ವಿಸ್ತಡೋಮ್ ಗಾಜು ಲೇಪಿತ (Vistadome Glass Ceiling) ರೈಲು ಬೋಗಿಗಳಿಗೆ ಚಾಲನೆ

ದೇಶದ ಮೊದಲ ಗಾಜು ಲೇಪಿತ ರೈಲು ಬೋಗಿ ವಿಶಾಖಪಟ್ಟಣಂ-ಕಿರಂದುಲ್ ಪ್ಯಾಸೇಂಜರ್ ರೈಲಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಭುಬನೇಶ್ವರದಿಂದ ವಿಡಿಯೋ ಮೂಲಕ ಉದ್ಘಾಟನೆ ಮಾಡಿದರು. ದೇಶದಲ್ಲೆ ಮೊದಲ ಬಾರಿಗೆ ವಿಸ್ತಡೋಮ್ ಗಾಜು ಲೇಪಿತ ಬೋಗಿಯನ್ನು ರೈಲ್ವೆ ಇಲಾಖೆ ಪರಿಚಯಿಸಿದ್ದು, ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಇದರ ಉದ್ದೇಶ. 40 ಆಸನಗಳನ್ನು ಹೊಂದಿರುವ ಈ ಬೋಗಿಯನ್ನು ಚೆನ್ನೈನ “ಇಂಟಿಗ್ರಲ್ ಕೋಚ್ ಪ್ಯಾಕ್ಟರಿ” ತಯಾರಿಸಿದೆ. ಸುಮಾರು ರೂ 3.38 ಕೋಟಿ ವೆಚ್ಚದಲ್ಲಿ ಈ ಬೋಗಿಯನ್ನು ತಯಾರಿಸಲಾಗಿದೆ. ಪ್ರಾಯೋಗಿಕವಾಗಿ ಒಂದು ಬೋಗಿಯನ್ನು ಮಾತ್ರ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಬೇರೆ ಮಾರ್ಗಗಳ ರೈಲಿಗೂ ಅಳವಡಿಸಲಾಗುವುದು.

ವೈಶಿಷ್ಟ್ಯತೆಗಳು:

  • ವಿಸ್ತಡೋಮ್ ಬೋಗಿ ಹಲವು ವೈಶಿಷ್ಟ್ಯತೆಗಳಿಂದ ಕೂಡಿದೆ. ಗಾಜಿನ ಚಾವಣಿ, ಎಲ್ಇಡಿ ದೀಪಗಳು, ತಿರುಗುವ ಆಸನಗಳು, ಜಿಪಿಎಸ್ ಆಧಾರಿತ ಮಾಹಿತಿ ಹಾಗೂ ಡೊಡ್ಡ ಗಾಜಿನ ಕಿಟಕಿಗಳನ್ನು ಹೊಂದಿದೆ.
  • ವಿಶಾಖಪಟ್ಟಂನಿಂದ ಅರಕು ವ್ಯಾಲಿಯ ವರಗಿನ 128 ಕಿ.ಮೀ ಉದ್ದದ ರೈಲು ಮಾರ್ಗದ ಸೊಬಗನ್ನು ಸವಿಯಬಹುದಾಗಿದೆ.
  • 360 ಡಿಗ್ರಿ ತಿರುಗುವ ಆಸನವನ್ನು ಹೊಂದಿರುವುದು ಬೋಗಿಯ ಪ್ರಮುಖ ವಿಶೇಷವಾಗಿದ್ದು, ಪ್ರವಾಸಿಗರಿಗೆ ಅದ್ಬುತ ಅನುಭವ ನೀಡಲಿದೆ.

ಸಾಗರ್ ಬಹೇತಿ: ಬೋಸ್ಟನ್ ಮ್ಯಾರಥಾನ್ ನಲ್ಲಿ ಸ್ಪರ್ಧಿಸಲಿರುವ ಭಾರತದ ಮೊದಲ ದೃಷ್ಟಿಹೀನ ರನ್ನರ್

ಪ್ರತಿಷ್ಠಿತ ಬೋಸ್ಟನ್ ಮ್ಯಾರಥಾನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ದೃಷ್ಟಿಹೀನ ರನ್ನರ್ ಎಂಬ ಖ್ಯಾತಿಗೆ ಸಾಗರ್ ಬಹೇತಿ ಅವರು ದಾಖಲೆ ಬರೆದಿದ್ದಾರೆ. 31 ವರ್ಷದ ಬೆಂಗಳೂರು ಮೂಲದ ಬಹೇತಿ ಅವರು 42.16 ಕಿ.ಮೀ ದೂರವನ್ನು ನಾಲ್ಕು ಗಂಟೆಗಳಲ್ಲಿ ಕ್ರಮಿಸಿದರು. ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಮ್ಯಾರಥಾನಲ್ಲಿ ಬಹೇತಿ ಅವರು 121ನೇ ಆವೃತ್ತಿಯ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದರು.

  • ಸಾಗರ್ ಅಂಧ ಹಾಗೂ ದೃಷ್ಟಿಹೀನ ಸಂಸ್ಥೆಯಾದ ಮೆಸಾಚುಸೆಟ್ಸ್ ಅಸೋಸಿಯೇಷನ್ ಫಾರ್ ಬ್ಲೈಂಡ್ ಬೆಂಬಲದೊಂದಿಗೆ ಮ್ಯಾರಥಾನ್​ನಲ್ಲಿ ಪಾಲ್ಗೊಂಡರು.
  • ವೃತ್ತಿಯಲ್ಲಿ ಉದ್ಯಮಿಯಾಗಿರುವ ಸಾಗರ್ ಅವರು ಚಿಕ್ಕ ವಯಸ್ಸಿನಲ್ಲಿಯೇ ಕಣ್ಣಿನ ಅಕ್ಷಿಪಟಲದ ಸಮಸ್ಯೆ ಎದುರಿಸಿದ್ದರು, 2013ರ ವೇಳೆಗೆ ಸಂಪೂರ್ಣವಾಗಿ ಅಂಧರಾಗಿ ಬಿಟ್ಟಿದ್ದರು.
  • ಬಿಬ್ ನಂಬರ್ 26652 ಧರಿಸಿ ಓಡಿದ್ದ ಸಾಗರ್, ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಅಂತಿಮ ಗೆರೆ ಮುಟ್ಟಿದ್ದರು.

ಬೋಸ್ಟನ್ ಯಾಕೆ ಕಠಿಣ?

ವಿಶ್ವದ ಇತರೆಡೆ ನಡೆಯುವ ಮ್ಯಾರಥಾನ್​ಗಳಲ್ಲಿ ಸ್ಪರ್ಧಿಸಬೇಕೆಂದರೆ ನೋಂದಣಿ ಮಾಡಿಕೊಂಡರೆ ಸಾಕು. ಆದರೆ, ಬೋಸ್ಟನ್ ಮ್ಯಾರಥಾನ್​ನಲ್ಲಿ ಸ್ಪರ್ಧಿಸಲು ಅರ್ಹತಾ ಸಮಯ ಮುಖ್ಯವಾಗಿತ್ತದೆ. 18 ರಿಂದ 34 ವರ್ಷದ ಪುರುಷರಿಗೆ 3 ಗಂಟೆ 5 ನಿಮಿಷದ ಅರ್ಹತಾ ಸಮಯದ ಮಾನದಂಡವಿದ್ದರೆ, ದೃಷ್ಟಿಹೀನ ಪುರುಷ ಹಾಗೂ ಮಹಿಳಾ ರನ್ನರ್​ಗಳು ಮ್ಯಾರಥಾನ್​ಗೆ ಅರ್ಹತೆ ಪಡೆಯಬೇಕಾದಲ್ಲಿ 5 ಗಂಟೆಯ ಒಳಗಾಗಿ ರೇಸ್ ಕ್ರಮಿಸಿರಬೇಕು.

One Thought to “ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,18,2017”

Leave a Comment

This site uses Akismet to reduce spam. Learn how your comment data is processed.