ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಆಗಸ್ಟ್, 7, 8, 2017
Question 1 |
1. ರಾಷ್ಟ್ರೀಯ ಕೈಮಗ್ಗ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಆಗಸ್ಟ್ 5 | |
ಆಗಸ್ಟ್ 6 | |
ಆಗಸ್ಟ್ 7 | |
ಆಗಸ್ಟ್ 8 |
ರಾಷ್ಟ್ರೀಯ ಕೈಮಗ್ಗ ದಿನವನ್ನು ಆಗಸ್ಟ್ 7 ರಂದು ಭಾರತದಲ್ಲಿ ಪ್ರತಿವರ್ಷ ಆಚರಿಸಲಾಗುತ್ತದೆ. ಕೈಮಗ್ಗ ಕ್ಷೇತ್ರವನ್ನು ಪ್ರೋತ್ಸಾಹಿಸುವುದು ಮತ್ತು ಕೈಮಗ್ಗದಿಂದ ಮಾಡಲಾದ ಉತ್ಪನ್ನಗಳನ್ನು ಬಳಸುವಂತೆ ಉತ್ತೇಜಿಸುವುದು ಈ ದಿನದ ಉದ್ದೇಶ. ಈ ದಿನದಂದು 1905ರಲ್ಲಿ ಸ್ವದೇಶಿ ಚಳುವಳಿಯನ್ನು ಪ್ರಾರಂಭಿಸಲಾದ ಸ್ಮರಣಾರ್ಥ ಈ ದಿನವನ್ನು ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಆಚರಿಸಲಾಗುತ್ತಿದೆ.
Question 2 |
2. ಉತ್ತರಪ್ರದೇಶದ ಸ್ವಚ್ಚ ಭಾರತ ಅಭಿಯಾನದ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ?
ಅಕ್ಷಯ್ ಕುಮಾರ್ | |
ಸಲ್ಮಾನ್ ಖಾನ್ | |
ಅಮಿತಾಬ್ ಬಚ್ಚನ್ | |
ವಿದ್ಯಾ ಬಾಲನ್ |
ಬಾಲಿವುಡ್ ನಟ ಅಕ್ಷಯ್ ಕುಮಾರ್ ರವರು ಉತ್ತರಪ್ರದೇಶದ ಸ್ವಚ್ಚ ಭಾರತ ಅಭಿಯಾನದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
Question 3 |
3. “ನಿಸಾರ್ (NISAR)” ಉಪಗ್ರಹವನ್ನು ಇಸ್ರೋ ಮತ್ತು ಈ ಕೆಳಗಿನ ಯಾವ ಸಂಸ್ಥೆ ಜಂಟಿಯಾಗಿ ಅಭಿವೃದ್ದಿಪಡಿಸುತ್ತಿವೆ?
ನಾಸಾ | |
ಯುರೋಪ್ ಬಾಹ್ಯಕಾಶ ಸಂಸ್ಥೆ | |
ರಷ್ಯಾ ಬಾಹ್ಯಕಾಶ ಸಂಸ್ಥೆ | |
ಚೀನಾ ಬಾಹ್ಯಕಾಶ ಸಂಸ್ಥೆ |
ನಾಸಾ-ಇಸ್ರೊ ಸಿಂಥೆಟಿಕ್ ಅಪರ್ಚರ್ ರೇಡಾರ್ (NISATರ್) ಮಿಷನ್ ಅಭಿವೃದ್ದಿಗೆ ಇಸ್ರೊ ಮತ್ತು ನಾಸಾ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಎರಡು-ಆವರ್ತನ (ಎಲ್ & ಎಸ್ ಬ್ಯಾಂಡ್) ಸಂಶ್ಲೇಷಿತ ದ್ಯುತಿರಂಧ್ರ ರಾಡಾರ್ ಉಪಗ್ರಹವನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಾರಂಭಿಸಲು ಈ ಕಾರ್ಯಾಚರಣೆಯನ್ನು ನಡೆಸಲಾಗುತ್ತದೆ. ಈ ಭೂ ವೀಕ್ಷಣಾ ಉಪಗ್ರಹವನ್ನು 2021 ರಲ್ಲಿ ಕಕ್ಷೆಗೆ ಹಾರಿಸಲಾಗುವುದು.
Question 4 |
4. ಈ ಕೆಳಗಿನ ಯಾವ ದೇಶ 2017 FIBA ಏಷ್ಯಾ ಚಾಂಪಿಯನ್ ಷಿಪ್ ಅನ್ನು ಆಯೋಜಿಸಲಿದೆ?
ಚೀನಾ | |
ಲೆಬಾನನ್ | |
ನೇಪಾಳ | |
ಬಾಂಗ್ಲದೇಶ |
ಏಷ್ಯಾದ ಅತಿದೊಡ್ಡ ಬ್ಯಾಸ್ಕೆಟ್ಬಾಲ್ ಟೂರ್ನಮೆಂಟ್ ಎಂದು ಕರೆಯಲ್ಪಡುವ ಎಫ್ಐಬಿಎ ಏಷ್ಯಾ ಕಪ್, ಆಗಸ್ಟ್ 8-20, 2017 ರಿಂದ ಲೆಬನಾನ್ನ ಬೈರುತ್ನಲ್ಲಿ ಪ್ರಾರಂಭವಾಗಿದೆ.
Question 5 |
5. 2017 ಅಖಿಲ ಭಾರತ ಎಂಸಿಸಿ-ಮುರುಗಪ್ಪ ಗೋಲ್ಡ್ ಕಪ್ ಹಾಕಿ ಪಂದ್ಯಾವಳಿಯನ್ನು ಯಾವ ತಂಡ ಗೆದ್ದುಕೊಂಡಿತು?
PNB | |
BHA | |
ONGC | |
IOC |
ತಮಿಳುನಾಡಿನ ಚೆನ್ನೈನಲ್ಲಿ ಮೇಯರ್ ರಾಧಾಕೃಷ್ಣ ಕ್ರೀಡಾಂಗಣದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್ಜಿಸಿ) ಬೆಂಗಳೂರಿನ ಹಾಕಿ ಅಸೋಸಿಯೇಷನ್ (ಬಿಎಚ್ಎಚ್) ವಿರುದ್ಧ 4-2ರಿಂದ ವಿಜಯದ ಮೂಲಕ ಆಲ್-ಇಂಡಿಯಾ ಎಮ್ಸಿಸಿ-ಮುರುಗಪ್ಪ ಗೋಲ್ಡ್ ಕಪ್ ಹಾಕಿ ಪಂದ್ಯಾವಳಿಯ 91 ನೇ ಆವೃತ್ತಿಯನ್ನು ಗೆದ್ದುಕೊಂಡಿದೆ.
Question 6 |
6. ಭಾರತದಲ್ಲಿ ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸಲು “ಡಾನ್ ಆಫ್ ಕ್ರೂಸ್ ಟೂರಿಸಂ ಇನ್ ಇಂಡಿಯಾ (Dawan of Cruise Tourism in India)” ವನ್ನು ಯಾವ ನಗರದಲ್ಲಿ ಆನಾವರಣಗೊಳಿಸಲಾಯಿತು?
ಮುಂಬೈ | |
ವಿಶಾಖಪಟ್ಟಣ | |
ಚೆನ್ನೈ | |
ಕೊಚ್ಚಿ |
Question 7 |
7. ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?
ದೀಪಕ್ ಮಿಶ್ರಾ | |
ಚೂಡಾಮಣಿ | |
ಜಿ ಬಿ ಪಟ್ನಾಯಕ್ | |
ರಂಗನಾಥ್ ಮಿಶ್ರಾ |
ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಅವರು ಭಾರತದ ನೂತನ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಮಿಶ್ರಾ ಅವರು 13 ತಿಂಗಳ ಅಧಿಕಾರಾವಧಿಯನ್ನು ಹೊಂದಿದ್ದಾರೆ.
Question 8 |
8. ಭಾರತದ ಮೊದಲ ಸೂಕ್ಷ್ಮ ಅರಣ್ಯವನ್ನು ಯಾವ ರಾಜ್ಯದಲ್ಲಿ ನಿರ್ಮಿಸಲಾಗುವುದು?
ಬಿಹಾರ | |
ಚತ್ತೀಸಘರ್ | |
ಜಾರ್ಖಂಡ್ | |
ಹರಿಯಾಣ |
ಭಾರತದ ಮೊದಲ ಸೂಕ್ಷ್ಮ ಅರಣ್ಯವನ್ನು ಚತ್ತೀಸಘರ್ ನ ರಾಯ್ಪುರದಲ್ಲಿ ನಿರ್ಮಿಸಲಾಗುವುದು. ಸರಿಸುಮಾರು, 70 ಸರ್ಕಾರಿ ಕಚೇರಿ ಕಟ್ಟಡಗಳನ್ನು ಹೊಂದಿರುವ 19 ಎಕರೆ ಭೂಮಿಯನ್ನು ಆಮ್ಲಜನಕ ವಲಯ ರಚಿಸುವ ಸಲುವಾಗಿ ಸೂಕ್ಷ್ಮ ಅರಣ್ಯವನ್ನು ನಿರ್ಮಿಸಲಾಗುವುದು.
Question 9 |
9. 2017 ಭಾರತ - ಆಸಿಯಾನ್ ಯೂತ್ ಶೃಂಗಸಭೆಯ ಆತಿಥ್ಯ ವಹಿಸುವ ನಗರ ಯಾವುದು?
ಭೋಪಾಲ್ | |
ಹೈದ್ರಾಬಾದ್ | |
ಕೊಲ್ಕತ್ತಾ | |
ನವದೆಹಲಿ |
ಮಧ್ಯಪ್ರದೇಶದ ಭೋಪಾಲ್ ನಲ್ಲಿ 2017 ಭಾರತ - ಆಸಿಯಾನ್ ಯೂತ್ ಶೃಂಗಸಭೆ ಆಗಸ್ಟ್ 14 ರಿಂದ 19 ರವರೆಗೆ ನಡೆಯಲಿದೆ. ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ASEAN) ಸಚಿವಾಲಯ ಮತ್ತು ಭಾರತ ಫೌಂಡೇಶನ್ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 10 ಆಸಿಯಾನ್ ರಾಷ್ಟ್ರಗಳಾದ ಬ್ರೂನಿ, ಕಾಂಬೋಡಿಯಾ, ಲಾವೊ ಪಿಡಿಆರ್, ಮ್ಯಾನ್ಮಾರ್, ಮಲೇಷಿಯಾ, ಇಂಡೋನೇಷಿಯಾ, ಫಿಲಿಪೈನ್ಸ್, ಸಿಂಗಪೂರ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ ದೇಶಗಳ 100 ಕ್ಕೂ ಹೆಚ್ಚಿನ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
Question 10 |
10. ಆಂಧ್ರ ವಿಶ್ವವಿದ್ಯಾನಿಲಯದ ಮರೈನ್ ಲಿವಿಂಗ್ ರಿಸೋರ್ಸಸ್ ಡಿಪಾರ್ಟ್ಮೆಂಟ್ ಯಾವ ಮೀನನ್ನು ವಿಶ್ವದ ಅಪರೂಪದ ಮೀನು ತಳಿ ಎಂದು ಅಧಿಕೃತವಾಗಿ ಘೋಷಿಸಿದೆ?
ರೋಹು | |
ಕಾಟ್ಲ | |
ರಾಯಿಚಪಾಲು | |
ಟೆಂಗ್ರ |
ಆಂಧ್ರ ವಿಶ್ವವಿದ್ಯಾನಿಲಯದ ಮರೈನ್ ಲಿವಿಂಗ್ ರಿಸೋರ್ಸಸ್ ಡಿಪಾರ್ಟ್ಮೆಂಟ್ ಸಂಶೋಧಕರು ರಾಯಚಪಾಲು ಮೀನು ತಳಿಯನ್ನು ವಿಶ್ವದಲ್ಲಿ ಅಪರೂಪದ ಮೀನುಗಳ ಪೈಕಿ ಒಂದಾಗಿದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿನ ಮೀನುಗಾರರಿಗೆ ಸಾಮಾನ್ಯವಾಗಿ ಲಭಿಸುವ ಮೀನು ಇದಾಗಿದೆ. ಇದು ವರ್ಣರಂಜಿತ ಮೀನಾಗಿದ್ದು, ಸುಮಾರು 97 ಮಿಮೀ ಉದ್ದ ಮತ್ತು ದಡದ ಬಳಿ ವಾಸಿಸುತ್ತದೆ.
[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಆಗಸ್ಟ್-7-8-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Super questions i am ans mistec today hardworking
Easy questions please next question look forward