ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜುಲೈ,27,28,29,2017

Question 1

1. 2017 ಬ್ರಿಕ್ಸ್ “ರಾಷ್ಟ್ರೀ ಭದ್ರತಾ ಸಲಹೆಗಾರರ (National Security Advisors)” ಸಭೆ ಯಾವ ದೇಶದಲ್ಲಿ ನಡೆಯಲಿದೆ?

A
ಚೀನಾ
B
ಭಾರತ
C
ಬ್ರೆಜಿಲ್
D
ದಕ್ಷಿಣ ಆಫ್ರಿಕಾ
Question 1 Explanation: 
ಚೀನಾ

2017 ಬ್ರಿಕ್ಸ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ ಚೀನಾದಲ್ಲಿ ನಡೆಯಲಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಅಜಿತ್ ದೊವಾಲ್ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

Question 2

2. ಡ್ರೆಡ್ಜಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (Dredging Corporation of India Limited) ಕೇಂದ್ರ ಕಚೇರಿ ಎಲ್ಲಿದೆ?

A
ಚೆನ್ನೈ
B
ವಿಶಾಖಪಟ್ಟಣ
C
ಮುಂಬೈ
D
ಕೊಲ್ಕತ್ತಾ
Question 2 Explanation: 
ವಿಶಾಖಪಟ್ಟಣ

ಡ್ರೆಡ್ಜಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (DCI) ಡ್ರೆಜಿಂಗ್ ವ್ಯವಹಾರದಲ್ಲಿ ತೊಡಗಿರುವ ಒಂದು ಭಾರತೀಯ ಸಾರ್ವಜನಿಕ ವಲಯದ ಮಿನಿರತ್ನ ಸಂಸ್ಥೆ. DCI ಮುಖ್ಯ ಕಚೇರಿ ವಿಶಾಖಪಟ್ಟಣದಲ್ಲಿದೆ.

Question 3

3. ಈ ಕೆಳಗಿನ ಯಾವ ಸಂಸ್ಥೆ ಇತ್ತೀಚೆಗೆ ಅನಾವರಣಗೊಳಿಸಲಾದ ಎಪಿಜೆ ಅಬ್ದುಲ್ ಕಲಾಂ ಸ್ಮಾರಕವನ್ನು ವಿನ್ಯಾಸಗೊಳಿಸಿದೆ?

A
ಭಾಬ ಅಣು ಸಂಶೋಧನಾ ಕೇಂದ್ರ (BARC)
B
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ)
C
ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್ಎಸ್ಸಿ)
D
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)
Question 3 Explanation: 
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ)

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ತಮಿಳುನಾಡಿನ ರಾಮೇಶ್ವರಂನಲ್ಲಿ ಎಪಿಜೆ ಅಬ್ದುಲ್ ಕಲಾಂ ಸ್ಮಾರಕವನ್ನು ಜುಲೈ 27, 2017 ರಂದು ಉದ್ಘಾಟಿಸಿದರು. ಡಾ. ಕಲಾಂ ರವರ ಎರಡನೇ ಪುಣ್ಯ ತಿಥಿ ಅಂಗವಾಗಿ ಈ ಸ್ಮಾರಕವನ್ನು ಲೋಕಾರ್ಪಣೆಗೊಳಿಸಲಾಯಿತು. ಈ ಸ್ಮಾರಕವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ವಿನ್ಯಾಸಗೊಳಿಸಿದೆ ಮತ್ತು ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

Question 4

4. ಜಿಎಸ್ಟಿ ಅಡಿಯಲ್ಲಿ ನ್ಯಾಷನಲ್ ಆಂಟಿ-ಪ್ರಾಫಿಟ್ ಪ್ರಾಧಿಕಾರ (ಎನ್ಎಪಿಎ)ದ ಸದಸ್ಯರನ್ನು ಆಯ್ಕೆಮಾಡಲು ಜಿಎಸ್ಟಿ ಪ್ರಾಧಿಕಾರ ಯಾವ ಸಮಿತಿಯನ್ನು ರಚಿಸಿದೆ?

A
ರವಿಶಂಕರ್ ಜಾ ಸಮಿತಿ
B
ಪ್ರದೀಪ್ ಕುಮಾರ್ ಸಿನ್ಹಾ ಸಮಿತಿ
C
ಸುರೇಶ್ ಮುಕುಂದ್ ಸಮಿತಿ
D
ರಮೇಶ್ ಥೋಪರ್ ಸಮಿತಿ
Question 4 Explanation: 
ಪ್ರದೀಪ್ ಕುಮಾರ್ ಸಿನ್ಹಾ ಸಮಿತಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಜಿಎಸ್ಟಿ ಅಡಿಯಲ್ಲಿ ನ್ಯಾಷನಲ್ ಆಂಟಿ-ಪ್ರಾಫಿಟ್ ಪ್ರಾಧಿಕಾರಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆಮಾಡಲು ಕ್ಯಾಬಿನೆಟ್ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸಿನ್ಹಾ ಸಮಿತಿ ರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ.

Question 5

5. 2017 ನ್ಯಾಶನಲ್ ಅರ್ಥ್ ಸಿಸ್ಟಂ ಸೈನ್ಸ್ (ಎನ್ಸೆಸ್) ಪ್ರಶಸ್ತಿ ವಿಭಾಗದಲ್ಲಿ ಜೀವಮಾನ ಎಕ್ಸಲೆನ್ಸ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?

A
ಕೆ ಗೋಪಾಲನ್
B
ಆರ್ ರಾಮಚಂದ್ರನ್
C
ಕೇಶವ ಕಿರಣ್
D
ನಾಗೇಂದ್ರ ಶಾ
Question 5 Explanation: 
ಕೆ ಗೋಪಾಲನ್

ಐಸೊಟೋಪ್ ಜಿಯೋ-ಸೈನ್ಸ್ ಕ್ಷೇತ್ರದಲ್ಲಿನ ಮಹತ್ವದ ಕೊಡುಗೆಗಾಗಿ ಪ್ರೊಫೆಸರ್ ಕೆ. ಗೋಪಾಲನ್ ಅವರಿಗೆ 2017 ನ್ಯಾಷನಲ್ ಅರ್ಥ್ ಸಿಸ್ಟಮ್ ಸೈನ್ಸಸ್ (ಎನ್ಸೆಸ್) ಪ್ರಶಸ್ತಿಗಳಲ್ಲಿ ಲೈಫ್ ಟೈಮ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಲಾಗಿದೆ.

Question 6

6. ಭಾರತದ ಮೊದಲ ಬುಲೆಟ್ ರೈಲು ಯೋಜನೆ "MAHSR" ಅನ್ನು ಯಾವ ದೇಶದ ಸಹಾಯದಿಂದ ನಿರ್ಮಿಸಲಾಗುವುದು?

A
ಜಪಾನ್
B
ಫ್ರಾನ್ಸ್
C
ಚೀನಾ
D
ರಷ್ಯಾ
Question 6 Explanation: 
ಜಪಾನ್

ಭಾರತದ ಮೊದಲ ಬುಲೆಟ್ ರೈಲು ಯೋಜನೆ "ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು (MAHSR) ಕಾರಿಡಾರ್" ಅನ್ನು ಸೆಪ್ಟೆಂಬರ್ 12-14, 2017 ರಂದು ಜಪಾನಿನ ಪ್ರಧಾನಿ ಶಿಂಜೊ ಅಬೆ ಅವರ ಭೇಟಿಯ ವೇಳೆ ಉದ್ಘಾಟಿಸಲಾಗುವುದು. ಅಬೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಬುಲೆಟ್ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿಲಿದ್ದಾರೆ.

Question 7

7. ಸ್ನಾಪ್ ಡೀಲ್ ಸ್ವಾಮ್ಯದ ಮೊಬೈಲ್ ವ್ಯಾಲೆಟ್ “ಫ್ರೀಚಾರ್ಜ್” ಅನ್ನು ಭಾರತದ ಯಾವ ಬ್ಯಾಂಕ್ ಇತ್ತೀಚೆಗೆ ಖರೀದಿಸಿದೆ?

A
ಬ್ಯಾಂಕ್ ಆಫ್ ಇಂಡಿಯಾ
B
ಭಾರತೀಯ ಸ್ಟೇಟ್ ಬ್ಯಾಂಕ್
C
ಆಕ್ಸಿಸ್ ಬ್ಯಾಂಕ್
D
ಕಾರ್ಪೋರೇಶನ್ ಬ್ಯಾಂಕ್
Question 7 Explanation: 
ಆಕ್ಸಿಸ್ ಬ್ಯಾಂಕ್
Question 8

8. ಸ್ಮಾಲ್ ಇಂಡಸ್ಟ್ರೀಸ್ ಡೆವೆಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಐಡಿಬಿಐ) ನ ಪ್ರಧಾನ ಕಚೇರಿ ಎಲ್ಲಿದೆ?

A
ಮುಂಬೈ
B
ನವದೆಹಲಿ
C
ಲಕ್ನೋ
D
ಚೆನ್ನೈ
Question 8 Explanation: 
ಲಕ್ನೋ

ಇತ್ತೀಚೆಗೆ, ಅತಿ ಸಣ್ಣ ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME ಗಳು) ತಮ್ಮ ಹಣಕಾಸಿನ ಅವಶ್ಯಕತೆಗಳಿಗಾಗಿ ಬಂಡವಾಳ ಮಾರುಕಟ್ಟೆಯನ್ನು ಬಳಸಿಕೊಳ್ಳುವಲ್ಲಿ ಸಣ್ಣ ಉದ್ಯಮಗಳ ಅಭಿವೃದ್ಧಿ ಬ್ಯಾಂಕ್ (SIDBI) ಪೂರ್ಣ ಪ್ರಮಾಣದ ವ್ಯಾಪಾರಿ ಬ್ಯಾಂಕಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ SIDBI ನ ಪ್ರಧಾನ ಕಛೇರಿ ಇದೆ.

Question 9

9. 2017 ಡೆಲ್ ಜಾಗತಿಕ ಮಹಿಳಾ ಉದ್ಯಮಿಗಳ ನಗರ (ಯು ಸಿಟೀಸ್) ಸೂಚ್ಯಂಕದಲ್ಲಿ ಭಾರತದ ಯಾವ ನಗರಗಳು ಸ್ಥಾನ ಪಡೆದುಕೊಂಡಿವೆ?

A
ಬೆಂಗಳೂರು ಮತ್ತು ದೆಹಲಿ
B
ಮುಂಬೈ ಮತ್ತು ಚೆನ್ನೈ
C
ಚೆನ್ನೈ ಮತ್ತು ಬೆಂಗಳೂರು
D
ನವದೆಹಲಿ ಮತ್ತು ಕೊಲ್ಕತ್ತಾ
Question 9 Explanation: 
ಬೆಂಗಳೂರು ಮತ್ತು ದೆಹಲಿ

2017 ಡೆಲ್ ಜಾಗತಿಕ ಮಹಿಳಾ ಉದ್ಯಮಿಗಳ ನಗರ (ಯು ಸಿಟೀಸ್) ಸೂಚ್ಯಂಕದಲ್ಲಿ ಬೆಂಗಳೂರು (40) ಮತ್ತು ದೆಹಲಿ (49 ನೇ) ಗಳು ಹೆಚ್ಚಿನ ಸಂಭಾವ್ಯ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಭಾರತದ ನಗರಗಳಾಗಿವೆ. ಸೂಚ್ಯಂಕದಲ್ಲಿ ನ್ಯೂಯಾರ್ಕ್ ಮೊದಲ ಸ್ಥಾನದಲ್ಲಿದೆ. ಬೇ ಏರಿಯಾ, ಲಂಡನ್, ಬೋಸ್ಟನ್, ಸ್ಟಾಕ್ಹೋಮ್ ಮತ್ತು ಲಾಸ್ ಏಂಜಲೀಸ್ ನಂತರದ ಸ್ಥಾನದಲ್ಲಿವೆ. ಮಹಿಳಾ ಸ್ವಾಮ್ಯದ ಸಂಸ್ಥೆಗಳ ಬೆಳವಣಿಗೆಯನ್ನು ಆಕರ್ಷಿಸುವ ಮತ್ತು ಬೆಳೆಸುವ ಸಾಮರ್ಥ್ಯದ ಪರಿಭಾಷೆಯಲ್ಲಿ ನಗರಗಳನ್ನು ಈ ಸೂಚ್ಯಂಕ ಹೊಂದಿದೆ.

Question 10

10. ವಿಶ್ವ ಮಧುಮೇಹ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

A
ಜುಲೈ 25
B
ಜುಲೈ 27
C
ಜುಲೈ 28
D
ಜುಲೈ 29
Question 10 Explanation: 
ಜುಲೈ 28

ಹೆಪಟೈಟಿಸ್ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ನಿಜವಾದ ಬದಲಾವಣೆಗೆ ಪ್ರಭಾವ ಬೀರಲು ಜುಲೈ 28 ರಂದು ವಿಶ್ವ ಹೆಪಾಟೈಟಿಸ್ ದಿನವನ್ನು (WHD) ಪ್ರತಿವರ್ಷವೂ ಆಚರಿಸಲಾಗುತ್ತದೆ. 2017 ಥೀಮ್ "ಹೆಪಟೈಟಿಸ್ ಅನ್ನು ನಿವಾರಿಸು" ಆಗಿದೆ. ಹೆಪಟೈಟಿಸ್ ಒಂದು ವೈರಸ್ ಸೋಂಕುಯಾಗಿದ್ದು ಅದು ಯಕೃತ್ತಿನ ಉರಿಯೂತವನ್ನು ಉಂಟುಮಾಡುತ್ತದೆ. ಹೆಪಾಟೈಟಿಸ್ ಎ, ಬಿ, ಸಿ, ಡಿ, ಮತ್ತು ಇ ಎಂಬ ವಿಧಗಳಿವೆ.

There are 10 questions to complete.

[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜುಲೈ2728292017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.