ಕೇಂದ್ರ ಜಲ ಆಯೋಗದ ಮುಖ್ಯಸ್ಥರಾಗಿ ನರೇಂದ್ರ ಕುಮಾರ್ ನೇಮಕ
ಕೇಂದ್ರ ಜಲ ಆಯೋಗದ ಮುಖ್ಯಸ್ಥರಾಗಿ ನರೇಂದ್ರ ಕುಮಾರ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.
ನರೇಂದ್ರ ಕುಮಾರ್ ಬಗ್ಗೆ:
- ನರೇಂದ್ರ ಕುಮಾರ್ ಅವರು ಕೇಂದ್ರ ಜಲ ಎಂಜನಿಯರಿಂಗ್ ಸೇವೆಯ 1979ನೇ ಬ್ಯಾಚ್ ನ ಅಧಿಕಾರಿ. ನೇಮಕಾತಿ ಮುಂಚೆ ಕುಮಾರ್ ಅವರು ಆಯೋಗದ ಸದಸ್ಯರಾಗಿ 2014 ರಿಂದ ಸೇವೆ ಸಲ್ಲಿಸುತ್ತಿದ್ದರು.
- ಕೇಂದ್ರ ಜಲ ಆಯೋಗದ ವಿನ್ಯಾಸ ಇಲಾಖೆಯ ಸಹಾಯಕ ನಿರ್ದೇಶಕರಾಗಿ, ಅಣೆಕಟ್ಟು ಸುರಕ್ಷತೆ ಸಂಸ್ಥೆಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ವಿವಿಧ ಇಲಾಖೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಕೇಂದ್ರ ಜಲ ಆಯೋಗ:
- ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ದಿ ಹಾಗೂ ಗಂಗಾ ಪುನರ್ಜ್ಜೀವನ ಸಚಿವಾಲಯದಡಿ ಈ ಆಯೋಗ ಕಾರ್ಯನಿರ್ವಹಿಸುತ್ತಿದೆ. ಜಲ ಸಂಪನ್ಮೂಲಕ್ಕೆ ಸಂಬಂಧಿಸಿದ ದೇಶದ ಅತ್ಯುನ್ನತ ತಾಂತ್ರಿಕ ಸಂಸ್ಥೆ ಇದಾಗಿದೆ.
- ದೇಶದಾದ್ಯಂತ ಜಲ ಸಂಪನ್ಮೂಲಗಳ ನಿಯಂತ್ರಣ, ಬಳಕೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ರಾಜ್ಯಗಳೊಂದಿಗೆ ಸಮಾಲೋಚಿಸಿ ಯೋಜನೆಗಳನ್ನು ಜಾರಿಗೆ ತರುವುದು ಆಯೋಗದ ಹೊಣೆಗಾರಿಕೆ.
ಪಂಜಾಬ್ ಮುಡಿಗೆ 2017 ಸಂತೋಷ್ ಪುಟ್ಬಾಲ್ ಟ್ರೋಫಿ
ಪಂಜಾಬ್ ತಂಡ 71ನೇ ಸಂತೋಷ್ ಪುಟ್ಬಾಲ್ ಟ್ರೋಫಿ ಟೂರ್ನಮೆಂಟ್ ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ರೈಲ್ವೆ ತಂಡವನ್ನು 2-1 ಗೋಲುಗಳಿಂದ ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
- ಪಂಜಾಬ್ ಗೆ ಇದು ಒಂಬತ್ತನೇ ಸಂತೋಪ್ ಟ್ರೋಫಿಯಾಗಿದೆ.
- ಪಂಜಾಬ್ ತಂಡದ ಪರವಾಗಿ ರಾಜ್ಬೀರ್ ಸಿಂಗ್ ಅವರು ಎರಡು ಗೋಲುಗಳನ್ನು ಗಳಿಸಿ ತಂಡವನ್ನು ಜಯದ ದಡಕ್ಕೆ ತಲುಪಿಸಿದರು.
ಸಂತೋಷ್ ಟ್ರೋಫಿ:
- ಸಂತೋಷ್ ಟ್ರೋಫಿ ಭಾರತದಲ್ಲಿ ವಾರ್ಷಿಕವಾಗಿ ಆಯೋಜಿಸುವ ಪುಟ್ಬಾಲ್ ಟೂರ್ನಮೆಂಟ್ ಆಗಿದೆ. 1941 ರಲ್ಲಿ ಸ್ಥಾಪಿಸಲಾಗಿದೆ.
ಮದ್ರಾಸ್ ಐಐಟಿಗೆ “2017 ಐಇಇಇ ಸ್ಪೆಕ್ಟ್ರಂ ಟೆಕ್ನಾಲಜಿ ಪ್ರಶಸ್ತಿ(IEEE Spectrum Technology)”
ಮದ್ರಾಸಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಭಿವೃದ್ದಿಪಡಿಸಿರುವ ಸೋಲಾರ್ ಇನ್ವರ್ಟರ್ ವ್ಯವಸ್ಥೆಗೆ 2017 ಐಇಇಇ ಸ್ಪೆಕ್ಟ್ರಂ ಟೆಕ್ನಾಲಜಿ ಪ್ರಶಸ್ತಿ ಲಭಿಸಿದೆ. ಈ ವಿನೂತನ ತಂತ್ರಜ್ಞಾನವನ್ನು ಐಐಟಿ ಮದ್ರಾಸಿನ ಸೆಂಟರ್ ಫಾರ್ ಡಿಸೆಂಟ್ರಲೈಸ್ಡ್ ಪವರ್ ಸಿಸ್ಟಂ ಅಭಿವೃದ್ದಿಪಡಿಸಿದೆ. ಮೈಕ್ರೋ ಗ್ರಿಡ್ ತಂತ್ರಜ್ಞಾನವನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ.
ಪ್ರಮುಖಾಂಶಗಳು:
- ಈ ವಿನೂತನ ವ್ಯವಸ್ಥೆಯು ಗೃಹ ಬಳಕೆಗೆ ಬಳಸುವ 230Vಎಸಿ ಕರೆಂಟ್ ಅನ್ನು 48V ಡಿಸಿ ಕರೆಂಟ್ ಆಗಿ ಪರಿವರ್ತಿಸುತ್ತದೆ.
- ಮೇಲ್ಚಾವಣೆಯಲ್ಲಿ ಅಳವಡಿಸುವ ಸೌರ ಫಲಕಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಡಿಸಿ ಸೌರ ವಿದ್ಯುತ್ ಉತ್ಪಾದನೆ, ಡಿಸಿ ವಿದ್ಯುತ್ ವರ್ಗಾವಣೆ ಹಾಗೂ ಡಿಸಿ ವಿದ್ಯುತ್ ಉಪಕರಣಗಳಿಗೆ ಈ ವ್ಯವಸ್ಥೆಯಿಂದ ಭಾರಿ ಅನುಕೂಲವಾಗಲಿದೆ.
- ರಾಜಸ್ತಾನದ ಜೋದ್ ಪುರ ಹಾಗೂ ಜೈಸಲ್ಮೇರ್ ಹಾಗೂ ಅಸ್ಸಾಂ ರಾಜ್ಯಗಳ ಸಾಕಷ್ಟು ಮನೆಗಳಲ್ಲಿ ಈಗಾಗಲೇ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
- ಅಲ್ಲದೇ ಕರ್ನಾಟಕ, ಒಡಿಶಾ, ತಮಿಳುನಾಡು, ಆಂಧ್ರ ಮತ್ತು ತೆಲಂಗಣದ ಗ್ರಾಮೀಣ ಪ್ರದೇಶಗಳಲ್ಲೂ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
Sir Santosh trophy Punjab win agilla to win agiroda west bangal
The Punjab football team has won the 71st Santosh Trophy football tournament by defeating Railways in the final by 2-1 goals in Goa. It was the 9th Santosh Trophy for Punjab.