ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,9,10,2017
Question 1 |
1.2017 ಭೌದ್ದಿಕ ಆಸ್ತಿ ಸೂಚ್ಯಂಕ (Intellectual Property Index) ದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
43 | |
34 | |
59 | |
61 |
2017 ಭೌದ್ದಿಕ ಆಸ್ತಿ ಸೂಚ್ಯಂಕದಲ್ಲಿ 45 ಪ್ರಮುಖ ರಾಷ್ಟ್ರಗಳ ಪೈಕಿ ಭಾರತ 43ನೇ ಸ್ಥಾನವನ್ನು ಪಡೆದುಕೊಂಡಿದೆ. ಅಮೆರಿಕ, ಯುಕೆ ಮತ್ತು ಜರ್ಮನಿ ಮೊದಲ ಮೂರು ಸ್ಥಾನದಲ್ಲಿವೆ. ಯುನೈಟೆಡ್ ಚೇಂಬರ್ ಆಫ್ ಕಾಮರ್ಸ್ ಈ ಸೂಚ್ಯಂಕವನ್ನು ಹೊರತರುತ್ತಿದೆ.
Question 2 |
ಮಿಷನ್-IX-ಮಿಲಿಯನ್ | |
ಮಿಷನ್- XI- ಮಿಲಿಯನ್ | |
ಮಿಷನ್-XII- ಮಿಲಿಯನ್ | |
ಮಿಷನ್-XV- ಮಿಲಿಯನ್ |
ಶಾಲಾ ಮಕ್ಕಳಲ್ಲಿ ಪುಟ್ಬಾಲ್ ಆಟವನ್ನು ಪ್ರೇರೆಪಿಸುವ ಸಲುವಾಗಿ ಕೇಂದ್ರ ಯುವ ವ್ಯವಹಾರ ಹಾಗೂ ಕ್ರೀಡಾ ಖಾತೆ ರಾಜ್ಯ ಸಚಿವ ವಿಜಯ್ ಗೋಯೆಲ್ ಅವರು “ಮಿಷನ್- XI- ಮಿಲಿಯನ್” ಕ್ರೀಡಾ ಯೋಜನೆಗೆ ಚಾಲನೆ ನೀಡಿದರು. ದೇಶವ್ಯಾಪ್ತಿ ಸುಮಾರು 11 ಮಿಲಿಯನ್ ಶಾಲೆ ಮಕ್ಕಳಲ್ಲಿ ಪುಟ್ಬಾಲ್ ಕ್ರೀಡೆಯ ಬಗ್ಗೆ ಸ್ಪೂರ್ತಿಯನ್ನು ರೂಪಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
Question 3 |
3. ಪ್ರಪ್ರಥಮ “ರಾಷ್ಟ್ರೀಯ ಮಹಿಳಾ ಸಂಸದರ (National Women’s Parliament)” ಸಮಾವೇಶ ಯಾವ ರಾಜ್ಯದಲ್ಲಿ ಆಯೋಜಿಸಲಾಗಿತ್ತು?
ಆಂಧ್ರ ಪ್ರದೇಶ | |
ತಮಿಳುನಾಡು | |
ಮಹಾರಾಷ್ಟ್ರ | |
ಕರ್ನಾಟಕ |
ಆಂಧ್ರ ಪ್ರದೇಶದ ಅಮರಾವತಿಯಲ್ಲಿ ಪ್ರಪ್ರಥಮ “ರಾಷ್ಟ್ರೀಯ ಮಹಿಳಾ ಸಂಸದರ (National Women’s Parliament)” ಸಮಾವೇಶ ಇತ್ತೀಚೆಗೆ ಜರುಗಿತು. ಆಂಧ್ರ ಪ್ರದೇಶ ವಿಧಾನ ಸಭೆ ಈ ಸಮಾವೇಶವನ್ನು ಆಯೋಜಿಸಿತ್ತು. “ಎಂಪರಿಂಗ್ ವುವೆನ್-ಸ್ಟ್ರೆಂತನಿಂಗ್ ಡೆಮಾಕ್ರಸಿ” ಸಮಾವೇಶದ ಧ್ಯೇಯವಾಕ್ಯ.
Question 4 |
4. ನೊಬೆಲ್ ಪ್ರಶಸ್ತಿ ವಿಜೇತ “ಸರ್ ಪೀಟರ್ ಮ್ಯಾನ್ಸ್ ಫೀಲ್ಡ್” ಇತ್ತೀಚೆಗೆ ನಿಧನರಾದರು. ಇವರು ಯಾವ ದೇಶಕ್ಕೆ ಸೇರಿದವರು?
ಫ್ರಾನ್ಸ್ | |
ಇಂಗ್ಲೆಂಡ್ | |
ಅಮೆರಿಕ | |
ರಷ್ಯಾ |
ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್ (MRI) ಖ್ಯಾತಿ, ನೊಬೆಲ್ ಪುರಸ್ಕೃತ ಸರ್ ಪೀಟರ್ ಮ್ಯಾನ್ಸ್ ಫೀಲ್ಡ್” ನಿಧನರಾದರು. 2003 ರಲ್ಲಿ ಇವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿತ್ತು.
Question 5 |
5. 18ನೇ ಏಷ್ಯಾ ಜೂನಿಯರ್ ಟೀಂ ಸ್ಕ್ವಾಷ್ ಚಾಂಪಿಯನ್ ಷಿಪ್ ನಲ್ಲಿ ಪ್ರಶಸ್ತಿ ಗೆದ್ದ ರಾಷ್ಟ್ರ ಯಾವುದು?
ಭಾರತ | |
ಚೀನಾ | |
ಪಾಕಿಸ್ತಾನ | |
ಶ್ರೀಲಂಕಾ |
ಭಾರತ ತಂಡ 18ನೇ ಏಷ್ಯಾ ಜೂನಿಯರ್ ಸ್ಕ್ವಾಷ್ ಚಾಂಪಿಯನ್ ಷಿಪ್ ನಲ್ಲಿ ಮಲೇಷಿಯಾ ತಂಡವನ್ನು 2-0 ರಲ್ಲಿ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಆ ಮೂಲಕ ಎರಡನೇ ಬಾರಿಗೆ ಈ ಚಾಂಪಿಯನ್ ಷಿಪ್ ನಲ್ಲಿ ಭಾರತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. 2011 ರಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
Question 6 |
6. ಭಾರತೀಯ ಷೇರು ವಿನಿಮಯ ನಿಯಂತ್ರಣ ಮಂಡಳಿ (ಸೆಬಿ)ಯ ನೂತನ ಅಧ್ಯಕ್ಷರು ಯಾರು?
ಅಜಯ್ ತ್ಯಾಗಿ | |
ಸೌರವ್ ಕೊಠಾರಿ | |
ಮನೀಷ್ ಸಿಂಗ್ | |
ಅನೂಪ್ ಮಜ್ನು |
1984ನೇ ಬ್ಯಾಚಿನ ಹಿರಿಯ ಐಎಎಸ್ ಅಧಿಕಾರಿ ಅಜಯ್ ತ್ಯಾಗಿ ಅವರು ಸೆಬಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಮಾರ್ಚ್ 1, 2017 ರಂದು ಯು.ಕೆ.ಸಿನ್ಹಾ ಅವರು ನಿವೃತ್ತಿ ಹೊಂದಲಿದ್ದು, ಅವರ ಸ್ಥಾನವನ್ನು ತ್ಯಾಗಿ ತುಂಬಲಿದ್ದಾರೆ.
Question 7 |
ಐಐಟಿ, ಮುಂಬೈ | |
ಐಐಟಿ, ಖರಗಪುರ್ | |
ಐಐಟಿ, ಮದ್ರಾಸ್ | |
ಐಐಟಿ, ಇಂದೋರ್ |
Question 8 |
8. ಈ ಕೆಳಗಿನ ಯಾವ ರಾಜ್ಯ ಸರ್ಕಾರ ಇತ್ತೀಚೆಗೆ ಹಳ್ಳಿಗಳ ಅಭಿವೃದ್ದಿಗಾಗಿ “ಮುಖ್ಯಮಂತ್ರಿ ಸಮಗ್ರ ಗ್ರಾಮ್ಯ ಉನ್ನಾಯನ್ ಯೋಜನೆ”ಯನ್ನು ಜಾರಿಗೆ ತಂದಿದೆ?
ಸಿಕ್ಕಿಂ | |
ಅರುಣಾಚಲ ಪ್ರದೇಶ | |
ಅಸ್ಸಾಂ | |
ನಾಗಲ್ಯಾಂಡ್ |
ಅಸ್ಸಾಂ ಮುಖ್ಯಮಂತ್ರಿ ಸರಬನಂದ ಸೊನೊವಾಲ್ ಅವರು ಇತ್ತೀಚೆಗೆ ಮುಖ್ಯಮಂತ್ರಿ ಸಮಗ್ರ ಗ್ರಾಮ್ಯ ಉನ್ನಾಯನ್ ಯೋಜನೆಗೆ ಚಾಲನೆ ನೀಡಿದರು. ಹಳ್ಳಿಗಳನ್ನು ಸಮಗ್ರವಾಗಿ ಅಭಿವೃದ್ದಿಪಡಿಸುವುದು ಯೋಜನೆಯ ಮುಖ್ಯ ಗುರಿ. ಇದಕ್ಕಾಗಿ ರೂ 30,000 ಕೋಟಿಯನ್ನು ಮುಂದಿನ ಐದು ವರ್ಷಗಳಲ್ಲಿ ವ್ಯಯಿಸಲಾಗುವುದು.
Question 9 |
9. ದೃಷ್ಠಿ ಮಾಂದ್ಯರಿಗಾಗಿ ವಿಶ್ವದ ಮೊದಲ ಬ್ರೈಲಿ ಅಟ್ಲಾಸ್ ಅನ್ನು ಯಾವ ದೇಶದಲ್ಲಿ ಪರಿಚಯಿಸಲಾಯಿತು?
ಭಾರತ | |
ರಷ್ಯಾ | |
ಜಪಾನ್ | |
ಜರ್ಮನಿ |
ವಿಶ್ವದ ಮೊದಲ ಬ್ರೈಲಿ ಅಟ್ಲಾಸ್ ಅನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಡಾ. ಹರ್ಷವರ್ಧನ್ ರಾಥೋಡ್ ಅವರು ಬಿಡುಗಡೆಗೊಳಿಸಿದರು. “ಅಟ್ಲಾಸ್ ಫಾರ್ ವಿಷುಯಲಿ ಇಂಪೆರ್ಡ್” ನ್ಯಾಷನಲ್ ಅಟ್ಲಾಸ್ & ಥೆಮಾಟಿಕ್ ಮ್ಯಾಪಿಂಗ್ ಆರ್ಗನೇಸೆಷನ್” ಅಭಿವೃದ್ದಿಪಡಿಸಿದೆ.
Question 10 |
10. 4ನೇ BIMSTEC (ಬಿಮ್ ಸ್ಟೆಕ್) ಶೃಂಗಸಭೆ-2017 ಯಾವ ದೇಶದಲ್ಲಿ ನಡೆಯಲಿದೆ?
ಭಾರತ | |
ನೇಪಾಳ | |
ಶ್ರೀಲಂಕಾ | |
ಬಾಂಗ್ಲದೇಶ.
|
ನಾಲ್ಕನೇ ಬಿಮ್ ಸ್ಟೆಕ್ ಶೃಂಗಸಭೆ ನೇಪಾಳದಲ್ಲಿ ನಡೆಯಲಿದೆ. ಬಿಮ್ ಸ್ಟೆಕ್ ಅನ್ನು 1997 ರಲ್ಲಿ ಸ್ಥಾಪಿಸಲಾಗಿದ್ದು, ಭೂತಾನ್, ಬಾಂಗ್ಲದೇಶ, ಭಾರತ, ಮ್ಯಾನ್ಮಾರ್, ಶ್ರೀಲಂಕಾ ಮತ್ತು ಥಾಯ್ಲೆಂಡ್ ಇದರ ಸದಸ್ಯ ರಾಷ್ಟ್ರಗಳಾಗಿವೆ.
[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಫೆಬ್ರವರಿ-9102017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ