ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,20,21, 2017
Question 1 |
1. 2017 ವಿಶ್ವ ಆರ್ಥಿಕ ವೇದಿಕೆಯಲ್ಲಿ ಸಾಂಕ್ರಾಮಿಕ ರೋಗಗಳಿಗೆ ಹೊಸ ಲಸಿಕೆಯನ್ನು ಅಭಿವೃದ್ದಿಪಡಿಸಲು CEPI ಯನ್ನು ಆನಾವರಣಗೊಳಿಸಲಾಯಿತು. CEPI ಎಂದರೆ __________?
Coalition for Epidemic Preacher Innovation | |
Collaboration for Epidemic Preacher Innovation | |
Coalition for Epidemic Practical Innovation | |
Coalition for Economic Preacher Innovation |
ಸಾಂಕ್ರಾಮಿಕ ರೋಗಗಳಿಗೆ ಹೊಸ ಲಸಿಕೆಯನ್ನು ಅಭಿವೃದ್ದಿಪಡಿಸಲು 2017 ವಿಶ್ವ ಆರ್ಥಿಕ ವೇದಿಕೆಯಲ್ಲಿ Coalition for Epidemic Preacher Innovation (CEPI)ಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಜರ್ಮನಿ, ಜಪಾನ್ ಮತ್ತು ನಾರ್ವೆ ಹಾಗೂ ಬಿಲ್ & ಮಿಲಿಂದಾ ಫೌಂಡೇಷನ್ ಸಹಯೋಗದಲ್ಲಿ $460 ಮಿಲಿಯನ್ ಬಂಡವಾಳದಲ್ಲಿ CEPIಯನ್ನು ಸ್ಥಾಪಿಸಲಾಗಿದೆ. ಮೊದಲಿಗೆ CEPI ಗ್ರೂಫ್ ಮೂರು ಸಾಂಕ್ರಾಮಿಕ ರೋಗಗಳಾದ MERS (Middle East Respiratory Syndrome)-ಕೊರನ ವೈರಸ್, ಲಸ್ಸ ವೈರಸ್ ಹಾಗೂ ನಿಪಹ್ ವೈರಸ್ ಗಳ ವಿರುದ್ದ ಲಸಿಕೆ ಅಭಿವೃದ್ದಿಪಡಿಸುವ ಗುರಿ ಹೊಂದಲಾಗಿದೆ.
Question 2 |
2. ಈ ಮುಂದಿನ ಯಾರು “ಗ್ಯಾಂಬಿಯಾ”ದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
ಸಿನಿಮೊ ಬರ್ಕಾರೊ | |
ದವ್ಡ ಜವಾರ | |
ಯಾಹ್ಯ ಜಮ್ಮೆ | |
ಅಡಮ ಬಾರ್ರೋ |
ಯುನೈಟೆಡ್ ಡೆಮಾಕ್ರೆಟಿಕ್ ಪಕ್ಷದ ಸದಸ್ಯ ಅಡಮ ಬಾರ್ರೋ ರವರು ಗ್ಯಾಂಬಿಯಾದ ಮೂರನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
Question 3 |
3. “ಸ್ಟೋರಿ ಆಫ್ ಆನ್ ಎಸ್ಕೇಪ್ (Story of An Escape)” ಪುಸ್ತಕದ ಲೇಖಕರು __________?
ಸರ್ಜೀತ್ ಸಿಂಗ್ ಬರ್ನಾಲ | |
ಕಿರಣ್ ಬೇಡಿ | |
ವಿದ್ಯಾ ಸಾಗರ್ | |
ನಬಮ್ ಟುಕಿ |
ಇತ್ತೀಚೆಗೆ ನಿಧನರಾದ ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಸರ್ಜೀತ್ ಸಿಂಗ್ ಬರ್ನಾಲರವರು “ಸ್ಟೋರಿ ಆಫ್ ಆನ್ ಎಸ್ಕೇಫ್” ಪುಸ್ತಕದ ಲೇಖಕರು.
Question 4 |
4. ಭಾರತ ರಾಜ್ಯಗಳ ನಾವೀನ್ಯತೆ ಕಾರ್ಯಕ್ಷಮತೆಯನ್ನು ಅಳೆಯಲು “ಭಾರತ ನಾವೀನ್ಯತೆ ಸೂಚ್ಯಂಕ (India Innovation Index)” ಅನ್ನು ಯಾವ ಅಂತಾರಾಷ್ಟ್ರೀಯ ಸಂಸ್ಥೆ ಅಭಿವೃದ್ದಿಪಡಿಸಲಿದೆ?
ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ | |
ವಿಶ್ವ ಬೌಧ್ದಿಕ ಆಸ್ತಿ ಸಂಸ್ಥೆ (WIPO) | |
ಏಷ್ಯಾ ಮೂಲಸೌಕರ್ಯ ಬಂಡವಾಳ ಬ್ಯಾಂಕ್ | |
ಭಾರತೀಯ ರಿಸರ್ವ್ ಬ್ಯಾಂಕ್ |
“ಭಾರತ ನಾವೀನ್ಯತೆ ಸೂಚ್ಯಂಕ (India Innovation Index)”ವನ್ನು ವಿಶ್ವ ಆರ್ಥಿಕ ವೇದಿಕೆ, ನೀತಿ ಆಯೋಗ, ವಿಶ್ವ ಬೌಧ್ದಿಕ ಆಸ್ತಿ ಸಂಸ್ಥೆ (WIPO) ಮತ್ತು ಕಾರ್ನೆಲ್ ವಿಶ್ವವಿದ್ಯಾಲಯ ಜಂಟಿಯಾಗಿ ಅಭಿವೃದ್ದಿಪಡಿಸಲಿವೆ. ಭಾರತ ರಾಜ್ಯಗಳ ನಾವೀನ್ಯತೆ ಕಾರ್ಯಕ್ಷಮತೆಯನ್ನು ಅಳೆಯಲು ಈ ಸೂಚ್ಯಂಕವನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಈ ಸೂಚ್ಯಂಕದ ಮೊದಲ ಆವೃತ್ತಿಯನ್ನು ಅಕ್ಟೋಬರ್ 4-6, 2017 ರಂದು ಬಿಡುಗಡೆಗೊಳಿಸಲಾಗುವುದು.
Question 5 |
5. ರಾಜ್ಯದ ಯೋಧರಿಗೆ ಹಾಗೂ ಅವರ ಕುಟುಂಬಕ್ಕೆ ನೆರವು ನೀಡುವುದಕ್ಕಾಗಿ ಯಾವ ರಾಜ್ಯ ಸೈನಿಕ ಕಲ್ಯಾಣ ನಿಧಿ ಸ್ಥಾಪಿಸಲು ನಿರ್ಧರಿಸಿದೆ?
ಕರ್ನಾಟಕ | |
ಮಹಾರಾಷ್ಟ್ರ | |
ತೆಲಂಗಣ | |
ಆಂಧ್ರ ಪ್ರದೇಶ |
ರಾಜ್ಯದ ಯೋಧರಿಗೆ ಹಾಗೂ ಅವರ ಕುಟುಂಬಕ್ಕೆ ನೆರವು ನೀಡುವುದಕ್ಕಾಗಿ ಸೈನಿಕ ಕಲ್ಯಾಣ ನಿಧಿ ಸ್ಥಾಪಿಸುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಘೋಷಿಸಿದ್ದಾರೆ. ಸೈನಿಕ ಕಲ್ಯಾಣ ನಿಧಿಗೆ ಪ್ರತಿ ವರ್ಷ ಒಟ್ಟು 80 ಕೋಟಿ ರುಪಾಯಿ ಸಂಗ್ರಹವಾಗಲಿದ್ದು, ಮುಖ್ಯಮಂತ್ರಿ ಹಾಗೂ ಸಚಿವರು ಪ್ರತಿ ವರ್ಷ ತಲಾ 25 ಸಾವಿರ ರುಪಾಯಿ, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರು ತಲಾ 10 ಸಾವಿರ ರುಪಾಯಿಯನ್ನು ಸೈನಿಕ ಕಲ್ಯಾಣ ನಿಧಿಗೆ ನೀಡಲಿದ್ದಾರೆ ಎಂದು ಚಂದ್ರಶೇಖರ್ ರಾವ್ ಅವರು ತಿಳಿಸಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರದ ನೌಕರರೂ ಸಹ ಪ್ರತಿ ವರ್ಷ ತಮ್ಮ ಒಂದು ದಿನದ ವೇತನವನ್ನು ಸೈನಿಕ ಕಲ್ಯಾಣ ನಿಧಿಗೆ ನೀಡಲಿದ್ದಾರೆ.
Question 6 |
6. ಇತ್ತೀಚೆಗೆ ಸುದ್ದಿಯಲ್ಲಿರುವ ಹೈಪರ್ ಲೂಪ್ ತಂತ್ರಜ್ಞಾನ ಯಾವುದಕ್ಕೆ ಸಂಬಂಧಿಸಿದೆ?
ಸಾರಿಗೆ ವ್ಯವಸ್ಥೆ | |
ಇಂಟರ್ ನೆಟ್ | |
ವೈದ್ಯಕೀಯ ಕ್ಷೇತ್ರ | |
ಸೂಪರ್ ಕಂಪ್ಯೂಟರ್ |
ಹೈಪರ್ ಲೂಪ್ ತಂತ್ರಜ್ಞಾನ ಅತ್ಯಾಧುನಿಕ ಸಾರಿಗೆ ವ್ಯವಸ್ಥೆಯಾಗಿದೆ. ಈ ತಂತ್ರಜ್ಞಾನದಿಂದ ಕೇವಲ 30 ನಿಮಿಷಗಳಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಬಹುದು. ಕಾಂಕ್ರೀಟ್ ಪಿಲ್ಲರ್ ಗಳ ಮೇಲೆ ನಿರ್ಮಿಸುವ ಹೈಪರ್ ಲೂಪ್ ಟ್ಯೂಬ್ ಮೂಲಕ ಸುಮಾರು 1200 ಕಿಮೀಟರ್ ವೇಗದಲ್ಲಿ ಪೋಡ್ ಅಥವಾ ರೈಲು ಚಲಾಯಿಸುವ ವ್ಯವಸ್ಥೆ ಇದಾಗಿದೆ. ಈ ಸುರಂಗದೊಳಗಿನ ನಿರ್ವಾತದಿಂದ ಅತೀ ವೇಗವನ್ನು ಸಾಧಿಸಲು ಸಾಧ್ಯವಾಗುತ್ತದೆ.
Question 7 |
7. ವಿಶ್ವದ ಮೊದಲ “ರೋಬಟ್ ನಿಯಂತ್ರಿತ ಔಷಧದ ಅಂಗಡಿ” ಯಾವ ರಾಷ್ಟ್ರದಲ್ಲಿ ಕಾರ್ಯಾರಂಭ ಮಾಡಿದೆ?
ಜಪಾನ್ | |
ರಷ್ಯಾ | |
ಯುಎಇ | |
ಮೆಕ್ಸಿಕೊ |
ಯುನೈಟಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ 'ರೋಬಟ್ ನಿಯಂತ್ರಿತ ಔಷಧದ ಅಂಗಡಿ'ಯೊಂದು ಅಸ್ತಿತ್ವಕ್ಕೆ ಬಂದಿದೆ. ದುಬೈಯ ರಶೀದ್ ಆಸ್ಪತ್ರೆಯ ಈ ಔಷಧಾಲಯದಲ್ಲಿ ವೈದ್ಯರು ಬರೆದುಕೊಟ್ಟಿರುವ ಔಷಧಿಗಳನ್ನು ನೀಡಲು ಒಂದು ಯಂತ್ರಮಾನವನನ್ನು ನಿಯೋಜಿಸಲಾಗಿದೆ. ಯಂತ್ರಮಾನವನು ಬಾರ್ಕೋಡ್ನ ಆಧಾರದಲ್ಲಿ ಔಷಧಿಗಳನ್ನು ನೀಡುತ್ತಿದೆ.
Question 8 |
8. ಸುಳ್ಳು ಸುದ್ದಿಯನ್ನು ತಡೆಯುವ ಸಲುವಾಗಿ “ಜರ್ನಲಿಸಮ್ ಪ್ರಾಜೆಕ್ಟ್” ಜಾರಿಗೆ ತಂದ ಸಾಮಾಜಿಕ ಜಾಲ ತಾಣ ಯಾವುದು?
ಫೇಸ್ ಬುಕ್ | |
ಟ್ವಿಟ್ಟರ್ | |
ವಾಟ್ಸ್ ಆಪ್ | |
ಮೇಲಿನ ಯಾವುದು ಅಲ್ಲ |
ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಹೊಸ ಪತ್ರಿಕೋಧ್ಯಮ ಯೋಜನೆ (ಜರ್ನಲಿಸಮ್ ಪ್ರಾಜೆಕ್ಟ್) ಅನ್ನು ಬಿಡುಗಡೆ ಮಾಡಿದ್ದು, ಇದು ವ್ಯಾಪಕವಾಗಿ ಹಬ್ಬುವ ಸುಳ್ಳು ಸುದ್ದಿಗಳನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ. ಫೇಸ್ ಬುಕ್ ಹೇಳಿಕೊಂಡಿರುವಂತೆ ತನ್ನ ನೂತನ ಯೋಜನೆಯಲ್ಲಿ ಸುಳ್ಳು ಸುದ್ದಿಗಳನ್ನು ಕಂಡುಹಿಡಿಯಲು ಮತ್ತು ಅದನ್ನು ನ್ಯೂಸ್ ಫೀಡ್ ನಿಂದ ತೆಗೆದು ಹಾಕಲು ನೆರವಾಗಲಿದೆ
Question 9 |
9. ಈ ಕೆಳಗಿನ ಯಾವ ಹೊಂದಾಣಿಕೆ ತಪ್ಪಾಗಿದೆ?
ನ್ಯಾಷನಲ್ ಇನ್ಸ್ಶೂರೆನ್ಸ್ ಅಕಾಡೆಮಿ – ಪುಣೆ | |
ಇನ್ಸ್ಟಿಟ್ಯೂಟ್ ಆಫ್ ಇನ್ಸ್ಶೂರೆನ್ಸ್ ಅಂಡ್ ರಿಸ್ಕ್ ಮ್ಯಾನೇಜ್ಮೆಂಟ್ – ಹೈದ್ರಾಬಾದ್ | |
ಇನ್ಸ್ಶೂರೆನ್ಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ – ಮುಂಬೈ | |
ಅಮಿತಿ ಸ್ಕೂಲ್ ಆಫ್ ಇನ್ಸ್ಶೂರೆನ್ಸ್ ಬ್ಯಾಂಕಿಂಗ್ ಅಂಡ್ ಅಕ್ಚರಿಯಲ್ ಸೈನ್ಸ್ – ಚೆನ್ನೈ |
ಅಮಿತಿ ಸ್ಕೂಲ್ ಆಫ್ ಇನ್ಸ್ಶೂರೆನ್ಸ್ ಬ್ಯಾಂಕಿಂಗ್ ಅಂಡ್ ಅಕ್ಚರಿಯಲ್ ಸೈನ್ಸ್ ಉತ್ತರಪ್ರದೇಶದ ನೋಯ್ಡಾದಲ್ಲಿದೆ.
Question 10 |
10. “2017 ಪ್ರೋ ಕುಸ್ತಿ ಲೀಗ್ (Pro Wrestling League)” ಪ್ರಶಸ್ತಿಯನ್ನು ಗೆದ್ದುಕೊಂಡ ತಂಡ ___________?
ಪಂಜಾಬ್ ರಾಯಲ್ಸ್ | |
ಹರಿಯಾಣ ಹ್ಯಾಮರ್ಸ್ | |
ಮುಂಬೈ ಮಹಾರಾತಿ | |
ಯುಪಿ ದಂಗಲ್ |
ಪಂಜಾನ್ ರಾಯಲ್ಸ್ ತಂಡ ಹರಿಯಾಣ ಹ್ಯಾಮರ್ಸ್ ತಂಡವನ್ನು 5-4 ಅಂತರದಲ್ಲಿ ಸೋಲಿಸುವ ಮೂಲಕ 2017 ಪ್ರೋ ಕುಸ್ತಿ ಲೀಗ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
[button link=”http://www.karunaduexams.com/wp-content/uploads/2017/02/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ2021-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ