ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಗುರಿಗಿಂತಲೂ ಹೆಚ್ಚು ಸಾಲ ವಿತರಣೆ

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 2016-17ನೇ ಸಾಲಿಗೆ ನಿಗದಿಪಡಿಸಲಾಗಿದ್ದ ಗುರಿಗಿಂತಲೂ ಹೆಚ್ಚು ಸಾಲವನ್ನು ವಿತರಿಸಲಾಗಿದೆ. 2016-17ನೇ ಸಾಲಿನಲ್ಲಿ ರೂ 1.8 ಲಕ್ಷ ಕೋಟಿ ಸಾಲದ ಗುರಿಯನ್ನು ಹೊಂದಲಾಗಿದ್ದು, 1,80,087 ಕೋಟಿ ಸಾಲವನ್ನು ನೀಡಲಾಗಿದೆ. ಈ ಸಾಲದಲ್ಲಿ ರೂ 1.23 ಕೋಟಿ ಸಾಲವನ್ನು ಬ್ಯಾಂಕಿನ ಮುಖಾಂತರ ವಿತರಿಸಲಾಗಿದ್ದರೆ, ರೂ 57,000 ಕೋಟಿ ಸಾಲವನ್ನು ಬ್ಯಾಂಕಿನೇತರ ಸಂಸ್ಥೆಗಳ ಮೂಲಕ ವಿತರಿಸಲಾಗಿದೆ. ಈ ವರ್ಷದ ಬಜೆಟ್ ನಲ್ಲಿ 2017-18ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ 2.44 ಲಕ್ಷ ಕೋಟಿ ಗುರಿಯನ್ನು ಹೊಂದಲಾಗಿದೆ.

  • ಸುಮಾರು 4 ಕೋಟಿ ಜನರು ಯೋಜನೆಯಡಿ ಸಾಲವನ್ನು ಪಡೆದಿದ್ದಾರೆ. ಇದರಲ್ಲಿ ಶೇ 70% ಮಹಿಳೆಯರು ಎಂಬುದು ಗಮನಾರ್ಹ. ಶೇ 20% ಎಸ್.ಸಿ, ಶೇ 5% ಎಸ್.ಟಿ ಜನಾಂಗಕ್ಕೆ ಸೇರಿದವರಾಗಿದ್ದಾರೆ.
  • ಕಡಿಮೆ ದಾಖಲೆಗಳ ಅಗತ್ಯತೆ, ಸುಲಭವಾಗಿ ಸಾಲ ದೊರೆಯುವುದು ಹಾಗೂ ಗ್ಯಾರಂಟಿದಾರರ ಅಗತ್ಯತೆ ಇಲ್ಲದಿರುವುದು ಮುದ್ರಾ ಯೋಜನೆ ಅತ್ಯಂತ ಯಶಸ್ವಿಯಾಗಲು ಕಾರಣವಾಗಿದೆ.

ಮುದ್ರಾ ಯೋಜನೆ:

ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಭಾರತ ಸರ್ಕಾರದ ಒಂದು ಪ್ರಮುಖ ಯೋಜನೆ ಯಾಗಿದೆ.  MUDRA ಎಂದರೆ Micro Unit Development and Refinance Agency ಎಂದರ್ಥ. “ಅನಿಧಿತರಿಗೆ  ನಿಧಿ” ಒದಗಿಸುವುದರ ಮೂಲಕ ಉದ್ಯಮಗಳು, ಔಪಚಾರಿಕ ಆರ್ಥಿಕ ವ್ಯವಸ್ಥೆಗೆ ಉತ್ತಮ ಮುನ್ನುಡಿ ಬರೆಯುವುದು ಯೋಜನೆಯ ಉದ್ದೇಶ. ಇದು ಸಣ್ಣ ಮತ್ತು ಅತಿಸಣ್ಣ ಉದ್ಯಮದಾರರಿಗೆ ಕೃಷಿಯೇತರ ಆದಾಯದ ಚಟುವಟಿಕೆಗಳಿಗೆ ಸರ್ಕಾರಿ ವಲಯದ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕ್, ವಿದೇಶಿ ಬ್ಯಾಂಕುಗಳು, ಕಿರು ಹಣಕಾಸು ಸಂಸ್ಥೆಗಳು (MFI) ಮತ್ತು ನಾನ್ ಬ್ಯಾಂಕಿಂಗ್ ಹಣಕಾಸು ಕಂಪನಿಗಳು (NBFC) ಇವುಗಳ ಮೂಲಕ ಹತ್ತು ಲಕ್ಷ ರೂಪಾಯಿ ವರಿಗೆ ಸಾಲಪಡೆಯಲು ಅವಕಾಶ ಕಲ್ಪಿಸಿದೆ. ಈ ಯೋಜನೆಯನ್ನು ಮಾನ್ಯ ಪ್ರಧಾನ ಮಂತ್ರಿಗಳು 8 ನೇ ಏಪ್ರಿಲ್, 2015 ರಂದು ಉದ್ಘಾಟಿಸಿದರು.

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ, ಈ ಕೆಳಗಿನ ಸಾಲ ಯೋಜನೆಗಳು ಲಭ್ಯವಿರುತ್ತದೆ:

ಶಿಶು: ರೂ . 50,000/- ವರೆಗೆ ಒಳಗೊಂಡ ಸಾಲ

ಕಿಶೋರ್: – ರೂ 50,000 /- ದಿಂದ ರೂ 5 ಲಕ್ಷ ವರೆಗೆ ಸಾಲ

ತರುಣ್: ರೂ 5 ಲಕ್ಷ ದಿಂದ ರೂ. 10 ಲಕ್ಷ ವರೆಗೆ ಸಾಲ

ಉಲ್ಲೇಖಿತ  ‘ಶಿಶು’, ‘ಕಿಶೋರ್’ ಮತ್ತು ‘ತರುಣ್’ ಹೆಸರುಗಳು  ಫಲಾನುಭವಿಗಳ /ವಾಣಿಜ್ಯೋದ್ಯಮಿ ಗಳ  ಬೆಳವಣಿಗೆ / ಅಭಿವೃದ್ಧಿ ಮತ್ತು ಹಣಕಾಸು ಅಗತ್ಯಗಳನ್ನು ಹಂತ ಹಂತ ವಾಗಿ ಪ್ರತಿನಿಧಿಸುತ್ತದೆ.

ಭಾರತ-ಆಸ್ಟ್ರೇಲಿಯಾ ಕ್ರೀಡಾ ಸಹಭಾಗಿತ್ವ (IASP)ಕ್ಕೆ ಚಾಲನೆ

ಕ್ರೀಡಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡುವ ಸಲುವಾಗಿ “ಭಾರತ-ಆಸ್ಟ್ರೇಲಿಯಾ ಕ್ರೀಡಾ ಸಹಭಾಗಿತ್ವ (India-Australia Sports Partnership)”ಗೆ ಚಾಲನೆ ನೀಡಲಾಗಿದೆ. ಭಾರತ ಭೇಟಿಯಲ್ಲಿರುವ ಆಸ್ಟ್ರೇಲಿಯಾದ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ಹಾಗೂ ಕೇಂದ್ರ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವ ವಿಜಯ್ ಗೋಯೆಲ್ ಅವರು ಚಾಲನೆ ನೀಡಿದರು. ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡಲ್ಕೂರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. IASP ಯಡಿ ಭಾರತ ಮತ್ತು ಆಸ್ಟ್ರೇಲಿಯಾ ಈ ಕೆಳಗಿನ ನಾಲ್ಕು ಕ್ಷೇತ್ರದಲ್ಲಿ ಸಹಕಾರ ನೀಡಲಿದೆ.

  • ಅಥ್ಲೇಟ್ ಮತ್ತು ಕೋಚ್ ಗಳ ತರಭೇತಿ ಹಾಗೂ ಅಭಿವೃದ್ದಿ
  • ಕ್ರೀಡಾ ವಿಜ್ಞಾನ
  • ಕ್ರೀಢಾ ಆಢಳಿತ ಮತ್ತು ಸಮಗ್ರತೆ
  • ತಳಮಟ್ಟದ ಪಾಲ್ಗೊಳ್ಳುವಿಕೆ.

ಈ ಸಹಭಾಗಿತ್ವದ ಅಡಿಯಲ್ಲಿ ವಿಕ್ಟೋರಿಯಾ ವಿಶ್ವವಿದ್ಯಾಲಯ ಹಾಗೂ  ಕೆನ್ಬರಾ ವಿಶ್ವವಿದ್ಯಾಲಯ ಭಾರತದಲ್ಲಿ “ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ”ವನ್ನು ಸ್ಥಾಪಿಸಲಿವೆ.

ಪ್ರತಿದಿನ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಪರಿಷ್ಕರಣೆ

ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಮೇ 1ರಿಂದ ಪ್ರತಿದಿನವೂ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ಬೆಲೆ ಪರಿಷ್ಕರಣೆ ಮಾಡಲು ಸರ್ಕಾರಿ ಸ್ವಾಮ್ಯದ ತೈಲಸಂಸ್ಥೆಗಳು ನಿರ್ಧರಿಸಿವೆ. ಈ ನಿರ್ಣಯದಿಂದ  ಗ್ರಾಹಕರು ಪ್ರತಿದಿನ ಹೊಸ ದರದಂತೆ ಖರೀದಿಸಬೇಕಾಗುತ್ತದೆ. ಇದು ದೇಶದ ಪ್ರಮುಖ ಐದು ನಗರಗಳಲ್ಲಿ ಮೊದಲಿಗೆ ಪ್ರಾಯೋಗಿಕವಾಗಿ ಜಾರಿಯಾಗಲಿದೆ ಎಂದು ವರದಿ ತಿಳಿಸಿದೆ. ಸರ್ಕಾರಿ ಸ್ವಾ,ಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಗಳು ದೇಶಾದ್ಯಂತ ಸುಮಾರು 58 ಸಾವಿರ ಪೆಟ್ರೋಲ್ ಬಂಕ್ ಗಳನ್ನು ಹೊಂದಿದ್ದು, ಶೇ 95% ಪಾಲು ಹೊಂದಿರುವ ಈ ಸಂಸ್ಥೆಗಳು ಪ್ರಾಥಮಿಕ ಹಂತದಲ್ಲಿ ಪ್ರಾಯೋಗಿಕವಾಗಿ ದೇಶದ ಐದು ನಗರಗಳಲ್ಲಿ ಜಾರಿಗೆ ತರಲಿವೆ.  ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶವನ್ನು ಪರಿಗಣಿಸಿ ದೇಶದ ಇತರೆ ನಗರಗಳಿಗೆ ವಿಸ್ತರಿಸಲಾಗುವುದು.

ಪ್ರಸ್ತುತ ದರ ನಿರ್ಧರಣೆ ಹೇಗೆ?

ಪ್ರಸ್ತುತ ತೈಲ ನಿರ್ಧರಣೆಯ ಸ್ವಾತಂತ್ರವನ್ನು ತೈಲ ಸಂಸ್ಥೆಗಳು ಹೊಂದಿವೆ. ಪ್ರತಿ ತಿಂಗಳು 1ನೇ ದಿನಾಂಕ ಹಾಗೂ 16ನೇ ದಿನಾಂಕದಂದು ಅಂತಾರಾಷ್ಟ್ರೀಯ ತೈಲ ಬೆಲೆಯ ಸರಾಸರಿ ಪ್ರಮಾಣಕ್ಕೆ ಅನುಗುಣವಾಗಿ ತೈಲ ಬೆಲೆಯನ್ನು ಪರಿಷ್ಕರಿಸಲಾಗುತ್ತಿದೆ.

ಯಾವ ನಗರಗಳು?

ಪಾಂಡಿಚೇರಿ, ಆಂಧ್ರಪ್ರದೇಶದ ವೈಝಾಗ್, ರಾಜಸ್ಥಾನದ ಉದಯ್ ಪುರ್, ಜಾರ್ಖಂಡ್ ನ ಜೇಮ್ಶೆಡ್ಪುರ್ ಮತ್ತು ಚಂಡೀಗಢ್

 

ಚೂರುಪಾರು:

ಹರಿಯಾಣ ಸರ್ಕಾರದಿಂದ ಆಪರೇಷನ್ ದುರ್ಗಾ: ಉತ್ತರ ಪ್ರದೇಶದ “ಆಂಟಿ ರೋಮಿಯೊ” ಪಡೆಯಂತೆ ಹರಿಯಾಣ ಸರ್ಕಾರ ಮಹಿಳೆಯರ ಸುರಕ್ಷತೆಗಾಗಿ “ಆಪರೇಷನ್ ದುರ್ಗಾ”ಗೆ ಚಾಲನೆ ನೀಡಿದೆ. ಈ ಕಾರ್ಯಾಚರಣೆಯಡಿ ಮುಖ್ಯಮಂತ್ರಿಗಳ ಪ್ಲೈಯಿಂಗ್ ಪಡೆ ರಚಿಸಿರುವ ತಂಡಗಳು ಶಾಲೆ, ಕಾಲೇಜು, ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಗಸ್ತು ತಿರುಗಲಿದ್ದು, ಮಹಿಳೆಯರನ್ನು ಚೇಡಿಸುವುದು, ಲೈಂಗಿಕ ಕಿರುಕುಳ ನೀಡುವುದು ಹಾಗೂ ಅವರೊಂದಿಗೆ ಅಸಭ್ಯವಾಗಿ ವರ್ತನೆ ಮಾಡುವವರ ಮೇಲೆ ನಿಗಾವಹಿಸುವ ಕಾರ್ಯ ಮಾಡಲಿದೆ.

ಜಾರ್ಖಂಡ್ ಪೊಲೀಸರಿಂದ “ತಾರೇ ಜಮೀನ್ ಪರ್” ಅಭಿಯಾನ: ಜಾರ್ಖಂಡಿನ ಪಲಮ ಜಿಲ್ಲೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮಕ್ಕಳಲ್ಲಿ ಭಯ ತೊಲಗಿಸಿ ನಂಬಿಕೆಯನ್ನು ಸೃಜಿಸುವ ಸಲುವಾಗಿ ಜಾರ್ಖಂಡ್ ಪೊಲೀಸರು “ತಾರೆ ಜಮೀನ್ ಪರ್” ಅಭಿಯಾನವನ್ನು ಆರಂಭಿಸಿದ್ದಾರೆ. ಅಭಿಯಾನದ ಅಂಗವಾಗಿ ಮಕ್ಕಳಿಗೆ ಬ್ಯಾಗ್, ಬಟ್ಟೆ, ಶೋ ಮತ್ತು ಪುಸ್ತಕಗಳನ್ನು ಕೊಡುಗೆಯಾಗಿ ನೀಡುವಂತೆ ಸ್ಥಳೀಯರ ಮನವೊಲಿಸಲಿದ್ದಾರೆ.

ಗಿರೀಶ್ ಚಂದ್ರ ಸಕ್ಸೆನಾ ನಿಧನ: ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಗಿರೀಶ್ ಚಂದ್ರ ಸಕ್ಸೆನಾ ಅವರು ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಸಕ್ಸೆನಾ ಅವರು 1950ನೇ ಬ್ಯಾಚಿನ ಉತ್ತರ ಪ್ರದೇಶ ಕ್ಯಾಡೆರ್ ಐಪಿಎಸ್ ಅಧಿಕಾರಿ.

One Thought to “ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,13,14,2017”

  1. plz sir april month current affairences complete maadi

Leave a Comment

This site uses Akismet to reduce spam. Learn how your comment data is processed.