಿಯ ಲೇಖಕರು ಯಾರು?
ಜುಂಪಾ ಲಹರಿ | |
ಚೇತನ್ ಭಗತ್ | |
ಖುಷ್ವಂತ್ ಸಿಂಗ್ | |
ಅರುಂಧತಿ |
Question 9 Explanation:
ಜುಂಪಾ ಲಹರಿ: ಭಾರತ-ಅಮೆರಿಕಾ ಮೂಲದ ಲೇಖಕಿ ಜುಂಪಾ ಲಹರಿ ಅವರು “ದಿ ಲೊಲ್ಯಾಂಡ್” ಕೃತಿಯ ಲೇಖಕರು.
Question 10 |
10. ಈ ಕೆಳಗಿನ ಯಾರು ಮಾಕು ಗ್ರಾಂಡ್ ಪ್ರಿಕ್ಸ್ ಟೈಟಲ್ (Macau Prix Gold Title)- 2013 ಗೆದ್ದುಕೊಂಡರು?
ಸೈನಾ ನೆಹ್ವಾಲ್ | |
ಪಿ.ವಿ.ಸಿಂಧು | |
ಅಶ್ವಿನಿ ಪೊನ್ನಪ್ಪ | |
ಪಿ.ಕಶ್ಯಪ್ |
Question 10 Explanation:
ಪಿ.ವಿ.ಸಿಂಧು: ಭಾರತದ ಉದಯ್ಮೋನುಖ ಆಟಗಾರ್ತಿ ಪಿ.ವಿ,ಸಿಂಧು ಅವರು ಮಾಕು ಗ್ರಾಂಡ್ ಪ್ರಿಕ್ಸ್ ಟೈಟಲ್-2013 ಅನ್ನು ತಮ್ಮದಾಗಿಸಿಕೊಂಡರು.
There are 10 questions to complete.