ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜುಲೈ,3 to 6,2017
Question 1 |
1. ಭಾರತದ ಅತ್ಯಂತ ದೊಡ್ಡ ಜಾಗತಿಕ ಕೌಶಲ್ಯ ಪಾರ್ಕ್ ಅನ್ನು ಯಾವ ನಗರದಲ್ಲಿ ಸ್ಥಾಪಿಸಲಾಗುವುದು?
ಭೋಪಾಲ್ | |
ಚೆನ್ನೈ | |
ಹೈದ್ರಾಬಾದ್ | |
ಪುಣೆ |
ಮಧ್ಯಪ್ರದೇಶದ ಭೋಪಾಲ್ ನಲ್ಲಿ ಭಾರತದ ಅತಿದೊಡ್ಡ ಜಾಗತಿಕ ಕೌಶಲ್ಯ ಪಾರ್ಕ್ ತಲೆಯತ್ತಲಿದ್ದು, ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ಮತ್ತು ರಾಜೀವ್ ಪ್ರತಾಪ್ ರೂಡಿ (ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಸಚಿವಾಲಯದ ರಾಜ್ಯ ಸಚಿವ) ಜುಲೈ 3, 2017 ರಂದು ಶಂಕುಸ್ಥಾಪನೆ ನೆರವೇರಿಸಿದರು. ಜಾಗತಿಕ ಕೌಶಲ್ಯ ಪಾರ್ಕ್ ಗಾಗಿ ಭೋಪಾಲಿನ ನರೇಲಾ ಶಂಕಾರಿ ಪ್ರದೇಶದಲ್ಲಿ 37 ಎಕರೆ ಭೂಮಿಯನ್ನು ನೀಡಲಾಗಿದೆ. 645 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಿಸಲಾಗುವುದು. ಅಂತಾರಾಷ್ಟ್ರೀಯ ಉತ್ಕೃಷ್ಟತೆ ಹೊಂದಿರುವ ತರಬೇತುದಾರರಿಂದ ಪ್ರತಿವರ್ಷ 1000 ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ.
Question 2 |
2. ಈ ಕೆಳಗಿನ ಯಾರು ಹಾಂಗ್ ಕಾಂಗಿನ ಮೊದಲ ಮಹಿಳಾ ಮುಖ್ಯ ಕಾರ್ಯನಿರ್ವಾಹಕರಾಗಿ ನೇಮಕಗೊಂಡಿದ್ದಾರೆ?
ಜಾಸ್ಮಿನ್ ಹಡ್ಸನ್ | |
ಜ್ಯೂರಿ ಕ್ಯಾಥರಿನ್ | |
ಕ್ಯಾರಿ ಲ್ಯಾಮ್ | |
ಲಿಲಿ ವೊಗ |
ಮುಖ್ಯ ಕಾರ್ಯನಿರ್ವಾಹಕ ಚುನಾವಣೆಯನ್ನು ಗೆದ್ದ ನಂತರ ಕ್ಯಾರಿ ಲ್ಯಾಮ್ ರವರು ಜುಲೈ 1, 2017 ರಂದು ಹಾಂಗ್ ಕಾಂಗಿನ ಮೊದಲ ಮಹಿಳಾ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ.
Question 3 |
3. ಭಾರತದ ಅತಿ ಎತ್ತರದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಗೋಪುರವು ಯಾವ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸಲಿದೆ?
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ | |
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ | |
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ | |
ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ |
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಭಾರತದ ಅತಿ ಎತ್ತರದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಗೋಪುರ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐಎ) ಸ್ಥಾಪನೆಯಾಗಿದೆ. ಹೊಸ 101.9 ಮೀಟರ್ ಎಟಿಸಿ ಗೋಪುರವನ್ನು ರೂ 350 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಡಿಸೆಂಬರ್ 2017 ರೊಳಗೆ ಕಾರ್ಯಾಚರಣೆ ಆರಂಭಿಸಲಿದೆ. ಒಮ್ಮೆ ನಿರ್ಮಾಣವಾದ ನಂತರ ಇದು ವಿಶ್ವದ 7ನೇ ಅತಿ ಎತ್ತರದ ATC ಗೋಪುರವಾಗಲಿದೆ.
Question 4 |
4. ಯಾವ ದಿನದಂದು “ವಿಶ್ವ ಕ್ರೀಡಾ ಪತ್ರಿಕೋದ್ಯಮ ದಿನ” ವನ್ನು ಆಚರಿಸಲಾಗುತ್ತದೆ?
ಜೂನ್ 29 | |
ಜೂನ್ 30 | |
ಜುಲೈ 1 | |
ಜುಲೈ 2 |
ಕ್ರೀಡಾ ಪ್ರಚಾರಕ್ಕಾಗಿ ಕ್ರೀಡಾ ಪತ್ರಕರ್ತರ ಸೇವೆಗಳನ್ನು ಗುರುತಿಸಲು ಜುಲೈ 2 ರಂದು ವಿಶ್ವ ಕ್ರೀಡಾ ಪತ್ರಿಕೋದ್ಯಮ ದಿನ”ವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.
Question 5 |
5. 2017 ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವನ್ನು (IPBFD) ಯಾವ ದಿನದಂದು ಆಚರಿಸಲಾಗುತ್ತದೆ?
ಜುಲೈ 2 | |
ಜುಲೈ 3 | |
ಜುಲೈ 4 | |
ಜುಲೈ 5 |
ಪ್ಲ್ಯಾಸ್ಟಿಕ್ ಚೀಲಗಳ ಬಳಕೆಯನ್ನು ನಿರ್ಮೂಲನೆ ಮಾಡಲು ಮತ್ತು ಸಾವಯವ ಮರುಬಳಕೆ ಚೀಲಗಳನ್ನು ಉತ್ತೇಜಿಸುವ ಅಗತ್ಯವನ್ನು ಎತ್ತಿ ತೋರಿಸಲು ಜುಲೈ 3ರಂದು ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವನ್ನು (IPBFD) ಪ್ರತಿ ವರ್ಷ ಆಚರಿಸಲಾಗುತ್ತದೆ.
Question 6 |
6. ಸರ್ಬಿಯಾದ ಮೊದಲ ಮಹಿಳಾ ಪ್ರಧಾನಿಯಾಗಿ ಯಾರು ಆಯ್ಕೆಯಾಗಿದ್ದಾರೆ?
ಮೇರಿ ಜೋನ್ | |
ಕ್ಸೇವಿಯರ್ ಬೆಟ್ಟೆಲ್ | |
ಅನಾ ಬ್ರ್ನಾಬಿಕ್ | |
ಸ್ವೆಟ್ಲಾನ |
ಸ್ವತಂತ್ರ ರಾಜಕಾರಣಿಯಾದ ಅನಾ ಬ್ರ್ನಾಬಿಕ್ ಸರ್ಬೀಯಾದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
Question 7 |
7. FIA ಫಾರ್ಮುಲಾ 3 ಯುರೋಪಿಯನ್ ಚಾಂಪಿಯನ್ಷಿಪ್ ಗೆದ್ದ ಮೊದಲ ಭಾರತೀಯ ಯಾರು?
ಜೆಹಾನ್ ದರುವಾಲ | |
ಅಶ್ವಿನ್ ಸುಂದರ್ | |
ನಾರಾಯಣ್ ಕಾರ್ತಿಕೇಯನ್ | |
ಶಿವ ನಾರಾಯಣ್ |
ನ್ಯೂರೆಂಬರ್ಗ್ ಸರ್ಕ್ಯೂಟ್ನಲ್ಲಿ ನಡೆದ FIA ಫಾರ್ಮುಲಾ 3 ಯುರೋಪಿಯನ್ ಚಾಂಪಿಯನ್ಷಿಪ್ ರೇಸ್ ನಲ್ಲಿ ಸಹಾರಾ ಫೋರ್ಸ್ ಇಂಡಿಯಾ ಅಕಾಡೆಮಿಯ ಜೆಹನ್ ದರುವಾಲಾ ಅವರು ಪ್ರಶಸ್ತಿ ಗೆಲ್ಲುವ ಮೂಲಕ ಈ ಪ್ರಶಸ್ತಿಯನ್ನು ಗೆದ್ದ ಪ್ರಥಮ ಭಾರತೀಯ ಚಾಲಕ ಎನಿಸಿದ್ದಾರೆ. ಎಫ್ಐಎ ಫಾರ್ಮುಲಾ 3 ವಿಶ್ವದ ಅತ್ಯಂತ ಕ್ಲಿಷ್ಟವಾದ ಜೂನಿಯರ್ ರೇಸಿಂಗ್ ಆಗಿದೆ.
Question 8 |
8. ಸ್ವಿಸ್ ನ್ಯಾಷನಲ್ ಬ್ಯಾಂಕ್ (SNB)ನ ವಿಶ್ಲೇಷಣೆಯ ಪ್ರಕಾರ 2016 ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇಟ್ಟಿರುವ ದೇಶಗಳ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
78 | |
88 | |
56 | |
79 |
ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು 676 ದಶಲಕ್ಷ ಸ್ವಿಸ್ ಫ್ರಾಂಕ್ (ಸುಮಾರು 4,500 ಕೋಟಿ ರೂಪಾಯಿ) ಹಣವನ್ನು ಇಟ್ಟಿದ್ದು, ಭಾರತ 88 ನೇ ಸ್ಥಾನದಲ್ಲಿದೆ ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್ಎನ್ಬಿ) 2016 ವಿಶ್ಲೇಷಣೆಯಲ್ಲಿ ತಿಳಿಸಲಾಗಿದೆ. ಯುನೈಟೆಡ್ ಕಿಂಗ್ಡಮ್ (ಯುಕೆ) ಮೊದಲ ಸ್ಥಾನದಲ್ಲಿದೆ. ಯುನೈಟೆಡ್ ಸ್ಟೇಟ್ಸ್ (ಯುಎಸ್), ವೆಸ್ಟ್ ಇಂಡೀಸ್, ಫ್ರಾನ್ಸ್, ಬಹಾಮಾಸ್, ಜರ್ಮನಿ ನಂತರದ ಸ್ಥಾನದಲ್ಲಿವೆ.
Question 9 |
9. 2017 UNDP ಸುಸ್ಥಿರ ಕೃಷಿ ಮಾದರಿ ಸಮಭಾಜಕ ಪ್ರಶಸ್ತಿಯನ್ನು ಯಾವ ಭಾರತೀಯ NGO ಪಡೆದುಕೊಂಡಿದೆ?
ಸ್ವಯಂ ಶಿಕ್ಷಣ ಪ್ರಯೋಗ್ | |
ಫೌಂಡೇಶನ್ ಫಾರ್ ಎಕಾಲಜಿಕಲ್ ಸರ್ವೀಸ್ | |
ಶಾಂತ ರೂರಲ್ ಎಜುಕೇಷನ್ ಟ್ರಸ್ಟ್ | |
ಚೈಲ್ಡ್ ರೈಟ್ಸ್ ಅಂಡ್ ಯೂ |
Question 10 |
10. ತಡೋಬ ಅಂಧಾರಿ ಹುಲಿ ಸಂರಕ್ಷಣಾ ಪ್ರದೇಶ (TATR) ಯಾವ ರಾಜ್ಯದಲ್ಲಿದೆ?
ಮಹಾರಾಷ್ಟ್ರ | |
ಮಧ್ಯ ಪ್ರದೇಶ | |
ಬಿಹಾರ | |
ಪಶ್ಚಿಮ ಬಂಗಾಳ |
[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜುಲೈ3-to-62017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ