ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,23,24,2017

Question 1

1. ಕೇಂದ್ರ ಸರ್ಕಾರ ಪ್ರಾಯೋಜಿತ ‘ರಾಷ್ಟ್ರೀಯ ವಯೋಶ್ರೀ ಯೋಜನೆ’ ಯನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಯಿತು?

A
ತಮಿಳುನಾಡು
B
ಆಂಧ್ರಪ್ರದೇಶ
C
ಮಹಾರಾಷ್ಟ್ರ
D
ಮಧ್ಯಪ್ರದೇಶ
Question 1 Explanation: 
ಆಂಧ್ರಪ್ರದೇಶ

ದೇಶದ ಹಿರಿಯ ನಾಗರಿಕರಿಗೆ ವೈದ್ಯಕೀಯ ಸಾಧನ-ಸಲಕರಣೆಗಳ ಸಹಾಯ ನೀಡುವ ಕೇಂದ್ರ ಸರ್ಕಾರ ಪ್ರಾಯೋಜಿತ ‘ರಾಷ್ಟ್ರೀಯ ವಯೋಶ್ರೀ ಯೋಜನೆ’ ಯನ್ನು ಆಂಧ್ರಪ್ರದೇಶದಲ್ಲಿ ಉದ್ಘಾಟಿಸಲಾಯಿತು. ಈ ಯೋಜನೆ ಎಲ್ಲಾ ಬಿಪಿಎಲ್ ಕಾರ್ಡ್ ಹೊಂದಿರುವ ಹಿರಿಯ ನಾಗರಿಕರಿಗೆ ಅನ್ವಯವಾಗಲಿದೆ.

Question 2

2. “2017 ಕುಲದೀಪ್ ನಾಯರ್ ಪತ್ರಿಕೋದ್ಯಮ ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಯಿತು?

A
ರವೀಶ್ ಕುಮಾರ್
B
ಅನುಪಮ್ ಮಿಶ್ರ
C
ಕುಶಾಲ್ ಅರೋರ
D
ರಿಜ್ವಾನ್ ಕೌಸರ್
Question 2 Explanation: 
ರವೀಶ್ ಕುಮಾರ್

NDTV ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ರವೀಶ್ ಕುಮಾರ್ ಅವರಿಗೆ ಚೊಚ್ಚಲ ಕುಲದೀಪ್ ನಾಯರ್ ಪತ್ರಿಕೋದ್ಯಮ ಪ್ರಶಸ್ತಿಯನ್ನು ನೀಡಲಾಯಿತು. ಪತ್ರಿಕೋದ್ಯಮಕ್ಕೆ ರವೀಶ್ ಕುಮಾರ್ ನೀಡಿರುವ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಯನ್ನು ನೀಡಲಾಯಿತು.

Question 3

3. “2017 ಗ್ಲೋಬಲ್ ಎನರ್ಜಿ ಅರ್ಕಿಟೆಕ್ಚರ್ ಪರ್ಫೆಮನ್ಸ್ ಇಂಡೆಕ್ಸ್ (Global Energy Architecture Performance Index) ನಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
64
B
87
C
98
D
105
Question 3 Explanation: 
87

“2017 ಗ್ಲೋಬಲ್ ಎನರ್ಜಿ ಅರ್ಕಿಟೆಕ್ಚರ್ ಪರ್ಫೆಮನ್ಸ್ ಇಂಡೆಕ್ಸ್ (Global Energy Architecture Performance Index) ನಲ್ಲಿ 127 ರಾಷ್ಟ್ರಗಳ ಪೈಕಿ ಭಾರತ 87ನೇ ಸ್ಥಾನದಲ್ಲಿದೆ. ಸ್ವಿಟ್ಜರ್ಲ್ಯಾಂಡ್ ಸೂಚ್ಯಂಕದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ನಂತರ ಸ್ಥಾನದಲ್ಲಿ ನಾರ್ವೆ, ಸ್ವೀಡನ್, ಡೆನ್ಮಾರ್ಕ್ ಮತ್ತು ಫ್ರಾನ್ಸ್ ರಾಷ್ಟ್ರಗಳಿವೆ. ವಿಶ್ವ ಆರ್ಥಿಕ ವೇದಿಕೆ ಈ ಸೂಚ್ಯಂಕವನ್ನು ಹೊರತರುತ್ತಿದೆ.

Question 4

4. “ಕೇನ್ ವನ್ಯಜೀವಿ ಅಭಯಾರಣ್ಯ (Kane Wildlife Sanctuary)” ಯಾವ ರಾಜ್ಯದಲ್ಲಿದೆ?

A
ಅಸ್ಸಾಂ
B
ಅರುಣಾಚಲ ಪ್ರದೇಶ
C
ಪಶ್ಚಿಮ ಬಂಗಾಳ
D
ಮಹಾರಾಷ್ಟ್ರ
Question 4 Explanation: 
ಅರುಣಾಚಲ ಪ್ರದೇಶ

“ಕೇನ್ ವನ್ಯಜೀವಿ ಅಭಯಾರಣ್ಯ (Kane Wildlife Sanctuary)” ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್ ಜಿಲ್ಲೆಯಲ್ಲಿದೆ.

Question 5

5. ವಿಶ್ವ ಕ್ಷಯ ರೋಗ ದಿನವನ್ನು ಈ ಕೆಳಗಿನ ಯಾವ ದಿನದಂದು ಆಚರಿಸಲಾಗುತ್ತದೆ?

A
ಮಾರ್ಚ್ 22
B
ಮಾರ್ಚ್ 23
C
ಮಾರ್ಚ್ 24
D
ಮಾರ್ಚ್ 25
Question 5 Explanation: 
ಮಾರ್ಚ್ 24

ಪ್ರತಿವರ್ಷ ಮಾರ್ಚ್ 24 ರಂದು ವಿಶ್ವ ಕ್ಷಯರೋಗ ದಿನವನ್ನು ಆಚರಿಸಲಾಗುತ್ತದೆ. ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಜಾಗತಿಕ ಮಟ್ಟದಲ್ಲಿ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ಕರೆ ನೀಡುವುದು ಈ ದಿನದ ಉದ್ದೇಶ. Unite To End TB ಇದು ಈ ವರ್ಷದ ಥೀಮ್.

Question 6

6. 6ನೇ ರಾಷ್ಟ್ರೀಯ ಪೋಟೋಗ್ರಾಫಿ ಪ್ರಶಸ್ತಿ ಸಮಾರಂಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?

A
ರಘು ರಾಯ್
B
ಕೆ ಕೆ ಮುಸ್ತಫ
C
ಅತುಲ್ ಚೌಬೆ
D
ಉಲ್ಲಾಸ್ ಚಂದ್ರ
Question 6 Explanation: 
ರಘು ರಾಯ್

ಹಿರಿಯ ಛಾಯಾಚಿತ್ರಕಾರ ರಘು ರಾಯ್ ಅವರಿಗೆ 6ನೇ ರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು. ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವಾಲಯ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಛಾಯಾಚಿತ್ರ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

Question 7

7. ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಆಂಡ್ ಸೆಂಟ್ರಲ್ ಕೌನ್ಸಿಲ್ ಆಫ್ ಹೋಮಿಯೋಪಥಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಲು ಯಾವ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ?

A
ಅರುಣ್ ಜೇಟ್ಲಿ ಸಮಿತಿ
B
ಮಧುಕರ್ ಗುಪ್ತಾ ಸಮಿತಿ
C
ಶಶಿ ತರೂರ್ ಸಮಿತಿ
D
ಅರವಿಂದ್ ಪನಗಾರಿಯ ಸಮಿತಿ
Question 7 Explanation: 
ಅರವಿಂದ್ ಪನಗಾರಿಯ ಸಮಿತಿ
Question 8

8. ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ವೈ-ಫೈ ಸೇವೆ ಒದಗಿಸುವ ಯೋಜನೆಯನ್ನು ಈ ಕೆಳಕಂಡ ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ?

A
ಕರ್ನಾಟಕ
B
ಗುಜರಾತ್
C
ಉತ್ತರಪ್ರದೇಶ
D
ಬಿಹಾರ
Question 8 Explanation: 
ಬಿಹಾರ

ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಉಚಿತ ವೈ-ಫೈ ಸೇವೆ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ‘ಬಿಹಾರ್ ದಿವಸ್’ ಅಂಗವಾಗಿ ಬಿಹಾರ ರಾಜ್ಯದಲ್ಲಿ ಪ್ರಾರಂಭಿಸಿದೆ. ಬಿಹಾರ ರಾಜ್ಯವನ್ನು ಬಂಗಾಳ ರಾಜ್ಯದಿಂದ 1912 ರಲ್ಲಿ ಪ್ರತ್ಯೇಕಿಸಿದ ಸ್ಮರಣಾರ್ಥ ಮಾರ್ಚ್ 22 ರಂದು ಬಿಹಾರ್ ದಿವಸ್ ಆಚರಿಸಲಾಗುತ್ತದೆ.

Question 9

9. ಆಲ್ ಇಂಡಿಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ದೆಹಲಿಯ ನೂತನ ನಿರ್ದೇಶಕರಾಗಿ ಆಯ್ಕೆಗೊಂಡವರು ಯಾರು?

A
ಪ್ರತಾಪ್ ಸಿ.ರೆಡ್ಡಿ
B
ರಣ್ ದೀಪ್ ಗಲೇರಿಯ
C
ಎಂ.ಸಿ.ಮಿಶ್ರ
D
ಕೆ.ಕೆ.ಶರ್ಮಾ
Question 9 Explanation: 
ರಣ್ ದೀಪ್ ಗಲೇರಿಯ

ರಣ್ ದೀಪ್ ಗಲೇರಿಯ ಅವರು ಆಲ್ ಇಂಡಿಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS)ನ ನೂತನ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ಅಥವಾ 65 ವರ್ಷ ತುಂಬುವ ವರೆಗೆ ಅವರು ಅಧಿಕಾರದಲ್ಲಿ ಇರಲಿದ್ದಾರೆ. ಗಲೇರಿಯಾ ಅವರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ವೈಯುಕ್ತಿಕ ವೈದ್ಯರು ಆಗಿ ಸೇವೆ ಸಲ್ಲಿಸಿದ್ದಾರೆ.

Question 10

10. ಸಿನಿಮಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯ ಸಲುವಾಗಿ “ಸಿಖ್ ರತ್ನ ಪ್ರಶಸ್ತಿ-2017” ಯಾರಿಗೆ ನೀಡಲಾಗಿದೆ?

A
ಗುರಿಂದರ್ ಚಾಧ
B
ಸುಖ್ಬೀರ್ ಸಿಂಗ್ ಸಂಧು
C
ಗುರುನಾಥನ್ ಸಿಂಗ್
D
ವೈ ಕೆ ಸಿಂಗ್
Question 10 Explanation: 
ಗುರಿಂದರ್ ಚಾಧ

ಭಾರತೀಯ ಮೂಲದ ಬ್ರಿಟಿಷ್ ಸಿನಿಮಾ ನಿರ್ದೇಶಕ ಗುರಿಂದರ್ ಚಾಧ ಅವರಿಗೆ “ಸಿಖ್ ರತ್ನ ಪ್ರಶಸ್ತಿ-2017” ನೀಡಿ ಗೌರವಿಸಲಾಗಿದೆ. “Bhaji on the Beach”, “Bend It Like Beckham” and “Bride and Prejudice” ಗುರಿಂದರ್ ನಿರ್ದೇಶನದ ಕೆಲವು ಪ್ರಮುಖ ಚಿತ್ರಗಳು.

There are 10 questions to complete.

[button link=”http://www.karunaduexams.com/wp-content/uploads/2017/05/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಮಾರ್ಚ್23242017-1.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.