ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,26,27, 2017

Question 1
1. ದೇಶದ ಮೊದಲ ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರ (POPSK)ವನ್ನು ಯಾವ ನಗರದಲ್ಲಿ ಆರಂಭಿಸಲಾಯಿತು?
A
ನವದೆಹಲಿ
B
ಮೈಸೂರು
C
ಚೆನ್ನೈ
D
ಹೈದ್ರಾಬಾದ್
Question 1 Explanation: 
ಮೈಸೂರು

ಮೈಸೂರಿನಲ್ಲಿ ದೇಶದ ಪ್ರಥಮ ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ಜನವರಿ 25, 2017ರಂದು ಉದ್ಘಾಟಿಸಲಾಯಿತು. ನಗರದ ಮೇಟಗಳ್ಳಿಯ ಪೊಲೀಸ್ ಠಾಣೆ ಬಳಿ ಇರುವ ಅಂಚೆ ಕಚೇರಿಯ ಅರ್ಧ ಭಾಗದಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ತೆರೆಯಲಾಗಿದೆ. ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾಲಯ ಅಂಚೆ ಇಲಾಖೆಯ ಸಹಯೋಗದೊಂದಿಗೆ ಈ ಕೇಂದ್ರವನ್ನು ತೆರೆಯಲಾಗಿರುವುದರಿಂದ ಇದನ್ನು POPSK ಎನ್ನಲಾಗುತ್ತಿದೆ.

Question 2

2. 68ನೇ ಗಣರಾಜ್ಯೋತ್ಸವ ದಿನದಂದು ಪ್ರತಿಷ್ಠಿತ ಅಶೋಕ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ಯಾರಿಗೆ ನೀಡಲಾಯಿತು?

A
ಹಂಗಪನ್ ದಾದ
B
ಹರ್ಪೀತ್ ಸಂಧು
C
ಸುಬೀತ್ ಸಿಂಗ್
D
ನಿರ್ಭಯ್ ಸಿಂಗ್
Question 2 Explanation: 
ಹಂಗಪನ್ ದಾದ

ಅಸ್ಸಾಂ ರೆಜಿಮೆಂಟ್ನ ಹವಾಲ್ದಾರ್ ಹಂಗಪನ್ ದಾದ ಅವರಿಗೆ ಮರಣೋತ್ತರವಾಗಿ ಪ್ರತಿಷ್ಠಿತ ಅಶೋಕ ಚಕ್ರ ಪುರಸ್ಕಾರ ಘೋಷಿಸಲಾಗಿದ್ದು, ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಹಂಗಪನ್ ದಾದ ಅವರ ಪತ್ನಿ ಚಾಸೆನ್ ಲೊವಾಂಗ್ ದಾದ ಅವರಿಗೆ ಪುರಸ್ಕಾರವನ್ನು ನೀಡಿ ಗೌರವಿಸಿದರು. ಹಂಗ್ಪನ್ ದಾದ ಅವರು 1979 ಅಕ್ಟೋಬರ್ 2ರಂದು ಅರುಣಾಚಲ ಪ್ರದೇಶದ ಬೊರಾಡುರಿಯಲ್ಲಿ ಜನಿಸಿದ್ದು, 2016ರ ಮೇ 26ರಂದು ಜಮ್ಮು–ಕಾಶ್ಮೀರದ ನಹುಗಾಮ್ನಲ್ಲಿ ಉಗ್ರರ ವಿರುದ್ಧದ ಹೋರಾಟದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿ ಹುತಾತ್ಮರಾಗಿದ್ದಾರೆ.

Question 3

3. ಇತ್ತೀಚೆಗೆ ನಿಧನರಾದ ಎಮ್ಮಿ ಪ್ರಶಸ್ತಿ ವಿಜೇತೆ ಖ್ಯಾತಿಯ “ಮೇರಿ ಟೇಲರ್ ಮೂರೆ” ರವರು ಯಾವ ದೇಶದ ನಟಿ?

A
ಜರ್ಮನಿ
B
ಅಮೆರಿಕ
C
ಯುಕೆ
D
ಫ್ರಾನ್ಸ್
Question 3 Explanation: 
ಅಮೆರಿಕ

ಖ್ಯಾತ ಕಿರುತೆರೆ ನಟಿ ಹಾಗೂ ಎಮ್ಮಿ ಪ್ರಶಸ್ತಿ ವಿಜೇತೆ ಮೇರಿ ಟೇಲರ್ ಮೂರೆ ರವರು ಅಮೆರಿಕದ ಗ್ರೀನ್ ವಿಚ್ ನಲ್ಲಿ ನಿಧನರಾದರು. 1960ರ ದಶಕದಲ್ಲಿ ಜನಪ್ರಿಯಗೊಂಡಿದ್ದ “ದಿ ಡಿಕ್ ವ್ಯಾನ್ ಡೈಕ್ ಶೋ”ನಲ್ಲಿನ ತಮ್ಮ ನಟನೆಯಿಂದ ಪ್ರಸಿದ್ದರಾಗಿದ್ದರು.

Question 4

4. ಯಾವ ಆನ್ ಲೈನ್ ಪ್ರವಾಸಿ ಪೋರ್ಟಲ್ ಭಾರತದ ಮೊದಲ ಸಾಮಾಜಿಕ ಐಷರಾಮಿ ಪ್ರವಾಸ ನಿಯತಕಾಲಿಕೆ “ಲಕ್ಸುರಿ ಟ್ರಾವೆಲ್ ಟೈಮ್ಸ್” ಹೊರತಂದಿದೆ?

A
MakeMyTrip
B
Goibibo
C
Thomas Cook
D
Yatra
Question 4 Explanation: 
MakeMyTrip

ಆನ್ ಲೈನ್ ಪ್ರವಾಸಿ ಪೋರ್ಟಲ್ MakeMyTrip ಭಾರತದ ಮೊದಲ ಸಾಮಾಜಿಕ ಐಷರಾಮಿ ಪ್ರವಾಸ ನಿಯತಕಾಲಿಕೆ “ಲಕ್ಸುರಿ ಟ್ರಾವೆಲ್ ಟೈಮ್ಸ್” ಹೊರತಂದಿದೆ.

Question 5

5. ಶಿಶು ಮರಣ ಪ್ರಮಾಣವನ್ನು ತಗ್ಗಿಸುವ ಸಲುವಾಗಿ ಯಾವ ರಾಜ್ಯ “ದುಲಾರಿ ಕನ್ಯಾ (Dulari Kanya)” ಎಂಬ ಯೋಜನೆಯನ್ನು ಜಾರಿಗೆ ತಂದಿದೆ?

A
ಗುಜರಾತ್
B
ಹರಿಯಾಣ
C
ಅರುಣಾಚಲ ಪ್ರದೇಶ
D
ಅಸ್ಸಾಂ
Question 5 Explanation: 
ಅರುಣಾಚಲ ಪ್ರದೇಶ

ಶಿಶು ಮರಣ ಪ್ರಮಾಣವನ್ನು ತಗ್ಗಿಸುವ ಸಲುವಾಗಿ ಅರುಣಾಚಲ ಪ್ರದೇಶ “ದುಲಾರಿ ಕನ್ಯಾ” ಯೋಜನೆಯನ್ನು ಜನವರಿ 26, 2017 ರಂದು ಗಣರಾಜ್ಯೋತ್ಸವ ದಿನದಂದು ಜಾರಿಗೆ ತಂದಿದೆ. ಯೋಜನೆಯಡಿ ಸರ್ಕಾರಿ ಆಸ್ಪತ್ರೆಯಲ್ಲಿ ಜನಸಿದ ಹೆಣ್ಣು ಮಗುವಿನ ಖಾತೆಯಲ್ಲಿ ರೂ 20,000ವನ್ನು ಜಮೆ ಮಾಡಲಿದೆ. ಹೆಣ್ಣುಮಗು 18 ವರ್ಷ ತುಂಬಿದ ನಂತರ ಬಡ್ಡಿ ಸಮೇತ ಈ ಹಣವನ್ನು ಪಡೆದುಕೊಳ್ಳಬಹುದು.

Question 6

6. ಈ ಕೆಳಗಿನ ಯಾವ ರಾಜ್ಯ 1894 ರಲ್ಲಿ ನಡೆದ ರೈತ ದಂಗೆಯಲ್ಲಿ ಮಡಿದವರಿಗೆ ಗೌರವ ಸಲ್ಲಿಸುವ ಅಂಗವಾಗಿ “ರೈತರ ಹುತ್ಮಾತ ದಿನ”ವನ್ನು ಆಚರಿಸಿತು?

A
ಅಸ್ಸಾಂ
B
ಕೇರಳ
C
ಪಶ್ಚಿಮ ಬಂಗಾಳ
D
ಹರಿಯಾಣ
Question 6 Explanation: 
ಅಸ್ಸಾಂ

ಅಸ್ಸಾಂ ಸರ್ಕಾರ ಇದೇ ಮೊದಲ ಬಾರಿಗೆ 1894ರಲ್ಲಿ ನಡೆದ ದಂಗೆಯಲ್ಲಿ ಮಡಿದ ರೈತರಿಗೆ ಗೌರವ ಸಲ್ಲಿಸುವ ಸಲುವಾಗಿ ರೈತರ ಹುತ್ಮಾತ ದಿನವನ್ನು ಜನವರಿ 27, 2017 ರಂದು ದರಂಗ್ ಜಿಲ್ಲೆಯ ಪಥರುಘಾಟ್ ನಲ್ಲಿ ಹಮ್ಮಿಕೊಂಡಿತ್ತು. 28ನೇ ಜನವರಿ, 1894ರಲ್ಲಿ ಭೂ ತೆರಿಗೆ ಹೆಚ್ಚಳ ಮಾಡಿದ ಬ್ರಿಟಿಷ್ ಆಡಳಿತ ವಿರುದ್ದ ದಂಗೆ ಎದ್ದ ಕಾರಣ 140 ಅಮಾಯಕ ರೈತರ ಮಾರಣ ಹೋಮ ಮಾಡಲಾಯಿತು. ಅಲ್ಲದೇ 150 ರೈತರು ದಂಗೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.

Question 7

7. "ವೀರಪ್ಪನ್: ಚೇಸಿಂಗ್ ದ ಬ್ರಿಗ್ಯಾಂಡ್" ಪುಸ್ತಕದ ಲೇಖಕರು _________?

A
ಕೆ ವಿಜಯ ಕುಮಾರ್
B
ಶಿವರಾಮ್ ಕುಲಕರ್ಣಿ
C
ಶಂಕರ್ ಬಿದರಿ
D
ಕೆ ಶಿವರಾಂ
Question 7 Explanation: 
ಕೆ ವಿಜಯ ಕುಮಾರ್

ಹಿರಿಯ ಐಪಿಎಸ್ ಅಧಿಕಾರಿ ಕೆ ವಿಜಯ್ ಕುಮಾರ್ ಅವರು, ವೀರಪ್ಪನ್ ಜೀವನಾಧಾರಿತ ಕುರಿತ ಪುಸ್ತಕ ಬರೆದಿದ್ದಾರೆ. ವಿಜಯ್ ಕುಮಾರ್ ಅವರು, ವೀರಪ್ಪನ್ ಸೆರೆಗೆ ಕಾರ್ಯತಂತ್ರ ರೂಪಿಸಿದ್ದ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದ ತಮಿಳುನಾಡು ವಿಶೇಷ ಕಾರ್ಯಾಚರಣಾ ಪಡೆ (ಎಸ್ಟಿಎಫ್)ಯ ಅಧಿಕಾರಿಯಾಗಿದ್ದರು. "ವೀರಪ್ಪನ್: ಚೇಸಿಂಗ್ ದ ಬ್ರಿಗ್ಯಾಂಡ್" ಎಂಬ ಪುಸ್ತಕವನ್ನು ವಿಜಯ್ ಕುಮಾರ್ ಅವರು ಬರೆದಿದ್ದು, ಪುಸ್ತಕದಲ್ಲಿ ಖ್ಯಾತ ನಟ ರಾಜ್ ಕುಮಾರ್ರನ್ನು 108ದಿನಗಳ ಕಾಲ ಅಪಹರಿಸಿದ್ದ ದರೋಡೆಕೋರನ ವ್ಯಕ್ತಿತ್ವ, ಪ್ರಖ್ಯಾತ ವ್ಯಕ್ತಿಗಳನ್ನು ಅಪಹರಿಸಿ ನಿರ್ದಯವಾಗಿ ಹತ್ಯೆಗೈಯುತ್ತಿದ್ದ ನೈಜ ಘಟನೆಗಳನ್ನು ಪುಸ್ತಕದಲ್ಲಿ ವಿವರಿಸಿದ್ದಾರೆ.

Question 8

8. 43ನೇ ಪೀಪಲ್ಸ್ ಚಾಯ್ಸ್ ಪ್ರಶಸ್ತಿಯಲ್ಲಿ ವೀಕ್ಷಕರ ಅಚ್ಚುಮೆಚ್ಚಿನ ನಾಟಕೀಯ ಟಿವಿ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತದ ನಟಿ ಯಾರು?

A
ಪ್ರಿಯಾಂಕ ಚೋಪ್ರ
B
ಐಶ್ವರ್ಯ ರೈ
C
ಕತ್ರಿನಾ ಕೈಫ್
D
ಕರೀನಾ ಕಪೂರ್
Question 8 Explanation: 
ಪ್ರಿಯಾಂಕ ಚೋಪ್ರ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು 2015ರ ಎಬಿಸಿ ಥ್ರಿಲ್ಲರ್ ಸೀರಿಸ್ ಕ್ವಾಂಟಿಕೋ ದಲ್ಲಿ ವಹಿಸಿದ್ದ ಅಲೆಕ್ಸ್ ಪ್ಯಾರಿಶ್ ಪಾತ್ರಕ್ಕಾಗಿ 2017ರ ಪೀಪಲ್ಸ್ ಚಾಯ್ಸ ಅವಾರ್ಡ್ ಪಡೆದಿದ್ದಾರೆ. ಪ್ರಿಯಾಂಕಾ ವೀಕ್ಷಕರ ಅಚ್ಚುಮೆಚ್ಚಿನ ನಾಟಕೀಯ ಟಿವಿ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Question 9

9. ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿ ಇತ್ತೀಚೆಗೆ ಯಾರನ್ನು ನೇಮಿಸಲಾಗಿದೆ?

A
ಬನ್ವಾರಿಲಾಲ್ ಪುರೋಹಿತ್
B
ಕೃಷ್ಣಕಾಂತ್
C
ಕಿರಣ್ ಬೇಡಿ
D
ಪದ್ಮನಾಭ ಬಾಲಕೃಷ್ಣ ಆಚಾರ್ಯ
Question 9 Explanation: 
ಪದ್ಮನಾಭ ಬಾಲಕೃಷ್ಣ ಆಚಾರ್ಯ
Question 10

10. “ಇಂಡಿಯಾ ಫಾರ್ಮಾ & ಇಂಡಿಯಾ ಮೆಡಿಕಲ್ ಡಿವೈಸ್-2017” ಸಮ್ಮೇಳನ ಯಾವ ನಗರದಲ್ಲಿ ಆಯೋಜಿಸಲಾಗಿತ್ತು?

A
ಬೆಂಗಳೂರು
B
ಚೆನ್ನೈ
C
ಕೊಲ್ಕತ್ತ
D
ಪುಣೆ
Question 10 Explanation: 
ಬೆಂಗಳೂರು

ಔಷಧಿ ಮತ್ತು ವೈದ್ಯಕೀಯ ಸಲಕರಣೆ ವಲಯದ 2ನೇ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಮತ್ತು ಸಮ್ಮೇಳನ “ಇಂಡಿಯಾ ಫಾರ್ಮಾ & ಇಂಡಿಯಾ ಮೆಡಿಕಲ್ ಡಿವೈಸ್-2017” ನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಮೂರು ದಿನದ ಈ ಸಮ್ಮೇಳನದಲ್ಲಿ ಭಾರತೀಯ ಔಷಧಿ ಮತ್ತು ವೈದ್ಯಕೀಯ ಸಲಕರಣೆಗಳನ್ನು ವಿಶ್ವದೆಲ್ಲೆಡೆ ಪಸರಿಸಲು ಮತ್ತು ಹೆಚ್ಚು ಸ್ಪರ್ಧಾತ್ಮಕವಾಗಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿತ್ತು.

There are 10 questions to complete.

[button link=”http://www.karunaduexams.com/wp-content/uploads/2017/02/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ2627-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.