ಕಂಬಳ ಮಸೂದೆಗೆ ಕಾನೂನು ಸಚಿವಾಲಯದಿಂದ ಅನುಮೋದನೆ

ಕಾನೂನು ಮತ್ತು ನ್ಯಾಯಾಂಗ ಸಚಿವಾಲಯವು “ಪ್ರಾಣಿ ಹಿಂಸೆ‌ ತಡೆ (ಕರ್ನಾಟಕ ತಿದ್ದುಪಡಿ)ವಿಧೇಯಕ-2017’ನ್ನು ಅನುಮೋದಿಸಿದ್ದು, ಇದರಿಂದ ಕಂಬಳ ಕ್ರೀಡೆಯನ್ನು ಕಾನೂನುಬದ್ಧಗೊಳಿಸಿದೆ. ಈ ಮಸೂದೆಯನ್ನು ರಾಷ್ಟ್ರಪತಿಯವರ ಸಹಿಗೆ ಕಳುಹಿಸಿಕೊಡಲಾಗುವುದು.

ಹಿನ್ನಲೆ:

ಕರ್ನಾಟಕ ಹೈಕೋರ್ಟ್ ನವೆಂಬರ್ 2016ರಲ್ಲಿ ಕರಾವಳಿ ಜಾನಪದ ಕ್ರೀಡೆ ಕಂಬಳ ಆಚರಣೆಗೆ ತಡೆಯಾಜ್ಞೆ ನೀಡಿತ್ತು. ಕಂಬಳ ಕ್ರೀಡೆಯಲ್ಲಿ ಪ್ರಾಣಿ ಹಿಂಸೆಯನ್ನು ಮಾಡಲಾಗುತ್ತಿದೆ ಎಂದು ಪ್ರಾಣಿ ದಯಾ ಸಂಘದವರು 2014ರಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದ ರೀತಿಯಲ್ಲೆ ಕರ್ನಾಟಕ ಹೈಕೋರ್ಟ್ ಕಂಬಳ ಕ್ರೀಡೆಗೂ ತಡೆಯಾಜ್ಞೆ ನೀಡಿತ್ತು. ಆನಂತರ ಕಂಬಳದ ಪರ ಜನರ ಹೋರಾಟ ಜೋರಾದಾಗ ರಾಜ್ಯ ಸರಕಾರವೇ ಅದಕ್ಕೆ ಪೂರಕವಾಗಿ ಕಾನೂನು ರೂಪಿಸಲು ಮುಂದಾಯಿತು. ಅದರಂತೆ “ಪ್ರಾಣಿ ಹಿಂಸೆ‌ ತಡೆ (ಕರ್ನಾಟಕ ತಿದ್ದುಪಡಿ)ವಿಧೇಯಕ-2017’ನ್ನು ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ಫೆ. 7ರಂದು ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ಅದನ್ನು ಫೆ. 23ಕ್ಕೆ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟಿದ್ದರು. ಅಲ್ಲಿಂದ ಈ ವಿಧೇಯಕ ಗೃಹ ಸಚಿವಾಲಯಕ್ಕೆ ಬಂದಿದ್ದು ಅನಂತರ ಅದನ್ನು ಪರಿಸರ, ಸಂಸ್ಕೃತಿ ಹಾಗೂ ಕಾನೂನು ಸಚಿವಾಲಯದ ಒಪ್ಪಿಗೆಗೆ ಕಳುಹಿಸಲಾಗಿತ್ತು. ಅದರಂತೆ ಪರಿಸರ ಮತ್ತು ಸಂಸ್ಕೃತಿ ಇಲಾಖೆ ತನ್ನ ಒಪ್ಪಿಗೆ ಸೂಚಿಸಿತ್ತು. ಆದರೆ ಪ್ರಾಣಿ ಹಿಂಸೆ ವಿಚಾರವಾಗಿ ವಿಧೇಯಕದಲ್ಲಿ ಬಳಸಿದ ಪದವೊಂದು ಸೂಕ್ತವಲ್ಲದ ಕಾರಣ ಕಾನೂನು ಸಚಿವಾಲಯ ವಿಧೇಯಕಕ್ಕೆ ತನ್ನ ಒಪ್ಪಿಗೆ ನೀಡಿರಲಿಲ್ಲ. ಹೀಗಾಗಿ ಈ ವಿಧೇಯಕವನ್ನು ಪುನರ್‌ ಪರಿಶೀಲಿಸುವಂತೆ ಕೋರಿ, ಕೇಂದ್ರವು ಎ. 23ಕ್ಕೆ ರಾಜ್ಯಕ್ಕೆ ವಾಪಸ್‌ ಕಳುಹಿಸಿತ್ತು. ಮುಂದೆ ರಾಜ್ಯ ಸರಕಾರವು ಕಂಬಳ ತಿದ್ದುಪಡಿ ವಿಧೇಯಕವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕೆಲವು ಮಾರ್ಪಾಡುಗಳೊಂದಿಗೆ ಮೇ 8ರಂದು ಮತ್ತೆ ಗೃಹ ಸಚಿವಾಲಯಕ್ಕೆ ರವಾನಿಸಿತ್ತು. ಆದರೆ ಇತ್ತೀಚೆಗಷ್ಟೇ ಕಾನೂನು ಖಾತೆ ರಾಜ್ಯ ಸಚಿವ ಪಿ.ಪಿ. ಚೌಧರಿ ಸಹಿ ಮಾಡಿದ್ದರು.

ಕಂಬಳ ಕ್ರೀಡೆ:

ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಒಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಈಗಿನ ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿದೆ ಈ ಕ್ರೀಡೆ. ಕರಾವಳಿಯ ರೈತಾಪಿ ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಈ ಕ್ರೀಡೆ ಕಳೆದ ಅನೇಕ ವರ್ಷಗಳಿಂದ ಸಾಂಘಿಕ ಬಲದೊಂದಿಗೆ ಬೆಳೆಯುತ್ತಿದೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡೆಯಲ್ಲಿ ಕೋಣಗಳೊಂದಿಗೆ ಅವುಗಳನ್ನು ಓಡಿಸುವಾತನ ಪಾತ್ರವೂ ಮುಖ್ಯ.

ಮಾಧ್ಯಮ ಸಹಕಾರವನ್ನು ಹೆಚ್ಚಿಸಲು ಬ್ರಿಕ್ಸ್ ನಿಂದ ಒಂದು ಮಿಲಿಯನ್ ಡಾಲರ್ ನಿಧಿ

ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ (BRICS) ರಾಷ್ಟ್ರಗಳಲ್ಲಿ ಮಾಧ್ಯಮ ಸಹಕಾರವನ್ನು ಹೆಚ್ಚಿಸಲು ಒಂದು ಮಿಲಿಯನ್ ಡಾಲರ್ ನಿಧಿಯನ್ನು ಸ್ಥಾಪಿಸಿವೆ. ಬೀಜಿಂಗ್ನಲ್ಲಿ ನಡೆದ ಬ್ರಿಕ್ಸ್ ಮೀಡಿಯಾ ಫೋರಂ ಉದ್ಘಾಟನಾ ಸಮಾರಂಭದಲ್ಲಿ, ಕ್ಸಿನ್ಹುಆ ನ್ಯೂಸ್ ಏಜೆನ್ಸಿ ಮತ್ತು ಫೋರಂನ ಕಾರ್ಯನಿರ್ವಾಹಕ ಅಧ್ಯಕ್ಷರು ಕ್ಸಿನ್ಹುಆ ನ್ಯೂಸ್ ಏಜೆನ್ಸಿ ಬ್ರಿಕ್ಸ್ ಮಾಧ್ಯಮವನ್ನು ಬಲಗೊಳಿಸಲು ಒಂದು ಮಿಲಿಯನ್ ಯು.ಎಸ್. ಡಾಲರ್ ಅನ್ನು ಹೂಡುವುದಾಗಿ ಘೋಷಿಸಿದ್ದಾರೆ.

ಪ್ರಮುಖಾಂಶಗಳು:

  • ಚೀನಾದ ಕ್ಸಿನ್ಹುಆ ನ್ಯೂಸ್ ಏಜೆನ್ಸಿ, ಬ್ರೆಜಿಲ್ನ ಸಿಎಂಎ ಗ್ರೂಪ್, ರಷ್ಯಾದ ಸ್ಪುಟ್ನಿಕ್ ನ್ಯೂಸ್ ಏಜೆನ್ಸಿ ಮತ್ತು ರೇಡಿಯೊ, ಭಾರತದ ದಿ ಹಿಂದೂ ಇಂಡಿಯಾ ಪ್ರಕಾಶನಗಳ ಸಮೂಹ ಮತ್ತು ದಕ್ಷಿಣ ಆಫ್ರಿಕಾದ ಇಂಡಿಪೆಂಡೆಂಟ್ ಮೀಡಿಯ ಬ್ರಿಕ್ಸ್ ಮೀಡಿಯಾ ಫೋರಮ್ನ ಜಂಟಿ ಉಪಕ್ರಮವಾಗಿವೆ.

ಬ್ರಿಕ್ಸ್ ಮಾಧ್ಯಮ:

ಸಮತೋಲಿತ ವರದಿ ಸೇರಿದಂತೆ ಆರು ಉದ್ದೇಶಗಳನ್ನು ಉತ್ತೇಜಿಸುವ ಉದ್ದೇಶವನ್ನು ಬ್ರಿಕ್ಸ್ ಮೀಡಿಯಾ ಹೊಂದಿದೆ. ಪಾಶ್ಚಾತ್ಯ ರಾಷ್ಟ್ರಗಳ ಮಾಧ್ಯಮದಿಂದ ಭಿನ್ನವಾದ ಪರ್ಯಾಯ ಮಾಧ್ಯಮ ರಚಿಸುವ ಗುರಿಯನ್ನು ಇದು ಹೊಂದಿದೆ. ಈ ಪ್ರಸ್ತಾಪವು ಬ್ರಿಕ್ಸ್ ಡಿಜಿಟಲ್ ಮಾಧ್ಯಮ, ಹಣಕಾಸಿನ ಮಾಹಿತಿ ಸೇವೆಗಳು ಮತ್ತು ಜನರಿಂದ ಜನರಿಗೆ ಪ್ರಚಾರ ಸಂಪರ್ಕಗಳನ್ನು ಜಂಟಿ  ಅಭಿವೃದ್ಧಿ ಮಾಡುವ ಗುರಿಯನ್ನು ಹೊಂದಿದೆ.

ಬ್ರಿಕ್ಸ್:

ಬ್ರಿಕ್ಸ್ ಅಥವಾ ಬ್ರಿಕ್ಸ್ ಸಂಘಟನೆ – ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ ಐದು ರಾಷ್ಟ್ರಗಳನ್ನು ಒಳಗೊಂಡ ಒಂದು ಸಂಘಟನೆ. ಈ ದೇಶಗಳ ಮೊದಲ ಅಕ್ಷರಗಳಾದ (ಅಕ್ರೊನಿಮ್ ಅಥವಾ ಪ್ರಥಮಾಕ್ಷರ) B –ಬ್ರೆಜಿಲ್, R-ರಷ್ಯಾ, I –ಭಾರತ ಅಥವಾ ಇಂಡಿಯಾ, C- ಚೀನಾ ಮತ್ತು S- ದಕ್ಷಿಣ ಆಫ್ರಿಕ (ಸೌತ್ ಆಫ್ರಿಕಾ) ಸೇರಿಸಿದ ಹೆಸರು BRICS. ಮೊದಲು ಈ ಮೊದಲ ಅಕ್ಷರಗಳನ್ನು ಗೋಲ್ಡ್‌ಮನ್ ಸ್ಯಾಕ್ಸ್ (ಒಂದು ಜಾಗತಿಕ ಹಣಕಾಸು ಕಾರ್ಪರೇಶನ್) 2001ರಲ್ಲಿ (ನಾಲ್ಕು ದೇಶಗಳನ್ನು ಒಳಗೊಂಡ ಬ್ರಿಕ್ ಆಗಿ) ಬಳಸಿತು. 2009ರಲ್ಲಿ ನಾಲ್ಕು ದೇಶಗಳ BRIC ಸಂಘಟನೆಯಾಗಿ ಆರಂಭಗೊಂಡ ಇದು 2010ರಲ್ಲಿ ದಕ್ಷಿಣ ಆಫ್ರಿಕವೂ ಸೇರಿದ ನಂತರ ಬ್ರಿಕ್ಸ್ ಆಯಿತು. 2009ರಿಂದಲೂ ಈ ಸಂಘಟನೆ ವಾರ್ಷಿಕವಾಗಿ ಶೃಂಗಸಭೆ ಸೇರುತ್ತಾ ಬಂದಿದೆ.

2015ರಂತೆ ಬ್ರಿಕ್ಸ್‌ನ ಜನಸಂಖ್ಯೆ 3.6 ಲಕ್ಷ ಕೋಟಿ (ಟ್ರಿಲಿಯನ್) ಅಥವಾ ಜಾಗತಿಕ ಜನಸಂಖ್ಯೆಯ ಅರ್ಧ ಮತ್ತು ಈ ದೇಶಗಳ ಒಟ್ಟಾರೆ ನಾಮಮಾತ್ರ ಜಿಡಿಪಿ ಅಥವಾ ಒಟ್ಟಾರೆ ಅಂತರಿಕ ಉತ್ಪಾದನೆ (ನಾಮಿನಲ್ ಅಥವಾ ಇಂದಿನ ಬೆಲೆಯಲ್ಲಿನ ಜಿಡಿಪಿ) 16.6 ಲಕ್ಷಕೋಟಿ ಅಮೆರಿಕನ್ ಡಾಲರ್ ಆಗಿದ್ದು ಇದು ಜಾಗತಿಕ ಒಟ್ಟಾರೆ ಉತ್ಪಾದನೆಯ ಶೇ 22ರಷ್ಟು.

ಇಂಗ್ಲೆಂಡ್ ಸಂಸತ್ತಿಗೆ ಮೊದಲ ಮಹಿಳಾ ಸಿಖ್ ಪ್ರಜೆ ಆಯ್ಕೆ

ಭಾರತೀಯ ಮೂಲದ ಚಾಲಕರ ಮಗಳಾದ ಪ್ರೀತ್​ ಕೌರ್ ಗಿಲ್ಇಂಗ್ಲೆಂಡ್​​ನ ಸಂಸತ್ತಿಗೆ ಆಯ್ಕೆಯಾಗುವ ಮೂಲಕ ಸಂಸತ್ತಿಗೆ ಆಯ್ಕೆಯಾದ ಮೊದಲ ಸಿಖ್ ಎನಿಸಿದ್ದಾರೆ. ಇವರು. ಕಳೆದ ಡಿಸೆಂಬರ್​​ 2012ರಲ್ಲಿ ಸೇಂಟ್​​ ಪಾಲ್ಸ್​​​ ವಾರ್ಡ್​​​ನ ಸ್ಯಾಂಡ್​ವೆಲ್​ ಮಹಾನಗರ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಇದೇ ವೇಳೆ ತನ್ಮನ್ಜೀತ್ ಸಿಂಗ್ ದೇಶಿ ಅವರು ಹೌಸ್ ಆಫ್ ಕಾಮನ್ಸ್ಗೆ ಆಯ್ಕೆಯಾದ ಮೊದಲ ಪೇಟ ಧರಿಸಿದ ಸಿಖ್ ಆಗಿದ್ದಾರೆ.

            ಇದೇ ಮೊದಲ ಬಾರಿಗೆ ಹೌಸ್ ಆಫ್ ಕಾಮನ್ಸ್ 12 ಭಾರತೀಯ-ಮೂಲದ ಸಂಸದರು ಹೊಂದಿದೆ.

            ಪ್ರೀತ್ ಕೌರ್ ಗಿಲ್ ಮತ್ತು ತನ್ಮಾನ್ಜೀತ್ ಸಿಂಗ್ ದೇಶಿ ಅವರ ಗೆಲುವು ಯುನೈಟೆಡ್ ಕಿಂಗ್ಡಮ್ನಲ್ಲಿ ಸಿಖ್ ರಾಜಕೀಯ ವಲಯದಲ್ಲಿ ಗಮನಾರ್ಹ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ದೇಶಿ ಮತ್ತು ಗಿಲ್ ವಿರೋಧ ಲೇಬರ್ ಪಕ್ಷದಿಂದ ಬಂದವರು. ದೇಶಿ ಅವರು ಸ್ಲೊ ಕ್ಷೇತ್ರದಿಂದ ಗೆದ್ದಿದ್ದಾರೆ ಮತ್ತು ಗಿಲ್ ಬರ್ಮಿಂಗ್ಹ್ಯಾಮ್ ಎಡ್ಜ್ಬಾಸ್ಟನ್ನಿಂದ ಗೆದ್ದಿದ್ದಾರೆ.

Leave a Comment

This site uses Akismet to reduce spam. Learn how your comment data is processed.