ಮೇ 11: ರಾಷ್ಟ್ರೀಯ ತಂತ್ರಜ್ಞಾನ ದಿನ

ಭಾರತದ ತಾಂತ್ರಿಕ ಅಭಿವೃದ್ಧಿಯನ್ನು ಗುರುತಿಸಲು ಪ್ರತಿ ವರ್ಷ ಮೇ 11 ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. 2017ರ ರಾಷ್ಟ್ರೀಯ ತಂತ್ರಜ್ಞಾನ ದಿನ ಧ್ಯೇಯ ವಾಕ್ಯ: ‘ತಂತ್ರಜ್ಞಾನಕ್ಕಾಗಿ ಅಂತರ್ಗತ ಮತ್ತು ಸಮರ್ಥನೀಯ ಬೆಳವಣಿಗೆ’.

ವಿಶೇಷತೆ:

ಆಪರೇಷನ್ ಶಕ್ತಿ (ಪೊಖ್ರಾನ್-2) ಪರಮಾಣು ಪರೀಕ್ಷೆಯ ಐದು ಪರೀಕ್ಷೆಗಳಲ್ಲಿ ಮೊದಲನೆಯ ಪರೀಕ್ಷೆಯನ್ನು ರಾಜಸ್ಥಾನದ ಪೊಖ್ರಾನ್ನಲ್ಲಿ 11 ಮೇ 1998 ರಂದು ನಡೆಸಲಾಯಿತು. ಇದರ ಸ್ಮರಣಾರ್ಥ ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವೆಂದು ಆಚರಿಸಲಾಗುತ್ತಿದೆ.  ಈ ಕಾರ್ಯಾಚರಣೆಯ ಮುಖ್ಯಸ್ಥಿಕೆಯನ್ನು ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ವಹಿಸಿದ್ದರು. ಪೊಖ್ರಾನ್-II ಕಾರ್ಯಾಚರಣೆಯ ಶಕ್ತಿ ಉಪಕ್ರಮದ ಭಾಗವಾಗಿ ಎರಡು ಪರೀಕ್ಷೆಗಳನ್ನು ನಡೆಸಿದ ನಂತರ, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತವನ್ನು ಪರಮಾಣು ರಾಷ್ಟ್ರವೆಂದು ಘೋಷಿಸಿದರು.

            ಇದೇ ದಿನ ದೇಶದ ಮೊದಲ ಸ್ವದೇಶಿ ವಿಮಾನ ಹಾನ್ಸಾ -3ರ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ನಡೆಸಲಾಯಿತು. ಜೊತೆಗೆ ಅದೇ ದಿನದಂದು ಭಾರತ ತ್ರಿಶೂಲ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ ಸಹ ನಡೆಸಲಾಯಿತು. ತ್ರಿಶೂಲ್ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ದ ಇಂಟಿಗ್ರೇಟೆಡ್ ಗೈಡೆಡ್ ಮಿಸ್ಸಿಲ್ ಡೆವಲಪ್ಮೆಂಟ್ ಪ್ರೋಗ್ರಾಮ್ನ ಭಾಗವಾಗಿ ಅಭಿವೃದ್ಧಿಪಡಿಸಲಾಗಿದೆ. ತ್ರಿಶೂಲ್ ಕ್ಷಿಪಣಿಯನ್ನು ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಗಿದೆ. ಈ ಎಲ್ಲಾ ತಾಂತ್ರಿಕ ಸಾಧನೆಗಳನ್ನು ಪರಿಗಣಿಸಿ, 11ನೇ ಮೇ ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವೆಂದು ಸ್ಮರಿಸಲಾಗುತ್ತದೆ. ಈ ದಿನವನ್ನು ಸ್ಮರಿಸಲು, ತಂತ್ರಜ್ಞಾನ ಅಭಿವೃದ್ಧಿ ಮಂಡಳಿ (ಟಿಡಿಬಿ) ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿದೆ. ಸ್ಥಳೀಯ ತಂತ್ರಜ್ಞಾನದ ವಾಣಿಜ್ಯೀಕರಣದಲ್ಲಿ ತಮ್ಮ ಯಶಸ್ವಿ ಸಾಧನೆಗಾಗಿ ರಾಷ್ಟ್ರಪತಿ ರವರು ವಿವಿಧ ವ್ಯಕ್ತಿಗಳು ಮತ್ತು ಕೈಗಾರಿಕೆಗಳಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾರೆ.

ರಕ್ಷಣಾ ಕಾರ್ಯದರ್ಶಿಯಾಗಿ ಸಂಜಯ್ ಮಿತ್ರಾ ನೇಮಕ

ಪಶ್ಚಿಮ ಬಂಗಾಳದ ಐಎಎಸ್ ಅಧಿಕಾರಿ ಸಂಜಯ್ ಮಿತ್ರರನ್ನು ಮುಂದಿನ ರಕ್ಷಣಾ ಕಾರ್ಯದರ್ಶಿಯಾಗಿ ನೇಮಸಿರುವುದನ್ನು ಸಂಪುಟ ನೇಮಕಾತಿ ಸಮಿತಿಯು ಅನುಮೋದಿಸಿದೆ. ಸಂಜಯ್ ಅವರು ಎರಡು ವರ್ಷಗಳ ನಿಶ್ಚಿತ ಅಧಿಕಾರಾವಧಿಯನ್ನು ಹೊಂದಿರಲಿದ್ದಾರೆ. ಈ ನೇಮಕಾತಿಯ ಮೊದಲು, ಮಿತ್ರಾ ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು.

ಇತರೆ ನೇಮಕಾತಿಗಳು:

ಅನಂತ್ ಕುಮಾರ್ ಸಿಂಗ್: ಉತ್ತರ ಪ್ರದೇಶದ 1984 ಬ್ಯಾಚ್ ಐಎಎಸ್ ಅಧಿಕಾರಿ ಅನಂತ್ ಕುಮಾರ್ ಸಿಂಗ್ ಅವರು ಜವಳಿ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. 1984ರ ಬ್ಯಾಚ್ನಿಂದ ಕಾರ್ಯದರ್ಶಿ ಮಟ್ಟದ ಹುದ್ದೆಗೆ ನೇಮಕಗೊಂಡ ಮೊದಲ ಅಧಿಕಾರಿ ಅನಂತ್ ಕುಮಾರ್ ಸಿಂಗ್.

 ರಶ್ಮಿ ವರ್ಮಾ: ಜವಳಿ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ರಶ್ಮಿ ವರ್ಮಾ ಪ್ರವಾಸೋದ್ಯಮ ಸಚಿವಾಲಯದಲ್ಲಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಥಳಾಂತರಗೊಂಡಿದ್ದಾರೆ.

ರಾಜೀವ್ ಶ್ರೀವಾಸ್ತವ:, 1981 ಬ್ಯಾಚ್ ಐಎಎಸ್ ಅಧಿಕಾರಿ ರಾಜೀವ್ ಶ್ರೀವಾಸ್ತವ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮುಂದಿನ ಕಾರ್ಯದರ್ಶಿಯಾಗಿದ್ದಾರೆ.

ಲೀನಾ ನಾಯರ್: 1982 ಬ್ಯಾಚ್ ಐಎಎಸ್ ತಮಿಳುನಾಡಿನ ಕ್ಯಾಡೆರ್ನ ಲೀನಾ ನಾಯರ್ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯಾಗಿದ್ದಾರೆ.

ಜಗದೀಶ್ ಪ್ರಸಾದ್ ಮೀನಾ: ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಜಗದೀಶ್ ಪ್ರಸಾದ್ ಮೀನಾ ಅವರನ್ನು ನೇಮಿಸಲಾಗಿದೆ.

ಬಿ.ಆರ್.ಶರ್ಮಾ: ಜಮ್ಮು ಮತ್ತು ಕಾಶ್ಮೀರ ಕೇಡರ್ನ 1984 ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದ ಬಿ.ಆರ್.ಶರ್ಮಾ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಫಿಫಾ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಮುದ್ಗಲ್ ಆಯ್ಕೆ

ಫಿಫಾ ಆಡಳಿತ ಸಮಿತಿಯ ಅಧ್ಯಕ್ಷರನ್ನಾಗಿ ದೆಹಲಿ ಹೈಕೋರ್ಟಿನ ಮಾಜಿ ನ್ಯಾಯಮೂರ್ತಿ  ಮುಕುಲ್ ಮುದ್ಗಲ್ ಅವರು ಆಯ್ಕೆಯಾಗಿದ್ದಾರೆ. ಬಹ್ರೆನ್  ರಾಜಧಾನಿಯಾದ ಮನಮಾದಲ್ಲಿ ನಡೆದ ಫಿಫಾನ 67ನೇ ಕಾಂಗ್ರೆಸ್ನಲ್ಲಿ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅವರನ್ನು ಆಯ್ಕೆ ಮಾಡಲಾಯಿತು. ಫಿಫಾದ ಹಿಂದಿನ ಅಧ್ಯಕ್ಷ ಮಿಗುಯೆಲ್ ಮಡುರೊ ಅವರನ್ನು ಆಡಳಿತ ಮಂಡಳಿಯಿಂದ ಪದಚ್ಯುತಿಗೊಳಿಸಿದ ಕಾರಣ ಈ ಹುದ್ದೆಗೆ ಮುದ್ಗಲ್ ಅವರ ಹೆಸರನ್ನು ಸೂಚಿಸಲಾಗಿತ್ತು. ಜಸ್ಟಿಸ್ ಮುದ್ಗಲ್ ಅವರು ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿ ಇರಲಿದ್ದಾರೆ.

            ಫಿನ್ಲೆಂಡ್ನ ಒಲ್ಲಿ ರೆಹ್ನ್ ಅವರು ಫಿಫಾದ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಒಲ್ಲಿ ರೆಹ್ನ್ ಯುರೋಪಿಯನ್ ಕಮಿಷನ್ನ ಮಾಜಿ ಉಪಾಧ್ಯಕ್ಷರಾಗಿದ್ದಾರೆ.

ಜಸ್ಟಿಸ್ ಮುದ್ಗಲ್ ರವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿ 2009 ರಿಂದ 2011ರ ವರೆಗೆ ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಮೆಕ್ಸಿಕೋದಲ್ಲಿ ಫೀಫಾ ಕಾಂಗ್ರೆಸ್ನ ಆಡಳಿತ ಮಂಡಳಿಯ ಉಪ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ಚೂರು ಪಾರು:

  • ಏಷ್ಯನ್ ಕುಸ್ತಿ ಚಾಂಪಿಯನ್ ಷಿಪ್ ಬಜರಂಗ್ ಪೂನಿಯಾಗೆ ಚಿನ್ನ: ಜರಂಗ್ ಪೂನಿಯಾ ಏಷ್ಯನ್ ಕುಸ್ತಿ ಚಾಂಪಿಯನ್‌ ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಆ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.ಪುರುಷರ 65ಕೆ.ಜಿ ಫ್ರೀಸ್ಟೈಲ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಬಜರಂಗ್ 6–2ರಲ್ಲಿ ಕೊರಿಯಾದ ಸೆವುಂಗ್‌ ಚಲ್ ಲೀ ಅವರನ್ನು ಮಣಿಸುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರು. ಇದೇ ವೇಳೆ ಮಹಿಳೆಯರ 58ಕೆ.ಜಿ ವಿಭಾಗದ ಫೈನಲ್‌ನಲ್ಲಿ ಸರಿತಾ 0–6ರಲ್ಲಿ ಕಿರ್ಗಿಸ್ತಾನದ ಅಸುಲು ತನೆಬೆಕೊವಾ ಎದುರು ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟರು.
  • ವಿನಯ್ ಮೋಹನ್ ಭಾರತದ ಫ್ರಾನ್ಸ್ ರಾಯಭಾರಿ: ವಿನಯ್ ಮೋಹನ್ ಕ್ವಾತ್ರವನ್ನು ಫ್ರಾನ್ಸ್ಗೆ ಭಾರತದ ಮುಂದಿನ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಕ್ವಾತ್ರ ಅವರು ಪ್ರಸ್ತುತ ಪ್ರಧಾನಿ ಕಚೇರಿಯ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೀಘ್ರದಲ್ಲೇ ನಿವೃತ್ತಿಯಾಗಲಿರುವ ಮೋಹನ್ ಕುಮಾರ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕ್ವಾತ್ರ ಚೀನಾ ಮತ್ತು ಯುಎಸ್ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್ಓ) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ನಂತಹ ವಿಶ್ವಸಂಸ್ಥೆಯ ಸಂಸ್ಥೆಗಳೊಂದಿಗೆ ಅನುಭವವನ್ನು ಹೊಂದಿದ್ದಾರೆ.

One Thought to “ಪ್ರಚಲಿತ ವಿದ್ಯಮಾನಗಳು-ಮೇ,16,2017”

  1. Sir ur monthly quiz current affair very low process … Still now April 10 .. But your daily affair better now update may 18 …

Leave a Comment

This site uses Akismet to reduce spam. Learn how your comment data is processed.