ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಆಗಸ್ಟ್,16,17,18,2017
Question 1 |
1. “ಪರಾಂಬಿಕುಲಂ ಹುಲಿ ಸಂರಕ್ಷಣ (ಪಿಟಿಆರ್)” ವಲಯ ಯಾವ ರಾಜ್ಯದಲ್ಲಿದೆ?
ಕೇರಳ | |
ತಮಿಳುನಾಡು | |
ತೆಲಂಗಣ | |
ಆಂಧ್ರ ಪ್ರದೇಶ |
ಪರಾಂಬಿಕುಲಂ ಹುಲಿ ಸಂರಕ್ಷಣ ವಲಯ ಕೇರಳದ ಪಾಲಕ್ಕಾಡ್ ಜಿಲ್ಲೆಯ ಚಿತ್ತೂರು ತಾಲ್ಲೂಕಿನಲ್ಲಿರುವ ರಕ್ಷಿತ ಪ್ರದೇಶವಾಗಿದ್ದು 391 ಚದರ ಕಿಲೋಮೀಟರ್ ಪ್ರದೇಶವನ್ನು ಹೊಂದಿದೆ. ಸಿಂಹ ಬಾಲದ ಮಕಾಕಿಗಳು, ನೀಲಗಿರಿ ತಹರ್, ಆನೆಗಳು, ಬಂಗಾಳ ಹುಲಿಗಳು, ಚಿರತೆಗಳು, ನೀಲಗಿರಿ ಮಾರ್ಟೆನ್ ಸೇರಿದಂತೆ ವಿವಿಧ ಪ್ರಾಣಿಗಳಿಗೆ ಇದು ನೆಲೆಯಾಗಿದೆ.
Question 2 |
2. “ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ”ಯ ಕೇಂದ್ರ ಕಚೇರಿ ಯಾವ ನಗರದಲ್ಲಿದೆ?
ಪುಣೆ | |
ಮುಂಬೈ | |
ಬೆಂಗಳೂರು | |
ನವದೆಹಲಿ |
“ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ”ಯ ಕೇಂದ್ರ ಕಚೇರಿ ಮುಂಬೈನಲ್ಲಿದೆ. ಕೇಂದ್ರ ಚಲನಚಿತ್ರ ಮಂಡಳಿಯ ಪ್ರಮಾಣೀಕರಣ (ಸಿಬಿಎಫ್ಸಿ) ಸಿನೆಮಾಟೊಗ್ರಾಫ್ ಕಾಯಿದೆಯಡಿ ರಚಿಸಲಾದ ಶಾಸನಬದ್ದ ಸಂಸ್ಥೆ ಇದಾಗಿದೆ.
Question 3 |
3. ಬಿಎಸ್ಎನ್ಎಲ್ ಇತ್ಥೀಚೆಗೆ "ಬಿಎಸ್ಎನ್ಎಲ್ ವಾಲೆಟ್" ಅನ್ನು ಯಾವ ಡಿಜಿಟಲ್ ಪಾವತಿ ಕಂಪೆನಿಯ ಸಹಭಾಗಿತ್ವದಲ್ಲಿ ಪ್ರಾರಂಭಿಸಿದೆ?
ಮೊಬಿಕ್ವಿಕ್ | |
ಪೇಟಿಎಮ್ | |
ಪೋನ್ ಪೆ | |
ಜಿಯೋ ಮನಿ |
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ತನ್ನ ಮೊಬೈಲ್ ವ್ಯಾಲೆಟ್ "ಬಿಎಸ್ಎನ್ಎಲ್ ವಾಲೆಟ್" ಅನ್ನು ಮೊಬಿಕ್ವಿಕ್ ಜೊತೆಗೂಡಿ ಪ್ರಾರಂಭಿಸಿದೆ. ಈ ಡಿಜಿಟಲ್ ವ್ಯಾಲೆಟ್ ಅನ್ನು ನವದೆಹಲಿಯಲ್ಲಿ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಉದ್ಘಾಟಿಸಿದರು.
Question 4 |
4. ವಿಶ್ವ ಛಾಯಾಗ್ರಹಣ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಆಗಸ್ಟ್ 17 | |
ಆಗಸ್ಟ್ 18 | |
ಆಗಸ್ಟ್ 19 | |
ಆಗಸ್ಟ್ 20 |
ವಿಶ್ವ ಛಾಯಾಗ್ರಹಣ ದಿನವನ್ನು ಪ್ರತಿ ವರ್ಷ ಆಗಸ್ಟ್ 19 ರಂದು ಆಚರಿಸಲಾಗುತ್ತದೆ.. 1837 ರಲ್ಲಿ ಫ್ರಾನ್ಸಿನ ಲೂಯಿಸ್ ಡಾಗೆರೆ ಮತ್ತು ಜೋಸೆಫ್ ನೈಸ್ಫೋರ್ ನಿಪೆಸ್ ರವರು “ಡಾಗೆರೋಟೈಪ್” ಛಾಯಾಚಿತ್ರ ಪ್ರಕ್ರಿಯೆಯನ್ನು ಕಂಡುಹಿಡಿದ ನೆನಪಿಗಾಗಿ ಆಗಸ್ಟ್ 19 ರಂದು ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ. ಜನವರಿ 9, 1839 ರಂದು ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಡಾಗೆರೊಟೈಪ್ ಪ್ರಕ್ರಿಯೆಯನ್ನು ಘೋಷಿಸಿತು. ಅದೇ ವರ್ಷ ಆಗಸ್ಟ್ 19 ರಂದು, ಫ್ರೆಂಚ್ ಸರಕಾರ ಪೇಟೆಂಟ್ ಅನ್ನು ಖರೀದಿಸಿತು ಮತ್ತು ಡಾಗೆರೋಟೈಪ್ ಅನ್ನು ಪ್ರಪಂಚಕ್ಕೆ ಉಡುಗೊರೆಯಾಗಿ ನೀಡಿತು. ಈ ಘಟನೆಯು ಆಧುನಿಕ ದಿನದ ಛಾಯಾಗ್ರಹಣದ ಅಭಿವೃದ್ಧಿಯಲ್ಲಿ ಪ್ರಮುಖ ಹೆಜ್ಜೆಯಾಯಿತು.
Question 5 |
5. ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣೆಯ ಸುಗಮ ಕಾರ್ಯನಿರ್ವಹಣೆಗಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಯಾವ ಗ್ರಾಹಕರ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ?
MyFASTag | |
NHFASTag | |
TFASTag | |
MFASTag |
ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಎರಡು ಮೊಬೈಲ್ ಅಪ್ಲಿಕೇಶನ್ ಆದ MyFASTag ಮತ್ತು FASTag Partner ಅನ್ನು ನವದೆಹಲಿಯಲ್ಲಿ ಪ್ರಾರಂಭಿಸಿದೆ.
Question 6 |
6. 48ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ದ ತಾಂತ್ರಿಕ ಸಮಿತಿಯ ಅಧ್ಯಕ್ಷ ಯಾರು?
ಪ್ರಸೂನ್ ಜೋಶಿ | |
ಗಿರೀಶ್ ಕಾಸರವಳ್ಳಿ | |
ನಾಗೇಶ್ ಕುಕುನೂರ್ | |
ಮಣಿಶರ್ಮ |
ಮಾಹಿತಿ ಮತ್ತು ಪ್ರಸಾರ (ಐ & ಬಿ) ಸಚಿವಾಲಯವು 48ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI)ದ ತಾಂತ್ರಿಕ ಸಮಿತಿಯನ್ನು ರಚಿಸಿದೆ, ಐಎಫ್ಎಫ್ಐ ನವೆಂಬರ್ 20-28, 2017 ರಂದು ಗೋವಾದಲ್ಲಿ ನಡೆಯಲಿದೆ. ತಾಂತ್ರಿಕ ಸಮಿತಿಯು 12 ಸದಸ್ಯರನ್ನು ಹೊಂದಿದಿದ್ದು, ನಾಗೇಶ್ ಕುಕುನೂರ್ ಅಧ್ಯಕ್ಷತೆ
Question 7 |
7. ಯಾವ ನಗರದಲ್ಲಿ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳ ಸಮಾವೇಶವನ್ನು ಆಯೋಜಿಸಲಾಗಿದೆ?
ನವದೆಹಲಿ | |
ಬೆಂಗಳೂರು | |
ಮುಂಬೈ | |
ಹೈದ್ರಾಬಾದ್ |
2017 ಆಗಸ್ಟ್ 18 ರಂದು ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಅಚಲ್ ಕುಮಾರ್ ಜೋತಿ ಮತ್ತು ಚುನಾವಣಾ ಆಯುಕ್ತ ಒ.ಪಿ ರಾವತ್ ಅವರು ಎರಡು ದಿನಗಳ ಮುಖ್ಯ ಚುನಾವಣಾ ಅಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿದರು. ಈ ಸಮಾವೇಶವನ್ನು ಭಾರತದ ಚುನಾವಣಾ ಆಯೋಗದ (ಇಸಿಐ) ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಮತ್ತು ಹೊಸ ಉಪಕ್ರಮಗಳನ್ನು ಅನ್ವೇಷಿಸಲು ಮತ್ತು ಚುನಾವಣಾ ನಿರ್ವಹಣೆ ಮತ್ತು ಮತದಾರರ ಅನುಭವವನ್ನು ಸುಧಾರಿಸಲು ಆಯೋಜಿಸಲಾಗಿತ್ತು.
Question 8 |
8. ವಿಶ್ವಸಂಸ್ಥೆಯ 2017 ವಿಶ್ವ ಮಾನವೀಯ ದಿನ (WHD) ದ ಅಂಗವಾಗಿ ಯಾವ ಜಾಗತಿಕ ಅಭಿಯಾನವನ್ನು ಪ್ರಾರಂಭಿಸಿದೆ?
#No Crime | |
#NotATarget | |
#NeedHumanity | |
#ShareHumanity |
ವಿಶ್ವಸಂಸ್ಥೆಯ ವಿಶ್ವ ಮಾನವೀಯ ದಿನವನ್ನು (WHD) ಆಗಸ್ಟ್ 19 ರಂದು ಆಚರಿಸಲಾಗುವುದು. ಮಾನವೀಯ ಸೇವೆಗಾಗಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಶ್ರಮಿಸಿದವರಿಗೆ ಗೌರವ ಸಲ್ಲಿಸುವುದು ಈ ದಿನದ ಉದ್ದೇಶ. 2017 ವಿಶ್ವ ಮಾನವೀಯ ದಿನ (WHD)ದ ಅಂಗವಾಗಿ ವಿಶ್ವಸಂಸ್ಥೆ #NotATarget ಅಭಿಯಾನವನ್ನು ಪ್ರಾರಂಭಿಸಿದೆ.
Question 9 |
9. ಭಾರತದ ಮೊದಲ ವಿಶ್ವ ಶಾಂತಿ ವಿಶ್ವವಿದ್ಯಾನಿಲಯವು ಯಾವ ರಾಜ್ಯದಲ್ಲಿದೆ?
ಮಹಾರಾಷ್ಟ್ರ | |
ತೆಲಂಗಣ | |
ಕೇರಳ | |
ಗೋವಾ |
ಡಾ. ವಿಶ್ವನಾಥ್ ಕಾರದ್ ಎಮ್ಐಟಿ ವಿಶ್ವ ಶಾಂತಿ ವಿಶ್ವವಿದ್ಯಾಲಯವನ್ನು ಇತ್ತೀಚೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರವರು ಪುಣೆನಲ್ಲಿ ಉದ್ಘಾಟಿಸಿದರು. ಇದು ಭಾರತದ ಮೊದಲ ವಿಶ್ವ ಶಾಂತಿ ವಿಶ್ವವಿದ್ಯಾಲಯ. ವಿಶ್ವದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಸ್ಥಾಪಿಸಲು ಜ್ಞಾನದ ಸಮಗ್ರ ದೃಷ್ಟಿಕೋನದಿಂದ ಶಿಕ್ಷಣವನ್ನು ದೃಶ್ಯೀಕರಿಸುವುದು ವಿಶ್ವವಿದ್ಯಾಲಯದ
Question 10 |
10. QR ಕೋಡ್ ಆಧಾರಿತ ಬಿಲ್ ಪಾವತಿ ವ್ಯವಸ್ಥೆಯನ್ನು ಪರಿಚಯಿಸಿದ ಭಾರತದ ಮೊದಲ ವಿದ್ಯುತ್ ಸಂಸ್ಥೆ ಯಾವುದು?
ಆದಾನಿ ಪವರ್ | |
ಟಾಟಾ ಪವರ್ | |
ರಿಲಾಯನ್ಸ್ ಪವರ್ | |
ಜಿಂದಾಲ್ |
ದೇಶದ ಮೊದಲ ಕ್ಯೂಆರ್ ಕೋಡ್ ಆಧಾರಿತ ಬಿಲ್ ಪಾವತಿ ವ್ಯವಸ್ಥೆಯನ್ನು ಟಾಟಾ ಪವರ್ ಪರಿಚಯಿಸಿದೆ. ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಗೆ ಸಂಪರ್ಕ ಹೊಂದಿದ ಕ್ಯೂಆರ್ ಕೋಡ್ ಅನ್ನು ವಿದ್ಯುತ್ ಬಿಲ್ಗಳಲ್ಲಿ ಮುದ್ರಿಸಲಾಗುತ್ತದೆ. ಗ್ರಾಹಕರು BHIM ಆಪ್ ಅಥವಾ ಯಾವುದೇ ಇತರ UPI ಲಿಂಕ್ಡ್ ಬ್ಯಾಂಕ್ ಅಪ್ಲಿಕೇಶನ್ನಿಂದ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಬಿಲ್ ಪಾವತಿಸಬಹುದು.
[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಆಗಸ್ಟ್-161718-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ