ಮಲೇಷ್ಯಾ ಮಾಸ್ಟರ್ ಪ್ರಶಸ್ತಿ ಗೆದ್ದ ಸೈನಾ ನೆಹ್ವಾಲ್

ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಮಲೇಷ್ಯಾ ಮಾಸ್ಟರ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

  • ಟೂರ್ನಿಯ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್ ನ ಪೋರ್ನ್ಪಾವಿ ಚೊಚುವಾಂಗ್ ಅವರನ್ನು ಅವರನ್ನು ಮಣಿಸಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
  • ಚೊಚುವಾಂಗ್ ಅವರಿಗೆ ತೀವ್ರವಾಗಿ ಪೈಪೋಟಿ ನೀಡಿದ ಸೈನಾ ಅವರು 22-20,22-20 ಗೇಮ್ಗಳಿಂದ ಸೋಲಿಸಿದರು.
  • ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ಸೈನಾ ಅವರು 7 ತಿಂಗಳ ಬಳಿಕ ಟೈಟಲ್ ಮುಡಿಗೇರಿಸಿಕೊಂಡಿದ್ದಾರೆ.

ಭ್ರಷ್ಟಾಚಾರ ಸೂಚ್ಯಂಕ: 79ನೇ ಸ್ಥಾನದಲ್ಲಿ ಭಾರತ

ಬರ್ಲಿನ್ ಮೂಲದ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಟ್ರಾನ್ಸಪೆರೆನ್ಸಿ ಇಂಟರ್ನ್ಯಾಷನಲ್ (Transparency International) ಬಿಡುಗಡೆಗೊಳಿಸಿರುವ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತ 79ನೇ ಸ್ಥಾನವನ್ನು ಪಡೆದುಕೊಂಡಿದೆ.  ವಿಶ್ವಸಂಸ್ಥೆಯ ಅಂಕಿ ಅಂಶ, ವಿಶ್ವ ಆರ್ಥಿಕ ವೇದಿಕೆ ಹಾಗೂ ಇತರ ಸಂಸ್ಥೆಗಳ ವರದಿಗಳನ್ನು ಬಳಸಿಕೊಂಡು ಶ್ರೇಯಾಂಕ ಪಟ್ಟಿಯನ್ನು ತಯಾರಿಸಲಾಗಿದೆ. ಭ್ರಷ್ಟಾಚಾರವನ್ನು ಲೆಕ್ಕಹಾಕಲು ಸೊನ್ನೆಯಿಂದ 100 ಅಂಕಗಳ ಮಾಪನದ ಆಧಾರದ ಮೇಲೆ ದೇಶಗಳಿಗೆ ಶ್ರೇಯಾಂಕ ನೀಡಲಾಗಿದೆ. ಸೊನ್ನೆ ಸ್ಥಾನ ಪಡೆದ ರಾಷ್ಟ್ರದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಹಾಗೂ ನೂರನೇ ಸ್ಥಾನ ಪಡೆದ ದೇಶವನ್ನು ಅತಿ ಕಡಿಮೆ ಭ್ರಷ್ಟಾಚಾರ ಹೊಂದಿರುವ ದೇಶ ಎಂದು ಪರಿಗಣಿಸಲಾಗುತ್ತದೆ.

ಪ್ರಮುಖಾಂಶಗಳು:

  • ಮೊದಲ ಹತ್ತು ರಾಷ್ಟ್ರಗಳು: ನ್ಯೂಜಿಲ್ಯಾಂಡ್ ಮತ್ತು ಡೆನ್ಮಾರ್ಕ್ 90 ಅಂಕಗಳನ್ನು ಪಡೆಯುವ ಮೂಲಕ ಜಂಟಿಯಾಗಿ ಮೊದಲ ಸ್ಥಾನವನ್ನು ಪಡೆದುಕೊಂಡಿವೆ. ಫಿನ್ ಲ್ಯಾಂಡ್ (3ನೇ ಸ್ಥಾನ), ಸ್ವೀಡನ್ (4ನೇ ಸ್ಥಾನ), ಸ್ವಿಟ್ಜರ್ಲ್ಯಾಂಡ್ (5ನೇ ಸ್ಥಾನ), ನಾರ್ವೆ (6ನೇ ಸ್ಥಾನ), ಸಿಂಗಪುರ (7ನೇ ಸ್ಥಾನ), ನೆದರ್ಲ್ಯಾಂಡ್ (8ನೇ ಸ್ಥಾನ), ಕೆನಡ (9ನೇ ಸ್ಥಾನ) ಮತ್ತು ಜರ್ಮನಿ (10ನೇ) ಸ್ಥಾನದಲ್ಲಿವೆ.
  • ಪಟ್ಟಿಯಲ್ಲಿ ಕೆಳಮಟ್ಟದಲ್ಲಿರುವ ರಾಷ್ಟ್ರಗಳು: ಸೊಮೊಲಿಯಾ ವಿಶ್ವದ ಅತ್ಯಂತ ಭ್ರಷ್ಟಾಚಾರ ಪೀಡಿತ ರಾಷ್ಟ್ರವೆನಿಸಿದೆ. ಸಿರಿಯಾ, ದಕ್ಷಿಣ ಸೂಡಾನ್, ದಕ್ಷಿಣ ಕೊರಿಯಾ, ಆಫ್ಘಾನಿಸ್ತಾನ ಮತ್ತು ಇರಾಕ್ ಪಟ್ಟಿಯಲ್ಲಿ ಕೆಳಹಂತದಲ್ಲಿವೆ.
  • ಪ್ರಸ್ತುತ ಆವೃತ್ತಿಯ ಸೂಚ್ಯಂಕದಲ್ಲಿ ಭಾರತ, ಚೀನಾ ಮತ್ತು ಬ್ರೆಜಿಲ್ 40 ಅಂಕಗಳೊಂದಿಗೆ ಪಟ್ಟಿಯಲ್ಲಿ ಮಧ್ಯಮ ಸ್ಥಾನವನ್ನು ಪಡೆದುಕೊಂಡಿವೆ.
  • 2016ರ ಸೂಚ್ಯಂಕಕ್ಕೆ ಹೋಲಿಸಿದರೆ ಭಾರತ ಎರಡು ಅಂಕವನ್ನು ಹೆಚ್ಚಿಸಿಕೊಂಡಿದೆ. 2016 ರಲ್ಲಿ ಭಾರತ 38 ಅಂಕಗಳನ್ನು ಪಡೆದುಕೊಂಡಿತ್ತು.
  • ಧಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ ಬಾಂಗ್ಲದೇಶ 27 ಮತ್ತು ನೇಪಾಳ 28ನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಭ್ರಷ್ಟಾಚಾರ ಹೆಚ್ಚಾಗಿರುವ ದೇಶಗಳಾಗಿ ಹೊರಹೊಮ್ಮಿವೆ.

ಪದ್ಮ ಪ್ರಶಸ್ತಿ 2017

ರಾಷ್ಟ್ರಪತಿ ಪ್ರಣಭ್ ಮುಖರ್ಜಿ ಅವರು 2017 ಪದ್ಮ ಪ್ರಶಸ್ತಿಗಳಾದ ಪದ್ಮ ವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಗಣ್ಯರ ಹೆಸರನ್ನು ಘೋಷಿಸಿದ್ದಾರೆ. ಈ ಬಾರಿ 89 ಸಾಧಕರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಇವರಲ್ಲಿ 7 ಪದ್ಮ ವಿಭೂಷಣ, 7 ಪದ್ಮ ಭೂಷಣ ಹಾಗೂ 75 ಪದ್ಮಶ್ರೀ ಪ್ರಶಸ್ತಿ ವಿಜೇತರು. ಈ ಪ್ರಶಸ್ತಿಯನ್ನು ಪಡೆದುಕೊಂಡವರಲ್ಲಿ 19 ಮಹಿಳೆಯರು, 5 ವಿದೇಶಿ, ಎನ್ಆರ್ಐ ಹಾಗೂ 6 ಜನರಿಗೆ ಮರಣೋತ್ತರವಾಗಿ ನೀಡಲಾಗಿದೆ.

ಪದ್ಮ ವಿಭೂಷಣ: ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಗೆ ಭಾಜನರಾದವರ ಪಟ್ಟಿ ಇಂತಿದೆ.

ಕೆ.ಜೆ. ಯೇಸುದಾಸ್ ಕಲೆ-ಸಂಗೀತ ಕೇರಳ
ಸದ್ಗುರು ಜಗ್ಗಿ ವಾಸುದೇವ್ ಇತರೆ-ಅಧ್ಯಾತ್ಮ ತಮಿಳುನಾಡು
ಶರದ್ ಪವಾರ್ ಸಾರ್ವಜನಿಕ ಆಡಳಿತ ಮಹಾರಾಷ್ಟ್ರ
ಮುರಳಿ ಮನೋಹರ ಜೋಶಿ ಸಾರ್ವಜನಿಕ ಆಡಳಿತ ಉತ್ತರ ಪ್ರದೇಶ
ಪ್ರೊ. ಉಡುಪಿ ರಾಮಚಂದ್ರ ರಾವ್ ವಿಜ್ಞಾನ ಮತ್ತು ತಂತ್ರಜ್ಞಾನ ಕರ್ನಾಟಕ
ಸುಂದರ್ ಲಾಲ್ ಪಟ್ವಾ (ಮರಣೋತ್ತರ) ಸಾರ್ವಜನಿಕ ಆಡಳಿತ ಮಧ್ಯಪ್ರದೇಶ

ಪಿ.ಎ. ಸಂಗ್ಮಾ (ಮರಣೋತ್ತರ) ಸಾರ್ವಜನಿಕ ಆಡಳಿತ ಮೇಘಾಲಯ

ಪದ್ಮಭೂಷಣ
ಹೆಸರು ಕ್ಷೇತ್ರ ರಾಜ್ಯ
ವಿಶ್ವ ಮೋಹನ್ ಭಟ್ ಕಲೆ-ಸಂಗೀತ ರಾಜಸ್ತಾನ
ಪ್ರೊ. ದೇವಿ ಪ್ರಸಾದ್ ದ್ವಿವೇದಿ ಸಾಹಿತ್ಯ ಮತ್ತು ಶಿಕ್ಷಣ ಉತ್ತರ ಪ್ರದೇಶ
ಟೆಹೆಮ್ಪ್ಟೆನ್ ಉದ್ವಾಡಿಯಾ ವೈದ್ಯಕೀಯ ಮಹಾರಾಷ್ಟ್ರ
ರತ್ನ ಸುಂದರ್ ಮಹಾರಾಜ್ ಇತರೆ-ಅಧ್ಯಾತ್ಮ ಗುಜರಾತ್
ಸ್ವಾಮಿ ನಿರಂಜನ ನಂದ ಸರಸ್ವತಿ ಇತರೆ-ಯೋಗ ಬಿಹಾರ
ಎಚ್.ಆರ್.ಎಚ್. ಪ್ರಿನ್ಸೆಸ್ ಮಹಾ ಚಕ್ರಿ ಸಿರಿಂಧೋರ್ನ್ (ವಿದೇಶಿ ಪ್ರಜೆ) ಸಾಹಿತ್ಯ ಮತ್ತು ಶಿಕ್ಷಣ ಥಾಯ್ಲೆಂಡ್
ಚೋ ರಾಮಸ್ವಾಮಿ (ಮರಣೋತ್ತರ) ಪತ್ರಿಕೋದ್ಯಮ ತಮಿಳುನಾಡು

ಕರ್ನಾಟಕದ ಸಾಧಕರು

ಭಾರತಿ ವಿಷ್ಣುವರ್ಧನ್ ಕಲೆ-ಸಿನಿಮಾ
ಸುಕ್ರಿ ಬೊಮ್ಮಗೌಡ ಕಲೆ-ಸಂಗೀತ
ಪ್ರೊ. ಜಿ. ವೆಂಕಟಸುಬ್ಬಯ್ಯ ಸಾಹಿತ್ಯ ಮತ್ತು ಶಿಕ್ಷಣ
ಚ.ಮೂ. ಕೃಷ್ಣ ಶಾಸ್ತ್ರಿ ಸಾಹಿತ್ಯ ಮತ್ತು ಶಿಕ್ಷಣ
ಗಿರೀಶ್ ಭಾರದ್ವಾಜ್ ಸಮಾಜ ಸೇವೆ
ಶೇಖರ್ ನಾಯ್ಕ್ ಕ್ರೀಡೆ-ಕ್ರಿಕೆಟ್
ವಿಕಾಸ ಗೌಡ ಕ್ರೀಡೆ- ಡಿಸ್ಕಸ್ ತ್ರೋ

Leave a Comment

This site uses Akismet to reduce spam. Learn how your comment data is processed.