ಸಾಮಾನ್ಯ ಜ್ಞಾನ ಕ್ವಿಜ್ 6: ಸಾಮಾನ್ಯ ಜ್ಞಾನ ಕ್ವಿಜ್ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಿವೆ.
ಕ್ವೀಜ್ 6
Question 1 |
1. “ವಿಮೆ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ (IRDA)” ದ ನೂತನ ಅಧ್ಯಕ್ಷರಾಗಿ ಈ ಕೆಳಗಿನ ಯಾರು ಅಧಿಕಾರವಹಿಸಿಕೊಂಡಿದ್ದಾರೆ?
ಟಿ. ರಾಘವನ್ | |
ಕೆ. ರಾಮಚಂದ್ರನ್ | |
ಟಿ.ಎಸ್.ವಿಜಯನ್ | |
ಮಜ್ನು ಪಾಟೇಕರ್ |
Question 1 Explanation:
ಟಿ.ಎಸ್.ವಿಜಯನ್: (ಜೀವ ವಿಮಾ ನಿಗಮದ ಮಾಜಿ ಮುಖ್ಯಸ್ಥರಾದ ಟಿ.ಎಸ್.ವಿಜಯನ್ ರವರು ವಿಮೆ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ (Insurance Regulatory and Development Authority (IRDA))ದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಜೆ. ಹರಿ ನಾರಯಣ್ ರವರು ಐದು ವರ್ಷದ ಅವಧಿಯನ್ನು ಪೂರ್ಣಗೊಳಿದ ಕಾರಣ ವಿಜಯನ್ ರವರನ್ನು ಈ ಹುದ್ದೆಗೆ ನೇಮಕಮಾಡಲಾಗಿದೆ.)
Question 2 |
2. ಈ ಕೆಳಗಿನ ಯಾವ ಜಿಲ್ಲೆಯಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಒಣ ಮೇವು ಬಿಲ್ಲೆ ತಯಾರಿಕೆ ಘಟಕವನ್ನು ಆರಂಭಿಸಲಾಗಿದೆ?
ಮೈಸೂರು | |
ಚಾಮರಾಜ ನಗರ | |
ಬೆಂಗಳೂರು | |
ಮಂಡ್ಯ |
Question 2 Explanation:
ಚಾಮರಾಜ ನಗರ: (ಚಾಮರಾಜನಗರ ಜಿಲ್ಲೆಯ ಮಣಚನಹಳ್ಳಿಯಲ್ಲಿ ಇತ್ತೀಚೆಗೆ ಒಣ ಮೇವು ಬಿಲ್ಲೆ ತಯಾರಿಕಾ ಘಟಕವನ್ನು ಸ್ಥಾಪಿಸಲಾಗಿದೆ. ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೂ.2 ಕೋಟಿ ವೆಚ್ಚದಲ್ಲಿ ಇದನ್ನು ಸ್ಥಾಪಿಸಲಾಗಿದೆ. ಈ ಘಟಕವೂ ಕರ್ನಾಟಕ ಮತ್ತು ದಕ್ಷಿಣ ಭಾರತದಲ್ಲೇ ಪ್ರಥಮವಾಗಿದೆ. )
Question 3 |
3. ಬರ್ಲಿನ್ ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಗೋಲ್ಡನ್ ಬೀರ್ (Golden Bear) ಪ್ರಶಸ್ತಿ ಗೆದ್ದ ಚಿತ್ರ ಯಾವುದು?
ಚೈಲ್ಡ್ ಪೋಸ್ (Child Pose) | |
ಫ್ರಿನ್ಸ್ ಅವಲಂಚೆ (Prince Avalanche) | |
ಸಲ್ಮಾ | |
ಇದ್ಯಾವುದೂ ಅಲ್ಲ |
Question 3 Explanation:
ಚೈಲ್ಡ್ ಪೋಸ್ (Child Pose): (ರೋಮಾನಿಯಾದ ನಿರ್ದೇಶಕ ಕಾಲಿನ್ ಪೀಟರ್ ನೆಟ್ಜರ್ ನಿರ್ದೇಶನದ ಚಿತ್ರ ಚೈಲ್ಡ್ ಪೋಸ್ ಗೆ ಈ ಬಾರಿಯ ಬರ್ಲಿನ್ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಬೀರ್ ಪ್ರಶಸ್ತಿ ಲಭಿಸಿದೆ.)
Question 4 |
4. ವಿಶ್ವದ ಅತ್ಯಂತ ಹಿರಿಯ ಓಟಗಾರ ಪೌಜ ಸಿಂಗ್ ಇತ್ತೀಚೆಗೆ ಮ್ಯಾರಥನ್ ಓಟಕ್ಕೆ ವಿಧಾಯ ಹೇಳಿದ್ದಾರೆ. ಅಂದಹಾಗೆ ಅವರ ಕೊನೆಯ ಮ್ಯಾರಥನ್ ಓಟ ಯಾವುದು?
ಹಾಂಗ್ ಕಾಂಗ್ ಮ್ಯಾರಥನ್ | |
ಆಸ್ಟ್ರೇಲಿಯಾ ಮ್ಯಾರಥನ್ | |
ಮುಂಬೈ ಮ್ಯಾರಥನ್ | |
ಇಂಗ್ಲೆಂಡ್ ಮ್ಯಾರಥನ್ |
Question 4 Explanation:
ಹಾಂಗ್ ಕಾಂಗ್ ಮ್ಯಾರಥನ್: (ವಿಶ್ವದ ಅತ್ಯಂತ ಹಿರಿಯ ಮ್ಯಾರಥನ್ ಓಟಗಾರ ಪೌಜ ಸಿಂಗ್ ರವರು ಹಾಂಗ್ ಕಾಂಗ್ ಮ್ಯಾರಥನ್ ನಂತರ ಮ್ಯಾರಥನ್ ಓಟದಿಂದ ನಿವೃತ್ತಿ ಘೋಷಿಸಿದರು. ಟರ್ಬನ್ ಟರ್ನೋಡೊ ಎಂದೇ ಖ್ಯಾತರಾಗಿರುವ ಸಿಂಗ್ ರವರು 2011 ರಲ್ಲಿ ಹಿರಿಯ ಮ್ಯಾರಥನ್ ಓಟಗಾರ ಎನಿಸಿದರು. ಆದರೆ ಜನ್ಮ ದಿನಾಂಕದ ದಾಖಲೆಗಳಿಲ್ಲದ ಕಾರಣ ಅವರ ಹೆಸರನ್ನು ಗಿನ್ನಿಸ್ ದಾಖಲೆಯಿಂದ ಕೈಬಿಡಲಾಗಿದೆ.)
Question 5 |
5. ಮಾಲ್ಡೀವ್ಸ್ ನ ಮಾಜಿ ಅಧ್ಯಕ್ಷರಾದ ಮೊಹಮ್ಮದ್ ನಶೀದ್ ರವರು ಈ ಕೆಳಗಿನ ಯಾವ ದೇಶದಲ್ಲಿ ಇತ್ತೀಚೆಗೆ ರಾಜಕೀಯ ಆಶ್ರಯ ಪಡೆದಿದ್ದರು?
ಶ್ರೀಲಂಕಾ | |
ಭಾರತ | |
ಪಾಕಿಸ್ತಾನ | |
ಬಾಂಗ್ಲ ದೇಶ |
Question 5 Explanation:
ಭಾರತ: (ಮಾಲ್ಡೀವ್ಸ್ ನ ಮಾಜಿ ಅಧ್ಯಕ್ಷರಾದ ಮೊಹಮ್ಮದ್ ನಶೀದ್ ರವರು ಭಾರತೀಯ ಹೈಕಮೀಷನರ್ ಕಚೇರಿಯಲ್ಲಿ 11 ದಿನಗಳ ಕಾಲ ರಾಜಕೀಯ ಆಶ್ರಯ ಪಡೆದಿದ್ದರು. ಅವರ ಮೇಲೆ ಮಾಲ್ಡೀವ್ಸ್ ನ್ಯಾಯಾಲಯ ಬಂಧನ ಆದೇಶ ಹೊರಡಿಸಿದ್ದ ಕಾರಣ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದರು.)
Question 6 |
6. ಸೋಲ್ ನಲ್ಲಿ ನಡೆದ 16 ನೇ ಏಷ್ಯನ್ ಜೂನಿಯರ್ ಸ್ಕ್ವಾಷ್ ಚಾಂಪಿಯನ್ ಷಿಪ್ ನಲ್ಲಿ ಭಾರತ ತಂಡ ಯಾವ ದೇಶದ ತಂಡವನ್ನು ಮಣಿಸುವ ಮೂಲಕ ಬಂಗಾರ ಗೆದ್ದಿತು?
ಪಾಕಿಸ್ತಾನ | |
ಹಾಂಕಾಂಗ್ | |
ಚೀನಾ | |
ಮಲೇಷಿಯಾ |
Question 6 Explanation:
ಹಾಂಕಾಂಗ್ : (ದಕ್ಷಿಣ ಕೋರಿಯಾದ ಸೋಲ್(Seol) ನಲ್ಲಿ ನಡೆದ 16 ನೇ ಏಷ್ಯನ್ ಜೂನಿಯರ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಬಾಲಕಿಯರ ತಂಡ ಬಂಗಾರದ ಪದಕ ಜಯಿಸಿದರು. ಫೈನಲ್ ಪಂದ್ಯದಲ್ಲಿ ಬಾಲಕಿಯರ ತಂಡ 2-1 ರಲ್ಲಿ ಹಾಂಕಾಂಗ್ ತಂಡವನ್ನು ಮಣಿಸಿತು. ಅನಾಕ ಅಲಂಕಮನಿ 11-4, 11-5, 11-6 ರಲ್ಲಿ ಹೂ ಕಾ ಪೋ ರವರ ವಿರುದ್ದ ಮತ್ತು ಅಪರಾಜಿತಾ ಬಾಲಮುರಗನ್ 11-7, 11-9, 11-9 ರಲ್ಲಿ ಚೊಯ್ ಯೆನ್ ಶಾನ್ ವಿರುದ್ದ ಗೆಲುವು ಸಾಧಿಸುವ ಮೂಲಕ ಭಾರತಕ್ಕೆ ಬಂಗಾರದ ಪದಕ ತಂದುಕೊಟ್ಟರು. ಭಾರತದ ಬಾಲಕರ ತಂಡ ಪಾಕಿಸ್ತಾನ ವಿರುದ್ದ 0-2 ರಲ್ಲಿ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಕೊಂಡಿತು.)
Question 7 |
7. ಭಾರತದಲ್ಲಿ ನವೀಕರಿಸಬಹುದಾದ ಇಂಧನ (Renewable Energy) ಉತ್ಪಾದನೆಯಲ್ಲಿ ಯಾವ ರಾಜ್ಯ ಅಗ್ರ ಸ್ಥಾನದಲ್ಲಿದೆ?
ಗುಜರಾತ್ | |
ರಾಜಸ್ತಾನ | |
ತಮಿಳುನಾಡು | |
ಕರ್ನಾಟಕ |
Question 7 Explanation:
ತಮಿಳುನಾಡು:(ಕಳೆದ ಮೂರು ವರ್ಷಗಳಲ್ಲಿ ದೇಶದ ನವೀಕರಿಸಬಹುದಾದ ಇಂಧನ ಉತ್ಪಾದನೆ 10,431 ಮೆಗಾ ವ್ಯಾಟ್ ನಷ್ಟಿದೆ. ಈ ಮೂಲಕ ದೇಶದಲ್ಲಿ ನವೀಕರಿಸಬಲ್ಲ ಮೂಲಗಳಿಂದ ಒಟ್ಟು 26,920 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗಿದೆ. ರಾಜ್ಯಗಳ ಪೈಕಿ ತಮಿಳು ನಾಡು 3113 ಮೆಗಾ ವ್ಯಾಟ್ ಉತ್ಪಾದಿಸುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಉಳಿದಂತೆ ಗುಜರಾತ್ (2389 ಮೆ.ವ್ಯಾ), ರಾಜಸ್ತಾನ (1930 ಮೆ.ವ್ಯಾ), ಮಹಾರಾಷ್ಟ್ರ (1699 ಮೆ.ವ್ಯಾ), ಕರ್ನಾಟಕ (1394 ಮೆ,ವ್ಯಾ) ಮತ್ತು ಆಂಧ್ರ ಪ್ರದೇಶ (408 ಮೆ.ವ್ಯಾ) ಉತ್ಪಾದನೆಯ ಮೂಲಕ ನಂತರದ ಸ್ಥಾನದಲ್ಲಿವೆ.)
Question 8 |
8. ಇತ್ತೀಚೆಗೆ ನಿಧನರಾದ ಹರಿ ಶಂಕರ್ ಸಿಂಗಾನಿಯಾ ರವರು ಪ್ರಸಿದ್ದ ________?
ರಾಜಕಾರಣಿ | |
ಸಿನಿಮಾ ನಟ | |
ಉದ್ಯಮಿ | |
ಕ್ರೀಡಾ ಪಟು |
Question 8 Explanation:
ಉದ್ಯಮಿ: (ಭಾರತ ಕಂಡ ಶ್ರೇಷ್ಠ ಉದ್ಯಮಿ, ಜೆಕೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಹರಿ ಶಂಕರ್ ಸಿಂಗಾನಿಯಾ ದೆಹಲಿಯಲ್ಲಿ ನಿಧನ ಹೊಂದಿದ್ದರು. 72 ವರ್ಷ ವಯಸ್ಸಿನ ಸಿಂಗಾನಿಯಾ ರವರು ಅನೇಕ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಜೂನ್, 20, 1933ರಲ್ಲಿ ಕಾನಪುರ್ ದಲ್ಲಿ ಜನಿಸಿದ ಅವರು ಬಿ.ಎಸ್ಸಿ ಪದವಿಯನ್ನು ಪಡೆದ ನಂತರ 1951 ರಲ್ಲಿ ಜೆಕೆ ಸಂಸ್ಥೆಗೆ ನೇಮಕಗೊಂಡರು. ಅಸಾಮಾನ್ಯ ಉದ್ಯಮಿ ಲಕ್ಷಣಗಳಿಂದ ಜನಪ್ರಿಯರಾದ ಸಿಂಗಾನಿಯಾ ಸಂಸ್ಥೆಯ ಅಭಿವೃದ್ದಿಗೆ ಬದ್ರ ಬುನಾದಿಯನ್ನು ಹಾಕಿದರು.)
Question 9 |
9. 85 ನೇ ವರ್ಷದ ಆಸ್ಕರ್ ಪ್ರಶಸ್ತಿಯಲ್ಲಿ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸಿನಿಮಾ ಯಾವುದು?
ಲೈ ಆಫ್ ಫೈ | |
ಆರ್ಗೊ | |
ಸಿಲ್ವರ್ ಲೈನಿಂಗ್ಸ್ ಪ್ಲೆ ಬುಕ್ | |
ಬರ್ಫಿ |
Question 9 Explanation:
ಆರ್ಗೊ: (ಆರ್ಗೊ” ಅತ್ಯುತ್ತಮ ಚಿತ್ರ: 1979 ರಲ್ಲಿ ನಡೆದಿದ್ದ ಇರಾನ್ ಒತ್ತೆಯಾಳು ಪ್ರಕರಣವನ್ನು ಆಧರಿಸಿ ನಿರ್ಮಾಣ ಮಾಡಿರುವ ಆರ್ಗೊ ಚಿತ್ರ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ.)
Question 10 |
10. ಕಾರ್ಮಿಕ ಭವಿಷ್ಯ ನಿಧಿ ಗೆ ಸದ್ಯ ನಿಗದಿಪಡಿಸಲಾಗಿರುವ ಬಡ್ಡಿ ದರ ಎಷ್ಟು?
9.5% | |
8.5% | |
8.25% | |
8.0% |
Question 10 Explanation:
8.5%: (ಕಾರ್ಮಿಕ ಭವಿಷ್ಯ ನಿಧಿ (Employment Provident Fund) ಗೆ 2012-13 ನೇ ಸಾಲಿನಲ್ಲಿ ಶೇ.8.5 ಬಡ್ಡಿಯನ್ನು ನಿಗದಿಪಡಿಸಲಾಗಿದೆ. ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (Employment Provident Fund Organnization) ಹೆಚ್ಚಳದ ಬಗ್ಗೆ ಸಮ್ಮತಿ ಸೂಚಿಸಿ, ಇತ್ತೀಚೆಗೆ ನಡೆದ ಸಭೆಯಲ್ಲಿ ಈ ನಿರ್ಣಯವನ್ನು ಹೊರಡಿಸಲಾಗಿದೆ. ಹಿಂದಿನ ವರ್ಷದಲ್ಲಿ ಶೇ.8.25 ಬಡ್ಡಿಯನ್ನು ನಿಗದಿಪಡಿಸಲಾಗಿತ್ತು ಇದಕ್ಕೆ ಹೋಲಿಸಿದರೆ ಶೇ.0.25% ಮಾತ್ರ ಹೆಚ್ಚಿಸಲಾಗಿದೆ. )
There are 10 questions to complete.