ಇಂಧನ ಸಂರಕ್ಷಣೆ ಕಟ್ಟಡ ನೀತಿ-2017ಗೆ ಚಾಲನೆ
ಇಂಧನ, ಕಲ್ಲಿದ್ದಲು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಮತ್ತು ಗಣಿ ಸಚಿವಾಲಯ ಇಂಧನ ಸಂರಕ್ಷಣೆ ಕಟ್ಟಡ ನೀತಿ 2017 (ಇಸಿಬಿಸಿ 2017) ಯನ್ನು ಪ್ರಾರಂಭಿಸಿದೆ. ಕೋಡ್ನ ಈ ನವೀಕರಿಸಿದ ಆವೃತ್ತಿಯಡಿ ಭಾರತದಾದ್ಯಂತ ಹೊಸ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಇಂಧನ ನಿರ್ವಹಣಾ ಮಾನದಂಡಗಳನ್ನು ಸೂಚಿಸಲಾಗಿದೆ.
ಪ್ರಮುಖಾಂಶಗಳು:
- ಇಂಧನ ಸಂರಕ್ಷಣೆ ಕಟ್ಟಡ ನೀತಿ 2017 (ಇಸಿಬಿಸಿ 2017) ಯನ್ನು ಇಂಧನ ಸಚಿವಾಲಯ ಮತ್ತು ಎನರ್ಜಿ ಎಫಿಷಿಯೆನ್ಸಿಯ ಬ್ಯೂರೋ (ಬಿಇಇ) ಅಮೆರಿಕಾದ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಎಂಜಿನಿಯರಿಂಗ್ (ಯುಎಸ್ಐಐಡಿ) ತಾಂತ್ರಿಕ ಸಹಾಯದಡಿ ಅಭಿವೃದ್ಧಿಪಡಿಸಲಾಗಿದೆ.
- ಈ ನೀತಿಯಡಿ ಪ್ರಸ್ತುತ ಮತ್ತು ಭವಿಷ್ಯದ ಕಟ್ಟಡ ನಿರ್ಮಾಣ ತಂತ್ರಗಾರಿಕೆಯಲ್ಲಿ ಇಂಧನ ಬಳಕೆ ಮತ್ತು ಇಂಗಾಲ ಹೊರಸೂಸುವಿಕೆಯನ್ನು ಕಡಿಮೆಗೊಳಿಸಲು ಉತ್ತೇಜಿಸಲಾಗುವುದು.
- ನವೀಕರಿಸಬಹುದಾದ ಇಂಧನ ಮೂಲಗಳನ್ನು ಸಂಯೋಜಿಸಲು ಕ್ರಿಯಾತ್ಮಕ ವಿನ್ಯಾಸ ತಂತ್ರಗಳನ್ನು ಸೇರ್ಪಡೆ ಮಾಡಲು ಬಿಲ್ಡರ್ಗಳು, ವಿನ್ಯಾಸಕರು ಮತ್ತು ವಾಸ್ತುಶಿಲ್ಪಿಗಳು ಸ್ಪಷ್ಟವಾದ ಮಾನದಂಡಗಳನ್ನು ವಿಧಿಸಲಾಗಿದೆ.
“ಇಮೇಜ್ ಟ್ರೇಡ್ ಮಾರ್ಕ್” ಪಡೆದುಕೊಂಡ ಮುಂಬೈನ ತಾಜ್ ಹೊಟೇಲ್
ಮುಂಬೈಯ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ 1999ರ ಟ್ರೇಡ್ಮಾರ್ಕ್ ಆಕ್ಟ್ ಅಡಿಯಲ್ಲಿ ‘ಇಮೇಜ್ ಟ್ರೇಡ್ಮಾರ್ಕ್ (Image Trademark)’ ಅನ್ನು ಪಡೆದುಕೊಂಡಿದೆ. ಆ ಮೂಲಕ ವಾಸ್ತುಶಿಲ್ಪ ವಿನ್ಯಾಸಕ್ಕೆ ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ ಪಡೆದ ದೇಶದ ಮೊದಲ ಕಟ್ಟಡವಾಗಿದೆ. ಇದಾದ ನಂತರ, ತಾಜ್ ಮಹಲ್ ಪ್ಯಾಲೇಸ್ ಹೋಟೆಲಿನ ಗುಮ್ಮಟ ಮತ್ತು ಹೊರಭಾಗದ ಚಿತ್ರವನ್ನು ತಾಜ್ ಹೊಟೇಲ್ ಪ್ಯಾಲೆಸ್ ರೆಸಾರ್ಟ್ಸ್ ಸಫಾರಿ ಒಪ್ಪಿಗೆಯೊಂದಿಗೆ ಮಾತ್ರ ಬಳಸಬಹುದಾಗಿದೆ.
ಡಿಸೆಂಬರ್ 16, 1903 ರಂದು ಪ್ರಾರಂಭವಾದ ಹೋಟೆಲ್, ವಿಶಿಷ್ಟ ಕೆಂಪು-ಟೈಲ್ಡ್ ಫ್ಲಾರನ್ಸಿನ ಗೋಥಿಕ್ ಗುಮ್ಮಟವನ್ನು ಹೊಂದಿದೆ ಮತ್ತು ರಸ್ತೆ ಮಟ್ಟಕ್ಕಿಂತ 240 ಅಡಿ ಎತ್ತರದಲ್ಲಿದೆ. ದೀರ್ಘಕಾಲದವರೆಗೆ ಗುಮ್ಮಟವನ್ನು ಭಾರತೀಯ ನೌಕಾಪಡೆಯು ಹಡಗುಗಳನ್ನು ಬಂದರಿಗೆ ತಲುಪಿಸಲು `ಟ್ರೈಯಾಂಗ್ಯುಲೇಷನ್ ಪಾಯಿಂಟ್ ‘ಎಂದು ಬಳಸಿಕೊಂಡಿದೆ. ಗುಮ್ಮಟದ ವಾಸ್ತುಶಿಲ್ಪಿಗಳು ಇದನ್ನು ವಿಕ್ಟೋರಿಯಾ ಟರ್ಮಿನಸ್ (ಈಗ ಛತ್ರಪತಿ ಶಿವಾಜಿ ಟರ್ಮಿನಸ್) ಗುಮ್ಮಟದಲ್ಲಿ ರೂಪಿಸಿದ್ದಾರೆ. ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ನೀಲ್ ಆರ್ಮ್ಸ್ಟ್ರಾಂಗ್, ಜಾನ್ ಲೆನ್ನನ್ ಮತ್ತು ಬರಾಕ್ ಒಬಾಮರಂತಹ ಅನೇಕ ಪ್ರಸಿದ್ಧ ವ್ಯಕ್ತಿಗಳಿಗೆ ಆತಿಥ್ಯ ನೀಡಿದೆ. ಪ್ರಪಂಚದಾದ್ಯಂತ ಟ್ರೇಡ್ಮಾರ್ಕ್ ಪಡೆದುಕೊಂಡಿರುವ ಇತರೆ ಕಟ್ಟಡಗಳೆಂದರೆ ನ್ಯೂಯಾರ್ಕ್ನ ಎಂಪೈರ್ ಸ್ಟೇಟ್ ಬಿಲ್ಡಿಂಗ್, ಪ್ಯಾರಿಸ್ನಲ್ಲಿ ಐಫೆಲ್ ಗೋಪುರ ಮತ್ತು ಆಸ್ಟ್ರೇಲಿಯಾದ ಸಿಡ್ನಿ ಒಪೇರಾ ಹೌಸ್.
ರಮಾಮಣಿ ಐಯಂಗಾರ್ ಮೆಮೊರಿಯಲ್ ಯೋಗ ಸಂಸ್ಥೆಗೆ ಪ್ರಧಾನಿ ಯೋಗ ಪ್ರಶಸ್ತಿ
ಪುಣೆಯ ರಮಾಮಣಿ ಅಯ್ಯಂಗಾರ್ ಮೆಮೋರಿಯಲ್ ಯೋಗ ಇನ್ಸ್ಟಿಟ್ಯೂಟ್ ಪ್ರಧಾನಿ ಯೋಗ ಪ್ರಶಸ್ತಿಗೆ ಭಾಜನವಾಗಿದೆ. ಯೋಗ ಅಭಿವೃದ್ದಿ ಮತ್ತು ಪ್ರೇರಪಣೆಗೆ ನೀಡಿರುವ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಆ ಮೂಲಕ ಈ ಪ್ರಶಸ್ತಿಯನ್ನು ಪಡೆದ ಮೊದಲ ಸಂಸ್ಥೆ ಎನಿಸಿದೆ.
ಪ್ರಮುಖಾಂಶಗಳು:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಂಡೀಗಢದಲ್ಲಿ ನಡೆದ 2 ನೇ ಅಂತರಾಷ್ಟ್ರೀಯ ಯೋಗ ಉತ್ಸವದಲ್ಲಿ ಪ್ರಧಾನಿ ಯೋಗ ಪ್ರಶಸ್ತಿಯನ್ನು ಸ್ಥಾಪಿಸಿದರು. ಪ್ರಾಚೀನ ಭಾರತೀಯ ಆಧ್ಯಾತ್ಮಿಕ ಶಿಸ್ತು ಎನಿಸಿರುವ ಯೋಗವನ್ನು ಉತ್ತೇಜಿಸಲು ಪ್ರಧಾನಿ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಆಯುಶ್ ಸಚಿವಾಲಯವು ಪ್ರಶಸ್ತಿಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ರಚಿಸಲು ಎರಡು ಸಮಿತಿಗಳನ್ನು ಸ್ಥಾಪಿಸಿದೆ ಅವುಗಳೆಂದರೆ ಸ್ಕ್ರೀನಿಂಗ್ ಸಮಿತಿ (ಪ್ರಾಥಮಿಕ ಮೌಲ್ಯಮಾಪನಕ್ಕೆ) ಮತ್ತು ಮೌಲ್ಯಮಾಪನ ಸಮಿತಿ (ಜ್ಯೂರಿ).
ಪ್ರಶಸ್ತಿಗೆ 85 ಸಂಸ್ಥೆಗಳನ್ನು ನಾಮನಿರ್ದೇಶನಗೊಂಡಿದ್ದವು ಅವುಗಳ ಪೈಕಿ ಈ ಸಂಸ್ಥೆ ಆಯ್ಕೆಯಾಗಿದೆ. ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ಮೌಲ್ಯಮಾಪನ ಸಮಿತಿ (ಜ್ಯೂರಿ) ಪ್ರಶಸ್ತಿಗೆ ಶಿಫಾರಸ್ಸು ಮಾಡಿತ್ತು. ರಮಾಮಣಿ ಅಯ್ಯಂಗಾರ್ ಮೆಮೋರಿಯಲ್ ಯೋಗ ಸಂಸ್ಥೆ ನಾಲ್ಕು ದಶಕಗಳ ಅವಧಿಯಲ್ಲಿ ಯೋಗವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಗೊಳಿಸಲು ಅಪಾರ ಶ್ರಮವಹಿಸಿದೆ. ಅಲ್ಲದೇ ಯೋಗ ಕುರಿತಾದ ಅನೇಕ ಪುಸ್ತಕಗಳನ್ನು ಪ್ರಕಟಿಸಿದೆ, ಪುಸ್ತಕಗಳನ್ನು ಬಹು ಭಾಷೆಗಳಿಗೆ ಅನುವಾದಿಸಲಾಗಿದೆ.
ಕಾರ್ಟೋಸ್ಯಾಟ್-2 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ
ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ಪಿಎಸ್ಎಲ್ ವಿ-ಸಿ38 ರಾಕೆಟ್ ಬಳಸಿ ಕಾರ್ಟೊಸ್ಯಾಟ್ -2 ಸರಣಿ ಉಪಗ್ರಹ ಮತ್ತು ವಿವಿಧ ದೇಶಗಳ 30 ಉಪಗ್ರಹಗಳನ್ನು ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಪ್ರಮುಖಾಂಶಗಳು:
30 ನ್ಯಾನೊ-ಉಪಗ್ರಹಗಳ ಪೈಕಿ 29 ವಿದೇಶಿ ಉಪಗ್ರಹಗಳಾಗಿದ್ದು, ಒಂದು ಭಾರತದ ಉಪಗ್ರಹವಾಗಿದೆ. ಈ 29 ನ್ಯಾನೋ ಉಪಗ್ರಹಗಳು ಆಸ್ಟ್ರಿಯಾ, ಬೆಲ್ಜಿಯಂ, ಬ್ರಿಟನ್, ಚಿಲಿ, ಝೆಕ್ ರಿಪಬ್ಲಿಕ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಲಾಟ್ವಿಯಾ, ಲಿಥುವಾನಿಯಾ, ಸ್ಲೋವಾಕಿಯಾ ಮತ್ತು ಯುಎಸ್ಎ ಸೇರಿದಂತೆ 14 ರಾಷ್ಟ್ರಗಳಿಗೆ ಸೇರಿವೆ. ಈ 29 ಉಪಗ್ರಹಗಳನ್ನು ಇಸ್ರೋದ ವಾಣಿಜ್ಯ ಅಂಗವಾಗಿರುವ ಆಂಟ್ರಿಕ್ಸ್ ಕಾರ್ಪೋರೇಶನ್ ಲಿಮಿಟೆಡ್ನ ವಾಣಿಜ್ಯ ಒಪ್ಪಂದದ ಭಾಗವಾಗಿ ಪಿಎಎಸ್ ಎಲ್ ವಿ ಸಿ-38 ರಾಕೆಟ್ ನಿಂದ ಉಡಾಯಿಸಲಾಗಿದೆ.
ಪಿಎಸ್ ಎಲ್ ವಿ ಸಿ38 ರಾಕೆಟ್ ಹೊತ್ತ ಎಲ್ಲ ಉಪಗ್ರಹಗಳ ಒಟ್ಟು ತೂಕ 955 ಕೆಜಿ. ಉಡಾವಣೆಗೊಂಡ 16 ನಿಮಿಷಗಳ ನಂತರ ರಾಕೆಟ್ ಮುಖ್ಯ ಉಪಗ್ರಹವಾದ ಕಾರ್ಟೊಸಾಟ್-2 ಸರಣಿ ಉಪಗ್ರಹವನ್ನು ಭೂ ಕಕ್ಷೆಗೆ ಸೇರಿಸಿತು. ಕಾರ್ಟೊಸಾಟ್-2 ಸರಣಿಯಲ್ಲಿ ಇದು 6ನೇ ಉಪಗ್ರಹವಾಗಿದೆ.
ಒಂದು ನಾನೊ ಉಪಗ್ರಹವನ್ನು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ನೂರುಲ್ ಇಸ್ಲಾಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಯಾರಿಸಿದ್ದಾರೆ.
ಕಾರ್ಟೊಸಾಟ್-2 ಸರಣಿಯಲ್ಲಿ 6ನೆಯದಾಗಿದ್ದು ಇದಕ್ಕೆ ಆಕಾಶದ ಮೇಲೆ ಭಾರತದ ಕಣ್ಣು ಎಂದು ಹೆಸರಿಡಲಾಗಿದೆ.
ಚೀನಾದಲ್ಲಿ ವಿಶ್ವದ ಮೊದಲ ವರ್ಚುಯಲ್ ಟ್ರಾಕ್ ಮೇಲೆ ಚಲಿಸುವ ರೈಲಿಗೆ ಚಾಲನೆ
ಲೋಹದ ಹಳಿಗಳ ಬದಲಾಗಿ ಸಂವೇದಕ ತಂತ್ರಜ್ಞಾನವನ್ನು ಬಳಸಿ ವರ್ಚುಯಲ್ ಟ್ರಾಕ್ (Virtual Track) ಮೇಲೆ ಸಂಚರಿಸುವ ವಿಶ್ವದ ಮೊದಲ ರೈಲನ್ನು ಚೀನಾ ಅನಾವರಣಗೊಳಿಸಿದೆ.
ಪ್ರಮುಖಾಂಶಗಳು:
- ಹೊಸ ರೈಲುಗಳು ಬ್ಯಾಟರಿ ಚಾಲಿತ ಆಗಿರುವ ಕಾರಣ ಶೂನ್ಯ ಮಾಲಿನ್ಯ ಎನಿಸಿವೆ. ಈ ರೈಲುಗಳು 70 ಕಿ.ಮೀ. ವೇಗದಲ್ಲಿ ತಲುಪುವ ಸಾಮರ್ಥ್ಯವನ್ನು ಹೊಂದಿವೆ ಮತ್ತು 10 ನಿಮಿಷಗಳ ಕಾಲ ಚಾರ್ಜ್ ಮಾಡಿದರೆ 25 ಕಿ.ಮೀ ದೂರ ಪ್ರಯಾಣಿಸಬಹುದು.
- ಕೇವಲ 32 ಮೀಟರ್ ಉದ್ದವಿರುವ ರೈಲಿನಲ್ಲಿ 307 ಪ್ರಯಾಣಿಕರು ಸಂಚರಿಸಬಹುದು.
- ಹೊಸ ರೈಲುಗಳಲ್ಲಿ ಸಂವೇದಕಗಳೊಂದಿಗೆ ಅಳವಡಿಸಲಾಗಿದ್ದು, ರಸ್ತೆಗಳ ಆಯಾಮಗಳನ್ನು ಗುರುತಿಸಿ ಲೋಹದ ಹಳಿಗಳ ಅಗತ್ಯವಿಲ್ಲದೆಯೇ ಮಾರ್ಗಗಳನ್ನು ಅನುಸರಿಸಿ ಸಂಚರಿಸಲಿವೆ. ರಬ್ಬರ್ ಚಕ್ರಗಳನ್ನು ಇವು ಹೊಂದಿವೆ. ಈ ಹೊಸ ತಂತ್ರಜ್ಞಾನವು ಚೀನಾ ರೈಲು ನಿಗಮದಿಂದ ಹಕ್ಕುಸ್ವಾಮ್ಯ ಪಡೆದಿದೆ.
- 2018ರ ವೇಳೆಗೆ ಸಾರ್ವಜನಿಕ ಬಳಕೆಗೆ ಹೊಸ ರೈಲುಗಳ ಮುಕ್ತವಾಗಲಿವೆ. ಪ್ರದೇಶದ ದಟ್ಟಣೆಯನ್ನು ನಿಭಾಯಿಸಲು ಸಹಾಯ ಮಾಡಲು ಚೀನಾದ ನಗರ ಝುಝೌನಲ್ಲಿ ಇದನ್ನು ಪ್ರಾರಂಭಿಸಲಾಗುವುದು. ಹೊಸ ರೈಲುಗಳು 25 ವರ್ಷಗಳ ಜೀವಿತಾವಧಿಯನ್ನು ಹೊಂದಿವೆ ಎಂದು ನಿರೀಕ್ಷಿಸಲಾಗಿದೆ. ಈ ರೈಲಿನ ವೆಚ್ಚವು ಸಾಂಪ್ರದಾಯಿಕ ಸಬ್ವೇ ಸಿಸ್ಟಮ್ನ ಬೆಲೆಗಿಂತ ಐದನೇ ಒಂದು ಭಾಗವಾಗಿದೆ.
ಲಾರ್ಸನ್ & ಟರ್ಬೋದಿಂದ ಮೊದಲ ಸ್ವದೇಶಿ ನಿರ್ಮಿತಿ ತೇಲುವ ಬಂದರು
ಲಾರ್ಸೆನ್ ಮತ್ತು ಟಬ್ರೊ ಉತ್ತರ ಚೆನ್ನೈನ ಕಾಟುಪಲ್ಲಿಯಲ್ಲಿ ಭಾರತೀಯ ನೌಕಾಪಡೆ ಹಡಗುಗಳನ್ನು ದುರಸ್ತಿ ಮಾಡಲು ಮೊದಲ ಸ್ವದೇಶಿ ನಿರ್ಮಿತ ತೇಲುವ ಬಂದರನ್ನು (FDN -2) ಅನ್ನು ಪ್ರಾರಂಭಿಸಿದೆ. ತೇಲುವ ಬಂದರನ್ನು ಮೂರು ಅಥವಾ ನಾಲ್ಕು ತಿಂಗಳಗಳ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿದ ನಂತರ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗುವುದು.
ಪ್ರಮುಖಾಂಶಗಳು:
- ಪರೀಕ್ಷೆಗೆ ಒಳಪಡಿಸಿದ ನಂತರ FDN-2 ಅನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ವರ್ಗಾಯಿಸಲಾಗುತ್ತದೆ. ಅಲ್ಲಿ ಭಾರತೀಯ ನೌಕಾಪಡೆ ಸ್ವತ್ತುಗಳ ದುರಸ್ಥಿ ಮತ್ತು ಇತರ ಸೇವೆಗಳಿಗೆ ಬಳಸಲಾಗುವುದು. ಈ ತೇಲುವ ಬಂದರುಗಳು ಶಾಂತ ನೀರಿನಲ್ಲಿ ಅಥವಾ ಅಬ್ಬರದ ಸಮುದ್ರದಲ್ಲಿ ವರ್ಷ ಪೂರ್ತಿ ಕಾರ್ಯಾಚರಣೆಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಜಲಾಂತರ್ಗಮಿ ಸೇರಿದಂತೆ 8000 ಟನ್ ತೂಕದ ನೌಕೆಗಳನ್ನು ದುರಸ್ಥಿ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ.
- FDN-2 ಏಕಕಾಲದಲ್ಲಿ ಅನೇಕ ಹಡಗುಗಳ ಡಾಕಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇದರ ಯಾವುದೇ ಹಂತದಲ್ಲಿ ಆರು ಹಡಗುಗಳನ್ನು ಏಕ ಕಾಲಕ್ಕೆ ರಿಪೇರಿ ಅಥವಾ ಮರು ಜೋಡಣೆ ಮಾಡಬಹುದಾಗಿದೆ.
FDN-2:
FDN -2 ಎಲ್&ಟಿ ಯ ಮೊದಲ ನೌಕಾ ಹಡಗು ನಿರ್ಮಾಣ ಯೋಜನೆಯಾಗಿದೆ. ಎಲ್ & ಟಿ ಸಂಸ್ಥೆ ನೌಕಾ ಪಡೆ ಮತ್ತು ಕರಾವಳಿ ಭದ್ರತಾ ಪಡೆಯ ಹಡಗುಗಳ ರಿಪೇರಿಯನ್ನು ಕೈಗೊಳ್ಳುತ್ತಿದೆ. ಇದು ಅತ್ಯಂತ ದೊಡ್ಡ ಲಾಜಿಸ್ಟಿಕ್ಸ್ ಟ್ಯಾಂಕರ್ ಹಡಗು ಐಎನ್ಎಸ್ ಜ್ಯೋತಿ ಸೇರಿದಂತೆ ಆರು ಹಡಗುಗಳನ್ನು ಮರು ವಿನ್ಯಾಸಗೊಳಿಸಿದೆ. ಕಾಟುಪಲ್ಲಿ ಶಿಪ್ಯಾರ್ಡ್ನಲ್ಲಿ ಎಲ್ & ಟಿ 5 ಸಾವಿರ ಕೋಟಿ ರೂ. ಹೂಡಿಕೆ ಮಾಡಿದೆ.
ರಾಜಧಾನಿ ಮತ್ತು ಶತಾಬ್ದಿ ರೈಲುಗಳಲ್ಲಿ ಸೇವೆ ಸುಧಾರಣೆಗೆ “ಆಪರೇಶನ್ ಸ್ವರ್ಣ”
ಭಾರತೀಯ ರೈಲ್ವೆಯ ರಾಜಧಾನಿ ಮತ್ತು ಶತಾಬ್ದಿ ಎಕ್ಸಪ್ರೆಸ್ ನಂತಹ ಪ್ರೀಮಿಯಂ ರೈಲುಗಳ ಸೇವೆಯ ಬಗ್ಗೆ ಸಾರ್ವಜನಿಕರಿಂದ ಆರೋಪಗಳು ಕೇಳಿ ಬಂದಿರುವ ಬಗ್ಗೆ ರೈಲ್ವೆ ಇಲಾಖೆ ಕಳವಳ ವ್ಯಕ್ತಪಡಿಸಿದ್ದು “ಆಪರೇಷನ್ ಸ್ವರ್ಣ”ವನ್ನು ಪ್ರಾರಂಭಿಸಲು ನಿರ್ಧರಿಸಿದೆ. ಈ ಕಾರ್ಯಾಚರಣೆ ಪ್ರೀಮಿಯಂ ರೈಲುಗಳಲ್ಲಿ ಸೇವೆಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ನೈರ್ಮಲ್ಯ, ಆಹಾರದ ಗುಣಮಟ್ಟ ಮತ್ತು ರೈಲು ಆಗಮನದ ವಿಳಂಬದ ಬಗ್ಗೆ ಪ್ರಯಾಣಿಕರಿಂದ ದೂರುಗಳನ್ನು ಪಡೆದ ನಂತರ ರೈಲ್ವೆ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ.
ಪ್ರಮುಖಾಂಶಗಳು:
- ಕಾರ್ಯಾಚರಣೆಯಡಿಯಲ್ಲಿ ಮುಂಬೈ-ದೆಹಲಿ ರಾಜಧಾನಿ ಎಕ್ಸ್ಪ್ರೆಸ್ ಮತ್ತು ಮುಂಬೈ-ಅಹಮದಾಬಾದ್ ಶತಾಬ್ದಿ ಎಕ್ಸಪ್ರೆಸ್ ರೈಲುಗಳನ್ನು ಮೊದಲ ಹಂತದಲ್ಲಿ ನವೀಕರಿಸಲಾಗುವುದು. ಹಂತದ ಹಂತದಲ್ಲಿ ಉನ್ನತೀಕರಣಕ್ಕಾಗಿ ಇನ್ನಷ್ಟು ರೈಲುಗಳನ್ನು ಗುರುತಿಸಲಾಗುವುದು.
- ಆಪರೇಷನ್ ಸ್ವರ್ಣದ ಅಡಿ ಭಾರತೀಯ ರೈಲ್ವೆ 10 ಅಂಶಗಳನ್ನು ಅಂದರೆ ಸಮಯ, ಸ್ವಚ್ಛತೆ, ಹೊದಿಕೆ ಬಟ್ಟೆ, ಬೋಗಿಯ ಒಳಾಂಗಣ, ಶೌಚಾಲಯಗಳು, ಅಡುಗೆ, ಸಿಬ್ಬಂದಿ ನಡವಳಿಕೆ, ಭದ್ರತೆ, ಮನರಂಜನೆ, ಹೌಸ್ ಕೀಪಿಂಗ್ ಮತ್ತು ಫೀಡ್ ಬ್ಯಾಕ್ ಸುಧಾರಣೆ ಕಡೆಗೆ ಕಾರ್ಯನಿರ್ವಹಿಸಲಾಗುವುದು.
- ಇದರಡಿ ರೂ 50 ಲಕ್ಷ ಮೊತ್ತವನ್ನು ರಾಜಧಾನಿ ಮತ್ತು ಶತಾಬ್ದಿ ರೈಲುಗಳಿಗೆ ನವೀಕರಿಸುವ ಉದ್ದೇಶಕ್ಕಾಗಿ ಮಂಜೂರು ಮಾಡಲಾಗುವುದು.
- ‘ಆಪರೇಷನ್ ಸ್ವರ್ಣ’ ಅಡಿಯಲ್ಲಿ ಪರಿಷ್ಕರಿಸುವ ಕೆಲಸವನ್ನು ಮೇಲ್ವಿಚಾರಣೆ ಮಾಡಲು ಭಾರತೀಯ ರೈಲ್ವೆ ಎರಡು ಸಮಿತಿಗಳನ್ನು ರಚಿಸಲಿದೆ.
ವಿಶ್ವಸಂಸ್ಥೆಯ ಭಯೋತ್ಪಾದನೆ ವಿರೋಧಿ ಕೇಂದ್ರದ ಮುಖ್ಯಸ್ಥರಾಗಿ ರಷ್ಯಾದ ವ್ಲಾಡಿಮಿರ್ ವೊರೊನ್ಕೊವ್ ನೇಮಕ
ಅಮೆರಿಕ ಮತ್ತು ರಷ್ಯಾ ನಡುವಿನ ಉದ್ವಿಗ್ನತೆಯ ಹೊರತಾಗಿಯೂ, ಹೊಸದಾಗಿ ಸ್ಥಾಪಿತವಾದ ವಿಶ್ವಸಂಸ್ಥೆ ಭಯೋತ್ಪಾದನೆ ವಿರೋಧಿ ಕೇಂದ್ರ (UNCCT) ಗೆ ರಷ್ಯಾದ ರಾಯಭಾರಿ ವ್ಲಾಡಿಮಿರ್ ವೊರೊನ್ಕೊವ್ ಅವರನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ನೇಮಕ ಮಾಡಿದ್ದಾರೆ.
ವ್ಲಾಡಿಮಿರ್ ವೊರೊನ್ಕೊವ್ ಅವರಿಗೆ ಅಂಡರ್-ಸೆಕ್ರೆಟರಿ ಜನರಲ್ ಸ್ಥಾನ ನೀಡಲಾಗಿದೆ. ಹೊಸ ಅಂಡರ್-ಸೆಕ್ರೆಟರಿ-ಜನರಲ್ ಅವರು ವಿಶ್ವಸಂಸ್ಥೆಯ ಭಯೋತ್ಪಾದನೆ ವಿರೋಧಿ ಕೇಂದ್ರ ಕಾರ್ಯಪಡೆಯ ಮುಖ್ಯಸ್ಥರಾಗಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಲಿದ್ದಾರೆ.
UNCCT:
ಇತ್ತೀಚೆಗೆ ವಿಶ್ವಸಂಸ್ಥೆಯ ಜಾಗತಿಕ ಭಯೋತ್ಪಾದನಾ ತಂತ್ರವನ್ನು ಸದಸ್ಯ ರಾಷ್ಟ್ರಗಳು ಯಶಸ್ವಿಯಾಗಿ ಜಾರಿಗೆ ತರಲು ಸಹಾಯ ಮಾಡುವಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಹೊಸ ವಿಶ್ವಸಂಸ್ಥೆಯ ಭಯೋತ್ಪಾದನಾ ಕಚೇರಿಯ ಸ್ಥಾಪನೆಯನ್ನು ಅಂಗೀಕರಿಸಿದೆ.
2024ಕ್ಕೆ ಭಾರತ ವಿಶ್ವದ ಅತ್ಯಂತ ಜನಸಂಖ್ಯೆ ಹೊಂದಿರುವ ರಾಷ್ಟ್ರ: ವಿಶ್ವಸಂಸ್ಥೆ
ಭಾರತದ ಜನಸಂಖ್ಯೆ 2024ರ ವೇಳೆಗೆ 144 ಕೋಟಿ ತಲುಪಲಿದ್ದು ಚೀನಾಗಿಂತಲೂ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಲಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. 2017ರ ವಿಶ್ವ ಜನಸಂಖ್ಯಾ ಹೊರನೋಟ ಪರಿಷ್ಕೃತ ವರದಿ ಬಿಡುಗಡೆಯಾಗಿದೆ. ಇದರ ಪ್ರಕಾರ, ಕಳೆದ 40 ವರ್ಷಗಳಲ್ಲಿ ಭಾರತೀಯರ ಜನನ ಪ್ರಮಾಣ ಅರ್ಧದಷ್ಟು ಕಡಿಮೆಯಾಗಿದೆ.
ಪ್ರಮುಖಾಂಶಗಳು:
- ವಿಶ್ವವ್ಯಾಪಿ ಫಲವತ್ತತೆ ದರಗಳಲ್ಲಿ ಕುಸಿತದ ಹೊರತಾಗಿಯೂ, ವಿಶ್ವದ ಒಟ್ಟು ಜನಸಂಖ್ಯೆ 2050ರ ವೇಳೆಗೆ8 ಶತಕೋಟಿಯನ್ನು ತಲುಪಲಿದೆ ಎಂದು ವಿಶ್ವಸಂಸ್ಥೆ ವರದಿಯಲ್ಲಿ ನಿರೀಕ್ಷಿಸಿಲಾಗಿದೆ.
- ವರದಿ ಪ್ರಕಾರ, ವಿಶ್ವದ ಜನಸಂಖ್ಯೆಯು ಪ್ರಸ್ತುತ6 ಶತಕೋಟಿ ಇದೆ. ಕಳೆದ ವರ್ಷ 7.4 ಶತಕೋಟಿ ಇತ್ತು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫಲವತ್ತತೆಯಿಂದ ಜನಸಂಖ್ಯೆಯ ಹೆಚ್ಚಳವು ಉತ್ತೇಜಿಸಲ್ಪಟ್ಟಿದೆ.
- ಪ್ರಸ್ತುತ ಜನನ ಪ್ರಮಾಣ3ರಷ್ಟಿದೆ ಹಾಗೂ ಕಳೆದ 25 ವರ್ಷಗಳಲ್ಲಿ ಜೀವಿತಾವಧಿ ಹತ್ತು ವರ್ಷಗಳಷ್ಟು ಸೇರ್ಪಡೆಯಾಗಿದ್ದು, 69 ವರ್ಷಕ್ಕೆ ಸಮೀಪಿಸಿದೆ. 134 ಕೋಟಿ ಇರುವ ಭಾರತದ ಜನಸಂಖ್ಯೆ 2024ರ ವೇಳೆಗೆ 144 ಕೋಟಿ ಮುಟ್ಟಲಿದೆ. ಪ್ರಸ್ತುತ 141 ಕೋಟಿ ಇರುವ ಚೀನಾದ ಜನಸಂಖ್ಯೆ ಸ್ಥಿರತೆ ಕಾಯ್ದುಕೊಳ್ಳಲಿದ್ದು, ಭಾರತದ ಜನಸಂಖ್ಯೆ ಹೆಚ್ಚಲಿದೆ. 2050ರ ವೇಳೆಗೆ ಭಾರತದ ಜನಸಂಖ್ಯೆ 166 ಕೋಟಿಯಾಗುವುದಾಗಿ ನಿರೀಕ್ಷಿಸಲಾಗಿದೆ.
ಉತ್ತರಖಂಡ ಮತ್ತು ಹರಿಯಾಣ ಬಯಲು ಮಲ ವಿಸರ್ಜನೆ ಮುಕ್ತ ರಾಜ್ಯಗಳು
ಸ್ವಚ್ಚ ಭಾರತ ಅಭಿಯಾನ- ಗ್ರಾಮೀಣ (SBM-G) ಅಡಿಯಲ್ಲಿ, ಗ್ರಾಮೀಣ ಉತ್ತರಾಖಂಡ್ ಮತ್ತು ಗ್ರಾಮೀಣ ಹರಿಯಾಣವನ್ನು ದೇಶದ 4ನೇ ಮತ್ತು 5ನೇ ಬಯಲು ಮಲ ವಿಸರ್ಜನೆ ಮುಕ್ತ ರಾಜ್ಯಗಳೆಂದು ಘೋಷಿಸಲಾಗಿದೆ. ಈಗಾಗಲೇ ಸಿಕ್ಕಿಂ, ಹಿಮಾಚಲ ಪ್ರದೇಶ ಮತ್ತು ಕೇರಳವನ್ನು ಬಯಲು ಮಲ ವಿಸರ್ಜನೆ ಮುಕ್ತ ರಾಜ್ಯಗಳು ಎಂದು ಘೋಷಿಸಲಾಗಿದೆ.
ಸರ್ಕಾರದ ಮೂಲಗಳ ಪ್ರಕಾರ, ರಾಷ್ಟ್ರ ಮಟ್ಟದಲ್ಲಿ ನೈರ್ಮಲೀಕರಣ ವ್ಯಾಪ್ತಿಯು SBM ಪ್ರಾರಂಭವಾದಾಗಿನಿಂದ ಶೇ.42% ರಿಂದ ಶೇ.64% ಕ್ಕೆ ಹೆಚ್ಚಾಗಿದೆ. ಉತ್ತರಾಖಂಡ 13 ಜಿಲ್ಲೆಗಳು, 95 ಬ್ಲಾಕ್ ಗಳು, 7256 ಗ್ರಾಮ ಪಂಚಾಯತಿಗಳು ಮತ್ತು 15751 ಗ್ರಾಮಗಳು ಹಾಗೂ ಹರಿಯಾಣ 21 ಜಿಲ್ಲೆಗಳು, 124 ಬ್ಲಾಕ್ಗಳು ಮತ್ತು 6083 ಗ್ರಾಮ ಪಂಚಾಯತಿಗಳನ್ನು ಹೊಂದಿವೆ. ಇವುಗಳನ್ನು ಬಯಲು ಮಲ ವಿಸರ್ಜನೆ ಮುಕ್ತ ಎಂದು ಘೋಷಿಸಲಾಗಿದೆ. ಇದರೊಂದಿಗೆ, ದೇಶದ ಒಟ್ಟು ಬಯಲು ಮಲ ವಿಸರ್ಜನೆ ಮುಕ್ತ ರಾಜ್ಯಗಳ ಸಂಖ್ಯೆ 5 ಆಗಿದ್ದು, 2 ಲಕ್ಷ ಗ್ರಾಮಗಳು ಮತ್ತು ದೇಶಾದ್ಯಂತ 147 ಜಿಲ್ಲೆಗಳನ್ನು ಒಳಗೊಂಡಿದೆ.
ಸ್ವಚ್ಚ ಭಾರತ ಅಭಿಯಾನ:
ಸಾರ್ವತ್ರಿಕ ನೈರ್ಮಲೀಕರಣ ವ್ಯಾಪ್ತಿಯನ್ನು ಸಾಧಿಸಲು ಮತ್ತು ನೈರ್ಮಲ್ಯದ ಕಡೆಗೆ ಗಮನಹರಿಸಲು ಸ್ವಚ್ಚ ಭಾರತ ಮಿಷನ್ (ಎಸ್ಬಿಎಂ) ಅನ್ನು 2014ರ ಅಕ್ಟೋಬರ್ನಲ್ಲಿ ಪ್ರಾರಂಭಿಸಲಾಯಿತು. ಮಹಾತ್ಮಾ ಗಾಂಧಿಯವರ 150 ನೇ ಜನ್ಮ ವಾರ್ಷಿಕೋತ್ಸವಕ್ಕೆ ಸಮರ್ಪಕವಾಗಿ ಗೌರವಿಸುವಂತೆ, 2019 ರ ಹೊತ್ತಿಗೆ ಸ್ವಚ್ಚ ಭಾರತ ಸಾಧಿಸಲು ಉದ್ದೇಶಿಸಲಾಗಿದೆ. SBM ಅನ್ನು ಎರಡು ಪ್ರಮುಖ ಉಪಕ್ರಮಗಳಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಅವುಗಳೆಂದರೆ ಸ್ವಚ್ ಭಾರತ್ ಮಿಷನ್ (ಗ್ರಾಮೀಣ) ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಸ್ವಚ್ ಭಾರತ್ ಮಿಷನ್ (ನಗರ) ನಗರ ಪ್ರದೇಶಗಳಲ್ಲಿ.
SBM-ಗ್ರಾಮೀಣದಡಿ ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಮಲ ವಿಸರ್ಜನೆಯನ್ನು ತೊಡೆದುಹಾಕಲು ಪ್ರಯತ್ನಿಸಲಾಗುತ್ತಿದೆ. ಇದರ ಜೊತೆಗೆ ಶೌಚಾಲಯಗಳ ನಿರ್ಮಾಣ ಮತ್ತು ಬಳಕೆಗೆ ಪ್ರೇರೆಪಿಸಲಾಗುತ್ತಿದೆ. ಅಲ್ಲದೇ ಸಮರ್ಥನೀಯ ನೈರ್ಮಲ್ಯ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಮುದಾಯಗಳನ್ನು ಪ್ರೇರೇಪಿಸಲು, ಜಾಗೃತಿ ಮೂಡಿಸಲು ಮತ್ತು ನೈರ್ಮಲ್ಯಕ್ಕಾಗಿ ಸೂಕ್ತ ತಂತ್ರಜ್ಞಾನಗಳ ಬಳಕೆಯನ್ನು ಪ್ರೋತ್ಸಾಹಿಸಲು ಸಹ ಪ್ರಯತ್ನಿಸಲಾಗುತ್ತಿದೆ.
ಬಯಲು ಮಲ ವಿಸರ್ಜನೆ ಕರುಳಿನ ಸೋಂಕುಗಳು, ಅತಿಸಾರ, ಪೋಲಿಯೊ, ಹೆಪಟೈಟಿಸ್ ಮುಂತಾದ ವಿವಿಧ ರೋಗಗಳಿಗೆ ಎಡೆಮಾಡುತ್ತದೆ.
ಭಾರತಕ್ಕೆ ಮಾನವ ರಹಿತ ಡ್ರೋನ್ ತಂತ್ರಜ್ಞಾನ ವಿನಿಮಯಕ್ಕೆ ಅಮೆರಿಕ ಒಪ್ಪಿಗೆ
ವಿಶಿಷ್ಠ ತಂತ್ರಜ್ಞಾನದಿಂದ ಕೂಡಿರುವ ಗಾರ್ಡಿಯನ್ 22 ಮಾನವರಹಿತ ಗಾರ್ಡಿಯನ್ ಡ್ರೋನ್ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಅನುಮತಿ ನೀಡಿದೆ. ಭಾರತಕ್ಕೆ ಮಾನವ ರಹಿತ ಡ್ರೋಣ್ (UAV) ಮಾರಾಟ ಮಾಡುವ ಒಪ್ಪಂದವು $2 ರಿಂದ 3 ಶತಕೋಟಿ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಒಪ್ಪಂದವನ್ನು ಈಗಾಗಲೇ ಅಂಗೀಕರಿಸಿದೆಯಾದರೂ, ಒಪ್ಪಂದದ ಕುರಿತು ಅಧಿಕೃತ ಘೋಷಣೆ ಇನ್ನೂ ಘೋಷಿಸಲ್ಪಟ್ಟಿಲ್ಲ.
ಮಹತ್ವ:
- ಭಾರತ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ನಿಯಮ (MTCR) ಸದಸ್ಯತ್ವ ಪಡೆದುಕೊಂಡ ನಂತರ ಹಾಗೂ ಅಮೆರಿಕ ಭಾರತವನ್ನು ಒಂದು ಪ್ರಮುಖ ರಕ್ಷಣಾ ಪಾಲುದಾರನಾಗಿ ಗುರುತಿಸಿದ ನಂತರ ಅತ್ಯಾಧುನಿಕ UAV ತಂತ್ರಜ್ಞಾನವನ್ನು ವರ್ಗಾವಣೆ ಮಾಡುತ್ತಿರುವುದು ಮಹತ್ವವೆನಿಸಿದೆ. ಜೂನ್ 2016 ರಲ್ಲಿ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ನಿಯಮ (MTCR) ನ 35 ನೇ ಪೂರ್ಣ ಸದಸ್ಯ ರಾಷ್ಟ್ರವಾಗಿ ಸೇರ್ಪಡೆ್ಗೊಂಡಿತು.
- ಗಾರ್ಡಿಯನ್ UAV ತಂತ್ರಜ್ಞಾನದ ವರ್ಗಾವಣೆಯು ಹಿಂದೂ ಮಹಾಸಾಗರವನ್ನು ರಕ್ಷಿಸಲು ಪರಸ್ಪರ ಭದ್ರತಾ ಹಿತಾಸಕ್ತಿಗಳನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.
ವಜ್ರಾ (VAJRA Faculty Scheme) ಯೋಜನೆಗೆ ಕೇಂದ್ರ ಸರ್ಕಾರದಿಂದ ಚಾಲನೆ
NRI ಮತ್ತು ಸಾಗರೋತ್ತರ ವೈಜ್ಞಾನಿಕ ಸಮುದಾಯ ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾಗವಹಿಸಲು ಮತ್ತು ಕೊಡುಗೆ ನೀಡವುದನ್ನು ಪ್ರೋತ್ಸಾಹಿಸುವ ಸಲುವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು VAJRA (Visiting Advanced Joint Research) ಫ್ಯಾಕಲ್ಟಿ ಯೋಜನೆಯನ್ನು ಪ್ರಾರಂಭಿಸಿದೆ.
201 ರ ಜನವರಿ 8 ರಂದು 14 ನೇ ಪ್ರವಾಸಿ ಭಾರತೀಯ ದಿವಾಸ್ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ರವರು VAJRA (ವಿಸಿಟಿಂಗ್ ಅಡ್ವಾನ್ಸ್ಡ್ ಜಾಯಿಂಟ್ ರಿಸರ್ಚ್) ಫ್ಯಾಕಲ್ಟಿ ಸ್ಕೀಮ್ ಎಂಬ ಹೊಸ ಯೋಜನೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಪ್ರಾರಂಭಿಸಲಾಗುವುದು ಎಂದು ಘೋಷಿಸಿದ್ದರು.
ಪ್ರಮುಖಾಂಶಗಳು:
- ಸೈನ್ಸ್ ಅಂಡ್ ಇಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎಸ್ಇಆರ್ಬಿ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಒಂದು ಶಾಸನಬದ್ಧ ಸಂಸ್ಥೆ ಈ ಯೋಜನೆಯನ್ನು ಜಾರಿಗೊಳಿಸಲಿದೆ.
- ಈ ಯೋಜನೆಯಡಿ, ಭಾರತೀಯ ಮೂಲದ ವಿದೇಶಿ ಸಂಶೋಧಕರು ಸಂಶೋಧನೆಯಲ್ಲಿ ಭಾಗವಹಿಸಬಹುದು. ಈ ವೇಳೆ ಸಂಶೋಧಕರಿಗೆ ತಮ್ಮ ದೇಶದಲ್ಲಿ ಲಭಿಸುತ್ತಿರುವಷ್ಟೇ ಸಂಭಾವನೆಯನ್ನು ನೀಡಲಾಗುವುದು. ಮೊದಲ ತಿಂಗಳಲ್ಲಿ 15,000 ಯುಎಸ್ ಡಾಲರ್ ಮತ್ತು ಉಳಿದ ತಿಂಗಳುಗಳಲ್ಲಿ ಅವರಿಗೆ 10,000 ಯುಎಸ್ ಡಾಲರ್ ನೀಡಲಾಗುತ್ತದೆ.
- ಈ ಯೋಜನೆಯು ಇಂಧನ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆಯ ಉತ್ತೇಜಿಸುತ್ತದೆ.
- ಸಾರ್ವಜನಿಕ ಹಣಕಾಸಿನ ಶೈಕ್ಷಣಿಕ ಸಂಸ್ಥೆಗಳು ಮತ್ತು ರಾಷ್ಟ್ರೀಯ ಪ್ರಯೋಗಾಲಯಗಳು VAJRA ಫ್ಯಾಕಲ್ಟಿಯನ್ನು ಜಾರಿಗೊಳಿಸುವ ಅರ್ಹತೆ ಪಡೆದಿರುತ್ತವೆ.
- VAJRA ಬೋಧನಾ ವಿಭಾಗವು ಭಾರತದಲ್ಲಿ ಕನಿಷ್ಟ 1 ತಿಂಗಳ ಕಾಲ ಮತ್ತು ಗರಿಷ್ಠ 3 ತಿಂಗಳ ಕಾಲ ನೆಲಸಬಹುದು. ಆಸಕ್ತಿ ಹೊಂದಿರುವ ವಿದೇಶಿ ಸಂಶೋಧಕರಿಂದ ಪಡೆದ ಅರ್ಜಿಗಳನ್ನು ಶ್ರೇಷ್ಠ ವಿಜ್ಞಾನಿಗಳ ಆಯ್ಕೆ ಸಮಿತಿಯಿಂದ ಮೌಲ್ಯಮಾಪನ ಮಾಡಲಾಗುತ್ತದೆ. ಸಮಿತಿಯು ಜನವರಿ ಮತ್ತು ಜುಲೈನಲ್ಲಿ ಎರಡು ಬಾರಿ ಸೇರಿ ಮ ಶಿಫಾರಸುಗಳನ್ನು ಮಾಡಲಿದೆ.
ಭಾರತೀಯ ವಿದ್ಯಾರ್ಥಿ ಅಭಿವೃದ್ದಿಪಡಿಸಿದ ಲಘು ತೂಕದ ಉಪಗ್ರಹ ಉಡಾಯಿಸಿದ ನಾಸಾ
ತಮಿಳುನಾಡು ಮೂಲದ 18 ವರ್ಷದ ಬಾಲಕ ರಿಫತ್ ಶಾರಕ್ ಅವರು ವಿನ್ಯಾಸಗೊಳಿಸಿದ 64 ಗ್ರಾಂ ತೂಕದ ವಿಶ್ವದ ಅತ್ಯಂತ ಹಗುರವಾದ ಉಪಗ್ರಹವನ್ನು ನಾಸಾ ಉಡಾಯಿಸಿದೆ. ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಗೌರವಾರ್ಥ ಈ ಸಣ್ಣ ಉಪಗ್ರಹಕ್ಕೆ “ಕಲಾಂಸ್ಯಾಟ್” ಎಂದು ಹೆಸರಿಡಲಾಗಿದೆ. ಸಣ್ಣ ಉಪಗ್ರಹವನ್ನು ವಾಲೋಪ್ಸ್ ಐಲ್ಯಾಂಡಿನಲ್ಲಿರುವ ನಾಸಾದ ರಾಕೆಟ್ನಲ್ಲಿ ಬಾಹ್ಯಾಕಾಶಕ್ಕೆ ಹಾರಿಸಲಾಯಿತು.
ಪ್ರಮುಖಾಂಶಗಳು:
- “ಕಲಾಂಸ್ಯಾಟ್” 3-ಡಿ ಮುದ್ರಿತ ಉಪಗ್ರಹವಾಗಿದೆ. ಇದೇ ಮೊದಲ ಬಾರಿಗೆ 3-ಡಿ ಮುದ್ರಣ ತಂತ್ರಜ್ಞಾನವನ್ನು ಉಪಗ್ರಹ ವಿನ್ಯಾಸಕ್ಕೆ ಬಳಸಲಾಗಿದೆ.
- ಜಾಗತಿಕ ಶಿಕ್ಷಣ ಸಂಸ್ಥೆ “ಐ ಡೂಡ್ಲ್ ಲರ್ನಿಂಗ್” ಮತ್ತು NASA ಪಾಲುದಾರಿಕೆಯ ಕ್ಯೂಬ್ ಸ್ಪೇಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಶಾರೂಕ್ ಮತ್ತು ಅವರ ತಂಡವು 1 ಕೆ.ಜಿ. ಕ್ಯೂಬ್ಸಾಟ್ ಅನ್ನು ವಿನ್ಯಾಸಗೊಳಿಸಿತ್ತು. ಆದರೆ ಕ್ಯೂಬ್ಸಾಟ್ ದುಬಾರಿಯಾಗಿದ್ದರಿಂದಾಗಿ, ಈ ಸ್ಪರ್ಧೆಯಲ್ಲಿ ಭಾಗವಹಿಸಲು ‘ಕಲಾಂಸ್ಯಾಟ್’ ಸಣ್ಣ ಉಪಗ್ರಹವನ್ನು ವಿನ್ಯಾಸಗೊಳಿಸಿದರು.
- ಸಣ್ಣ ಉಪಗ್ರಹವು ಕೇವಲ 64 ಗ್ರಾಂ ತೂಕವಿದ್ದು, ಸ್ಮಾರ್ಟ್ಫೋನ್ಗಿಂತ ಹಗುರವಾಗಿದೆ. ಉಪಗ್ರಹವು ಬಲವರ್ಧಿತ ಕಾರ್ಬನ್ ಫೈಬರ್ ಪಾಲಿಮರ್ನಿಂದ ಮಾಡಲ್ಪಟ್ಟಿದೆ. ಉಪಗ್ರಹವನ್ನು ಉಡಾಯಿಸಿದ ನಂತರ ಬಾಹ್ಯಾಕಾಶದ ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸರದಲ್ಲಿ 12 ನಿಮಿಷಗಳ ಕಾಲ ಈ ಉಪಗ್ರಹವನ್ನು ಕಾರ್ಯಗತಗೊಳಿಸಲಾಯಿತು. 3D- ಮುದ್ರಿತ ಕಾರ್ಬನ್ ಫೈಬರ್ನ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವುದು ಈ ಉಪಗ್ರಹ ಉಡಾವಣೆಯ ಹಿಂದಿನ ಉದ್ದೇಶವಾಗಿದೆ.
- ನಿಶಾ ದತ್ ಗೆ “ವರ್ಷದ ಸಾಮಾಜಿಕ ಉದ್ಯಮಿ” ಪ್ರಶಸ್ತಿ: Intellecap ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಿಶಾ ದತ್ ಅವರಿಗೆ ವರ್ಷದ ಸಾಮಾಜಿಕ ಉದ್ಯಮಿ ಪ್ರಶಸ್ತಿ ಲಭಿಸಿದೆ. ಆ ಮೂಲಕ ಈ ಪ್ರಶಸ್ತಿಯನ್ನು ಪಡೆದ ದೇಶದ ಮೊದಲ ಮಹಿಳಾ ನಾಯಕಿ ಎನಿಸಿದ್ದಾರೆ.
- ಕೆ. ಶ್ರೀಕಾಂತ್ ಗೆ ಆಸ್ಟ್ರೇಲಿಯಾ ಓಪನ್ ಸಿರೀಸ್ ಪ್ರಶಸ್ತಿ: ಸಿಡ್ನಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಸಿರೀಸ್ ಪಂದ್ಯದಲ್ಲಿ ವಿಶ್ವದ 11 ನೇ ಶ್ರೇಯಾಂಕಿತ ಕಿಡಿಂಬಿ ಶ್ರೀಕಾಂತ್ ಅವರು ಪ್ರಶಸ್ತಿಯನ್ನು ಗೆದ್ದುಕೊಂಡರು. ಇದು ಅವರಿಗೆ ಎರಡನೇ ಸತತ ಸೂಪರ್ ಸೀರೀಸ್ ಪ್ರಶಸ್ತಿ. ಒಲಿಂಪಿಕ್ ಚಾಂಪಿಯನ್ ಚೆನ್ ಲಾಂಗ್ ಅವರನ್ನು ಸೋಲಿಸಿ ಶ್ರೀಕಾಂತ್ ಪ್ರಶಸ್ತಿಗೆ ಮುತ್ತಿಟ್ಟರು. ಚೆನ್ ಲಾಂಗ್ ವಿಶ್ವ ನಂ .6 ಮತ್ತು ಪ್ರಸ್ತುತ ಆಲ್ ಇಂಗ್ಲೆಂಡ್ ಚಾಂಪಿಯನ್ ಆಗಿದ್ದಾರೆ.
Plz help us to download information
No comments