ಜಾಗತಿಕ ಆವಿಷ್ಕಾರ ಸೂಚ್ಯಂಕ: ಭಾರತಕ್ಕೆ 60ನೇ ಸ್ಥಾನ
ಜಾಗತಿಕ ಆವಿಷ್ಕಾರ ಸೂಚ್ಯಂಕ (Global Innovation Index) 2017ರಲ್ಲಿ ಭಾರತ 130 ರಾಷ್ಟ್ರಗಳ ಪೈಕಿ 60ನೇ ಸ್ಥಾನವನ್ನು ಪಡೆದುಕೊಂಡಿದೆ. ಆ ಮೂಲಕ ಕಳೆದ ಸಾಲಿಗಿಂತ 6 ಸ್ಥಾನ ಏರಿಕೆ ಕಂಡಿದೆ. ಕಾರ್ನೆಲ್ ಯೂನಿವರ್ಸಿಟಿ, INSEAD ಮತ್ತು ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (ಡಬ್ಲ್ಯುಐಪಿಒ) ಸಂಸ್ಥೆಗಳ ಸಹಭಾಗಿತ್ವದಲ್ಲಿ 2017 ಜಾಗತಿಕ ಆವಿಷ್ಕಾರ ಸೂಚ್ಯಂಕ ಪ್ರಕಟಗೊಂಡಿದೆ. ಇದು 10ನೇ ಆವೃತ್ತಿಯಾಗಿದೆ.
ಟಾಪ್ 10 ರಾಷ್ಟ್ರಗಳು:
- ಸ್ವಿಟ್ಜರ್ಲ್ಯಾಂಡ್, ಸ್ವೀಡನ್, ನೆದರ್ಲೆಂಡ್ಸ್, ಯುಎಸ್, ಯುಕೆ, ಡೆನ್ಮಾರ್ಕ್, ಸಿಂಗಪೂರ್, ಫಿನ್ಲ್ಯಾಂಡ್, ಜರ್ಮನಿ ಮತ್ತು ಐರ್ಲೆಂಡ್ ಟಾಪ್ ಹತ್ತು ರಾಷ್ಟ್ರಗಳು.
- ಸತತ 7ನೇ ವರ್ಷದಲ್ಲಿ ಸ್ವಿಟ್ಜರ್ಲೆಂಡ್ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ.
- ಭಾರತದ ನೆರೆಯ ರಾಷ್ಟ್ರಗಳ ಪೈಕಿ ಶ್ರೀಲಂಕಾವು 90 ನೇ ಸ್ಥಾನ ಮತ್ತು ನೇಪಾಳ 109ನೇ ಸ್ಥಾನದಲ್ಲಿದೆ. ಪಾಕಿಸ್ತಾನ 113 ನೇ ಸ್ಥಾನದಲ್ಲಿದೆ ಮತ್ತು ಬಾಂಗ್ಲಾದೇಶ 114ನೇ ಸ್ಥಾನ ಪಡೆದಿದೆ.
ಕಪ್ಪುಹಣ ಮಾಹಿತಿ ವಿನಿಮಯಕ್ಕೆ ಭಾರತ-ಸ್ವಿಟ್ಜರ್ಲ್ಯಾಂಡ್ ಒಪ್ಪಂದ
ಕಪ್ಪುಹಣ ಠೇವಣಿದಾರರ ಬಗ್ಗೆ ಸ್ವಯಂಚಾಲಿತ ಮಾಹಿತಿ ವಿನಿಮಯಕ್ಕೆ ಭಾರತ ಮತ್ತು ಇತರ 40 ರಾಷ್ಟ್ರಗಳೊಂದಿಗೆ ಸ್ವಿಟ್ಜರ್ಲೆಂಡ್ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ, ಗೋಪ್ಯತೆ ಮತ್ತು ಡೇಟಾ ಭದ್ರತೆಗೆ ಸಂಬಂಧಿಸಿದ ವಿಷಯದಲ್ಲಿ ತನ್ನ ನಿಲುವನ್ನು ಬದಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
- ಸ್ವಿಸ್ ಬ್ಯಾಂಕ್ಗಳಲ್ಲಿರುವ ಭಾರತೀಯರ ಖಾತೆ ಮತ್ತು ತೆರಿಗೆ ವಂಚಿತ ಹಣದ ವಹಿವಾಟಿನ ಬಗ್ಗೆ ಮಾಹಿತಿ ಪಡೆಯಲು ಕನಿಷ್ಠ ಎರಡು ವರ್ಷ ಬೇಕಾಗಲಿದೆ. ಸ್ವಯಂಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆ (ಎಇಒಐ) ಅನುಷ್ಠಾನಕ್ಕೆ ಇನ್ನೂ ಕನಿಷ್ಠ ಒಂದು ವರ್ಷವಾದರೂ ಬೇಕಾಗುತ್ತದೆ.
- 2018ರಲ್ಲಿ ಈ ವ್ಯವಸ್ಥೆ ಅನುಷ್ಠಾನಗೊಳ್ಳುವ ನಿರೀಕ್ಷೆ ಇದ್ದು, 2019ರ ಅಂತ್ಯಕ್ಕೆ ಮೊದಲ ಹಂತದ ಮಾಹಿತಿ ವಿನಿಮಯ ಕಾರ್ಯ ಆರಂಭವಾ
ಗಲಿದೆ ಎಂದು ಸ್ವಿಸ್ ಫೆಡರಲ್ ಕೌನ್ಸಿಲ್ ತಿಳಿಸಿದೆ. - ಈ ವರ್ಷ ಸ್ವಿಟ್ಜರ್ಲೆಂಡ್ ಸರ್ಕಾರ ಎಲ್ಲ ಐರೋಪ್ಯ ರಾಷ್ಟ್ರ ಸೇರಿದಂತೆ 38 ದೇಶಗಳಲ್ಲಿ ಈ ವ್ಯವಸ್ಥೆ ಅನುಷ್ಠಾನಕ್ಕೆ ಚಾಲನೆ ನೀಡಿದೆ. 2018ರ ವೇಳೆಗೆ ಈ ರಾಷ್ಟ್ರಗಳ ಜತೆ ಮೊದಲ ಹಂತದ ಮಾಹಿತಿ ವಿನಿಮಿಯ ಆರಂಭವಾಲಿದೆ.
ಭಾರತ-ಆಫ್ಘಾನಿಸ್ತಾನ ನಡುವೆ ಶೀಘ್ರದಲ್ಲಿ ವಾಯು ಸಾಗಣೆ ಕಾರಿಡರ್
ಮುಂಬರುವ ದಿನಗಳಲ್ಲಿ ಭಾರತ ಮತ್ತು ಅಫ್ಘಾನಿಸ್ತಾನಗಳು ತಮ್ಮ ಮೊದಲ ವಾಯು-ಸಾಗಣೆ ಕಾರಿಡಾರ್ ಅನ್ನು ಕಾರ್ಯಗತಗೊಳಿಸಲು ಸಿದ್ಧವಾಗಿವೆ. ಅಫ್ಘಾನಿಸ್ತಾನದ ರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆ ಅರಿಯಾನಾ ಆಫ್ಘಾನ್ ಏರ್ಲೈನ್ಸ್ ಮೊದಲು ಕಾರ್ಯಾರಂಭ ಮಾಡಲಿದೆ. ಆರಂಭದಲ್ಲಿ ಒಂದು ತಿಂಗಳಲ್ಲಿ ಒಮ್ಮೆ ಅಥವಾ ಎರಡು ಬಾರಿ ಕಾರ್ಯನಿರ್ವಹಿಸುವ ಮೂಲಕ ದೆಹಲಿಗೆ ಮತ್ತು ದೆಹಲಿಯಿಂದ ಸರಕುಗಳನ್ನು ಸಾಗಿಸಲಾಗುವುದು. ಪೂರೈಕೆ ಅಗತ್ಯಗಳನ್ನು ಅವಲಂಬಿಸಿ ಹಾರಾಟವನ್ನು ಹೆಚ್ಚಿಸಲಾಗುವುದು.
ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘಾನಿಯವರ ಭೇಟಿಯ ಸಂದರ್ಭದಲ್ಲಿ ಕಳೆದ ವರ್ಷ ವಾಯು ಸಾರಿಗೆ ಕಾರಿಡಾರ್ ಆರಂಭದ ಬಗ್ಗೆ ಭಾರತ-ಅಫ್ಘಾನಿಸ್ತಾನ ಚರ್ಚಿಸಿದ್ದವು. ಭಾರತದ ಅಫ್ಘಾನಿಸ್ತಾನ ನೀತಿಯ ಮುಖ್ಯ ಅಂಶಗಳೆಂದರೆ ಆಫ್ಗಾನ್ ಬಣಗಳೊಂದಿಗಿನ ಸೌಹಾರ್ದ ಸಂಬಂಧಗಳು, ತಾಲಿಬಾನ್ ವಿರೋಧಿ ಪಡೆಗಳಿಗೆ ಸಮರ್ಪಕ ಬೆಂಬಲ, ಮಿಲಿಟರಿ ಸಹಕಾರ, ಮಾನವೀಯ ಮತ್ತು ಅಭಿವೃದ್ಧಿ ನೆರವು ಇತ್ಯಾದಿ.
ಭಾರತ ಮತ್ತು ಅಫ್ಘಾನಿಸ್ತಾನದ ನಡುವಿನ ವ್ಯಾಪಾರ ವ್ಯವಹಾರಕ್ಕೆ ಪಾಕಿಸ್ತಾನದ ಭೂಮಿಯನ್ನು ಬಳಸಿಕೊಳ್ಳುವ ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವವನ್ನು ವಹಿಸಿದೆ. ವಾಯು ಸರಕು ಕಾರಿಡರ್ ನಿಂದ ಅಫ್ಘಾನಿಸ್ತಾನದ ಖಾಸಗಿ ವಲಯ ತನ್ನ ರಫ್ತುಗಳನ್ನು ವಿಸ್ತಾರವಾದ ಭಾರತೀಯ ಮಾರುಕಟ್ಟೆಗೆ ಕನಿಷ್ಠ ವೆಚ್ಚದಲ್ಲಿ ರಫ್ತು ಮಾಡಲು ಸಹಾಯವಾಗಲಿದೆ.
Use full for exms