ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜೂನ್,9,10,2017
Question 1 |
1. ಯಾವ ದೇಶ ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (NATO)ನ ಹೊಸ ಸದಸ್ಯ ರಾಷ್ಟ್ರವಾಗಿ ಅಧಿಕೃತವಾಗಿ ಸೇರ್ಪಡೆಗೊಂಡಿತು?
ಮೊಂಟೆನೆಗ್ರೊ | |
ಕ್ಯೂಬಾ | |
ಘಾನ | |
ಸೊಮಾಲಿ |
ಅಮೆರಿಕದ ವಾಷಿಂಗ್ಟನ್ನಲ್ಲಿ ಜೂನ್ 5, 2017ರಂದು ನಡೆದ ಸಮಾರಂಭದಲ್ಲಿ ಮಾಂಟೆನೆಗ್ರೊ ಅಧಿಕೃತವಾಗಿ ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ) ನ 29 ನೆಯ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಗೊಂಡಿತು. ನ್ಯಾಟೋ ಕೇಂದ್ರ ಕಾರ್ಯಾಲಯವು ಬ್ರಸೆಲ್ಸ್, ಬೆಲ್ಜಿಯಂನಲ್ಲಿದೆ.
Question 2 |
2. ನೇಪಾಳದ ನೂತನ ಪ್ರಧಾನ ಮಂತ್ರಿಯಾಗಿ ಯಾರು ಪ್ರಮಾಣವಚನ ಸ್ವೀಕರಿಸಿದರು?
ಶೇರ್ ಬಹದ್ದೂರ್ ದ್ಯೂಬ | |
ಬಹದ್ದೂರ್ ಕುನ್ವಾರ್ | |
ಕೀರ್ತಿ ನಿಧಿ ಬಸ್ತ | |
ವಿಕ್ರಮಧೂತ ರಾಜೆ |
ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೆರ್ ಬಹದ್ದೂರ್ ದ್ಯೂಬೊ, ನೇಪಾಳದ ಕಠ್ಮಂಡುದಲ್ಲಿನ ರಾಷ್ಟ್ರಪತಿ ಭವನದಲ್ಲಿ ನೇಪಾಳದ ಹೊಸ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ದ್ಯೂಬಾ 4ನೇ ಬಾರಿಗೆ ಪ್ರಧಾನಿ ಹುದ್ದೆಯನ್ನು ವಹಿಸಿಕೊಂಡಿದ್ದಾರೆ.
Question 3 |
3. ಈ ಕೆಳಗಿನ ಯಾವ ಭಾರತೀಯ ವ್ಯಕ್ತಿ ಯುನಿಸೆಫ್ನ "ಸೂಪರ್ ಅಪ್ಪಂದಿರು (Super Dads)" ಅಭಿಯಾನಕ್ಕೆ ಆಯ್ಕೆಯಾಗಿದ್ದಾರೆ?
ಸಚಿನ್ ತೆಂಡುಲ್ಕರ್ | |
ರಾಹುಲ್ ದ್ರಾವಿಡ್ | |
ಸೌರವ್ ಗಂಗೂಲಿ | |
ವಿರೇಂದ್ರ ಸೆಹ್ವಾಗ್ |
ಸಚಿನ್ ತೆಂಡೂಲ್ಕರ್ ರವರು ಯುನಿಸೆಫ್ನ 'ಸೂಪರ್ ಅಪ್ಪಂದಿರು' ಅಭಿಯಾನದೊಂದಿಗೆ ಸೇರ್ಪಡೆಕೊಂಡಿದ್ದಾರೆ. ಮಕ್ಕಳ ಆರಂಭಿಕ ಬೆಳವಣಿಗೆಯಲ್ಲಿ ತಂದೆಯ ನಿರ್ಣಾಯಕ ಪಾತ್ರವನ್ನು ಇದು ತೋರಿಸುತ್ತದೆ. ಈಗಾಗಲೇ ಡೇವಿಡ್ ಬೆಕ್ಹ್ಯಾಮ್, ನೊವಾಕ್ ಜೊಕೊವಿಕ್, ಮಹೆರ್ಶಾಲಾ ಅಲಿ, ಲೆವಿಸ್ ಹ್ಯಾಮಿಲ್ಟನ್ ಮತ್ತು ಹಗ್ ಜಾಕ್ಮನ್ ಸೇರಿದಂತೆ ಹಲವಾರು ತಾರೆಯರು ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.
Question 4 |
4. ಯಾವ ರಾಜ್ಯ ಸರ್ಕಾರವು ಮದುವೆ ಸಮಾರಂಭಗಳಿಗೆ 'ಹಸಿರು ಶಿಷ್ಠಚಾರ'ವನ್ನು ಜಾರಿಗೆ ತರಲಿದೆ?
ಕೇರಳ | |
ಕರ್ನಾಟಕ | |
ತೆಲಂಗಣ | |
ಮಹಾರಾಷ್ಟ್ರ |
ಕೇರಳ ಸರ್ಕಾರವು ಮದುವೆ ಸಮಾರಂಭಗಳನ್ನು ಪರಿಸರ ಸ್ನೇಹಿಯನ್ನಾಗಿಸಲು ರಾಜ್ಯದಲ್ಲಿ ಹಸಿರು ಶಿಷ್ಠಚಾರ ವನ್ನು ಜಾರಿಗೆ ತಂದಿದೆ. ಪ್ರತಿದಿನದ ಜೀವನದಲ್ಲಿ ಪ್ಲ್ಯಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವುದು ಇದರ ಉದ್ದೇಶ. ಈ ಶಿಷ್ಠಚಾರ ಅನುಷ್ಠಾನದಿಂದ ಮದುವೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಮತ್ತು ಇತರ ಜೈವಿಕವಾಗಿ ವಿಘಟಿಸಲ್ಪಡದ ವಸ್ತುಗಳ ಬಳಕೆ ನಿಷಿದ್ದ.
Question 5 |
5. ಯಾವ ಬ್ಯಾಂಕ್ ದೇಶಾದ್ಯಂತ 100 ಡಿಜಿಟಲ್ ಗ್ರಾಮಗಳನ್ನು ಸ್ಥಾಪಿಸಲಿದೆ?
ವಿಜಯಾ ಬ್ಯಾಂಕ್ | |
ಸಿಂಡಿಕೇಟ್ ಬ್ಯಾಂಕ್ | |
ಕೆನರಾ ಬ್ಯಾಂಕ್ | |
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ |
ಗ್ರಾಮೀಣ ಜನರಲ್ಲಿ ಡಿಜಿಟಲ್ ಬ್ಯಾಂಕಿಂಗ್ ಅನ್ನು ಉತ್ತೇಜಿಸುವ ಉದ್ದೇಶದಿಂದ ವಿಜಯಾ ಬ್ಯಾಂಕ್ ದೇಶದ ವಿವಿಧ ರಾಜ್ಯಗಳಲ್ಲಿ 100 ಡಿಜಿಟಲ್ ಹಳ್ಳಿಗಳನ್ನು ಸ್ಥಾಪಿಸಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಏಕೈಕ ಸಾರ್ವಜನಿಕ ವಲಯ ಹಣಕಾಸು ಸಂಸ್ಥೆಯಾಗಿದ್ದು, ಗುಂಟೂರು ಜಿಲ್ಲೆಯ ಐದು ಹಳ್ಳಿಗಳನ್ನು ಈಗಾಗಲೇ ಅಭಿವೃದ್ಧಿಪಡಿಸಿದೆ. ಡಿಜಿಟಲ್ ಗ್ರಾಮಗಳಲ್ಲಿ ಬ್ಯಾಂಕ್ ಉಚಿತ ಇಂಟರ್ನೆಟ್, ಉಚಿತ Wi-Fi ಸಂಪರ್ಕ, ಮೊಬೈಲ್ ಪಾವತಿ ಸೌಲಭ್ಯಗಳು, ಎಟಿಎಂ ಕಾರ್ಡ್ಗಳು, ಆನ್ಲೈನ್ ಬ್ಯಾಂಕಿಂಗ್ ಮತ್ತು ಇತರೆ ಸೌಲಭ್ಯಗಳನ್ನು ಗ್ರಾಮಸ್ಥರಿಗೆ ನೀಡಲಾಗುವುದು.
Question 6 |
6. 1200MW ಬುಧಿ-ಗಂಡಾಕಿ ಹೈಡ್ರೋಪವರ್ ಪ್ರಾಜೆಕ್ಟ್ ಅನ್ನು ನಿರ್ಮಿಸಲು ನೇಪಾಳವು ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ?
ಭಾರತ | |
ಚೀನಾ | |
ಶ್ರೀಲಂಕಾ | |
ಮ್ಯಾನ್ಮಾರ್ |
1,200 ಮೆಗಾವಾಟ್ ಬುಧಿ-ಗಂಡಾಕಿ ಹೈಡ್ರೊಎಲೆಕ್ಟ್ರಿಕ್ ಯೋಜನೆಯನ್ನು ನಿರ್ಮಿಸಲು ನೇಪಾಳ ಇತ್ತೀಚೆಗೆ ಚೀನಾ ಜಜೌಬ ಗ್ರೂಪ್ ಕಾರ್ಪೊರೇಷನ್ (ಸಿಜಿಜಿಸಿ) ನೊಂದಿಗೆ ಹಣಕಾಸು ಒಪ್ಪಂದಕ್ಕೆ ಸಹಿ ಹಾಕಿದೆ. ಯೋಜನೆಯ ಅಂದಾಜು ವೆಚ್ಚ $ 2.5 ಶತಕೋಟಿ. ತೀವ್ರ ವಿದ್ಯುತ್ ಕೊರತೆಯನ್ನು ಎದುರಿಸುತ್ತಿರುವ ನೇಪಾಳಕ್ಕೆ ಈ ಯೋಜನೆ ಸಹಾಯವಾಗಲಿದೆ.
Question 7 |
7. ಜೈವಿಕವಾಗಿ- ವಿಘಟನೀಯ ಪ್ರಿಪೇಯ್ಡ್ ಉಡುಗೊರೆ ಕಾರ್ಡ್ಗಳನ್ನು ಪ್ರಾರಂಭಿಸಿದ ಭಾರತದ ಮೊದಲ ಬ್ಯಾಂಕ್ ಯಾವುದು?
ಆಕ್ಸಿಸ್ ಬ್ಯಾಂಕ್ | |
ಕಾರ್ಪೋರೇಶನ್ ಬ್ಯಾಂಕ್ | |
ಐಸಿಐಸಿಐ | |
ಸಿಂಡಿಕೇಟ್ ಬ್ಯಾಂಕ್ |
ಆಕ್ಸಿಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಪರಿಸರ ಸ್ನೇಹಿ ಪಾವತಿ ವಿಧಾನವನ್ನು ನೀಡಲು ಜೈವಿಕ-ವಿಘಟನೀಯ ಪ್ರಿಪೇಡ್ ಗಿಫ್ಟ್ ಪ್ಲಾಸ್ಟಿಕ್ ಕಾರ್ಡ್ ಅನ್ನು ಪ್ರಾರಂಭಿದೆ. ಆ ಮೂಲಕ ಜೈವಿಕವಾಗಿ- ವಿಘಟನೀಯ ಪ್ರಿಪೇಯ್ಡ್ ಉಡುಗೊರೆ ಆರಂಭಿಸಿದ ದೇಶದ ಮೊದಲ ಬ್ಯಾಂಕ್ ಎನಿಸಿದೆ. ಪ್ಲಾಸ್ಟಿಕ್ ಕಾರ್ಡುಗಳು ಪಾಲಿಥೈಲಿನ್ ಟೆರೆಫ್ತಾಲೇಟ್ ಗ್ಲೈಕಾಲ್ (ಪಿಇಟಿಜಿ) ಮಾಡಲ್ಪಟ್ಟಿದೆ ಮತ್ತು ಅದನ್ನು ಸುಲಭವಾಗಿ ವಿಘಟಿಸಬಹುದು ಮತ್ತು ಮರುಬಳಕೆ ಮಾಡಬಹುದು. ಎಲ್ಲಾ ದೇಶೀಯ ವ್ಯಾಪಾರಿ ಮಳಿಗೆಗಳು ಮತ್ತು ಆನ್ಲೈನ್ ಪೋರ್ಟಲ್ಗಳಲ್ಲಿ ಕಾರ್ಡುಗಳು ಸ್ವೀಕಾರಾರ್ಹವಾಗಿರುತ್ತದೆ.
Question 8 |
8. ಜಾಗತಿಕ ತಂಬಾಕು ನಿಯಂತ್ರಣಕ್ಕಾಗಿ WHO ಡೈರೆಕ್ಟರ್ ಜನರಲ್ ಸ್ಪೆಷಲ್ ರೆಗ್ನೈಸೇಶನ್ ಆವಾರ್ಡ್ ಪಡೆದ ಭಾರತದ ವ್ಯಕ್ತಿ ________?
ಜೆ ಪಿ ನಡ್ಡಾ | |
ನಿತಿನ್ ಗಡ್ಕಾರಿ | |
ಅಮಿತಾಬ್ ಬಚ್ಚನ್ | |
ಸಚಿನ್ ತೆಂಡುಲ್ಕರ್ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡ ಅವರಿಗೆ WHO ಡೈರೆಕ್ಟರ್ ಜನರಲ್ ಸ್ಪೆಷಲ್ ರೆಗ್ನೈಸೇಶನ್ ಪ್ರಶಸ್ತಿ ಲಭಿಸಿದೆ. ತಂಬಾಕು ನಿಯಂತ್ರಣದ ಉಪಕ್ರಮಗಳನ್ನು ಹೆಚ್ಚಿಸಲು ಮತ್ತು ತಂಬಾಕು ಬಳಕೆಯ ಅಪಾಯಗಳಿಂದ ಜನರನ್ನು ರಕ್ಷಿಸಲು ಕೈಗೊಳ್ಳಲಾದ ಕ್ರಮಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
Question 9 |
9. ಮಹಾನಂದ ವನ್ಯಜೀವಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
ಪಶ್ಚಿಮ ಬಂಗಾಳ | |
ತೆಲಂಗಣ | |
ಗೋವಾ | |
ಗುಜರಾತ್ |
Question 10 |
10. 2017 ಫೋರ್ಬ್ಸ್ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೆಟ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಕ್ರೀಡಾಪಟು ಯಾರು?
ಮಹೇಂದ್ರ ಸಿಂಗ್ ಧೋನಿ | |
ವಿರಾಟ್ ಕೊಹ್ಲಿ | |
ಪಿ ವಿ ಸಿಂಧು | |
ಕಿಡಂಬಿ ಶ್ರೀಕಾಂತ್ |
ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 2017 ರ ಫೋರ್ಬ್ಸ್ ಪಟ್ಟಿಯಲ್ಲಿ ವಿಶ್ವದ 100 ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್ಗಳ ಪೈಕಿ ಸ್ಥಾನ ಪಡೆದ ಭಾರತದ ಏಕೈಕ ಕ್ರೀಡಾಪಟುವಾಗಿದ್ದಾರೆ. 2017 ರ ಫೋರ್ಬ್ಸ್ ಪಟ್ಟಿಯಲ್ಲಿ ಕೊಹ್ಲಿ 89 ನೇ ಸ್ಥಾನದಲ್ಲಿದ್ದಾರೆ. ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೋನಾಲ್ಡೋ ಅವರು ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಅಮೆರಿಕದ ಬ್ಯಾಸ್ಕೆಟ್ಬಾಲ್ ತಾರೆ ಲೆಬ್ರಾನ್ ಜೇಮ್ಸ್, ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಮತ್ತು ಸ್ವಿಸ್ ಟೆನ್ನಿಸ್ ತಾರೆ ರೋಜರ್ ಫೆಡರರ್ ಇದ್ದಾರೆ.
[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜೂನ್9102017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Super
Nice