“ಬಯೋನಿಕ್ ಲೀಫ್ 2.0” ದೃವ ಇಂಧನ ಉತ್ಪಾದಿಸುವ ಕೃತಕ ಎಲೆ ಆವಿಷ್ಕಾರ
ನೈಸರ್ಗಿಕವಾಗಿ ಸಸ್ಯಗಳು ಸೂರ್ಯನ ಕಿರಣಗಳನ್ನು ಬಳಸಿ ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಆಹಾರ ತಯಾರಿಸುವ ರೀತಿಯಲ್ಲೆ ಕಾರ್ಯನಿರ್ವಹಿಸಬಲ್ಲ ಕೃತಕ ಎಲೆಯನ್ನು ಹಾರ್ವಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅನ್ವೇಷಿಸಿದ್ದಾರೆ. ಈ ಎಲೆಗೆ “ಬಯೋನಿಕ್ ಲೀಫ್ 2.0” ಎಂದು ಕರೆಯಲಾಗಿದ್ದು, ಸೂರ್ಯನ ಕಿರಣಗಳನ್ನು ಬಳಸಿ ನೀರನ್ನು ಆಮ್ಲಜನಕ ಮತ್ತು ಜಲಜನಕವಾಗಿ ಬೇರ್ಪಡಿಸಿ ದೃವ ಇಂಧನ ಉತ್ಪಾದಿಸಬಹುದಾಗಿದೆ.
- ಬಯೋನಿಕ್ ಲೀಫ್ 2.0 ಸಸ್ಯಗಳಿಗಿಂತಲೂ 10 ಪಟ್ಟು ಹೆಚ್ಚು ಶಕ್ತಿಯನ್ನು ಹೊಂದಿದೆ
- ಈ ಎಲೆಯಿಂದ ಬಳಕೆಗೆ ಯೋಗ್ಯವಾದ ಇಂಧನವನ್ನು ಸುಲಭವಾಗಿ ಸೃಷ್ಟಿಸಬಹುದಾಗಿದೆ
- ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಲುವಾಗಿ ಈಗಾಗಲೇ ಸಿದ್ದತೆ ನಡೆದಿದ್ದು, ಅತ್ಯುತ್ತಮ ಆವಿಷ್ಕಾರ ಎನಿಸಲಿದೆ.
ಪರಾಶರ್ ಕುಲಕರ್ಣಿ ರವರ “ಕೌ ಅಂಡ್ ಕಂಪನಿ” ಗೆ ಕಾಮನ್ ವೆಲ್ತ್ ಸಣ್ಣ ಕಥೆ ಪ್ರಶಸ್ತಿ
ಭಾರತೀಯ ಪರಾಶರ್ ಕುಲಕರ್ಣಿ ರವರ “ಕೌ ಅಂಡ್ ಕಂಪನಿ” ಕಥೆಗೆ ಕಾಮನ್ ವೆಲ್ತ್ ಸಣ್ಣ ಕಥೆ ಪ್ರಶಸ್ತಿ ಲಭಿಸಿದೆ. ಈ ಮೂಲಕ ಚೊಚ್ಚಲ ಬಾರಿಗೆ ಭಾರತ ಮತ್ತು ಭಾರತೀಯರೊಬ್ಬರಿಗೆ ಈ ಪ್ರಶಸ್ತಿ ಸಂದಂತಾಗಿದೆ. ಜೂನ 5 ರಂದು ನಡೆದ ಜಮೈಕಾದಲ್ಲಿ ನಡೆದ ಕಾಲಬಾಶ್ ಸಾಹಿತ್ಯ ಹಬ್ಬದಲ್ಲಿ ಕುಲಕರ್ಣಿ ರವರಿಗೆ ಈ ಪ್ರಶಸ್ತಿಯನ್ನು ವಿತರಿಸಲಾಯಿತು.
- ಕುಲಕರ್ಣಿ ರವರು ಪ್ರಸ್ತುತ ಸಿಂಗಾಪುರದ ಯೇಲ್ ಎನ್ ಯು ಎಸ್ ಕಾಲೇಜಿನಲ್ಲಿ ಸಮಾಜ ವಿಜ್ಞಾನ ಸಹಾಯಕ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವದ 47 ರಾಷ್ಟ್ರಗಳ ಸುಮಾರು 4000 ಕಥೆಗಳ ನಡುವೆ ಪರಾಶರ್ ರವರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
- 1990 ರ ದಶಕದಲ್ಲಿ ನಡೆದ ಈ ಕಥೆ ಭಾರತದಲ್ಲಿ ನಡೆಯುವ ಸನ್ನಿವೇಶಗಳ ಸಂಕಲನವಾಗಿದೆ.
ಕಾಮನ್ ವೆಲ್ತ್ ಸಣ್ಣ ಕಥೆಪ ಪ್ರಶಸ್ತಿ
- ವಾರ್ಷಿಕವಾಗಿ ಈ ಪ್ರಶಸ್ತಿಯನ್ನು ಅಪ್ರಕಟಗೊಳ್ಳದ ಅತ್ಯುತ್ತಮ ಸಣ್ಣ ಕಥೆ ನೀಡಲಾಗುತ್ತಿದೆ
- ಈ ಪ್ರಶಸ್ತಿಗೆ ಕಾಮಲ್ ವೆಲ್ತ್ ರಾಷ್ಟ್ರಗಳ 18 ವರ್ಷ ತುಂಬಿದ ಎಲ್ಲರು ಅರ್ಹರಾಗಿರುತ್ತಾರೆ
- ಈ ಪ್ರಶಸ್ತಿಯನ್ನು 2012 ರಿಂದ ನೀಡಲಾಗುತ್ತಿದ್ದು, ಪ್ರಶಸ್ತಿಯು ರೂ 4.8 ಲಕ್ಷ ಬಹುಮಾನ ಹೊಂದಿದೆ.