ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-13, 2016
Question 1 |
1.ಇತ್ತೀಚೆಗೆ ಈ ಕೆಳಗಿನ ಯಾವ ಹಿಂದಿ ಚಿತ್ರಕ್ಕೆ ರಂಗಭೂಮಿ ಸ್ಪರ್ಶ ನೀಡಲು ಭಾರತ ಮತ್ತು ಚೀನಾ ಸಹಿ ಹಾಕಿವೆ?
ಶೋಲೆ | |
ಆವಾರಾ | |
ಮುಘಲ್-ಇ-ಅಜಾಮ್ | |
ಗೈಡ್ |
ಹಿಂದಿ ಚಿತ್ರರಂಗದ ನಿರ್ದೇಶಕ, ನಟ ರಾಜ್‌ಕಪೂರ್ ಅವರ ಜನಪ್ರಿಯ ಚಿತ್ರ ‘ಆವಾರಾ’ ಚಿತ್ರವನ್ನು ರಂಗಪ್ರಯೋಗಕ್ಕೆ ಇಳಿಸಲು ಭಾರತ ಮತ್ತು ಚೀನಾ ಜಂಟಿಯಾಗಿ ಮುಂದಾಗಿವೆ. 1951ರಲ್ಲಿ ಬಿಡುಗಡೆಯಾದ ‘ಆವಾರಾ’ ಚೀನಾದಲ್ಲಿಯೂ ಭರ್ಜರಿ ಯಶಸ್ಸು ಕಂಡಿತ್ತು. ಈ ಯಶಸ್ಸನ್ನು ಮರುಕಳಿಸುವ ಗುರಿಯೊಂದಿಗೆ ಭಾರತದ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್) ಮತ್ತು ಚೀನಾದ ಶಾಂಘೈ ಅಂತರರಾಷ್ಟ್ರೀಯ ಕಲೆಗಳ ಉತ್ಸವ (ಸಿಎಸ್‌ಐಎಎಫ್) ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದ ಪ್ರಕಾರ ‘ಆವಾರಾ’ ಸಿನಿಮಾದ ರಂಗಭೂಮಿ ಅವತರಣಿಕೆಯನ್ನು ಭಾರತ ಮತ್ತು ಚೀನಾ ಸೇರಿದಂತೆ ಜಗತ್ತಿನೆಲ್ಲೆಡೆಯ ಆಧುನಿಕ ಪ್ರೇಕ್ಷಕರನ್ನು ಗಮನದಲ್ಲಿರಿಸಿಕೊಂಡು ಬದಲಾವಣೆಗಳೊಂದಿಗೆ ಅಳವಡಿಸಲಾಗುತ್ತದೆ ಎಂದು ಐಸಿಸಿಆರ್‌ನ ಪ್ರಧಾನ ನಿರ್ದೇಶಕ ಅಮರೇಂದ್ರ ಕತುವಾ ಅವರು ತಿಳಿಸಿದ್ದಾರೆ.
Question 2 |
2.ಯಾವ ನಗರದಲ್ಲಿ “ಸಾರ್ಕ್ ಸೂಫಿ ಉತ್ಸವ” ಇತ್ತೀಚೆಗೆ ಆರಂಭಗೊಂಡಿತು?
ಜೈಪುರ | |
ಪುಣೆ | |
ನಾಸಿಕ್ | |
ಹೈದ್ರಾಬಾದ್ |
ಮೂರನೇ ಸಾರ್ಕ್ ಸೂಫಿ ಉತ್ಸವ ರಾಜಸ್ತಾನದ ಜೈಪುರದಲ್ಲಿ ಅಕ್ಟೋಬರ್ 14ರಂದು ಆರಂಭವಾಗಿದ್ದು, ಅಕ್ಟೋಬರ್ 16 ವರೆಗೆ ನಡೆಯಲಿದೆ. ಈ ಉತ್ಸವನ್ನು ಸಾರ್ಕ್ ರೈಟರ್ಸ್ ಮತ್ತು ಲಿಟರೆಚರ್ (FOSWAL) ಆಯೋಜಿಸುತ್ತಿದೆ. ಪಾಕಿಸ್ತಾನವನ್ನು ಹೊರತುಪಡಿಸಿ ಉಳಿದ ಸಾರ್ಕ್ ರಾಷ್ಟ್ರಗಳ ಸೂಫಿ ಸಂತರು, ವಿದ್ವಾಂಸರು, ಕವಿಗಳು, ಗಾಯಕರು, ನೃತ್ಯಗಾರರು ಮತ್ತು ಸಂಗೀತಗಾರರು ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.
Question 3 |
3.ಇತ್ತೀಚೆಗೆ ನಿಧನರಾದ ಖ್ಯಾತ ನಾಟಕಕಾರ, ಕಲಾವಿದ ಹಾಗೂ ನೊಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ “ಡರಿಯೋ ಫೋ” ಯಾವ ದೇಶದವರು?
ಇಟಲಿ | |
ಸ್ಪೇನ್ | |
ಫ್ರಾನ್ಸ್ | |
ಮೆಕ್ಸಿಕೊ |
ಇಟಲಿಯ ಖ್ಯಾತ ನಾಟಕಕಾರ, ಕಲಾವಿದ, 1997ರ ನೊಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಡರಿಯೋ ಫೋ (90) ನಿಧನರಾದರು. “ಆಕ್ಸಿಡೆಂಟಲ್ ಡೆತ್ ಆಫ್ ಆನ್ ಅನಾರ್ಕಿಸ್ಟ್ (Accidental Death of an Anarchist)” ಮತ್ತು “ಕಾನ್ಂಟ್ ಪೆ, ವೊಂಟ್ ಪೆ (Can’t Pay, Won’t Pay)”ರಾಜಕೀಯ ವಿಡಂಬಕ ನಾಟಕಗಳು ಫೋ ಅವರಿಗೆ ಅಪಾರ ಮನ್ನಣೆ ತಂದಿದ್ದವು.
Question 4 |
4.ಈ ಕೆಳಗಿನವುಗಳಲ್ಲಿ ಪುಸ್ತಕಗಳು ಮತ್ತು ಲೇಖಕರ ಹೊಂದಾಣಿಕೆ ಆಗಿಲ್ಲದಿರುವುದನ್ನು ಗುರುತಿಸಿ:
ಹಾಫ್ ಆಫ್ ವಾಟ್ ಐ ಸೇ (Half of What I Say) – ಅನಿಲ್ ಮೆನನ್ | |
ಜಿನ್ನಾ ಆಪ್ಟನ್ ಕಮ್ ಟು ಅವರ್ ಹೌಸ್ (Jinnah Often Came To Our House) – ಕಿರಣ್ ದೋಶಿ | |
ದಿ ಆದಿವಾಸಿ ವಿಲ್ ನಾಟ್ ಡ್ಯಾನ್ಸ್ (The Adivasi Will Not Dance) – ಹನ್ಸದ ಸೋವೆಂದ್ರ ಶೇಖರ್ | |
ದಿ ಐಲ್ಯಾಂಡ್ ಆಫ್ ಲಾಸ್ಟ್ ಗರ್ಲ್ಸ್ (The Island of Lost Girls) – ಮನು ಚಕ್ರವರ್ತಿ |
“ದಿ ಐಲ್ಯಾಂಡ್ ಆಫ್ ಲಾಸ್ಟ್ ಗರ್ಲ್ಸ್” ಪುಸ್ತಕದ ಲೇಖಕರು ಮಂಜುಳ ಪದ್ಮನಾಭನ್. ಈ ಮೇಲಿನ ಪುಸ್ತಕಗಳನ್ನು ದಿ ಹಿಂದು ಸಾಹಿತ್ಯ ಪ್ರಶಸ್ತಿ-2016ಗೆ ಅಂತಿಮ ಸುತ್ತಿಗೆ ಆಯ್ಕೆಮಾಡಲಾಗಿದ್ದು, ವಿಜೇತರನ್ನು ಜನವರಿ 2017ರಲ್ಲಿ ಘೋಷಿಸಲಾಗುವುದು.
Question 5 |
5.ಈ ಕೆಳಗಿನ ಯಾವ ಸಂಸ್ಥೆ ದೇಶದ ಅತಿ ಉದ್ದದ ಎಲ್ಪಿಜಿ (ಅಡುಗೆ ಅನಿಲ) ಮಾರ್ಗವನ್ನು ನಿರ್ಮಿಸಲು ಯೋಜನೆ ರೂಪಿಸಿದೆ?
ಇಂಡಿಯನ್ ಆಯಿಲ್ ಕಾರ್ಪೋರೇಷನ್ | |
ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ | |
ಪೆಟ್ರೋನೆಟ್ ಎಲ್ಎನ್ಜಿ | |
ಆಯಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ |
ರ್ಕಾರಿ ಸ್ವಾಮ್ಯದ ತೈಲ ಕಂಪೆನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ದೇಶದ ಅತ್ಯಂತ ಉದ್ದದ ಎಲ್ಪಿಜಿ (ಅಡುಗೆ ಅನಿಲ) ಕೊಳವೆಮಾರ್ಗ ನಿರ್ಮಿಸಲು ಯೋಜಿಸಿದೆ. ಈ ಮಾರ್ಗವು ಗುಜರಾತ್ ಕರಾವಳಿಯಿಂದ ಉತ್ತರ ಪ್ರದೇಶದ ಗೋರಖ್ಪುರದವರೆಗೆ ನಿರ್ಮಾಣಗೊಳ್ಳಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಅಡುಗೆ ಅನಿಲ ಬೇಡಿಕೆಯನ್ನು ಪೂರೈಸಲು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಕಂಪೆನಿ ಹೇಳಿದೆ. ಇದಕ್ಕೆ ಅನುಮತಿ ನೀಡುವಂತೆ ಕೋರಿ ಐಒಸಿಯು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದೆ. ಗುಜರಾತ್ನ ಕಾಂಡ್ಲಾ ಬಂದರಿಗೆ ಅನಿಲವನ್ನು ಆಮದು ಮಾಡಿಕೊಳ್ಳಲಿರುವ ಇಂಡಿಯನ್ ಆಯಿಲ್, ಅದನ್ನು ಕೊಳವೆ ಮೂಲಕ ಗೋರಖ್ಪುರಕ್ಕೆ ಸಾಗಿಸಲಿದೆ.
Question 6 |
6.“ಇನ್ಸ್ಟಿಟ್ಯೂಟ್ ಆಫ್ ಮೈಕ್ರೊಬಿಯಲ್ ಟೆಕ್ನಾಲಜಿ (Institute of Microbial Technology (IMTECH))” ಎಲ್ಲಿದೆ?
ಬೆಂಗಳೂರು | |
ಚಂಡೀಗರ್ | |
ಮುಂಬೈ | |
ಲಕ್ನೋ |
“ಇನ್ಸ್ಟಿಟ್ಯೂಟ್ ಆಫ್ ಮೈಕ್ರೊಬಿಯಲ್ ಟೆಕ್ನಾಲಜಿ” ಚಂಡೀಗರದಲ್ಲಿದೆ. ಇತ್ತೀಚೆಗೆ ಈ ಸಂಸ್ಥೆಯು ಸ್ವದೇಶಿ ತಂತ್ರಜ್ಞಾನದೊಂದಿಗೆ ಪ್ರೋಟಿನ್ ಆಧರಿತ ಇನ್ಸುಲಿನ್, ಸ್ಟ್ರೆಪ್ಟೊಕಿನೆಸ್ ಮತ್ತು ಹೆಪಟಿಟಿಸ್ ಬಿ ಲಸಿಕೆಗಳನ್ನು ಅಭಿವೃದ್ದಿಪಡಿಸಿ ಸುದ್ದಿಯಲ್ಲಿತ್ತು. ಸದ್ಯ ಈ ಔಷಧಗಳನ್ನು ಭಾರತ ವಿದೇಶಗಳಿಂದ ಆಮದುಮಾಡಿಕೊಳ್ಳುತ್ತಿದೆ. ಈ ಲಸಿಕೆಗಳ ಅಭಿವೃದ್ದಿಯಿಂದ ಮುಂದಿನ ದಿನಗಳಲ್ಲಿ ಇವುಗಳ ದರ ಮೂರರಿಂದ ನಾಲ್ಕುಪಟ್ಟು ಕಡಿಮೆಯಾಗಲಿದೆ ಎನ್ನಲಾಗಿದೆ. ಯೀಸ್ಟ್ ನ ವಿದಳನ ತಂತ್ರಗಾರಿಕೆ (fission yeast) ಬಳಸಿ ಈ ಲಸಿಕೆಗಳನ್ನು ಅಭಿವೃದ್ದಿಪಡಿಸಲಾಗಿದೆ.
Question 7 |
7.ಜಾಗತಿಕ ಹಸಿವು ಸೂಚ್ಯಂಕ (Global Hunger Index)ದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
80 | |
97 | |
63 | |
99 |
ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 118 ದೇಶಗಳ ಪೈಕಿ 97ನೇ ಸ್ಥಾನವನ್ನು ಪಡೆದುಕೊಂಡಿದೆ. 2016ನೇ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 100 ಅಂಕಗಳಿಗೆ ಕೇವಲ 28.5 ಅಂಕಗಳನ್ನು ಮಾತ್ರ ಭಾರತ ಪಡೆದುಕೊಂಡಿದೆ. ಆ ಮೂಲಕ ಭಾರತದಲ್ಲಿ ಇನ್ನೂ ವ್ಯಾಪಕ ಪ್ರಮಾಣದಲ್ಲಿ ಹಸಿವಿನ ಸಮಸ್ಯೆ ತಾಂಡವಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇಂಟರ್ ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ (IFPRI) ಈ ಸೂಚ್ಯಂಕವನ್ನು ಬಿಡುಗಡೆಗೊಳಿಸಿದೆ.
Question 8 |
8.2016 ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಪಡೆದುಕೊಂಡ “ಬಾಬ್ ಡೊಲೈನ್” ಯಾವ ದೇಶದವರು?
ರಷ್ಯಾ | |
ಅಮೆರಿಕ | |
ಜರ್ಮನಿ | |
ಸ್ವೀಡನ್ |
ಅಮೆರಿಕದ ಖ್ಯಾತ ಗೀತ ರಚನಕಾರ, ಕಲಾಕಾರ ಮತ್ತು ಸಂಗೀತ ಕ್ಷೇತ್ರದ ದಂತಕತೆ ಎನಿಸಿರುವ ಬಾಬ್ ಡೊಲೈನ್ ಅವರಿಗೆ 2016ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. ಮಹಾನ್ ಅಮೆರಿಕದ ಹಾಡುಗಳ ಪರಂಪರೆಗೆ ಹೊಸ ಕಾವ್ಯ ಅಭಿವ್ಯಕ್ತಿಗಳನ್ನು ಸೃಷ್ಟಿಸಿದ್ದಕ್ಕಾಗಿ ಡೈಲಾನ್ ಅವರಿಗೆ 80 ಲಕ್ಷ ಸ್ವೀಡಿಷ್ ಕ್ರೌನ್ (927,740 ಡಾಲರ್) ಮೊತ್ತದ ಪ್ರಶಸ್ತಿ ಸಂದಿದೆ.
Question 9 |
9.2016 ಅಂತಾರಾಷ್ಟ್ರೀಯ ವಿಪತ್ತು ತಗ್ಗಿಸುವ ದಿನ (International Day for Disaster Reduction ) ಧ್ಯೇಯವಾಕ್ಯ _____?
Live to Tell | |
World With No Disaster | |
No Disaster No Problem | |
Resilience is for Life |
ಅಂತಾರಾಷ್ಟ್ರೀಯ ವಿಪತ್ತು ತಗ್ಗಿಸುವ ದಿನವನ್ನು ಪ್ರತಿವರ್ಷ ಅಕ್ಟೋಬರ್ 13ರಂದು ಆಚರಿಸಲಾಗುತ್ತದೆ. ವಿಪತ್ತು ಚೇತರಿಸಿಕೊಳ್ಳುವ ಸಮುದಾಯ ಮತ್ತು ರಾಷ್ಟ್ರಗಳನ್ನು ನಿರ್ಮಿಸಲು ಪ್ರತಿ ವ್ಯಕ್ತಿ, ಸಮುದಾಯ ಮತ್ತು ಸರ್ಕಾರ ಭಾಗವಹಿಸುವಂತೆ ಪ್ರೋತ್ಸಾಹಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. Live to Tell: Raising Awareness, Reducing Mortality”, ಇದು ಈ ವರ್ಷದ ಧ್ಯೇಯವಾಕ್ಯ.
Question 10 |
10. ರಣಜಿ ಕ್ರಿಕೆಟ್ ಇತಿಹಾಸದಲ್ಲಿ 594 ರನ್ ಪೇರಿಸುವ ಮೂಲಕ ಹೊಸ ದಾಖಲೆ ಬರೆದ ಆಟಗಾರರು ಯಾರು?
ಸ್ವಪ್ನಿಲ್ ಗುಗಾಲೆ ಮತ್ತು ಅಂಕಿತ್ ಬಾವ್ನೆ | |
ಅಂಕಿತ್ ಬಾವ್ನೆ ಮತ್ತು ಮಹಮ್ಮದ್ ಕೈಫ್ | |
ಸ್ವಪ್ನಿಲ್ ಗುಗಾಲೆ ಮತ್ತು ಮಹಮ್ಮದ್ ಕೈಫ್ | |
ರಫಾತುಲ್ಲಾ ಮಹಮ್ಮದ್ ಮತ್ತು ಅಂಕಿತ್ ಬಾವ್ನೆ |
ಮಹಾರಾಷ್ಟ್ರ ತಂಡದ ಸ್ವಪ್ನಿಲ್ ಗುಗಾಲೆ ಹಾಗೂ ಅಂಕಿತ್ ಭಾವ್ನೆ ಭಾರತದ ಪ್ರಮುಖ ದೇಶೀಯ ಸ್ಪರ್ಧೆ ರಣಜಿ ಟ್ರೋಫಿ ಇತಿಹಾಸದಲ್ಲಿ ಗರಿಷ್ಠ ಜೊತೆಯಾಟ ನಡೆಸಿ ವಿಶ್ವದ ಗಮನ ಸೆಳೆದಿದ್ದಾರೆ. ರಣಜಿ ಟ್ರೋಫಿಯ 2ನೆ ದಿನದಾಟವಾದ ಶುಕ್ರವಾರ ದಿಲ್ಲಿಯ ವಿರುದ್ಧ 3ನೆ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 594 ರನ್ ಸೇರಿಸಿದ ಸ್ವಪ್ನಿಲ್ ಹಾಗೂ ಅಂಕಿತ್ ಹೊಸ ದಾಖಲೆ ನಿರ್ಮಿಸಿದರು. ಈ ಮೂಲಕ 1946-47ರ ಋತುವಿನಲ್ಲಿ 3ನೆ ವಿಕೆಟ್ಗೆ 577 ರನ್ ಜೊತೆಯಾಟ ನಡೆಸಿದ್ದ ಬರೋಡ ತಂಡದ ವಿಜಯ್ ಹಝಾರೆ ಹಾಗೂ ಗುಲ್ ಮುಹಮ್ಮದ್ ಅವರ ಹಳೆಯ ದಾಖಲೆ ಮುರಿದರು. ಇದು ವಿಶ್ವದ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ದಾಖಲಾದ ಎರಡನೆ ಗರಿಷ್ಠ ಜೊತೆಯಾಟವಾಗಿದೆ. 2006ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕರ ಹಾಗೂ ಮಹೇಲ ಜಯವರ್ಧನೆ 624 ರನ್ ಸೇರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-13.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ