ಪ್ರಸ್ತುತ ಕೆ.ಎ.ಎಸ್ ಪರೀಕ್ಷೆ ಪೇಪರ್-2 ಸಂಬಂಧಿಸಿದಂತೆ ಪ್ರಶ್ನೋತ್ತರಗಳು ಕೆ.ಎ.ಎಸ್ (KAS)  ಪರೀಕ್ಷೆಗೆ  ಸಹಾಯವಾಗಲಿದೆ.

ಕೆ.ಎ.ಎಸ್ (KAS) ಪ್ರಶ್ನೋತ್ತರಗಳು2

Question 1

1. ಈ ಕೆಳಕಂಡ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳನ್ನು ಗುರುತಿಸಿ:

I) ರಾಜ್ಯದ ಜನನ ಪ್ರಮಾಣ 1000ಕ್ಕೆ 18.1 ರಷ್ಟಿದೆ

II) ರಾಜ್ಯದ ಮರಣ ಪ್ರಮಾಣ 1000ಕ್ಕೆ 6.8 ರಷ್ಟಿದೆ

III) ಶಿಶು ಮರಣ ಪ್ರಮಾಣ ಪ್ರತಿ 1000 ಜೀವಂತ ಜನನಕ್ಕೆ 29 ರಷ್ಟಿದೆ

ಸರಿಯಾದ ಉತ್ತರವನ್ನು ಈ ಕೆಳಕಂಡ ಕೋಡ್ ನಿಂದ ಗುರುತಿಸಿ:

A
I & II
B
II & III
C
I & III
D
I, II & III
Question 1 Explanation: 
I, II & III ಮೇಲಿನ ಎಲ್ಲಾ ಹೇಳಿಕೆಗಳು ಸರಿಯಾಗಿವೆ.
Question 2

2. ರಾಜ್ಯದಲ್ಲಿ 2016-17ನೇ ಸಾಲಿನ ಅಂತ್ಯಕ್ಕೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳ ಸಂಖ್ಯೆ ಕ್ರಮವಾಗಿ ಎಷ್ಟಿವೆ?

A
30, 176, 6019
B
30, 181, 6019
C
30, 179, 6020
D
30, 176, 6020
Question 2 Explanation: 
30, 176, 6019
Question 3

3. ಈ ಕೆಳಗಿನ ಜಿಲ್ಲೆಗಳನ್ನು ಗಮನಿಸಿ:

I) ಚಾಮರಾಜ ನಗರ

II) ಹಾಸನ

III) ದಾವಣಗೆರೆ

IV) ಚಿತ್ರದುರ್ಗ

ಮೇಲಿನ ಯಾವ ಜಿಲ್ಕೆಗಳಲ್ಲಿ 2001 ರಿಂದ 2011ರ ಅವಧಿಯಲ್ಲಿ ಮಕ್ಕಳ ಲಿಂಗಾನುಪಾತದಲ್ಲಿ ಇಳಿಕೆಯಾಗಿದ?

A
I & II
B
I, II & III
C
II, & III
D
I, II, III & IV
Question 3 Explanation: 
I, II, III & IV

ರಾಜ್ಯದಲ್ಲಿ ಪ್ರತಿ 1000 ಗಂಡು ಮಕ್ಕಳಿಗೆ 943 ಹೆಣ್ಣು ಮಕ್ಕಳ ಲಿಂಗಾನುಪಾತವಿದೆ. 2001 ರಿಂದ 2011ರ ಅವಧಿಯಲ್ಲಿ ಮೇಲಿನ ಜಿಲ್ಲೆಗಳಲ್ಲಿ ಲಿಂಗಾನುಪಾತ ಕುಸಿತ ಕಂಡಿದೆ.

Question 4

4. ಈ ಕೆಳಗಿನ ಯಾವ ನಗರಗಳಲ್ಲಿ ರಾಜ್ಯದಲ್ಲೆ ಮೊದಲ ಬಾರಿಗೆ ತ್ವರಿತ ಬಸ್ ಸಾರಿಗೆ ವ್ಯವಸ್ಥೆ (BRTS)ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ?

A
ಹುಬ್ಬಳಿ-ಧಾರಾವಾಡ
B
ಮಂಗಳೂರು-ಉಡುಪಿ
C
ಬೆಂಗಳೂರು-ದೊಡ್ಡಬಳ್ಳಾಪುರ
D
ಮೈಸೂರು-ನಂಜನಗೂಡು
Question 4 Explanation: 
ಹುಬ್ಬಳಿ-ಧಾರಾವಾಡ

BRTS ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ತ್ವರಿತ ಬಸ್ ಸಾರಿಗೆ ವ್ಯವಸ್ಥೆ ಯ ಮೇಲುತ್ಸುವಾರಿ ಮತ್ತು ಮೇಲ್ವಿಚಾರಣೆಯ ಜವಾಬ್ದಾರಿಯನ್ನು ನಗರ ಭೂ ಸಾರಿಗೆ ಇಲಾಖೆಯು ಹೊಂದಿದೆ. ತ್ವರಿತ ಬಸ್ ಸಾರಿಗೆ ವ್ಯವಸ್ಥೆಯು ಹುಬ್ಬಳ್ಳಿ-ಧಾರವಾಡ ನಗರದಲ್ಲಿರುವ ಸಾರ್ವಜನಿಕ ಮೀಸಲು ಸಾರಿಗೆ ವಸ್ಥೆಯಾಗಿದೆ. ಈ ವ್ಯವಸ್ಥೆಯ ನಗರ ಸಾರಿಗೆ ವ್ಯವಸ್ಥೆಯ ಖರ್ಚನ್ನು ಕಡಿಮೆ ಮಾಡಿ ಉತ್ತಮ ಗುಣಮಟ್ಟದ ಸೇವೆಯನ್ನು ಪ್ರಯಾಣಿಕರಿಗೆ ಒದಗಿಸುವ ಗುರಿಯನ್ನು ಹೊಂದಿದೆ. ತ್ವರಿತ ಬಸ್ ಸಾರಿಗೆ ಕಾರಿಡಾರ್ ಉದ್ದ 22.25 ಕಿ.ಮೀ ಇದ್ದು, ಇದರಲ್ಲಿ ಕೇಂದ್ರ ಬಸ್ ಲೈನುಗಳು, ಮಧ್ಯದ ಬಸ್ ನಿಲ್ದಾಣಗಳು, ಸಂಪರ್ಕ ವ್ಯವಸ್ಥೆಗಳನ್ನು ಒಳಗೊಂಡಿದೆ.

Question 5

5. ಭಾರತದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪೈಕಿ ಜನಸಂಖ್ಯೆಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?

A
6
B
7
C
9
D
8
Question 5 Explanation: 
9

2011ರ ಜನಗಣತಿ ಪ್ರಕಾರ ಕರ್ನಾಟಕದ ಜನಸಂಖ್ಯೆ 6,10,95,297 ಆಗಿದ್ದು, ಇದು ರಾಷ್ಟ್ರದ ಜನಸಂಖ್ಯೆ ಶೇ 5.05 ರಷ್ಟಿದೆ. ಭಾರತದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪೈಕಿ ಜನಸಂಖ್ಯೆಯಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ.

Question 6

6. ತಲಾ ಆದಾಯ ಮತ್ತು ಜಿಲ್ಲಾ ಆದಾಯದಲ್ಲಿ ಮೊದಲ ಮೂರು ಸ್ಥಾನದಲ್ಲಿರುವ ಜಿಲ್ಲೆಗಳು ಯಾವುವು?

A
ಬೆಂಗಳೂರು, ದಕ್ಷಿಣ ಕನ್ನಡ, ಬೆಳಗಾವಿ
B
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು
C
ಬೆಂಗಳೂರು, ಕೊಡಗು, ಉಡುಪಿ
D
ಬೆಂಗಳೂರು, ಮೈಸೂರು, ಮಂಡ್ಯ
Question 6 Explanation: 
ಬೆಂಗಳೂರು, ದಕ್ಷಿಣ ಕನ್ನಡ, ಬೆಳಗಾವಿ
Question 7

7. “ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಗಟು ಬೆಲೆ ಸೂಚ್ಯಂಕ”ವನ್ನು ಯಾವ ವರ್ಷವನ್ನು ಆಧಾರ ವರ್ಷವನ್ನಾಗಿ ಪರಿಗಣಿಸಿ ತಯಾರಿಸಲಾಗುತ್ತಿದೆ?

A
1981-82
B
1991-92
C
1995-96
D
2010-11
Question 7 Explanation: 
1981-82
Question 8

8. ಜೂನ್ 2017ಕ್ಕೆ ರಾಜ್ಯದ ಎಷ್ಟು ನಗರಗಳನ್ನು ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಲಾಗಿದೆ?

A
ಐದು
B
ಆರು
C
ಏಳು
D
ಹತ್ತು
Question 8 Explanation: 
ಏಳು

ಭಾರತ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯವು, ದಿನಾಂಕ 25-06-2015ರಂದು ಸ್ಮಾರ್ಟ್ ಸಿಟಿಗಳ ಅಭಿಯಾನಕ್ಕೆ ಚಾಲನೆ ನೀಡಿ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ. ಪ್ರಸ್ತಾವಿತ ಅಭಿಯಾನದಡಿ 100 ನಗರಗಳು ಸೇರ್ಪಡೆಯಾಗಿದ್ದು, ಅಭಿಯಾನದ ಅವಧಿ 5 ಆರ್ಥಿಕ ವರ್ಷಗಳಾಗಿರುತ್ತದೆ. ಇದರಲ್ಲಿ ಕರ್ನಾಟಕದ ಏಳು ಜಿಲ್ಲೆಗಳಾದ ಬೆಳಗಾವಿ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ತುಮಕೂರು, ದಾವಣಗೆರೆ ಮತ್ತು ಬೆಂಗಳೂರು ಆಯ್ಕೆಯಾಗಿವೆ.

Question 9

9. ರಾಜ್ಯ ಸರ್ಕಾರದ ಎಲ್ಲಾ ಆರ್ಥಿಕ ವಹಿವಾಟುಗಳನ್ನು ಒಂದೇ ವೇದಿಕೆಯಲ್ಲಿ ಆನ್ಲೈನ್ ಅನುಕಲಿತ ಪದ್ದತಿ ನಿರ್ವಹಿಸಲು ಈ ಕೆಳಗಿನ ಯಾವ ಯೋಜನೆ ಜಾರಿಗೆ ತರಲಾಗಿದೆ?

A
ಕಣಜ-II
B
ಖಜಾನೆ-2
C
ಸಂವಾದ
D
ಸ್ವಧ್ಯಯ
Question 9 Explanation: 
ಖಜಾನೆ-2
Question 10

10. ಈ ಕೆಳಗಿನ ಯಾರು ರಾಜ್ಯ ಸರ್ಕಾರದ “ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿ”ಯ ಮುಖ್ಯಸ್ಥರಾಗಿದ್ದಾರೆ?

A
ಮುಖ್ಯಮಂತ್ರಿ
B
ಮುಖ್ಯ ಕಾರ್ಯದರ್ಶಿ
C
ಗೃಹ ಸಚಿವರು
D
ಹಣಕಾಸು ಸಚಿವರು
Question 10 Explanation: 

ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿ”ಯನ್ನು ರಚಿಸಲಾಗಿದ್ದು, ಸಮಿತಿಯು ನಿಯಮಾನುಸಾರ ರಾಜ್ಯದ ಹಣಕಾಸು ಮತ್ತು ಋಣದ ಸ್ಥಿತಿಗತಿಯ ಬಗ್ಗೆ ಪುನರಾವಕೋಸಿ ತನ್ನ ಶಿಫಾರಸ್ಸನ್ನು ಹಣಕಾಸು ಸಚಿವರಿಗೆ ಸಲ್ಲಿಸುವ ಹೊಣೆಗಾರಿಕೆಯನ್ನು ಹೊಂದಿದೆ.

There are 10 questions to complete.

[button link=”http://www.karunaduexams.com/wp-content/uploads/2017/06/ಕೆ.ಎ.ಎಸ್-KAS-ಪ್ರಶ್ನೋತ್ತರಗಳು2.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

9 Thoughts to “ಕೆ.ಎ.ಎಸ್ (KAS) ಪ್ರಶ್ನೋತ್ತರಗಳು2”

  1. Ravikanth Y K

    Sir,1st qsn
    Shishu marana pramana 28 alva?????

  2. Srinivasa m t

    Nice kindly keep it up

  3. Banneppa

    ಶಿಶುಮರಣೃ 28ಅನಿಸುತ್ತೆ

  4. Raghavendra girijali

    Good experence

  5. shridhar kamble

    smart city will be 6 these are belgavi davangere hubli dhrwad mangalore shivamogga tumkur bangluru is not there

Leave a Comment

This site uses Akismet to reduce spam. Learn how your comment data is processed.