ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,7,8,2017

Question 1

1. “4ನೇ ರೋಲ್ ಬಾಲ್ ವಿಶ್ವಕಪ್-2017” ಯಾವ ದೇಶದಲ್ಲಿ ನಡೆಯಲಿದೆ?

A
ಭಾರತ
B
ಬಾಂಗ್ಲದೇಶ
C
ಶ್ರೀಲಂಕಾ
D
ಪಾಕಿಸ್ತಾನ
Question 1 Explanation: 
ಬಾಂಗ್ಲದೇಶ

4ನೇ ರೋಲ್ ಬಾಲ್ ವಿಶ್ವಕಪ್-2017 ಬಾಂಗ್ಲದೇಶದ ರಾಜಧಾನಿ ಡಾಕಾದಲ್ಲಿ ಫೆಬ್ರವರಿ 17 ರಿಂದ 23 ರವರೆಗೆ ನಡೆಯಲಿದೆ. ಸುಮಾರು 45 ದೇಶಗಳಿಂದ 700ಕ್ಕೂ ಹೆಚ್ಚು ಸ್ಪರ್ಧಿಗಳು ಈ ವಿಶ್ವಕಪ್ ನಲ್ಲಿ ಭಾಗವಹಿಸಲಿದ್ದಾರೆ. 12 ಜನರನ್ನು ಒಳಗೊಂಡಿರುವ ಎರಡು ತಂಡಗಳ ನಡುವೆ ರೋಲ್ ಬಾಲ್ ಪಂದ್ಯ ನಡೆಯಲಿದೆ. 12 ಜನರ ಪೈಕಿ ಕೇವಲ ಆರು ಜನರು ಮಾತ್ರ ಕ್ರೀಡಾಂಗಣದಲ್ಲಿ ಆಡಲಿದ್ದಾರೆ.

Question 2

2. “ಜೊವೆನೆಲ್ ಮೊಯಿಸೆ (Jovenel Moise)” ರವರು ಯಾವ ದೇಶದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು?

A
ಹೈಟಿ
B
ಮೆಕ್ಸಿಕೊ
C
ಕ್ಯೂಬಾ
D
ಇಟಲಿ
Question 2 Explanation: 
ಹೈಟಿ

ಬಾಳೆಹಣ್ಣು ರಫ್ತುಗಾರ ಜೊವೆನೆಲ್ ಮೊಯಿಸೆ ಅವರು ಹೈಟಿ ದೇಶದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹೈಟಿಯಲ್ಲಿ ಸರಿ ಸುಮಾರು ಒಂದು ವರ್ಷಗಳ ರಾಜಕೀಯ ಅಸ್ಥಿರತೆ ತಲೆದೋರಿತ್ತು.

Question 3

3. ಟಿ20 ಪಂದ್ಯದಲ್ಲಿ ತ್ರಿಶತಕ ಬಾರಿಸಿ ದಾಖಲೆ ಬರೆದ ಕ್ರಿಕೆಟಿಗನನ್ನು ಗುರುತಿಸಿ?

A
ಮೋಹಿತ್ ಅಹಲಾವತ್
B
ಕಿರಣ್ ಕಾರ್ತಿಕ್
C
ಸ್ವರಾಜ್ ಸಿಂಗ್
D
ಮದನ್ ಠಾಕೂರ್
Question 3 Explanation: 
ಮೋಹಿತ್ ಅಹಲಾವತ್

21 ವರ್ಷ ವಯಸ್ಸಿನ ವಿಕೆಟ್ ಕೀಪರ್ ಬ್ಯಾಟ್ಮನ್ ಮೋಹಿತ್ ಅಹಲಾವತ್ ದೆಹಲಿಯ ಲಲಿತಾ ಪಾರ್ಕ್ನಲ್ಲಿ ನಡೆದ ಸ್ಥಳೀಯ ಫ್ರೆಂಡ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫ್ರೆಂಡ್ಸ್ ಇಲೆವೆನ್ ವಿರುದ್ಧ ಮಾವಿ ಇಲೆವೆನ್ ಪರ ಆಡಿ 39 ಸಿಕ್ಸ್ ಬಾರಿಸುವ ಮೂಲಕ ಕೇವಲ 72 ಬಾಲ್ಗೆ ಅಮೋಘ ತ್ರಿ ಶತಕ ಸಿಡಿಸಿ ಟಿ–20 ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಿಸಿದರು. ಅಹಲಾವತ್ 72 ಬಾಲ್ಗೆ 39 ಸಿಕ್ಸ್, 14 ಬೌಂಡ್ರಿ ಬಾರಿಸಿ ಅತ್ಯಂತ ಕಡಿಮೆ ಬಾಲ್ಗೆ 300 ರನ್ ಗಳಿಸಿದ ಕೀರ್ತಿಗೆ ಪಾತ್ರವಾಗಿದ್ದಾನೆ.

Question 4

4. ಆಹಾರ ಧಾನ್ಯಗಳ ವಿತರಣೆಗೆ ನಗದು ರಹಿತ ವ್ಯವಸ್ಥೆಯನ್ನು ಜಾರಿಗೆ ತಂದ ರಾಜ್ಯ ಯಾವುದು?

A
ಕರ್ನಾಟಕ
B
ಗುಜರಾತ್
C
ರಾಜಸ್ತಾನ
D
ತಮಿಳುನಾಡು
Question 4 Explanation: 
ಗುಜರಾತ್

ಗುಜರಾತ್ ಸರ್ಕಾರ ನಗದು ರಹಿತ ಆಹಾರ ವಿತರಣೆ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಫಲಾನುಭವಿಗಳು ಕೇವಲ ಆಧಾರ್ ಕಾರ್ಡ್ ತೋರಿಸುವ ಮೂಲಕ ಆಹಾರ ಧಾನ್ಯಗಳನ್ನು ಪಡೆಯಬಹುದಾಗಿದೆ. ಈ ಯೋಜನೆಯಡಿ ಫಲಾನುಭವಿಗಳನ್ನು ಸುಲಭವಾಗಿ ಗುರುತಿಸುವ ಮೂಲಕ ಹಂಚಿಕೆಯಲ್ಲಿ ಆಗಬಹುದಾದದ ಸೋರಿಕೆಯನ್ನು ತಡೆಯಬಹುದಾಗಿದೆ.

Question 5

5. ಈ ಕೆಳಗಿನ ಯಾರು ಸೋಮಾಲಿಯಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?

A
ಹಸನ್ ಶೇಖ್ ಮಹಮದ್
B
ಅಬ್ದುಲ್ಲಾ ಮಹಮದ್ ಫರ್ಮಾಜೂ
C
ಅಬ್ದುಲ್ಲಾ ಶೇಖ್ ಮಹಮದ್
D
ಸೈಯದ್ ಅಕ್ತಾರ್
Question 5 Explanation: 
ಅಬ್ದುಲ್ಲಾ ಮಹಮದ್ ಫರ್ಮಾಜೂ

ಸೋಮಾಲಿಯಾದ ನೂತನ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ಅಬ್ದುಲ್ಲಾ ಮಹಮದ್ ಫರ್ಮಾಜೂ ಅಧಿಕಾರ ವಹಿಸಿಕೊಂಡಿದ್ದಾರೆ. ಅಧ್ಯಕ್ಷರಾಗಿದ್ದ ಹಸನ್ ಶೇಖ್ ಮಹಮದ್ ನಿನ್ನೆ ನಡೆದ ಎರಡು ಸುತ್ತುಗಳ ಮತ ಎಣಿಕೆ ಬಳಿಕ ಪರಾಭವಗೊಂಡರು. ಸೋಮಾಲಿಯಾ ಮತ್ತು ಅಮೆರಿಕ ಪೌರತ್ವ ಹೊಂದಿರುವ ಫರ್ಮಾಜುರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಯಿತು. ಭೀಕರ ಬರಗಾಲ ಜೊತೆಗೆ ಹಲವಾರು ಜ್ವಲಂತ ಸಮಸ್ಯೆಗಳ ಸುಳಿಗೆ ಸಿಲುಕಿರುವ ಸೋಮಾಲಿಯಾ ಜನರ ಹಿತಾಸಕ್ತಿ ರಕ್ಷಿಸುವ ದೊಡ್ಡ ಹೊಣೆಗಾರಿಕೆ ಅವರ ಮೇಲಿದೆ.

Question 6

6. 2016 ಡಾ. ಬಿ. ಸಿ ರಾಯ್ ರಾಷ್ಟ್ರೀಯ ಪ್ರಶಸ್ತಿಗೆ ಯಾರನ್ನು ಆಯ್ಕೆಮಾಡಲಾಗಿದೆ?

A
ಪಿ ರಘು ರಾಮ್
B
ಜಯಶ್ರೀ ಮೆಹ್ತಾ
C
ರಾಮೇಶ್ವರ್ ಯಾದವ್
D
ಅನುಶ್ರೀ
Question 6 Explanation: 
ಪಿ ರಘು ರಾಮ್

ಸ್ತನ ಶಸ್ತ್ರಚಿಕಿತ್ಸೆ ಒಕ್ಕೂಟದ ಅಧ್ಯಕ್ಷ ಪಿ ರಘುರಾಮ್ ಅವರು 2016 ಡಾ. ಬಿ. ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ನೀಡುತ್ತಿರುವ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಜುಲೈ 1, ವೈದ್ಯರ ದಿನದಂದು ರಾಷ್ಟ್ರಪತಿಗಳು ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ.

Question 7

7. ಇತ್ತೀಚೆಗೆ ನಿಧನರಾದ “ಪಥಣಿ ಪಟ್ನಾಯಕ್” ಅವರು ಯಾವ ರಾಜ್ಯದ ಪ್ರಸಿದ್ದ ಸಾಹಿತಿ?

A
ಬಿಹಾರ
B
ಜಾರ್ಖಂಡ್
C
ಓಡಿಶಾ
D
ಪಶ್ಚಿಮ ಬಂಗಾಳ
Question 7 Explanation: 
ಓಡಿಶಾ

ಓಡಿಶಾದ ಖ್ಯಾತ ಲೇಖಕ, ಕವಿ, ಶಿಕ್ಷಣ ತಜ್ಞ ಪಥಣಿ ಪಟ್ನಾಯಕ್ ಅವರು ಓಡಿಶಾದ ಕಟಕ್ ನಲ್ಲಿ ನಿಧನರಾದರು. ಪಟ್ನಾಯಕ್ ರವರು ಓಡಿಶಾ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಣ್ಣ ಕಥೆ, ಕವನ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದರು. ಪಟ್ನಾಯಕ್ ಅವರ ಆತ್ಮಕಥೆ “ಜೀಬನರ ಚಾಲಪಥ”ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

Question 8

8. ಇತ್ತೀಚೆಗೆ ನಿಧನರಾದ “ಅಸಿಮ್ ಬಸು (Asim Basu)” ರವರು ಯಾವ ರಾಜ್ಯದ ಪ್ರಸಿದ್ದ ರಂಗಭೂಮಿ ನಟ?

A
ಕರ್ನಾಟಕ
B
ಗುಜರಾತ್
C
ಓಡಿಶಾ
D
ರಾಜಸ್ತಾನ
Question 8 Explanation: 
ಓಡಿಶಾ

ಪ್ರಸಿದ್ದ ರಂಗಭೂಮಿ ನಟ, ನಿರ್ದೇಶಕ, ಕಲಾ ನಿರ್ದೇಶಕ ಹಾಗೂ ಕಲಾವಿದ ಅಸಿಮ್ ಬಸು ರವರು ಓಡಿಶಾದ ಭುಬನೇಶ್ವರದಲ್ಲಿ ನಿಧನರಾದರು. ಓಡಿಶಾ ಸಿನಿಮಾಗಳಲ್ಲಿ ಕಲಾ ವಿನ್ಯಾಸಗಾರರಾಗಿ ಬಸು ಅವರು ಪ್ರಸಿದ್ದರಾಗಿದ್ದರು. ಸುಮಾರು 200ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದರು.

Question 9

9. ರೈಲ್ವೆ ವಲಯದಲ್ಲಿ ಸುರಕ್ಷತೆ ವಿಷಯಕ್ಕೆ ಸಂಬಂಧಿಸಿದಂತೆ ಯಾವ ದೇಶದೊಂದಿಗೆ ಭಾರತ ತಾಂತ್ರಿಕ ಒಪ್ಪಂದಕ್ಕೆ ಸಹಿ ಹಾಕಿತು?

A
ಜರ್ಮನಿ
B
ಜಪಾನ್
C
ಇಟಲಿ
D
ರಷ್ಯಾ
Question 9 Explanation: 
ಇಟಲಿ

ಕೇಂದ್ರ ರೈಲ್ವೆ ಸಚಿವಾಲಯ ಇತ್ತೀಚೆಗೆ ರೈಲ್ವೆ ವಲಯದಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಇಟಲಿಯ ಸಾರ್ವಜನಿಕ ರೈಲ್ವೆ ಸಂಸ್ಥೆ ಫೆರೊವೆ ಡೆಲ್ಲೊ ಸ್ಟಟೊ ಇಟಾಲಿಯನೆ ಗ್ರೂಫ್ ನೊಂದಿಗೆ ಸಹಿಹಾಕಿದೆ. ರೈಲ್ವೆ ವಲಯದಲ್ಲಿ ಸುರಕ್ಷಿತ ಲೆಕ್ಕತಪಾಸಣೆ ಸೇರಿದಂತೆ ರೈಲ್ವೆ ಸಂಚಾರದಲ್ಲಿ ಹೊಸ ತಂತ್ರಜ್ಞಾನಗಳ ಮೂಲಕ ರಕ್ಷಣಾ ಕ್ರಮಗಳನ್ನು ಹೆಚ್ಚಿಸುವುದು ಒಪ್ಪಂದದ ಮುಖ್ಯ ಉದ್ದೇಶ.

Question 10

10. ಈ ಕೆಳಗಿನ ಯಾವ ರಾಜ್ಯದಲ್ಲಿ ರುಬೆಲ್ಲಾ-ದಡಾರ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು?

A
ಕರ್ನಾಟಕ
B
ತಮಿಳುನಾಡು
C
ಆಂಧ್ರ ಪ್ರದೇಶ
D
ಮಹಾರಾಷ್ಟ್ರ
Question 10 Explanation: 
ಕರ್ನಾಟಕ

ಕೇಂದ್ರ ಆರೋಗ್ಯ ಸಚಿವಾಲಯ ರುಬೆಲ್ಲಾ-ದಡಾರ ಕಾಯಿಲೆಗಳ ವಿರುದ್ದ ಲಸಿಕೆ ಕಾರ್ಯಕ್ರಮಕ್ಕೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಚಾಲನೆ ನೀಡಿತು. ಈ ಕಾರ್ಯಕ್ರಮದಡಿ ದೇಶದ 41 ಕೋಟಿ ಮಕ್ಕಳಿಗೆ ಲಸಿಕೆಯನ್ನು ಹಾಕುವ ಗುರಿಯನ್ನು ಹೊಂದಲಾಗಿದೆ. ಕರ್ನಾಟಕ, ತಮಿಳುನಾಡು, ಪುದುಚೇರಿ, ಲಕ್ಷದ್ವೀಪ ಹಾಗೂ ಗೋವಾದಲ್ಲಿ ಈ ಕಾರ್ಯಕ್ರಮ ಚಾಲನೆಗೊಂಡಿದೆ. ಕಾರ್ಯಕ್ರಮದಡಿ 9 ತಿಂಗಳಿಂದ 15 ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುವುದು.

There are 10 questions to complete.

[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಫೆಬ್ರವರಿ-782017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.