ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,21,22,2017
Question 1 |
1. ಯಾವ ಜಿಲ್ಲೆಯನ್ನು “ಕಾರ್ಬನ್ ನ್ಯೂಟ್ರಲ್ (ಇಂಗಾಲ ಸ್ಥಿರ)’ ಆದ ಭಾರತದ ಪ್ರಪ್ರಥಮ ಜಿಲ್ಲೆ ಎಂದು ಘೋಷಿಸಲಾಗಿದೆ?
ವಿಶಾಕಪಟ್ಟಣ | |
ನಳಂದ | |
ಮಜುಲಿ | |
ಟವಾಂಗ್ |
ಅಸ್ಸಾಂ ನ ಮಜುಲಿ ಜಿಲ್ಲೆಯನ್ನು ಭಾರತದ ಪ್ರಪ್ರಥಮ ‘ಕಾರ್ಬನ್ ನ್ಯೂಟ್ರಲ್’ ಜಿಲ್ಲೆಯನ್ನಾಗಿ ಮಾಡುವ ಅಭಿಯಾನವನ್ನು ಪ್ರಾರಂಭಿಸಿದೆ ಈ ಮೂಲಕ ಜೀವ ವೈವಿದ್ಯ ಉಳಿಸುವ ಕಾರ್ಯವನ್ನು ಪ್ರೋತ್ಸಾಹಿಸಲಿದೆ.
Question 2 |
2. ಮಾನವ ಅಭಿವೃದ್ಧಿ ಸೂಚ್ಯಾಂಕ 2017 ರ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
121 | |
131 | |
145 | |
152 |
ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದಡಿ ಕೈಗೊಂಡ ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಒಟ್ಟು 188 ದೇಶಗಳ ಪಟ್ಟಿಯಲ್ಲಿ ಭಾರತ 131 ನೇ ಸ್ಥಾನದಲ್ಲಿದೆ. ಭಾರತವನ್ನು ‘ಸಾಮಾನ್ಯ ಮಾನವಾಭಿವೃದ್ಧಿ’ ವಲಯದಲ್ಲಿ ಗುರುತಿಸಲಾಗಿದ್ದು, ಈ ವಲಯದಲ್ಲಿ ಬಾಂಗ್ಲಾದೇಶ, ಭೂತಾನ್, ಪಾಕಿಸ್ತಾನ, ಕೀನ್ಯಾ, ಮ್ಯಾನ್ಮರ್ ಮತ್ತು ನೇಪಾಳ ದೇಶಗಳೂ ಸಹ ಇವೆ. ನಾರ್ವೆ ದೇಶ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಆಸ್ಟ್ರೇಲಿಯ ಮತ್ತು ಸ್ವಿಟ್ಜರ್ಲ್ಯಾಂಡ್ ನಂತರದ ಸ್ಥಾನಗಳಲ್ಲಿವೆ.
Question 3 |
3. 2017 ಜಾಗತಿಕ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡಿರುವ “ಮ್ಯಾಗ್ಗಿ ಮ್ಯಾಕ್ ಡೊನೆಲ್ (Maggie MacDonnell)” ಯಾವ ದೇಶದವರು?
ಜಪಾನ್ | |
ಕೆನಡಾ | |
ಅಮೆರಿಕ | |
ಫ್ರಾನ್ಸ್ |
ಕೆನಡಾದ ಮ್ಯಾಗ್ಗಿ ಮ್ಯಾಕ್ ಡೊನೆಲ್ ಅವರು 2017ನೇ ಸಾಲಿನ ಜಾಗತಿಕ ಶಿಕ್ಷಕ ಪ್ರಶಸ್ತಿ (Global Teacher Award)ಗೆ ಭಾಜನರಾಗಿದ್ದಾರೆ. ಕೆನಡಾ ಅರ್ಕಾಟಿಕ್ ನಲ್ಲಿರುವ ತನ್ನ ಗ್ರಾಮ ಸಲ್ಲೂಟ್ ನಲ್ಲಿ ವಿದ್ಯಾರ್ಥಿಗಳ ಜೀವನವನ್ನು ಬದಲಾಯಿಸಿದಕ್ಕಾಗಿ ಹಾಗೂ ಅತಿ ಹೆಚ್ಚು ಆತ್ಮಹತ್ಯೆಗೆ ಒಳಗಾಗುತ್ತಿದ್ದ ಈ ಹಳ್ಳಿಯಲ್ಲಿ ತನ್ನ ಸಮುದಾಯದವರನ್ನು ಮನ ಪರಿವರ್ತಿಸಿದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸಲ್ಲೂಟ್ ಗ್ರಾಮ ಹಿಮ ಮತ್ತು ಮಂಜಿನಿಂದ ಆವೃತ್ತವಾದ ವಿಶ್ವದ ದೂರ ಪ್ರದೇಶಗಳಲ್ಲಿ ಒಂದು.
Question 4 |
4. ಈ ಕೆಳಗಿನ ಯಾವ ದಿನದಂದು “ವಿಶ್ವ ಕವನ ದಿನ (World Peotry Day)”ವನ್ನು ಆಚರಿಸಲಾಗುತ್ತದೆ?
ಮಾರ್ಚ್ 21 | |
ಮಾರ್ಚ್ 22 | |
ಮಾರ್ಚ್ 23 | |
ಮಾರ್ಚ್ 24 |
ವಿಶ್ವ ಕವನ ದಿನವನ್ನು ಪ್ರತಿ ವರ್ಷ ಮಾರ್ಚ್ 21ರಂದು ಆಚರಿಸಲಾಗುತ್ತದೆ.
Question 5 |
5. ಈ ಕೆಳಗಿನ ಯಾರು ಕೇರಳ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದಾರೆ?
ನವನೀತಿ ಪ್ರಸಾದ್ ಸಿಂಗ್ | |
ಸುರೇಖಾ ಸಿಂಗ್ | |
ವಿಜಯ್ ನಾರಾಯಣ್ | |
ರಾಧಕೃಷ್ಣನ್ |
ನ್ಯಾಯಮೂರ್ತಿ ನವನೀತಿ ಪ್ರಸಾದ್ ಸಿಂಗ್ ಅವರು ಕೇರಳ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಸಿಂಗ್ ಅವರು ಪಾಟ್ನ ಹೈಕೋರ್ಟಿನಲ್ಲಿ ಜಡ್ಜ್ ಆಗಿ ಸೇವೆ ಸಲ್ಲಿಸುತ್ತಿದ್ದರು.
Question 6 |
6. “2017 ರ ಏಬಲ್ ಪ್ರಶಸ್ತಿ”ಯನ್ನು ಯಾರು ಮುಡಿಗೇರಿಸಿಕೊಂಡರು?
ವೆಸ್ ಮೇಯರ್ | |
ಆ್ಯಂಡ್ರಿವ್ ಜೆ.ವೇಲ್ಸ್ | |
ಜಾನ್ ಎಫ್.ನಾಶ್ | |
ಲೂಯಿಸ್ ನಿರೆನ್ಬರ್ಗ್ |
ರ್ಫ್ರಾನ್ಸ್ ನ ಖ್ಯಾತ ಗಣಿತಶಾಸ್ತ್ರಜ್ಞ ವೆಸ್ ಮೇಯರ್ 2017 ರ ಪ್ರತಿಷ್ಟಿತ ಏಬಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈ ಪ್ರಶಸ್ತಿಯನ್ನು ನಾರ್ವೆ ಅಕಾಡಮಿ ಆಫ್ ಸೈನ್ಸ್ ಅಂಡ್ ಲೆಟರ್ಸ್ ಪ್ರಾಯೋಜಿಸುತ್ತಿದ್ದು, ಗಣಿತ ಶಾಸ್ತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.)
Question 7 |
7. ಭಾರತದ ಷೇರು ವಿನಿಮಯ ಮಂಡಳಿಯ ಪೂರ್ಣ ಕಾಲಿಕ ಸದಸ್ಯರಾಗಿ ಯಾರನ್ನು ನೇಮಿಸಲಾಗಿದೆ?
ಎಸ್.ರಾಮನ್ | |
ಗುರುಮೂರ್ತಿ ಮಹಾಲಿಂಗಂ | |
ಎಮ್ ಎಮ್ ಪಟೇಲ್ | |
ಮಾಧಬಿ ಪುರಿ ಬುಚ್ |
Question 8 |
8. ಮೆಕ್ಸಿಕೊದಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವಕಪ್ ಡಬಲ್ ಟ್ರಾಪ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಯುವ ಶೂಟರ್ ಯಾರು?
ಅಂಕುರ್ ಮಿತ್ತಲ್ | |
ಮನ್ ಸಿಂಗ್ | |
ವೀರ್ ಸಿಂಗ್ ಭಾಜ್ವ | |
ಅಮರಿಂದರ್ ಚೀಮ |
ಐಎಸ್ಎಸ್ಎಫ್ ವಿಶ್ವಕಪ್ ಡಬಲ್ ಟ್ರಾಪ್ ವಿಭಾಗದಲ್ಲಿ ಭಾರತದ ಯುವ ಶೂಟರ್ ಅಂಕುರ್ ಮಿತ್ತಲ್ ಚೊಚ್ಚಲ ಬಾರಿಗೆ ಚಿನ್ನದ ಪದಕವನ್ನು ಗೆದ್ದುಕೊಂಡರು. ಎದುರಾಳಿ ಜೇಮ್ಸ್ ವಿಲೆಟ್ ರನ್ನು ಮಣಿಸಿದ 24 ವರ್ಷದ ಅಂಕುಲ್ ಮಿತ್ತಲ್ ಡಬಲ್ ಟ್ರಾಪ್ ವಿಭಾಗದಲ್ಲಿ 75 ಅಂಕ ಗಳಿಸಿದ್ದರು. 21ರ ಹರೆಯದ ವಿಲೆಟ್ ಈ ಬಾರಿ 72 ಅಂಕ ಗಳಿಸಿ ಬೆಳ್ಳಿ ಪದಕ ಗಳಿಸಿದ್ದಾರೆ.
Question 9 |
9. “ಇಂಡಿಯಾ ಸೋರ್ಸಿಂಗ್ ಫೇರ್ (India Sourcing Fair)-2017” ಯಾವ ದೇಶದಲ್ಲಿ ಆಯೋಜಿಸಲಾಗಿತ್ತು?
ಶ್ರೀಲಂಕ | |
ನೇಪಾಳ | |
ಮಲೇಷಿಯ | |
ಭಾರತ |
Question 10 |
ಅಂಜಲಿ ಗುಪ್ತ | |
ತನುಶ್ರೀ ಪರೀಕ್ | |
ಪ್ರಿಯಾ ಜಯರಾಂ | |
ಸಂಧ್ಯಾ ಚೌಹಾನ್ |
ಗಡಿ ಭದ್ರತಾ ಪಡೆಯ 51 ವರ್ಷಗಳ ಇತಿಹಾಸದಲ್ಲಿ ತನುಶ್ರೀ ಪರೀಕ್ ಮೊದಲ ಮಹಿಳಾ ಯುದ್ಧ ಅಧಿಕಾರಿಯಾಗಿ ಸೇರ್ಪಡೆಗೊಂಡರು. ಮಧ್ಯ ಪ್ರದೇಶದ ಗ್ವಾಲಿಯರ್ ನ ಟೆಕನ್ಪುರ್ ಗಡಿ ಭದ್ರತಾ ಪಡೆ ಶಿಬಿರದಲ್ಲಿ ಇಂದು ನಡೆದ ಮೆರವಣಿಗೆಯ ಪರಾಮರ್ಶೆಯನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನಡೆಸಿದರು. ಈ ಸಂದರ್ಭದಲ್ಲಿ 67 ಮಂದಿ ತರಬೇತಿ ಅಧಿಕಾರಿಗಳ ಮೆರವಣಿಗೆಯ ಮುಂದಾಳತ್ವವನ್ನು ತನುಶ್ರೀ ಪರೀಕ್ ವಹಿಸಿದ್ದರು. ರಾಜಸ್ತಾನದ ಬಿಕನೇರ್ ನ ನಿವಾಸಿಯಾಗಿರುವ ಪರೀಕ್ ಅಧಿಕಾರಿ ಶ್ರೇಣಿಯಲ್ಲಿ ಗಡಿ ಭದ್ರತಾ ಪಡೆಯ ಮಹಿಳಾ ಅಧಿಕಾರಿಯಾಗಿ ಸೇರ್ಪಡೆಗೊಂಡಿದ್ದು, 2014ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದರು.
[button link=”http://www.karunaduexams.com/wp-content/uploads/2017/05/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಮಾರ್ಚ್21222017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ