ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜುಲೈ,21,22,23,2017
Question 1 |
1. ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರವು ಯಾವ ಹೊಸ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಿದೆ?
ಪ್ರಧಾನ ಮಂತ್ರಿ ವಯ ವಂದನಾ ಯೋಜನೆ | |
ಪ್ರಧಾನ ಮಂತ್ರಿ ವಯ ವಿಕಾಸ ಯೋಜನೆ | |
ಪ್ರಧಾನ ಮಂತ್ರಿ ವಯ ವರುಣ ಯೋಜನೆ | |
ಪ್ರಧಾನ ಮಂತ್ರಿ ವಯ ರಕ್ಷಣಾ ಯೋಜನೆ |
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ 2017, ಜುಲೈ 21 ರಂದು ಹೊಸದಿಲ್ಲಿಯಲ್ಲಿ ಹಿರಿಯ ನಾಗರಿಕರಿಗೆ ಹೊಸ ಪಿಂಚಣಿ ಯೋಜನೆ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (ಪಿಎಂವಿವಿವೈ)ಗೆ ಚಾಲನೆ ನೀಡಿದರು. ಈ ಯೋಜನೆಯನ್ನು ಎಲ್ಐಸಿ ಮೂಲಕ ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಖರೀದಿಸಬಹುದು. ಮತ್ತು ಸೇವಾ ತೆರಿಗೆ ಅಥವಾ ಜಿಎಸ್ಟಿಯಿಂದ ಯೋಜನೆಗೆ ವಿನಾಯತಿ ನೀಡಲಾಗಿದೆ. ಮುಂದಿನ ವರ್ಷ ಮೇ 3 ರ ತನಕ ಪಿಎಂವಿವಿವೈ ಯೋಜನೆಯು ಲಭ್ಯವಿರುತ್ತದೆ ಮತ್ತು 10 ವರ್ಷಗಳವರೆಗೆ ಮಾಸಿಕ ಪಾವತಿಗೆ ಪ್ರತಿ ವರ್ಷಕ್ಕೆ ಶೇ.8% ಭರವಸೆ ನೀಡಲಿದೆ.
Question 2 |
2. ಯಾವ ರಾಜ್ಯದ ನಾಗರಿಕ ಸಚಿವಾಲಯ “ಸಂಪೂರ್ಣ ವೈರ್ ಲೆಸ್ ಇಂಟರ್ನೆಟ್” ವ್ಯವಸ್ಥೆಯನ್ನು ಹೊಂದಿದ ಭಾರತದ ಮೊದಲ ನಾಗರಿಕ ಸಚಿವಾಲಯ ಎನಿಸಿದೆ?
ಅರುಣಾಚಲ ಪ್ರದೇಶ | |
ಕೇರಳ | |
ಜಾರ್ಖಂಡ್ | |
ಮೇಘಾಲಯ |
ಅರುಣಾಚಲ ಪ್ರದೇಶದ ರಾಜ್ಯ ನಾಗರಿಕ ಸಚಿವಾಲಯ ಸಂಪೂರ್ಣವಾಗಿ ವೈರ್ ಲೆಸ್ ವ್ಯವಸ್ಥೆ ಹೊಂದಿದ ಭಾರತದ ಮೊದಲ ಸಚಿವಾಲಯವಾಗಿದೆ. ಮುಖ್ಯಮಂತ್ರಿ ಪೆಮಾ ಖಾಂಡು ಇಟಾನಗರದಲ್ಲಿರುವ ರಾಜ್ಯ ನಾಗರಿಕ ಸಚಿವಾಲಯದಲ್ಲಿ ವೈ-ಫೈ ಲೋಕಲ್ ಏರಿಯಾ ನೆಟ್ವರ್ಕ್ (LAN) ಅನ್ನು ಇತ್ತೀಚೆಗೆ ಉದ್ಘಾಟಿಸಿದರು.
Question 3 |
3. ಈ ಕೆಳಗಿನ ಯಾವ ರಾಷ್ಟ್ರ 5ನೇ ಜಾಗತಿಕ ಸೈಬರ್ ಸ್ಪೇಸ್ ಸಮ್ಮೇಳನದ ಆತಿಥ್ಯವಹಿಸಲಿದೆ?
ಭಾರತ | |
ಅಮೆರಿಕ | |
ರಷ್ಯಾ | |
ಆಸ್ಟ್ರೇಲಿಯಾ |
5 ನೇ ಜಾಗತಿಕ ಸೈಬರ್ ಸ್ಪೇಸ್ ಸಮ್ಮೇಳನ (GCCS) ನವೆಂಬರ್ 23-24, 2017 ರಿಂದ ಹೊಸ ದೆಹಲಿಯಲ್ಲಿ ನಡೆಯಲಿದೆ. ಸೈಬರ್ ಸ್ಪೇಸ್ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ವಿಶ್ವದ ಅತಿದೊಡ್ಡ ಸಮಾವೇಶ ಇದಾಗಿದೆ. ಸಮ್ಮೇಳನದ ವಿಷಯವು " “Cyber for all: An Inclusive, Sustainable, Developmental, Safe and Secure Cyberspace” ಆಗಿದೆ. GCCS ಒಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಮ್ಮೇಳನವಾಗಿದ್ದು, 2011 ರಿಂದ ಆಯೋಜಿಸಲಾಗುತ್ತಿದೆ. ದಕ್ಷಿಣ ಕೊರಿಯಾದ ನಂತರ ಈ ಸಮ್ಮೇಳನವನ್ನು ಆಯೋಜಿಸುತ್ತಿರುವ ಏಷ್ಯಾದ 2ನೇ ರಾಷ್ಟ್ರ ಭಾರತ.
Question 4 |
4. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರ ಕಾರ್ಯದರ್ಶಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
ಅಭಿಷೇಕ್ ನಾಯರ್ | |
ಸಂಜಯ್ ಕೊತಾರಿ | |
ಅಶೋಕ್ ಮಲಿಕ್ | |
ಕುಲದೀಪ್ ಸಿಂಗ್ |
ಸಂಜಯ್ ಕೊತಾರಿ ಅವರನ್ನು ರಾಷ್ಟ್ರಪತಿಗಳ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಕೊತಾರಿ ಅವರು ಸಾರ್ವಜನಿಕ ವಲಯದ ಸಂಸ್ಥೆಯೊಂದರ ನೇಮಕಾತಿ ಮಂಡಳಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 1978ರ ಐ.ಎ.ಎಸ್ ಅಧಿಕಾರಿಯಾಗಿದ್ದು, ಕಳೆದ ಜೂನ್ನಲ್ಲಿ ನಿವೃತ್ತಿಹೊಂದಿದ್ದರು. ಹಿರಿಯ ಪತ್ರಕರ್ತ ಮತ್ತು ಅಬ್ಸರ್ವ್ಸ್ ಪ್ರತಿಷ್ಠಾನದ ಸದಸ್ಯ ಅಶೋಕ್ ಮಲಿಕ್ರನ್ನು ನೂತನ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರ ಮಾಧ್ಯಮ ಕಾರ್ಯದರ್ಶಿಯನ್ನಾಗಿ ಕೇಂದ್ರ ಸಚಿವ ಸಂಪುಟ ನೇಮಕ ಮಾಡಿದೆ. ಕಳೆದ 20 ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಅಶೋಕ್ ಮಲಿಕ್, ಟೈಮ್ಸ್ ಆಫ್ ಇಂಡಿಯಾ, ಹಿಂದುಸ್ತಾನ್ ಟೈಮ್ಸ್ ಮತ್ತು ಯಲೆ ಗ್ಲೋಬಲ್ ಸೇರಿದಂತೆ, ಹಲವಾರು ದೇಶೀಯ ಮತ್ತು ವಿದೇಶಿ ಪ್ರಮುಖ ಪತ್ರಿಕೆಗಳ ಅಂಕಣಕಾರರಾಗಿದ್ದಾರೆ. 2015 ರಲ್ಲಿ ಅಬ್ಸರ್ವ್ಸ್ ಪ್ರತಿಷ್ಠಾನ ಸೇರಿದ್ದ ಮಲಿಕ್ ಈಗ ಅದರ ನೈಬರ್ ಹುಡ್ ರೀಜನಲ್ ಸ್ಟಡೀಸ್ ಇಂಟಿಯೇಟಿವ್ ವಿಭಾಗದ ಮುಖ್ಯಸ್ಥರಾಗಿದ್ದಾರೆ.
Question 5 |
5. ಯುನೈಟೆಡ್ ಕಿಂಗ್ಡಮ್ (ಯುಕೆ)ನ ಸುಪ್ರೀಂ ಕೋರ್ಟ್ನ (ಎಸ್ಸಿ) ಮೊದಲ ಮಹಿಳಾ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?
ಮೇರಿ ವರ್ಟ್ಲೆ ಮಾಂಟಗು | |
ಬ್ರೆಂಡಾ ಮಾರ್ಜೊರಿ ಹೇಲ್ | |
ಕ್ಯಾಥರಿನ್ ಜೇಮ್ಸ್ | |
ಜಾಸ್ಮಿನ್ ಹಡ್ಸನ್ |
ಯುನೈಟೆಡ್ ಕಿಂಗ್ಡಮ್ (ಯುಕೆ) ಹಿರಿಯ ನ್ಯಾಯಾಧೀಶರಾದ ಬ್ರೆಂಡಾ ಮಾರ್ಜೋರಿ ಹೇಲ್ ಅವರು ಸುಪ್ರೀಂ ಕೋರ್ಟ್ (ಎಸ್ಸಿ) ಮೊದಲ ಮಹಿಳಾ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಅಧ್ಯಕ್ಷರಾದ ಲಾರ್ಡ್ ನ್ಯೂಬರ್ಗರ್ ನಿವೃತ್ತಿಯ ನಂತರ ಸೆಪ್ಟೆಂಬರ್ನಲ್ಲಿ ಬ್ರಿಟನ್ನ ಉನ್ನತ ನ್ಯಾಯಾಧೀಶ ಸಮಿತಿಯ ಮುಖ್ಯಸ್ಥರಾಗಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
Question 6 |
6. ಯಾವ ರಾಜ್ಯದಲ್ಲಿ ಹುಲಿಗಳ ಚಲನೆಗೆ ಭಾರತದ ಮೊದಲ ಪರಿಸರ-ಸ್ನೇಹಿ ಸೇತುವೆಗಳನ್ನು ನಿರ್ಮಿಸಲಾಗುವುದು?
ಕರ್ನಾಟಕ | |
ಮಧ್ಯ ಪ್ರದೇಶ | |
ತೆಲಂಗಣ | |
ಪಶ್ಚಿಮ ಬಂಗಾಳ |
ಹುಲಿಗಳ ಚಲನೆಗೆ ಭಾರತದ ಮೊದಲ ಪರಿಸರ-ಸ್ನೇಹಿ ಸೇತುವೆಗಳನ್ನು ತೆಲಂಗಣದಲ್ಲಿ ನಿರ್ಮಿಸಲಾಗುವುದು. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತಡೋಬ-ಅಂಧಾರಿ ಹುಲಿ ಮೀಸಲು (ಟಿಎಟಿಆರ್) ಪ್ರದೇಶ ಮತ್ತು ತೆಲಂಗಾಣದ ಕುಮ್ರಮ್ ಭೀಮ್ ಅಸಿಫಾಬಾದ್ ಜಿಲ್ಲೆಯ ಅರಣ್ಯದ ನಡುವೆ ಈ ಸೇತುವೆಗಳು ಸಂಪರ್ಕ ಕಲ್ಪಿಸಲಿವೆ.
Question 7 |
7. ಮೌಲಿಂಗ್ ರಾಷ್ಟ್ರೀಯ ಉದ್ಯಾವನ (MNP) ಯಾವ ರಾಜ್ಯದಲ್ಲಿದೆ?
ಅಸ್ಸಾಂ | |
ಅರುಣಾಚಲ ಪ್ರದೇಶ | |
ಹಿಮಾಚಲ ಪ್ರದೇಶ | |
ಹರಿಯಾಣ |
ಮೌಲಿಂಗ್ ರಾಷ್ಟ್ರೀಯ ಉದ್ಯಾನವು (MNP) ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್, ಪೂರ್ವ ಸಿಯಾಂಗ್ ಮತ್ತು ಪಶ್ಚಿಮ ಸಿಯಾಂಗ್ ಜಿಲ್ಲೆಗಳಲ್ಲಿ ಹರಡಿರುವ ಒಂದು ರಾಷ್ಟ್ರೀಯ ಉದ್ಯಾನವನವಾಗಿದ್ದು, ಸುಮಾರು 483 ಚದರ ಕಿಲೋಮೀಟರ್ ಪ್ರದೇಶವನ್ನು ಹೊಂದಿದೆ. ಇದು ಟ್ಯಾಕಿನ್, ಗೋರಲ್, ಇಂಡಿಯನ್ ಚಿರತೆ, ಬಂಗಾಳ ಹುಲಿ, ಬಾರ್ಕಿಂಗ್ ಜಿಂಕೆ, ಸೆರೋ ಮತ್ತು ಕೆಂಪು ಪಾಂಡದ ನೆಲೆಯಾಗಿದೆ.
Question 8 |
8. ಯಾವ ಕೇಂದ್ರ ಸಚಿವಾಲಯವು ಆನ್ಲೈನ್ ದೂರಿನ ವ್ಯವಸ್ಥೆ "ಲೈಂಗಿಕ ಕಿರುಕುಳ ಇ-ಬಾಕ್ಸ್" ಪ್ರಾರಂಭಿಸಿದೆ?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ | |
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ | |
ಗೃಹ ಸಚಿವಾಲಯ | |
ಕಾನೂನು ಮತ್ತು ನ್ಯಾಯ ಸಚಿವಾಲಯ |
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರು 2017ಜುಲೈ 24 ರಂದು ನವದೆಹಲಿಯಲ್ಲಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ದೂರುಗಳನ್ನು ನೋಂದಾಯಿಸಲು "ಲೈಂಗಿಕ ಕಿರುಕುಳ ಇ-ಬಾಕ್ಸ್ (SH- ಬಾಕ್ಸ್)" ಎಂಬ ಆನ್ಲೈನ್ ದೂರು ವ್ಯವಸ್ಥೆಗೆ ಚಾಲನೆ ನೀಡಿದರು. ಪ್ರಾರಂಭ ದಿನಗಳಲ್ಲಿ ಕೇಂದ್ರ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ಮಾತ್ರ ಲಭ್ಯವಿದ್ದು, ನಂತರದ ದಿನಗಳಲ್ಲಿ ಖಾಸಗಿ ಸಂಸ್ಥೆಯ ಮಹಿಳಾ ಉದ್ಯೋಗಿಗಳಿಗೆ ಲಭ್ಯವಾಗಲಿದೆ.
Question 9 |
9. ಅತ್ಯಾಧುನಿಕ BS-VI ಗುಣಮಟ್ಟದ ಇಂಧನ ಹೊರಸೂಸುವಿಕೆಗಳನ್ನು ಪರೀಕ್ಷಿಸಲು ಯಾವ ತೈಲ ಕಂಪೆನಿ ಭಾರತದ ಮೊದಲ ಪೆಟ್ರೋಲಿಯಂ ಆರ್ & ಡಿ ಸೌಲಭ್ಯವನ್ನು ಕಾರ್ಯಾರಂಭಗೊಳಿಸಲಿದೆ?
ಇಂಡಿಯನ್ ಆಯಿಲ್ ಕಾರ್ಪೋರೇಶನ್ | |
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ | |
ರಿಲಾಯನ್ಸ್ ಲಿಮಿಟೆಡ್ | |
ಎಸ್ಸಾರ್ |
ಫರಿದಾಬಾದ್ನಲ್ಲಿ ಉನ್ನತ-ಬಿಎಸ್-VI ಗುಣಮಟ್ಟದ ಇಂಧನ ಹೊರಸೂಸುವಿಕೆಗಳನ್ನು ಪರೀಕ್ಷಿಸಲು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಭಾರತದ ಮೊದಲ ಪೆಟ್ರೋಲಿಯಂ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಸೌಲಭ್ಯವನ್ನು ಲೋಕಾರ್ಪಣೆಗೊಳಿಸಿದರು. ಈ ಆರ್ & ಡಿ ಸೌಕರ್ಯವನ್ನು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪ್ (ಐಓಸಿ) ನಿರ್ವಹಿಸುತ್ತದೆ ಮತ್ತು ಪೆಟ್ರೋಲ್, ಡೀಸೆಲ್, ಎಥೆನಾಲ್-ಬ್ಲೆಂಡೆಡ್ ಪೆಟ್ರೋಲ್, ಜೈವಿಕ-ಡೀಸೆಲ್, ಸಿಎನ್ಜಿ, ಎಲ್ಎನ್ಜಿ, ಹೈಡ್ರೋಜನ್ ಸಿಎನ್ಜಿ ಮತ್ತು 2 ಜಿ ಸೇರಿದಂತೆ ಎಲ್ಲ ರೀತಿಯ ಇಂಧನವನ್ನು ಪರೀಕ್ಷಿಸಲು ವಿನ್ಯಾಸಗೊಳಿಸಲಾಗಿದೆ.
Question 10 |
10. ಜಲಮಾರ್ಗಗಳಿಂದ ಎರಡೂ ದೇಶಗಳನ್ನು ಸಂಪರ್ಕಿಸಲು ಭಾರತ ಯಾವ ದೇಶದೊಂದಿಗೆ ಇತ್ತೀಚೆಗೆ ಒಪ್ಪಂದಕ್ಕೆ ಸಹಿ ಹಾಕಿದೆ?
ಶ್ರೀಲಂಕಾ | |
ಬಾಂಗ್ಲದೇಶ | |
ಇಂಡೋನೇಷಿಯಾ | |
ಮಾರಿಷಸ್ |
ಭಾರತ ಮತ್ತು ಬಾಂಗ್ಲಾದೇಶವನ್ನು ಜಲಮಾರ್ಗಗಳ ಮೂಲಕ ಸಂಪರ್ಕಿಸಲು ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿವೆ. ಜಲಮಾರ್ಗಗಳು ಬಾಂಗ್ಲಾದೇಶದೊಂದಿಗೆ ಭಾರತದ ಈಶಾನ್ಯ ಮತ್ತು ಪಶ್ಚಿಮ ಬಂಗಾಳದ ನಡುವೆ ಪ್ರಯಾಣಿಕರ ಮತ್ತು ಸರಕುಗಳ ಚಲನೆಯನ್ನು ಸುಲಭಗೊಳಿಸಲಿವೆ. ಅಸ್ಸಾಂನ ಬ್ರಹ್ಮಪುತ್ರ ಸೇರಿದಂತೆ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಪ್ರಮುಖ ನದಿಗಳಾದ್ಯಂತ ಸೇವೆಗಳಿಗೆ ಮೂಲಸೌಕರ್ಯವನ್ನು ಸ್ಥಾಪಿಸಲಾಗುವುದು. 2017ರ ಅಂತ್ಯದ ವೇಳೆಗೆ ಈ ಸೇವೆ ಪ್ರಾರಂಭವಾಗುವುದು ಎಂದು ನಿರೀಕ್ಷಿಸಲಾಗಿದೆ.
[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜುಲೈ2122232017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ