ಪ್ರಸ್ತುತ ಕೆ.ಎ.ಎಸ್ ಪರೀಕ್ಷೆ ಪೇಪರ್-2 ಸಂಬಂಧಿಸಿದಂತೆ ಪ್ರಶ್ನೋತ್ತರಗಳು ಕೆ.ಎ.ಎಸ್ (KAS)  ಪರೀಕ್ಷೆಗೆ  ಸಹಾಯವಾಗಲಿದೆ.

ಕೆ.ಎ.ಎಸ್ (KAS) ಪ್ರಶ್ನೋತ್ತರಗಳು6

Question 1

1. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I) ಗಂಗಾವತಿ ತಾಲ್ಲೂಕು ಕಾರಟಗಿಯಲ್ಲಿ ರೈಸ್ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಲಾಗುತ್ತಿದೆ

II) ಇದು ಏಷ್ಯಾದ ಮೊದಲ ರೈಸ್ ಟೆಕ್ನಾಲಜಿ ಪಾರ್ಕ್

III) ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಸಹಭಾಗಿತ್ವದಲ್ಲಿ ಈ ಪಾರ್ಕ್ ಅನ್ನು ಸ್ಥಾಪಿಸಲಾಗುತ್ತಿದೆ

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
I & II
B
II & III
C
I & III
D
I, II & III
Question 1 Explanation: 
I, II & III
Question 2

2. ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ:

A) ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ 1. ಕಲುಬುರಗಿ
B) ತೆಂಗು ಟೆಕ್ನಾಲಜಿ ಪಾರ್ಕ್ 2. ರಾಣೆಬೆನ್ನೂರು
C) ತೊಗರಿ ಟೆಕ್ನಾಲಜಿ ಪಾರ್ಕ್ 3. ತಿಪಟೂರು
A
A-1, B-3, C-2
B
A-2, B-3, C-1
C
A-3, B-1, C-2
D
A-3, B-2, C-1
Question 2 Explanation: 
A-2, B-3, C-1
Question 3

3. ಈ ಕೆಳಗಿನ ಯಾವುದು “ರೈತ ಸಂಜೀವಿನಿ ವಿಮಾ ಯೋಜನೆ”ಯನ್ನು ಅನುಷ್ಠಾನಗೊಳಿಸುತ್ತಿದೆ?

A
ಕೃಷಿ ಮಾರಾಟ ಮಂಡಳಿ
B
ಕೃಷಿ ಇಲಾಖೆ
C
ರೈತ ಸಹಕಾರ ಸಂಘ
D
ಕರ್ನಾಟಕ ಸರ್ಕಾರ
Question 3 Explanation: 
ಕೃಷಿ ಮಾರಾಟ ಮಂಡಳಿ

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ “ರೈತ ಸಂಜೀವಿನಿ ವಿಮಾ ಯೋಜನೆ”ಯನ್ನು ಅನುಷ್ಠಾನಗೊಳಿಸುತ್ತಿದೆ. ಇದರಡಿ ಸಂಬಂಧಪಟ್ಟ ರೈತ ಆಕಸ್ಮಿಕವಾಗಿ ಮರಣ ಹೊಂದಿದರೆ ಅಥವಾ ಶಾಶ್ವತ ಅಂಗವಿಕಲತೆ ಹೊಂದಿದಲ್ಲಿ ರೂ 10,000/ ರಿಂದ ರೂ 1 ಲಕ್ಷ ವರೆಗೆ ಪರಿಹಾರ ನೀಡಲಾಗುವುದು.

Question 4

4. “ಕರ್ನಾಟಕ ರಾಜ್ಯ ಸಾಂಬಾರು ಅಭಿವೃದ್ದಿ ಮಂಡಳಿ”ಯಾವ ನಗರದಲ್ಲಿ ಸ್ಥಾಪಿಸಲಾಗಿದೆ?

A
ಮಂಗಳೂರು
B
ಹುಬ್ಬಳ್ಳಿ
C
ಚಿಕ್ಕಮಗಳೂರು
D
ಮಡಿಕೇರಿ
Question 4 Explanation: 
ಹುಬ್ಬಳ್ಳಿ
Question 5

5. ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಎಷ್ಟು ಜಿಲ್ಲಾ ಹಾಲು ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿವೆ?

A
14
B
10
C
21
D
30
Question 5 Explanation: 
14
Question 6

6. ಕರಾವಳಿ ಮತ್ತು ಒಳನಾಡು ಮೀನು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ಕ್ರಮವಾಗಿ ಎಷ್ಟನೇ ಸ್ಥಾನದಲ್ಲಿದೆ?

A
6 ಮತ್ತು 8ನೇ ಸ್ಥಾನ
B
8 ಮತ್ತು 10ನೇ ಸ್ಥಾನ
C
5 ಮತ್ತು 7ನೇ ಸ್ಥಾನ
D
4 ಮತ್ತು 6ನೇ ಸ್ಥಾನ
Question 6 Explanation: 
6 ಮತ್ತು 8ನೇ ಸ್ಥಾನ

ಕರ್ನಾಟಕವು ಕರಾವಳಿ ಮೀನು ಉತ್ಪಾದನೆಯಲ್ಲಿ ದೇಶದಲ್ಲಿ 6ನೇ ಸ್ಥಾನ ಮತ್ತು ಒಳನಾಡು ಮೀನು ಉತ್ಪಾದನೆಯಲ್ಲಿ 8ನೇ ಸ್ಥಾನವನ್ನು ಪಡೆದುಕೊಂಡಿದೆ. 2016-17ನೇ ಸಾಲಿನಲ್ಲಿ ರಾಜ್ಯದ ಒಟ್ಟು ಮೀನು ಉತ್ಪಾದನೆಯು 3.93 ಲಕ್ಷ ಟನ್ ಗಳಷ್ಟು ಇರುತ್ತದೆ.

Question 7

7. 2016-17ನೇ ಸಾಲಿನಲ್ಲಿ ಈ ಕೆಳಗಿನ ಯಾವ ಹುಲಿ ಸಂರಕ್ಷಿತ ಪ್ರದೇಶಕ್ಕೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ?

A
ನಾಗರ ಹೊಳೆ ಹುಲಿ ಸಂರಕ್ಷಿತ ಪ್ರದೇಶ
B
ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ
C
ಭದ್ರಾ ಹುಲಿ ಸಂರಕ್ಷಿತ ಪ್ರದೇಶ
D
ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶ
Question 7 Explanation: 
ನಾಗರ ಹೊಳೆ ಹುಲಿ ಸಂರಕ್ಷಿತ ಪ್ರದೇಶ

2016-17ನೇ ಸಾಲಿನಲ್ಲಿ ನಾಗರ ಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ 120783 ಪ್ರವಾಸಿಗರು ಭೇಟಿ ನೀಡುವ ಮೂಲಕ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

Question 8

8. ಕರ್ನಾಟಕದಲ್ಲಿ ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ಅಭಯಾರಣ್ಯಗಳ ಸಂಖ್ಯೆ ಕ್ರಮವಾಗಿ ಎಷ್ಟಿವೆ?

A
5 ಮತ್ತು 30
B
5 ಮತ್ತು 28
C
6 ಮತ್ತು 31
D
6 ಮತ್ತು 28
Question 8 Explanation: 
5 ಮತ್ತು 30

ಕರ್ನಾಟಕದಲ್ಲಿ 5 ರಾಷ್ಟ್ರೀಯ ಉದ್ಯಾನವನಗಳು ಹಾಗೂ 30 ವನ್ಯಜೀವಿ ಅಭಯಾರಣ್ಯಗಳು ಇವೆ. ಇವುಗಳ ಒಟ್ಟಾರೆ ವ್ಯಾಪ್ತಿ 9,586.017 ಚ.ಕಿ.ಮೀ ರಷ್ಟಿದೆ.

Question 9

9. ಈ ಕೆಳಗಿನ ಯಾವುವು “ಸಮೃದ್ದ ಹಸಿರು ಗ್ರಾಮ ಯೋಜನೆ”ಯ ಉದ್ದೇಶವಾಗಿದೆ:

I) ಗ್ರಾಮಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಹೆಚ್ಚಿಸಲು ನೆಡುತೋಪುಗಳನ್ನು ಬೆಳೆಸುವುದು

II) ಅಂತರ್ಜಲ ಮಟ್ಟ ಹೆಚ್ಚಿಸಲು ಮಣ್ಣು ಮತ್ತು ನೀರು ಸಂರಕ್ಷಣೆ ಕಾರ್ಯಕ್ರಮಗಳನ್ನು ಕೈಗೊಳ್ಳುವುದು

III) ಅರಣ್ಯ ಸಂಪನ್ಮೂಲಗಳ ಅವಲಂಭನೆಯನ್ನು ಕಡಿಮೆ ಮಾಡಲು ಗೋಬರ್ ಅನಿಲ ಸ್ಥಾವರ, ಸರಳ ಒಲೆ ಮತ್ತು LPG ವಿತರಿಸಿ ಜೀವನ ಶೈಲಿ ಸುಧಾರಿಸುವುದು

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
I & II
B
II & III
C
I & III
D
I, II & III
Question 9 Explanation: 
I, II & III

ಹಳ್ಳಿಗಳನ್ನು ಸ್ವಾವಲಂಭಿಯಾಗಿಸಲು ರಾಜ್ಯಾದ್ಯಂತ “ಸಮೃದ್ದ ಹಸಿರು ಗ್ರಾಮ ಯೋಜನೆ”ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮೇಲಿನ ಎಲ್ಲವೂ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.

Question 10

10. ಈ ಕೆಳಗಿನ ಯಾವ ಜಿಲ್ಲೆಗಳಲ್ಲಿ “ಗ್ರೀನ್ ಇಂಡಿಯಾ ಮಿಷನ್” ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ?

I) ಹಾಸನ

II) ಕಲಬುರಗಿ

III) ಉತ್ತರ ಕನ್ನಡ

IV) ಧಾರಾವಾಡ

ಸರಿಯಾದ ಉತ್ತರವನ್ನು ಈ ಕೆಳಗೆ ನೀಡಿರುವ ಕೋಡ್ ಮೂಲಕ ಗುರುತಿಸಿ:

A
I, II & IV
B
I, II & III
C
II, III & IV
D
I, II, III & IV
Question 10 Explanation: 
I, II & III

ಗ್ರೀನ್ ಇಂಡಿಯಾ ಮಿಷನ್ ಯೋಜನೆಯನ್ನು 2015-16ನೇ ಸಾಲಿನಿಂದ ಹಾಸನ, ಕಲಬುರುಗಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. 2015-16ನೇ ಸಾಲಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಡುವೆ 50:50 ಅನುಪಾತದಲ್ಲಿ ಹಾಗೂ 2016-17ನೇ ಸಾಲಿನಲ್ಲಿ 60:40 ಅನುಪಾತದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

There are 10 questions to complete.

[button link=”http://www.karunaduexams.com/wp-content/uploads/2017/07/ಕೆ.ಎ.ಎಸ್-KAS-ಪ್ರಶ್ನೋತ್ತರಗಳು6.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

7 Thoughts to “ಕೆ.ಎ.ಎಸ್ (KAS) ಪ್ರಶ್ನೋತ್ತರಗಳು6”

  1. Tayaraja

    Nice Sir…

  2. Honnesh mp

    so nice sir

  3. Manjunath Kalmad.

    Wonderful knowledge..
    Very good and interested knowledge.. Sir.
    Thanks sir..

  4. Ravi

    I like so much…….

  5. Siddu

    It’s good for kpsc KAS preparation

Leave a Comment

This site uses Akismet to reduce spam. Learn how your comment data is processed.