ಉತ್ತಮ ಆಡಳಿತ ನಿರ್ವಹಣೆಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ

ಪಬ್ಲಿಕ್‌ ಅಫೇರ್ಸ್ ಸೆಂಟರ್‌ (ಪಿಎಸಿ) ಹೊರತಂದಿರುವ ವರದಿಯಲ್ಲಿ ಉತ್ತಮ ಆಡಳಿತ ನಿರ್ವಹಣೆಯಲ್ಲಿ ಕರ್ನಾಟಕ ಸರ್ಕಾರ 4ನೇ ಸ್ಥಾನವನ್ನು ಪಡೆದುಕೊಂಡಿದೆ. ಕೇರಳ ಸರ್ಕಾರ ಸತತ ಎರಡನೇ ವರ್ಷವೂ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ. ಸರ್ಕಾರೇತರ ಸಂಸ್ಥೆ ಪಿಎಸಿ ಹೊರತಂದಿರುವ ಪ್ರಸಕ್ತ ಸಾಲಿನ ಸಾರ್ವಜನಿಕ ಆಡಳಿತ ಸೂಚ್ಯಂಕ ಆವೃತ್ತಿಯನ್ನು ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ ಹಾಗೂ ಸಂಸ್ಥೆ ಅಧ್ಯಕ್ಷ ಎಂ.ಎನ್‌.ವೆಂಕಟಾಚಲಯ್ಯ ಅವರು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.

ಪ್ರಮುಖಾಂಶಗಳು:

  • ಪಬ್ಲಿಕ್‌ ಅಫೇರ್ಸ್ ಸೆಂಟರ್‌ (ಪಿಎಸಿ) 2016 ರಿಂದ ಈ ಸೂಚ್ಯಂಕವನ್ನು ಹೊರತರುತ್ತಿದೆ. 2016ರ ಸೂಚ್ಯಂಕದಲ್ಲಿ ಕೇರಳ ಮೊದಲ ಸ್ಥಾನವನ್ನು, ತಮಿಳು ನಾಡು ಎರಡನೇ ಸ್ಥಾನವನ್ನು ಹಾಗೂ ಕರ್ನಾಟಕ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದವು.
  • ಸೂಚ್ಯಂಕದಲ್ಲಿ ಬಿಹಾರ ಕೊನೆಯ ಸ್ಥಾನದಲ್ಲಿದೆ.
  • ಸಣ್ಣ ರಾಜ್ಯಗಳ ಪಟ್ಟಿಯಲ್ಲಿ ಹಿಮಾಚಲಪ್ರದೇಶ ಉತ್ತಮ ಆಡಳಿತದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷ ಮಿಜೋರಾಂ ಪ್ರಥಮ ಸ್ಥಾನವನ್ನು ಪಡೆದುಕೊಂಡಿತ್ತು. ಆದರೆ ಈ ಬಾರಿ ಮಿಜೋರಾಂ 3ನೇ ಸ್ಥಾನಕ್ಕೆ ಕುಸಿದಿದೆ. ಮೇಘಾಲಯ ಕೊನೆ ಸ್ಥಾನದಲ್ಲಿದೆ.
  • ಮೂಲಸೌಕರ್ಯ, ಮಾನವ ಅಭಿವೃದ್ಧಿಗಾಗಿ ಬೆಂಬಲ, ಸಾಮಾಜಿಕ ಭದ್ರತೆ, ಮಹಿಳೆಯರು ಮತ್ತು ಮಕ್ಕಳ ರಕ್ಷಣೆ, ಅಪರಾಧ, ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣ, ಸಾಮಾಜಿಕ ನ್ಯಾಯ ಹಂಚಿಕೆ, ಪರಿಸರ, ಪಾರದರ್ಶಕತೆ ಮತ್ತು ಹೊಣೆಗಾರಿಕೆ, ಹಣಕಾಸು ನಿರ್ವಹಣೆ ಹಾಗೂ ಆರ್ಥಿಕ ಸ್ವಾತಂತ್ರ್ಯ ವಿಷಯಗಳ ಆಡಳಿತದಲ್ಲಿ ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶ ಮತ್ತು ಗೋವಾ ರಾಜ್ಯಗಳು ಮುಂಚೂಣಿಯಲ್ಲಿರುವುದಾಗಿ ವರದಿಯಲ್ಲಿ ತಿಳಿಸಿದೆ.

ಶ್ರೀಲಂಕಾದಲ್ಲಿ ವೆಸಕ್ ದಿನ (ಬುದ್ದ ಜಯಂತಿ) ಆಚರಣೆಯಲ್ಲಿ ಭಾಗವಹಿಸಲಿರುವ ಮೋದಿ

ಬುದ್ಧನ ಜನ್ಮ, ಜ್ಞಾನೋದಯ ಮತ್ತು ಮರಣದ ಸ್ಮರಣಾರ್ಥವಾಗಿರುವ ‘ವೆಸಕ್ ದಿನ’ (ಬುದ್ಧ ಜಯಂತಿ)” ಬೌದ್ಧ ಉತ್ಸವದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ಶ್ರೀಲಂಕಾಕ್ಕೆ ಪ್ರಯಾಣಿಸಿಲಿದ್ದಾರೆ. ಪ್ರಧಾನಿ ಆದ ಮೇಲೆ ಮೋದಿ ಅವರು ಶ್ರೀಲಂಕಾಕ್ಕೆ ನೀಡುತ್ತಿರುವ ಎರಡನೇ ಭೇಟಿ ಇದಾಗಲಿದೆ. ಮೇ 12 ರಿಂದ 14 ರವರೆಗೆ ‘ವೆಸಕ್ ಅಂತರರಾಷ್ಟ್ರೀಯ ದಿನ’ ಉತ್ಸವವನ್ನು ಕೊಲಂಬೊದಲ್ಲಿ ನಡೆಯಲಿದೆ. 100 ಕ್ಕಿಂತ ಹೆಚ್ಚಿನ ದೇಶಗಳಿಂದ 400 ಕ್ಕಿಂತಲೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬೌದ್ಧರ ಕ್ಯಾಲೆಂಡರ್ನಲ್ಲಿ ವೆಸಕ್ ಪ್ರಮುಖ ದಿನವಾಗಿದೆ. ಇದೇ ಮೊದಲ ಬಾರಿಗೆ ಶ್ರೀಲಂಕಾ ಈ ಉತ್ಸವದ ಆತಿಥ್ಯ ವಹಿಸಲಿದೆ.

ಹಿನ್ನಲೆ:

ಭಾರತ ಮತ್ತು ಶ್ರೀಲಂಕಾ ನಡುವಿನ ಬೌದ್ಧರ ಸಂಪರ್ಕ ಕ್ರಿ.ಪೂ. 2ನೇ ಶತಮಾನದಷ್ಟು ಹಿಂದಿನದು. ಚಕ್ರವರ್ತಿ ಅಶೋಕನ ಆಳ್ವಿಕೆಯಲ್ಲಿ ಬೌದ್ಧ ಧರ್ಮವನ್ನು ಭಾರತದ ಅಧಿಕೃತ ಧರ್ಮವೆಂದು ಮಾಡಲಾಯಿತು. ಅಶೋಕನ ಪುತ್ರಿ ಸಂಗಮಿತ್ತ ಮೂಲ ಬೋಧಿ ಮರದ ಕೊಂಬೆಯೊಂದನ್ನು ಅನುರಾಧಪುರಕ್ಕೆ ತಂದಳೆಂದ ನಂಬಲಾಗಿದೆ. ಶ್ರೀಲಂಕಾದಲ್ಲಿ ಥೆರವಾಡಾ ಬೌದ್ಧಧರ್ಮ ವ್ಯಾಪಕವಾಗಿ ಹಬ್ಬಿದೆ.

ಕಳೆದ ವರ್ಷ ವೆಸಕ್ ಉತ್ಸವ ಲುಂಬಿನಿ ಯಲ್ಲಿ ನಡೆದಿತ್ತು. ಚೀನಾ ರಾಷ್ಟ್ರ ನೇಪಾಳದೊಂದಿಗೆ ಸಹಭಾಗಿತ್ವದಲ್ಲಿ ಈ ಉತ್ಸವವನ್ನು ಆಚರಿಸಲಾಗಿತ್ತು.

ಕೊಚ್ಚಿ ಮೆಟ್ರೋದಲ್ಲಿ ತೃತೀಯ ಲಿಂಗಿಗಳ ನೇಮಕ

ಕೊಚ್ಚಿ ಮೆಟ್ರೊ ರೈಲು ನಿಗಮ 23 ತೃತೀಯ ಲಿಂಗಿಗಳಿಗೆ ಉದ್ಯೋಗ ನೀಡಲು ಮುಂದಾಗಿದೆ. ಈ ಮೂಲಕ ದೇಶದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳನ್ನು ಕೆಲಸಕ್ಕೆ ನೇಮಿಸಿಕೊಂಡ ಮೊದಲ ಸರ್ಕಾರಿ  ಸಂಸ್ಥೆ ಎಂಬ ಗೌರವಕ್ಕೆ ಕೊಚ್ಚಿ ಮೆಟ್ರೊ ರೈಲು ನಿಗಮ ಪಾತ್ರವಾಗಿದೆ. ಅಲುವಾ–ಪಲರಿವಟ್ಟೂಮ್‌ ಕಾರಿಡಾರ್‌ನಲ್ಲಿ ಸಂಚರಿಸುವ ಮೆಟ್ರೋ ರೈಲಿನ 530 ಉದ್ಯೋಗಿಗಳ ಪೈಕಿ ಈ 23 ಉದ್ಯೋಗಿಗಳು ಕೆಲಸ ಮಾಡಲಿದ್ದಾರೆ. ಉತ್ತಮ ವಿದ್ಯಾಹರ್ತೆ ಹೊಂದಿರುವವರು ಟಿಕೆಟ್ ಕೌಂಟರ್ ಗಳಲ್ಲಿ ಉಳಿದವರನ್ನು ಪಾರ್ಕಿಂಗ್, ಹೌಸ್ ಕೀಪಿಂಗ್, ಉದ್ಯಾನವನದಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವೈಯುಕ್ತಿಕ ಸಂದರ್ಶನ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗಿದ್ದು, ಸೂಕ್ತ ತರಭೇತಿಯನ್ನ ನೀಡಲಾಗುವುದು.

ಕೊಚ್ಚಿ ಮೆಟ್ರೋ:

ಕೊಚ್ಚಿ ಮೆಟ್ರೋ ಕೇರಳದ ಕೊಚ್ಚಿ ನಗರದ ಅಗತ್ಯತೆಗಳನ್ನು ಪೂರೈಸಲು  ನಿರ್ಮಾಣ ಹಂತದಲ್ಲಿರುವ ಮೆಟ್ರೋ ವ್ಯವಸ್ಥೆಯಾಗಿದೆ. ಅಲುವಾದಿಂದ ಪಾಲರಿವ್ಯಾಟಮ್ಗೆ 13.4 ಕಿ.ಮೀ ದೂರದಲ್ಲಿರುವ ಮೆಟ್ರೊ ಯೋಜನೆಯ ಮೊದಲ ಹಂತ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ. ಪಾಲರಿವಟ್ಟಂನಿಂದ ಮಹಾರಾಜ ಕಾಲೇಜ್ ವರೆಗಿನ ಎರಡನೆಯ ಹಂತದ 5 ಕಿ.ಮೀ ವಿಭಾಗವು ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.

Leave a Comment

This site uses Akismet to reduce spam. Learn how your comment data is processed.