ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,2, 2017
Question 1 |
1. ಕೇಂದ್ರ ಆಯವ್ಯಯ 2017-18 ರನ್ವಯ ಭಾರತೀಯ ರಿಸರ್ವ ಬ್ಯಾಂಕ್ ಅಧೀನದಲ್ಲಿ ‘ಪಾವತಿ ನಿಯಂತ್ರಣ ಮಂಡಳಿ’ ಅಸ್ತಿತ್ವಕ್ಕೆ ಬರಲಿದೆ, ಈ ಮಂಡಳಿಯ ಅಧ್ಯಕ್ಷರು ಯಾರಾಗಿರುತ್ತಾರೆ?
ಹಣಕಾಸು ಸಚಿವಾಲಯದ ಕಾರ್ಯದರ್ಶಿ | |
ಹಣಕಾಸು ಸಚಿವ | |
ಪ್ರಧಾನ ಮಂತ್ರಿ | |
ರಿಸರ್ವ್ ಬ್ಯಾಂಕ್ ಗವರ್ನರ್ |
Question 2 |
2. ಗ್ರಾಮೀಣ ಭಾರತದಲ್ಲಿ ಡಿಜಿಟಲ್ ವ್ಯವಹಾರವನ್ನು ಪ್ರೋತ್ಸಾಹಿಸುವ ಸಲುವಾಗಿ “ಭಾರತ್ ನೆಟ್ ಪ್ರಾಜೆಕ್ಟ್” ಗಾಗಿ ಕೇಂದ್ರ ಸರ್ಕಾರ ಎಷ್ಟು ಅನುದಾನವನ್ನು ಮೀಸಲಿರಿಸಿದೆ?
ರೂ. 5000 ಕೋಟಿ | |
ರೂ. 10000 ಕೋಟಿ | |
ರೂ. 15000 ಕೋಟಿ | |
ರೂ. 20000 ಕೋಟಿ |
ಗ್ರಾಮೀಣ ಭಾರತದಲ್ಲಿ ಡಿಜಿಟಲ್ ವ್ಯವಹಾರವನ್ನು ಪ್ರೋತ್ಸಾಹಿಸುವ ಸಲುವಾಗಿ “ಭಾರತ್ ನೆಟ್ ಪ್ರಾಜೆಕ್ಟ್” ಗಾಗಿ ಕೇಂದ್ರ ಸರ್ಕಾರ 2017-18 ನೇ ಸಾಲಿನ ಆಯವ್ಯಯದಲ್ಲಿ ರೂ. 10000 ಕೋಟಿ ಅನುದಾನವನ್ನು ಮೀಸಲಿರಿಸಿದೆ. ಈ ಯೋಜನೆಯಡಿ ಸುಮಾರು 150000 ಗ್ರಾಮ ಪಂಚಾಯಿತಿಗಳಲ್ಲಿ ಅತೀ ವೇಗದ ವೈ-ಫೈ ಹಾಟ್ ಸ್ಪಾಟ್ ಗಳ ಸಂಪರ್ಕವನ್ನು ಅತ್ಯಂತ ಕನಿಷ್ಟ ದರದಲ್ಲಿ ಕಲ್ಪಿಸಲಾಗುವುದು. ಇದಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ಟೆಲಿ ಮೆಡಿಸಿನ್, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ನೀಡುವ ಸಲುವಾಗಿ “ಡಿಜಿಗಾವ್” ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
Question 3 |
3. “ಹೆಲ್ಲೆನಿಕ್ ರಿಪಬ್ಲಿಕ್ (Hellenic Republic)”ಈ ಕೆಳಗಿನ ಯಾವ ದೇಶದ ಅಧಿಕೃತ ಹೆಸರಾಗಿದೆ?
ಗ್ರೀಸ್ | |
ಸಿಂಗಪುರ | |
ಮೆಕ್ಸಿಕೊ | |
ಇಟಲಿ |
“ಹೆಲ್ಲೆನಿಕ್ ರಿಪಬ್ಲಿಕ್ (Hellenic Republic)”ಗ್ರೀಸ್ ದೇಶದ ಅಧಿಕೃತ ಹೆಸರು.
Question 4 |
4. ಕುಷ್ಠರೋಗ ಮುಕ್ತ ದಿನಾಚರಣೆ-2017 ರ ಅಂಗವಾಗಿ ಕೇಂದ್ರ ಸರ್ಕಾರ ಕುಷ್ಠರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಕೆಳಕಂಡ ಯಾವ ಅಭಿಯಾನವನ್ನು ಪ್ರಾರಂಭಿಸಿತು?
ಸ್ಪರ್ಶ ಅಭಿಯಾನ | |
ನಿವಾರಣಾ ಅಭಿಯಾನ | |
ಸಂದೇಶ ಅಭಿಯಾನ | |
ಸ್ವಚ್ಛ ಅಭಿಯಾನ |
ಕುಷ್ಠರೋಗ ಮುಕ್ತ ದಿನಾಚರಣೆ ಅಂಗವಾಗಿ ಜನವರಿ 30, 2017 ರಂದು ರಾಷ್ಟ್ರಾದ್ಯಂತ “ಸ್ವರ್ಶ ಕುಷ್ಠರೋಗ ಜಾಗೃತಿ ಅಭಿಯಾನ”ವನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿತು. ಮಹಾತ್ಮ ಗಾಂಧಿ ರವರು ಹುತಾತ್ಮರಾದ ದಿನದ ನೆನಪಿಗಾಗಿ ಮತ್ತು ಕುಷ್ಠರೋಗಿಗಳ ಬಗ್ಗೆ ಗಾಂಧಿಯವರಿಗಿದ್ದ ಕಾಳಜಿ ಮತ್ತು ನಿಸ್ವಾರ್ಥತೆ ನೆನಪಿಗೋಸ್ಕರ ಪ್ರತಿವರ್ಷ ಜನವರಿ 30 ರಂದು ಈ ದಿನವನ್ನು ಆಚರಿಸಲಾಗುತ್ತಿದೆ. ಸಮುದಾಯದ ಸಹಭಾಗಿತ್ವದಲ್ಲಿ ಕುಷ್ಠರೋಗ ಪೀಡಿತರನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಿ, ಸೂಕ್ತ ಚಿಕಿತ್ಸೆಯನ್ನು ನೀಡುವುದು ಸದರಿ ಅಭಿಯಾನದ ಮುಖ್ಯ ಧ್ಯೇಯವಾಗಿದೆ. ಕುಷ್ಠರೋಗ ಮೈಕ್ರೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ಬ್ಯಾಕ್ಟೀರಿಯಾದಿಂದ ಬರುವ ಖಾಯಿಲೆಯಾಗಿದ್ದು, ನರವ್ಯೂಹ ಮತ್ತು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ವಿಶ್ವ ಕುಷ್ಠರೋಗ ದಿನಾಚರಣೆಯನ್ನು ಪ್ರತಿ ವರ್ಷ ಜನವರಿ ಕೊನೆ ಭಾನುವಾರದಂದು ಆಚರಿಸುವುದು ವಾಡಿಕೆ.
Question 5 |
5. ಫಿಲಿಫೈನ್ಸ್ ನಲ್ಲಿ ಜರುಗಿದ “ಭುವನ ಸುಂದರಿ 2016” ರ ಸೌಂದರ್ಯ ಸ್ಪರ್ಧೆಯಲ್ಲಿ ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸುಕೊಂಡವರು ಯಾರು?
ಆರತಿ ಸಿಯೋಡಿಯಾ | |
ಐರಿಸ್ ಮಿಟ್ಟೇನೇರ್ | |
ಎಲಿನಾ | |
ಮಿಸ್ಟೋ ಕಿಯಾಸ್ಕಿ |
ಫಿಲಿಫೈನ್ಸ್ ದೇಶದ ಮೆಟ್ರೋ ಮನಿಲಾದ ಮಾಲ್ ಆಫ್ ಏಷಿಯಾ ಅರೆನಾದಲ್ಲಿ ನಡೆದ ಭುವನ ಸುಂದರಿ 2016” ರ ಸೌಂದರ್ಯ ಸ್ಪರ್ಧೆಯಲ್ಲಿ ಫ್ರಾನ್ಸ್ ದೇಶದ ದಂತ ವೈದ್ಯಕೀಯ ವಿದ್ಯಾರ್ಥಿ ಐರಿಸ್ ಮೆಟ್ಟೇನೇರ್ ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸುಕೊಂಡರು.)
Question 6 |
6. ಆಫ್ರಿಕನ್ ಒಕ್ಕೂಟ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ವ್ಯಕ್ತಿ ಯಾರು?
ಮಸ್ಸಕಾರ | |
ನೀಲ್ ಜಾನ್ಸನ್ | |
ಮೌಸಾ ಫಕಿ | |
ಕೊಸಾಜಾನ ಸೂಮಾ |
ಚಾಡ್ ದೇಶದ ಮಾಜಿ ಪ್ರಧಾನ ಮಂತ್ರಿ ಮೌಸಾ ಫಕಿ ಮಹಮತ್ ಆಫ್ರಿಕನ್ ಒಕ್ಕೂಟ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆಫ್ರಿಕನ್ ಒಕ್ಕೂಟ ಸಮಿತಿಯು ಆಫ್ರಿಕ ದೇಶಗಳ ಆಡಳಿತ ಕೇಂದ್ರ / ಸಚಿವಾಲಯವಾಗಿ ಕಾರ್ಯನಿರ್ವಹಿಸುತ್ತದೆ. ಆಫ್ರಿಕನ್ ಒಕ್ಕೂಟ ಸಮಿತಿಯ ಕೇಂದ್ರಾಡಳಿತ ಕಚೇರಿ ಇಥೋಪಿಯಾದ ಅಡ್ಡೀಸ್ ಅಬಾಬದಲ್ಲಿದೆ.
Question 7 |
7. ಭಾರತೀಯ ಆರ್ಥಿಕ ಸಮೀಕ್ಷೆ 2017 ರಲ್ಲಿ, ಆರ್ಥಿಕ ವರ್ಷ 2018 ರಲ್ಲಿ ಭಾರತದ ಜಿಡಿಪಿ ಯು ಎಷ್ಟಿರಲಿದೆ ಎಂದು ಅಂದಾಜಿಸಲಾಗಿದೆ?
6.55% ರಿಂದ 7.25% | |
6.75% ರಿಂದ 7.5% | |
7% ರಿಂದ 7.75% | |
7.15% ರಿಂದ 7.75% |
2017-18 ನೇ ಸಾಲಿನ ಬಜೆಟ್ ಮಂಡನೆಗೆ ಪೂರ್ವಭಾವಿಯಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಸಂಸತ್ ನಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದು, ಶೇ.6.75-7.5 ದರದಲ್ಲಿ ಜಿಡಿಪಿ ಬೆಳವಣಿಗೆ ನಿರೀಕ್ಷೆ ಇದೆ ಎಂದಿದ್ದಾರೆ.
Question 8 |
8. ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆಯ (BCCI) ನೂತನ ಮುಖ್ಯಸ್ಥರಾಗಿ ಯಾರನ್ನು ನೇಮಿಸಲಾಗಿದೆ?
ಅನುರಾಗ್ ಠಾಕೂರ್ | |
ಸೌರವ್ ಗಂಗೂಲಿ | |
ಮನೋಜ್ ಶರ್ಮಾ | |
ವಿನೋದ್ ರಾಯ್ |
ಭಾರತೀಯ ಸರ್ವೋಚ್ಛ ನ್ಯಾಯಾಲಯವು ಭಾರತದ ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವಿನೋದ್ ರಾಯ್ ರವರನ್ನು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆಯ (BCCI) ನೂತನ ಮುಖ್ಯಸ್ಥರಾಗಿ ನೇಮಿಸಿದೆ. ನಾಲ್ಕು ಸದಸ್ಯರ ಸಮಿತಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಡಯಾನ ಎದುಲ್ಜಿ, ಇತಿಹಾಸಕಾರ ರಾಮಚಂದ್ರ ಗುಹಾ, ಐ.ಡಿ.ಎಫ್.ಸಿ. ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ರಮ್ ಲಮಾಯೆ ಹಾಗೂ ಬಿಸಿಸಿಐನ ಅಮಿತಾಭ್ ಚೌದರಿ ಪ್ರತಿನಿಧಿಸಲಿದ್ದಾರೆ.
Question 9 |
9. ಭಾರತದ ಅತಿ ದೊಡ್ಡ ‘ನವ್ಯೋದ್ಯಮ ವಿಕಸನ ತಾಣ’ (Start-up Incubator) ಯಾವ ರಾಜ್ಯದಲ್ಲಿ ಕಾರ್ಯಾರಂಭ ಮಾಡಲಿದೆ?
ಆಂಧ್ರ ಪ್ರದೇಶ | |
ಕರ್ನಾಟಕ | |
ಮಹಾರಾಷ್ಟ್ರ | |
ಪಶ್ಚಿಮ ಬಂಗಾಳ |
ಇಂಡೋ-ಅಮೆರಿಕಾದ ಉದ್ಯಮಿ ಹಾಗೂ ಬಂಡವಾಳ ವ್ಯವಸ್ಥೆದಾರರಾದ ಶ್ರೀ ಗುರುರಾಜ್ ದೇಶಪಾಂಡೆ ಭಾರತದ ಅತಿ ದೊಡ್ಡ ‘ನವ್ಯೋದ್ಯಮ ವಿಕಸನ ತಾಣ’ (Start-up Incubator) ವನ್ನು ಕರ್ನಾಟಕದ ಹುಬ್ಬಳ್ಳಿಯಲ್ಲಿ ಪ್ರಾರಂಭಿಸಲಿದ್ದಾರೆ. ಈ ಯೋಜನೆಯಡಿ ಸ್ಥಳೀಯ ಉದ್ಯಮ ಸಮಸ್ಯಗಳನ್ನು ಗುರುತಿಸಿ ಅದಕ್ಕೆ ಪರಿಹಾರ ಮಾರ್ಗಗಳನ್ನು ಸೂಚಿಸಿ ನವ್ಯೋದ್ಯಮವನ್ನು ಉತ್ತೇಜಿಸುವುದು ಮೂಲ ಉದ್ದೇಶವಾಗಿದೆ. ಈ ತಾಣ ಸೆಪ್ಟಂಬರ್ 2017 ರಲ್ಲಿ ಕಾರ್ಯಾರಂಭ ಮಾಡಲಿದ್ದು ಸರಿಸುಮಾರು 200 ನವ್ಯೋದ್ಯಮಗಳಿಗೆ ಸ್ಥಳಾವಕಾಶ ಕಲ್ಪಿಸಲಿದೆ.
Question 10 |
10. ಪ್ರವಾಸೋದ್ಯಮದಲ್ಲಿ ಹೋಮ್ ಸ್ಟೇ ಯೋಜನೆಯನ್ನು ಪ್ರೋತ್ಸಾಹಿಸುವ ಸಲುವಾಗಿ, ಅಂತರ್ಜಾಲ ಪ್ರವಾಸಿ ಕಂಪನಿ ‘ಮೇಕ್ ಮೈ ಟ್ರಿಪ್’ ನೊಂದಿಗೆ ಯಾವ ರಾಜ್ಯದ ಪ್ರವಾಸೋದ್ಯಮ ಇಲಾಖೆ ಒಪ್ಪಂದ ಮಾಡಿಕೊಂಡಿದೆ?
ಮಧ್ಯಪ್ರದೇಶ | |
ಕರ್ನಾಟಕ | |
ಕೇರಳ | |
ಅಸ್ಸಾಂ |
[button link=”http://www.karunaduexams.com/wp-content/uploads/2017/02/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಫೆಬ್ರವರಿ-2-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ