UNFCC ಉನ್ನತ ಹುದ್ದೆಗೆ ಓವೈಸ್ ಸರ್ಮದ್ ನೇಮಕ

ಭಾರತದ ಓವೈಸ್ ಸರ್ಮದ್ ಅವರನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟರೆಸ್ ಅವರು ಯುನೈಟೆಡ್ ನೇಷನ್ಸ್ ಫ್ರೇಮ್ವರ್ಕ್ ಕನ್ವೆನ್ಷನ್ ಆನ್ ಕ್ಲೈಮೇಟ್ ಚೇಂಜ್ (UNFCC)ನ ಡೆಪ್ಯುಟಿ ಎಕ್ಸಿಕ್ಯೂಟಿವ್ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿದ್ದಾರೆ. ಇದು UNFCC ನಲ್ಲಿ ಪ್ರಮುಖ ಸ್ಥಾನವಾಗಿದೆ. ದೆಹಲಿಯ ವಿಶ್ವಸಂಸ್ಥೆಯ ಮಾಹಿತಿ ಕೇಂದ್ರದ ಪ್ರಕಾರ, UNFCC ಸದಸ್ಯ ರಾಷ್ಟ್ರಗಳೊಂದಿಗೆ ವ್ಯಾಪಕವಾದ ಸಮಾಲೋಚನೆಗಳನ್ನು ಮಾಡಿದ ನಂತರ ನೇಮಕವನ್ನು ಮಾಡಲಾಗಿದೆ. UNFCC ಹವಾಮಾನ ಬದಲಾವಣೆಯನ್ನು ನಿಧಾನಗೊಳಿಸುವ ಉದ್ದೇಶವನ್ನು ಹೊಂದಿದೆ.

            1960ರಲ್ಲಿ ಹುಟ್ಟಿದ ಓವೈಸ್ ಸರ್ಮದ್ ಅವರು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್ (IOM)ನೊಂದಿಗೆ ಸುಮಾರು 27 ವರ್ಷಗಳ ಅನುಭವವನ್ನು  ಹೊಂದಿದ್ದಾರೆ. ಐಒಎಮ್ ಸದಸ್ಯ ರಾಷ್ಟ್ರಗಳೊಂದಿಗೆ ನಿಕಟ ಸಮಾಲೋಚನೆಯೊಂದಿಗೆ ಸಂಸ್ಥೆಯ ಕಾರ್ಯವನ್ನು ಬಲಪಡಿಸಲು ಹಲವಾರು ನೀತಿ ಮತ್ತು ನಿರ್ವಹಣ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದ್ದಾರೆ. ಓವೈಸಿ ಅವರು ಪ್ರಸ್ತುತ ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್ (IOM) ಡೈರೆಕ್ಟರ್-ಜನರಲ್ ಆಗಿದ್ದಾರೆ. ಓವೈಸ್ ರವರು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವಿಯನ್ನು ಪಡೆದಿದ್ದಾರೆ.

ತ್ರಿವಳಿ ತಲಾಖ್: ಸುಪ್ರೀಂ ಕೋರ್ಟಿನಿಂದ ವಿಚಾರಣೆ ಶರು

ಭಾರತದ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖಹೆರ್ ನೇತೃತ್ವದ ಐದು ಜನ ನ್ಯಾಯಾಧೀಶರ ಪೀಠವು ತ್ರಿವಳಿ ತಲಾಕ್ ಪದ್ದತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ತ್ರಿವಳಿ ತಲಾಕ್ ಪದ್ದತಿಯಿಂದ ಬಾಧಿತರಾಗಿರುವ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ಪದ್ದತಿಯಿಂದ ತಮಗೆ ಅನ್ಯಾಯವಾಗಿದ್ದು, ಪದ್ದತಿಯನ್ನು ರದ್ದುಪಡಿಸುವಂತೆ ಕೋರಿ ಕಳೆದ ಎರಡು ವರ್ಷಗಳಲ್ಲಿ ಹಲವು ಅರ್ಜಿ ಸಲ್ಲಿಸಿದ್ದರು. ತ್ರಿವಳಿ ತಲಾಖ್ ಪದ್ದತಿ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎನ್ನುವುದು ಅವರ ವಾದವಾಗಿದೆ.

ಪ್ರಮುಖ ಅರ್ಜಿಯನ್ನು “Quest for Equity vs Jamiat Ulama-i-Hind” ಶೀರ್ಷಿಕೆಯಡಿ ನೀಡಲಾಗಿದೆ. ಆಸಕ್ತಿದಾಯಕ ವಿಚಾರವೆಂದರೆ ಈ ಪ್ರಕರಣವನ್ನು ಐದು ವಿವಿಧ ಸಮುದಾಯಗಳ ನ್ಯಾಯಾಧೀಶರು ವಿಚಾರಣೆ ನಡೆಸಲಿದ್ದಾರೆ. ಅವರುಗಳೆಂದರೆ ಮುಖ್ಯನ್ಯಾಯಾಮೂರ್ತಿ ಜೆ ಎಸ್ ಖೇಹರ್ (ಸಿಖ್), ನ್ಯಾಯಮೂರ್ತಿಗಳು ಕುರಿಯನ್ ಜೋಸೆಫ್ (ಕ್ರಿಶ್ಚಿಯನ್), ಆರ್ ಎಫ್ ನರಿಮನ್ (ಪಾರ್ಸಿ), ಯು ಯು ಲಲಿತ್ (ಹಿಂದೂ) ಮತ್ತು ಅಬ್ದುಲ್ ನಝೀರ್ (ಮುಸ್ಲಿಂ).

            ಮೇ 19ಕ್ಕೆ ಮುಂಚಿತವಾಗಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೂರ್ಣಗೊಳಿಸಲಿದೆ. ಈ ಪ್ರಕರಣದ ತೀರ್ಪು ಜೂನ್ ತಿಂಗಳಲ್ಲಿ ಹೊರಬೀಳಬಹುದು ಎನ್ನಲಾಗಿದೆ. ತ್ರಿವಳಿ ತಲಾಖಿನ ಸಾಂವಿಧಾನಿಕ ಸಿಂಧುತ್ವವನ್ನು ನಿರ್ಧರಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿಕೆ ನೀಡಿದ್ದು ಮತ್ತು ಬಹುಪತ್ನಿತ್ವ ಇಸ್ಲಾಮಿಕ್ ಸಂಪ್ರದಾಯದ ಬಗ್ಗೆ ಪರಿಶೀಲಿಸುವುದಿಲ್ಲ ಎಂದು ಹೇಳಿದೆ.

ಹಿನ್ನಲೆ:

ವಿಶ್ವದ ಮೂರನೇ ಅತಿ ದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಭಾರತ ಹೊಂದಿದೆ. ಭಾರತದಲ್ಲಿ ಮುಸ್ಲಿಂರು ಷರಿಯಾ ಅಥವಾ ಇಸ್ಲಾಮಿಕ್ ನ್ಯಾಯಶಾಸ್ತ್ರವನ್ನು ಅನುಸರಿಸುತ್ತಿದ್ದಾರೆ. ಷರಿಯಾ ಕಾನೂನಿನಡಿ ಮೌಖಿಕವಾಗಿ ಹಾಗೂ ನ್ಯಾಯಾಲದ ಮೆಟ್ಟಿಲೇರದೆ ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಯರಿಗೆ ವಿಚ್ಚೇದನ ನೀಡಲಾಗುತ್ತಿದ್ದು, ಈ ಪದ್ದತಿಯಿಂದ ಸಾಕಷ್ಟು ಮುಸ್ಲಿಂ ಮಹಿಳೆಯರು ವಿಚ್ಚೇದನ ಭೀತಿಯನ್ನು ಎದುರಿಸುತ್ತಿದ್ದಾರೆ.  ಅಲ್ಲದೇ ಫೋನ್, ಸಂದೇಶಗಳು, ವಾರ್ತಾಪತ್ರಿಕೆಗಳು ಜಾಹೀರಾತುಗಳು, WhatsApp ನಂತಹ ಇನ್ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್ಗಳ ಮೂಲಕ ಹಲವಾರು ಮಹಿಳೆಯರಿಗೆ ವಿವಾಹ ವಿಚ್ಛೇದನ ನೀಡುತ್ತಿರುವ ಬಗ್ಗೆ ವರದಿಯಾಗಿದೆ. ಅರ್ಜಿದಾರರ ಪ್ರಕಾರ, ತ್ರಿವಳಿ ತಲಾಕ್ ಖುರಾನ್ನಲ್ಲಿ ಗುರುತಿಸಲ್ಪಟ್ಟ ವಿಚ್ಛೇದನ ವಿಧಾನವಲ್ಲ. ತ್ರಿವಳಿ ತಲಾಕ್ ಪದ್ದತಿಯನ್ನು ರದ್ದುಗೊಳಿಸುವ ಪರವಾಗಿ ಕೇಂದ್ರ ಸರ್ಕಾರ ನಿಂತಿದೆ. ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಈ ಪದ್ದತಿಯ ಬಗ್ಗೆ ದೃಢವಾದ ನಿಲುವನ್ನು ವ್ಯಕ್ತಪಡಿಸಿದೆ.

ಫೋರ್ಬ್ಸ್ “ಗ್ಲೋಬಲ್ ಗೇಮ್ ಚೇಂಜರ್ಸ್” ಪಟ್ಟಿ ಮುಖೇಶ್ ಅಂಬಾನಿಗೆ ಅಗ್ರಸ್ಥಾನ

ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು, ಫೋಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ “ಗ್ಲೋಬಲ್‌ ಗೇಮ್‌ ಚೇಂಜರ್’ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ರಿಲಯನ್ಸ್‌ ಜಿಯೋದಿಂದಾಗಿ ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಕೋಟ್ಯಂತರ ಮಂದಿಯ ಬದುಕಿಧಿನಲ್ಲೂ ಮಹತ್ವದ ಬದಲಾವಣೆ ಆಗಿದೆ. ಈ ಹಿನ್ನೆಲೆಯಲ್ಲಿ ಮುಖೇಶ್‌ ಅಂಬಾನಿ ಅವರನ್ನು ಜಾಗತಿಕ ಗೇಮ್‌ ಚೇಂಜರ್ಸ್‌ ಪಟ್ಟಿಯಲ್ಲಿ ಸೇರಿಸಲಾಗಿದೆ. ಭಾರತೀಯ ಜನಸಮುದಾಯಕ್ಕೆ ಇಂಟರ್ನೆಟ್‌ ತಲುಪಿಸುವಲ್ಲಿ ಅವರ ಕಾರ್ಯ ಮಹತ್ವದ್ದು ಎಂದು ಫೋಬ್ಸ್ ಹೇಳಿದೆ.

            ಇದು ಫೊರ್ಬ್ಸ್ ನ ಎರಡನೆ ವಾರ್ಷಿಕ ಗ್ಲೋಬಲ್ ಗೇಮ್ ಚೇಂಜರ್ಸ್ ಪಟ್ಟಿಯಾಗಿದ್ದು, ಜಗತ್ತಿನಾದ್ಯಂತದ ಶತಕೋಟಿ ಜನರ ಜೀವನಕ್ಕೆ ಬದಲಾವಣೆಗಳನ್ನು ಬದಲಾಯಿಸುವ 25 ವ್ಯವಹಾರ ನಾಯಕರು” ಅನ್ನು ಒಳಗೊಂಡಿದೆ.

ಟಾಪ್ 10 ಸ್ಥಾನ ಪಡೆದಿರುವವರು:

ಭಾರತದ ಮುಕೇಶ್ ಅಂಬಾನಿ (1 ನೇ ಸ್ಥಾನ), ಜಿವ್ ಅವಿರಾಮ್, ಇಸ್ರೇಲಿನ ಶಶುವಾ (2 ನೇ ಸ್ಥಾನ), ಅಮೆರಿಕದ ಸ್ಟೀವರ್ಟ್ ಬಟರ್ಫೀಲ್ಡ್ (3 ನೇ ಸ್ಥಾನ), ಜಾನ್ ಮತ್ತು ಪ್ಯಾಟ್ರಿಕ್ ಕೊಲ್ಲಿಸನ್, ಅಮೆರಿಕ (4 ನೇಯವರು) , ಯುನೈಟೆಡ್ ಕಿಂಗ್ಡಮ್ನ ಜೇಮ್ಸ್ ಡೈಸನ್ (5 ನೇ ಸ್ಥಾನ), ಸ್ಕಾಟ್ ಫರ್ಕುಹಾರ್, ಮೈಕ್ ಕ್ಯಾನನ್-ಬ್ರೂಕ್ಸ್ ಆಫ್ ಆಸ್ಟ್ರೇಲಿಯಾ (6 ನೇ ಸ್ಥಾನ), ಅಮೆರಿಕದ ಲ್ಯಾರಿ ಫಿಂಕ್ (7 ನೇಯ), ಅಮೆರಿಕದ ಕೆನ್ ಫ್ರೇಜಿಯರ್ (8 ನೇ ಸ್ಥಾನ), ತಾವೆಟ್ ಹಿನ್ರಿಕಸ್, ಕ್ರಿಸ್ಟೋ ಕಾರ್ಮಾರ್ನ್ ಯುಕೆ (9 ನೇ ಸ್ಥಾನ), ಯುನೈಟೆಡ್ ಸ್ಟೇಟ್ಸ್ನ ರಾಬರ್ಟ್ ಕಾಟ್ಜ್ (10 ನೇ ಸ್ಥಾನ).

Leave a Comment

This site uses Akismet to reduce spam. Learn how your comment data is processed.