ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,21,22,2017
Question 1 |
1. ಈ ಕೆಳಗಿನ ಯಾರನ್ನು “2016 ವ್ಯಾಸ ಸಮ್ಮಾನ್ ಪ್ರಶಸ್ತಿ”ಗೆ ಆಯ್ಕೆಮಾಡಲಾಗಿದೆ?
ಸುರೇಂದ್ರ ವರ್ಮಾ | |
ಜಿ ಎಸ್ ಶಿವರುದ್ರಪ್ಪ | |
ಸುನೀತಾ ಜೈನ್ | |
ಶಕುಂತಲಾ ಸಿಂಗ್ |
ಪ್ರಸಿದ್ದ ಹಿಂದಿ ಲೇಖಕ ಸುರೇಂದ್ರ ವರ್ಮಾ ಅವರನ್ನು 2016 ವ್ಯಾಸ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಸುರೇಂದ್ರ ವರ್ಮಾ ಅವರ ಕಾದಂಬರಿ “ಕಾತ್ನ ಶಮಿ ಕ ವೃಕ್ಷ: ಪದ್ಮ ಪಂಖೂರಿ ಕಿ ಧರ್ ಸೆ” ಗೆ ಪ್ರಶಸ್ತಿ ಲಭಿಸಿದೆ.
Question 2 |
2. “ಶರ್ಹೋಜೆಲಿ ಲೆಜಿಟ್ಸು” ಯಾವ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ?
ಮಣಿಪುರ | |
ಸಿಕ್ಕಿಂ | |
ನಾಗಲ್ಯಾಂಡ್ | |
ತ್ರಿಪುರ |
ನಾಗಲ್ಯಾಂಡ್ ಪೀಪಲ್ಸ್ ಫ್ರಂಟ್ ಅಧ್ಯಕ್ಷ ಶರ್ಹೋಜೆಲಿ ಲೆಜಿಟ್ಸು ಅವರನ್ನು ನೂತನ ಮುಖ್ಯಮಂತ್ರಿಯಾಗಿ ಸರ್ವಾನುಮತದಿಮದ ಆಯ್ಕೆ ಮಾಡಲಾಗಿದೆ. ಇದೇ 22ರಂದು ಲೆಜಿಟ್ಸು ಅವರು ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Question 3 |
3. ಇತ್ತೀಚೆಗೆ ನಿಧನರಾದ ಮಾಜಿ ಸಂಸದ ಜಾಂಬುವಂತರಾವ್ ದೋತೆ ಯಾವ ಹೆಸರಿನಿಂದ ಪ್ರಖ್ಯಾತರಾಗಿದ್ದರು?
ವಿದರ್ಭಾ ಸಿಂಹ | |
ಮಹಾರಾಷ್ಟ್ರ ಕೇಸರಿ | |
ವಿದರ್ಭಾ ಕೇಸರಿ | |
ನಾಗಪುರ ಸಿಂಹ |
ವಿದರ್ಭಾ ವಿಶೇಷ ಸ್ಥಾನಮಾನಕ್ಕಾಗಿ ಹೋರಾಡಿದ್ದ ಮಾಜಿ ಸಂಸದ "ವಿದರ್ಭಾ ಸಿಂಹ" ಖ್ಯಾತಿಯ ಜಾಂಬುವಂತರಾವ್ ದೋತೆ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ವಿದರ್ಭಾ ವಿಶೇಷ ಸ್ಥಾನಮಾನಕ್ಕಾಗಿ ಹೋರಾಡಿದ್ದ ಜಾಂಬುವಂತರಾವ್ ದೋತೆ ಅವರು 2002ರಲ್ಲಿ ವಿದರ್ಭಾ ಜನತಾ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದರು. ಅಲ್ಲದೆ ನಾಗ್ಪುರದಿಂದ ಸ್ಪರ್ಧಿಸಿ ಗೆದ್ದು ಸಂಸದರೂ ಕೂಡ ಆಗಿದ್ದರು.
Question 4 |
4. “2017 ರೊಟ್ಟರ್ಡಮ್ ಟೆನ್ನಿಸ್ ಟೂರ್ನಮೆಂಟ್” ಗೆದ್ದುಕೊಂಡ “ಜೊ ವಿಲ್ಫ್ರೆಡ್ ತ್ಸೊಂಗ” ಯಾವ ದೇಶದವರು?
ಫ್ರಾನ್ಸ್ | |
ಬ್ರೆಜಿಲ್ | |
ಬೆಲ್ಜಿಯಂ | |
ರಷ್ಯಾ |
ಫ್ರಾನ್ಸ್ ನ “ಜೊ ವಿಲ್ಫ್ರೆಡ್ ತ್ಸೊಂಗ” ಅವರು 2017 ರೊಟ್ಟರ್ಡಮ್ ಟೆನ್ನಿಸ್ ಟೂರ್ನಮೆಂಟ್ ನಲ್ಲಿ ಡೇವಿಡ್ ಗೊಫಿನ್ ಅವರನ್ನು ಮಣಿಸಿ ಪ್ರಶಸ್ತಿಯನ್ನು ಗೆದ್ದುಕೊಂಡರು.
Question 5 |
5. “2017 ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ” ದಲ್ಲಿ ಭಾರತ ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ?
133 | |
143 | |
96 | |
105 |
2017 ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 143ನೇ ಸ್ಥಾನವನ್ನು ಪಡೆದುಕೊಂಡಿದೆ. ಅಮೆರಿಕದ ಚಿಂತಕರ ಚಾವಡಿ “ದಿ ಹೆರಿಟೇಜ್ ಫೌಂಡೇಶನ್” ಈ ಸೂಚ್ಯಂಕವನ್ನು ಬಿಡುಗಡೆಗೊಳಿಸಿದೆ. ಈ ವರ್ಷದ ಸೂಚ್ಯಂಕದಲ್ಲಿ ಹಾಂಕಾಂಗ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಸಿಂಗಪುರ ಮತ್ತು ನ್ಯೂಜಿಲ್ಯಾಂಡ್ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
Question 6 |
6. 2017 ನ್ಯಾಷನ್ ಎಂಎಸ್ಎಂಇ ಎಕ್ಸಲೆನ್ಸ್ ಪ್ರಶಸ್ತಿಯನ್ನು ಪಡೆದುಕೊಂಡ ಸಾರ್ವಜನಿಕ ವಲಯದ ಬ್ಯಾಂಕ್ ಯಾವುದು?
ಕಾರ್ಪೋರೇಶನ್ ಬ್ಯಾಂಕ್ | |
ಭಾರತೀಯ ಸ್ಟೇಟ್ ಬ್ಯಾಂಕ್ | |
ಕೆನರಾ ಬ್ಯಾಂಕ್ | |
ಸಿಂಡಿಕೇಟ್ ಬ್ಯಾಂಕ್ |
ಮಂಗಳೂರು ಮೂಲದ ಕಾರ್ಪೋರೇಶನ್ ಬ್ಯಾಂಕ್ 2017 ನ್ಯಾಷನ್ ಎಂಎಸ್ಎಂಇ ಎಕ್ಸಲೆನ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
Question 7 |
7. ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿಯನ್ನು ಆರಂಭಿಸುವ ಸಲುವಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದೊಂದಿಗೆ ಯಾವ ಬ್ಯಾಂಕ್ ಒಪ್ಪಂದಕ್ಕೆ ಸಹಿ ಹಾಕಿದೆ?
ಕೆನರಾ ಬ್ಯಾಂಕ್ | |
ವಿಜಯಾ ಬ್ಯಾಂಕ್ | |
ಭಾರತೀಯ ಸ್ಟೇಟ್ ಬ್ಯಾಂಕ್ | |
ಫೆಡರಲ್ ಬ್ಯಾಂಕ್ |
ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿಯನ್ನು ಆರಂಭಿಸುವ ಸಲುವಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದೊಂದಿಗೆ ಕೆನರಾ ಬ್ಯಾಂಕ್ ಒಪ್ಪಂದಕ್ಕೆ ಸಹಿ ಹಾಕಿದೆ. ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿಯನ್ನು ಐಐಟಿ/ಐಐಎಂ/ಎನ್ಐಟಿ ಗಳಲ್ಲಿ ವಿಶ್ವ ದರ್ಜೆಯ ಲ್ಯಾಬ್ ಗಳನ್ನು ಅಭಿವೃದ್ದಿಗೊಳಿಸಲು ಬಳಸಲಾಗುವುದು.
Question 8 |
8. ಇತ್ತೀಚೆಗೆ ನಿಧನರಾದ ವೇದ ಪ್ರಕಾಶ್ ಅವರು ಯಾವ ಭಾಷೆಯ ಪ್ರಸಿದ್ದ ಕಾದಂಬರಿಕಾರ?
ಹಿಂದಿ | |
ಉರ್ದು | |
ಗುಜರಾತಿ | |
ಮರಾಠಿ |
ಖ್ಯಾತ ಹಿಂದಿ ಕಾದಂಬರಿಕಾರ ವೇದ್ಪ್ರಕಾಶ್ ಶರ್ಮ ಕೊನೆಯುಸಿರೆಳೆದರು. ಅವರಿಗೆ 62 ವರ್ಷ ವಯಸ್ಸಾಗಿತ್ತು. 176 ಕಾದಂಬರಿಗಳನ್ನು ಬರೆದಿದ್ದ ಅವರು, ಕೆಲವು ಹಿಂದಿ ಸಿನೆಮಾಗಳಿಗೆ ಸಾಹಿತ್ಯವನ್ನೂ ರಚಿಸಿದ್ದರು. ಉತ್ತರಪ್ರದೇಶದ ಮೀರತ್ನಲ್ಲಿ ಜನಿಸಿದ್ದ ಶರ್ಮ, ಆರಂಭದ ದಿನಗಳಲ್ಲಿ ಗುಪ್ತನಾಮದಲ್ಲಿ 23 ಕಾದಂಬರಿ ಬರೆದು ಪ್ರಕಟಿಸಿದ್ದರು. 1973ರಲ್ಲಿ ತಮ್ಮ 'ದಹೆಕ್ತೆ ಶಹರ್' ಕಾದಂಬರಿಯಿಂದ ಪ್ರಸಿದ್ದಿಯನ್ನು ಪಡೆದರು. 'ಖೈದಿ ನಂ.100, ವರ್ದಿ ವಾಲಾ ಗೂಂಡ' ಮುಂತಾದ ಕಾದಂಬರಿಗಳು ಅತ್ಯಂತ ಹೆಚ್ಚು ಮಾರಾಟವಾದ ದಾಖಲೆಗೆ ಪಾತ್ರವಾಗಿದ್ದವು. ಆರಕ್ಕೂ ಹೆಚ್ಚು ಹಿಂದಿ ಸಿನೆಮಾಗಳಿಗೆ ಸಾಹಿತ್ಯ ರಚಿಸಿದ್ದು , ಇವರ 'ಬಹು ಮಾಂಗೆ ಇನ್ಸಾಫ್' ಕಾದಂಬರಿಯನ್ನು 1985ರಲ್ಲಿ ಹಿಂದಿಯಲ್ಲಿ ಸಿನೆಮಾ ಮಾಡಲಾಗಿತ್ತು. 1992ರ 'ಅನಾಮ್', 1995ರ 'ಸಬ್ಸೆ ಬಡಾ ಖಿಲಾಡಿ' ಸಿನೆಮಾದ ಕಥೆಗೆ ಇವರ ಕಾದಂಬರಿ ಮೂಲವಾಗಿತ್ತು. 1999ರಲ್ಲಿ ಬಿಡುಗಡೆಯಾದ 'ಇಂಟರ್ನ್ಯಾಷನಲ್ ಖಿಲಾಡಿ' ಸಿನೆಮಾದ ಸಾಹಿತ್ಯ ರಚನೆ ಇವರದಾಗಿತ್ತು. ಕೇಶವ ಪಂಡಿತ್ ಎಂಬ ಕಲ್ಪಿತ ವ್ಯಕ್ತಿತ್ವವನ್ನು ಆಧಾರವಾಗಿಟ್ಟುಕೊಂಡು ಹಲವಾರು ಕಾದಂಬರಿ ಮತ್ತು ಟಿವಿ ಧಾರಾವಾಹಿ ರಚಿಸಿದ್ದರು. 1992 ಮತ್ತು 94ರಲ್ಲಿ ಮೀರತ್ ರತ್ನ ಪ್ರಶಸ್ತಿ ಪಡೆದಿದ್ದರು.
Question 9 |
9. ಬಾರನ್ ದ್ವೀಪ ಪ್ರದೇಶ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿದೆ?
ಅಂಡಮಾನ್ ಮತ್ತು ನಿಕೋಬರ್ | |
ಕೇರಳ | |
ಅಸ್ಸಾಂ | |
ಲಕ್ಷದ್ವೀಪ |
ಅಂಡಮಾನ್ ರಾಜಧಾನಿ ಪೋರ್ಟ್ ಬ್ಲೇರ್ ನಿಂದ 140 ಕಿ.ಮೀ ಈಶಾನ್ಯ ಭಾಗದಲ್ಲಿ ಬಾರನ್ ದ್ವೀಪವಿದೆ. ಇತ್ತೀಚೆಗೆ ಇಲ್ಲಿನ ಜ್ವಾಲಾಮುಖಿ 150 ವರ್ಷಗಳ ಬಳಿಕ ಸಕ್ರಿವಾಗಿದ್ದು ಬೂದಿಯನ್ನು ಉಗುಳುತ್ತಿದೆ ಎಂದು ಗೋವಾದಲ್ಲಿರುವ ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆಯ ತಜ್ಞರು ಹೇಳಿದ್ದಾರೆ. ಇದು ಭಾರತದ ಏಕೈಕ ಜ್ವಾಲಾಮುಖಿ ಆಗಿದೆ.
Question 10 |
10. ಭಾರತದ ಮೊದಲ ಕ್ರೀಡಾ ಧ್ಯೇಯ ಆಧರಿತ ಸಾಹಿತ್ಯ ಉತ್ಸವ “SporTale” ಯಾವ ನಗರದಲ್ಲಿ ಆಯೋಜಿಸಲಾಗಿತ್ತು?
ಪುಣೆ | |
ಚೆನ್ನೈ | |
ನವ ದೆಹಲಿ | |
ಬೆಂಗಳೂರು |
ಪುಣೆಯಲ್ಲಿ ದೇಶದ ಮೊದಲ ಕ್ರೀಡಾ ಧ್ಯೇಯ ಆಧರಿತ ಸಾಹಿತ್ಯ ಉತ್ಸವ “SporTale” ಫೆಬ್ರವರಿ 2 ರಿಂದ ಎರಡು ದಿನಗಳ ಕಾಲ ಜರುಗಿತು.
[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಫೆಬ್ರವರಿ-21222017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Comment
Comment