ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಆಗಸ್ಟ್,22,23,2017

Question 1

1. ರೈಲ್ವೆ ರಕ್ಷಣಾ ಪಡೆ (Railway Protection Force) ಯ ನೂತನ ಡೈರೆಕ್ಟರ್ ಜನರಲ್ ಆಗಿ ಯಾರು ನೇಮಕಗೊಂಡಿದ್ದಾರೆ?

A
ಧರ್ಮೇಂದ್ರ ಕುಮಾರ್
B
ರಾಜೀವ್ ರಾಥೋಡ್
C
ಅಶೋಕ್ ಮಿರ್ಚಿ
D
ಪ್ರಣಯ್ ರಾಯ್
Question 1 Explanation: 
ಧರ್ಮೇಂದ್ರ ಕುಮಾರ್

ಐಪಿಎಸ್ ಅಧಿಕಾರಿ ಧರ್ಮೇಂದ್ರ ಕುಮಾರ್ ರವರು ರೈಲ್ವೆ ರಕ್ಷಣಾ ಪಡೆಯ (ಆರ್ಪಿಎಫ್) ಹೊಸ ಡೈರೆಕ್ಟರ್ ಜನರಲ್ ಆಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಅವರು ಸಿಐಎಸ್ಎಫ್ನಲ್ಲಿ ಹೆಚ್ಚುವರಿ ಡಿಜಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೈಲ್ವೇ ಪ್ರಯಾಣಿಕರು, ಪ್ರಯಾಣಿಕರ ವಲಯ ಮತ್ತು ರೈಲ್ವೆಯ ಆಸ್ತಿಯನ್ನು ರಕ್ಷಿಸುವುದು ಇದರ ಪ್ರಮುಖ ಕರ್ತವ್ಯ.. ಈ ಪಡೆಯು ರೈಲ್ವೆ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತದೆ.

Question 2

2. ಸೆಪಹಿಜಾಲಾ ವನ್ಯಜೀವಿ ಧಾಮ (Sepahijala Wildlife Sanctuary (SWS) ಯಾವ ರಾಜ್ಯದಲ್ಲಿದೆ?

A
ಗೋವಾ
B
ತ್ರಿಪುರ
C
ಸಿಕ್ಕಿಂ
D
ಮಣಿಪುರ
Question 2 Explanation: 
ತ್ರಿಪುರ

ಸೆಪಿಹಿಜಲಾ ವನ್ಯಜೀವಿ ಧಾಮ (SWS) ತ್ರಿಪುರದಲ್ಲಿದೆ. ಈ ವವ್ಯಜೀವಿ ಧಾಮ 18.53 ಚದರ ಕಿಲೋಮೀಟರ್ ಪ್ರದೇಶವನ್ನು ಹೊಂದಿದೆ. ಚಿರತೆಗಳಿಗೆ ಈ ವನ್ಯಜೀವಿ ಧಾಮ ಹೆಸರುವಾಸಿಯಾಗಿದೆ.

Question 3

3. ಭಾರತೀಯ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಂಸ್ಥೆ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಯಾವ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?

A
ವಿಶ್ವ ಆರೋಗ್ಯ ಸಂಸ್ಥೆ
B
ವಿಶ್ವ ಆಹಾರ ಸಂಸ್ಥೆ
C
ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆ
D
ರೆಡ್ ಕ್ರಾಸ್
Question 3 Explanation: 
ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆ
Question 4

4. ಈ ಕೆಳಗಿನ ಯಾವುದು ಇತ್ತೀಚೆಗೆ “ಮೆಂಟರ್ ಇಂಡಿಯಾ ಅಭಿಯಾನ”ವನ್ನು ಆರಂಭಿಸಿದೆ?

A
ನೀತಿ ಆಯೋಗ
B
ಯುಜಿಸಿ
C
ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ
D
ಗೃಹ ಸಚಿವಾಲಯ
Question 4 Explanation: 
ನೀತಿ ಆಯೋಗ

ನೀತಿ ಆಯೋಗವು ಅಟಲ್ ಇನೊವೇಷನ್ ಮಿಷನ್ ಅಡಿಯಲ್ಲಿ ಮೆಂಟರ್ ಇಂಡಿಯಾ ಅಭಿಯಾನ ಎಂಬ ದೇಶ ಕಟ್ಟುವ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿದೆ. ದೇಶದಾದ್ಯಂತ ಇರುವ ನಾಯಕರು ಯಾರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾರೋ, ಮಾರ್ಗದರ್ಶನ ನೀಡಬಲ್ಲರೋ ಅಂಥವರನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಅದಕ್ಕಾಗಿ ಒಂಬೈನೂರಕ್ಕೂ ಹೆಚ್ಚು ಅಟಲ್ ಆಲೋಚನಾ ಪ್ರಯೋಗಶಾಲೆಗಳು ಆರಂಭವಾಗಿವೆ. ಇಡೀ ದೇಶದಾದ್ಯಂತ ಈ ಪ್ರಯೋಗ ಶಾಲೆಗಳು ಆರಂಭವಾಗಲಿವೆ. ಪ್ರತಿ ವಾರವೂ ವಿದ್ಯಾರ್ಥಿಗಳೊಂದಿಗೆ ಕನಿಷ್ಠ ಒಂದೆರಡು ಗಂಟೆ ಮೀಸಲಾಗಿ ಇಡಬಲ್ಲ ನಾಯಕರಿಗಾಗಿ ಎದುರು ನೋಡಲಾಗುತ್ತಿದೆ.

Question 5

5. ಈ ಕೆಳಗಿನ ಯಾರು ರೈಲ್ವೆ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?

A
ಅಶ್ವನಿ ಲೋಹನಿ
B
ಗುರುರಾಜ್ ಮೆಹ್ತ
C
ಸುರ್ದೀಪ್ ಸಿಂಗ್
D
ರಮೇಶ್ ನಾಯಕ್
Question 5 Explanation: 
ಅಶ್ವನಿ ಲೋಹನಿ

ಇತ್ತೀಚಿನ ರೈಲು ಅಪಘಾತಗಳ ನಂತರ ಎ.ಕೆ.ಮಿತ್ತಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಕಾರಣ ರೈಲ್ವೇ ಮಂಡಳಿಯ ಹೊಸ ಅಧ್ಯಕ್ಷರಾಗಿ ಅಶ್ವನಿ ಲೋಹಾನಿ,ರವರು ನೇಮಕಗೊಂಡಿದ್ದಾರೆ. ಪ್ರಸ್ತುತ, ಲೋಹಾನಿ ಏರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲಿಗೆ ಅವರು ದೆಹಲಿಯ ವಿಭಾಗೀಯ ಪ್ರಾದೇಶಿಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದರು ಮತ್ತು ITDC ಅಧ್ಯಕ್ಷರಾಗಿದ್ದರು ಹಾಗೂ ರೈಲ್ ಮ್ಯೂಸಿಯಂನ ನಿರ್ದೇಶಕರಾಗಿದ್ದರು.

Question 6

6. ಇತ್ತೀಚೆಗೆ ನಿಧನರಾದ “ರಿಷಾಂಗ್ ಕೀಶಿಂಗ್” ಯಾವ ರಾಜ್ಯದ ಮಾಜಿ ಮುಖ್ಯಮಂತ್ರಿ?

A
ಅಸ್ಸಾಂ
B
ನಾಗಲ್ಯಾಂಡ್
C
ಮಣಿಪುರ
D
ತ್ರಿಪುರ
Question 6 Explanation: 
ಮಣಿಪುರ

ಮಣಿಪುರದ ಮಾಜಿ ಮುಖ್ಯಮಂತ್ರಿ ಮತ್ತು ಮೊದಲ ಲೋಕಸಭೆಯ ಸದಸ್ಯ ರಿಷಾಂಗ್ ಕೀಶಿಂಗ್ (96) 2017 ಆಗಸ್ಟ್ 23 ರಂದು ಮಣಿಪುರದ ಇಂಫಾಲ್ ನಲ್ಲಿ ನಿಧನ ಹೊಂದಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ನಾಗಾ ಆಗಿದ್ದ ಇವರು 1980-1988 ಮತ್ತು 1994 ರಿಂದ 1997 ರವರೆಗೆ ಮಣಿಪುರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

Question 7

7. 58ನೇ ಸುಬ್ರೊತೊ ಕಪ್ ಇಂಟರ್ನ್ಯಾಷನಲ್ ಫುಟ್ಬಾಲ್ ಪಂದ್ಯಾವಳಿ ಯಾವ ನಗರದಲ್ಲಿ ಪ್ರಾರಂಭವಾಯಿತು?

A
ಭುಬನೇಶ್ವರ
B
ಕೊಲ್ಕತ್ತ
C
ನವದೆಹಲಿ
D
ಬೆಂಗಳೂರು
Question 7 Explanation: 
ನವದೆಹಲಿ

ಸುಬ್ರೊತೊ ಕಪ್ ಇಂಟರ್ನ್ಯಾಷನಲ್ ಫುಟ್ಬಾಲ್ ಪಂದ್ಯಾವಳಿಯ 58ನೇ ಆವೃತ್ತಿಯು ನವದೆಹಲಿಯಲ್ಲಿ ಪ್ರಾರಂಭವಾಗಿದೆ. ಭಾರತ ಮತ್ತು ವಿದೇಶದಿಂದ ಒಟ್ಟು 99 ತಂಡಗಳು ಪ್ರಸಕ್ತ ಅಂತರ-ಶಾಲಾ ಫುಟ್ಬಾಲ್ ಪಂದ್ಯಾವಳಿಯ ಈ ಆವೃತ್ತಿಯಲ್ಲಿ ಮೂರು ವಿಭಾಗಗಳಲ್ಲಿ ಪಾಲ್ಗೊಳ್ಳುತ್ತಿವೆ. ಬಾಂಗ್ಲಾದೇಶ, ಇಂಡೋನೇಷ್ಯಾ, ನೇಪಾಳ, ಅಫಘಾನಿಸ್ತಾನ ಮತ್ತು ಸಿಂಗಾಪುರ್ ತಂಡಗಳು ಈ ಆವೃತ್ತಿಯಲ್ಲಿ ಪಾಲ್ಗೊಳ್ಳುತ್ತಿವೆ.

Question 8

8. ದೂರಸಂಪರ್ಕ ವಲಯದಲ್ಲಿ ಜಂಟಿಯಾಗಿ ಸಾಮರ್ಥ್ಯ ನಿರ್ಮಾಣ ಕೈಗೊಳ್ಳಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಯಾವ ದೇಶದೊಂದಿಗೆ ಲೆಟರ್ ಆಫ್ ಇಂಟೆಂಟ್ (ಲೋಇಐ) ಗೆ ಸಹಿ ಹಾಕಿದೆ?

A
ಮಲೇಷಿಯಾ
B
ಮ್ಯಾನ್ಮಾರ್
C
ವಿಯೆಟ್ನಾಂ
D
ಆಸ್ಟ್ರೇಲಿಯಾ
Question 8 Explanation: 
ಮಲೇಷಿಯಾ

ಪ್ರಸಾರ ಮತ್ತು ದೂರಸಂಪರ್ಕ ನಿಯಂತ್ರಣ ಕ್ಷೇತ್ರಗಳಲ್ಲಿ ಜಂಟಿಯಾಗಿ ಸಾಮರ್ಥ್ಯದ ನಿರ್ಮಾಣ ಕೈಗೊಳ್ಳಲು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನವದೆಹಲಿಯಲ್ಲಿ ಮಲೇಷಿಯಾದ ಕಮ್ಯುನಿಕೇಷನ್ಸ್ ಮತ್ತು ಮಲ್ಟಿಮೀಡಿಯಾ ಕಮಿಷನ್ (ಎಂಸಿಎಂಸಿ) ಜೊತೆ ಲೆಟರ್ ಆಫ್ ಇಂಟೆಂಟ್ (ಲೋಯಿ)ಗೆ ಸಹಿ ಮಾಡಿದೆ. ಒಪ್ಪಂದವು ಟೆಲಿಕಾಂ ಮತ್ತು ಪ್ರಸಾರ ನಿಯಂತ್ರಣದಲ್ಲಿ ಪರಸ್ಪರ ಸಹಕಾರ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸಲು ನಿಕಟವಾಗಿ ಕೆಲಸ ಮಾಡಲು ಸಹಾಯ ಮಾಡಲಿದೆ.

Question 9

9. ಯಾವ ನಗರದಲ್ಲಿ ರಾಷ್ಟ್ರೀಯ ಕ್ರೀಡಾ ವಸ್ತುಸಂಗ್ರಹಾಲಯ ನಿರ್ಮಾಣವಾಗಲಿದೆ?

A
ಇಂಧೋರ್
B
ನವ ದೆಹಲಿ
C
ಮುಂಬೈ
D
ಪುಣೆ
Question 9 Explanation: 
ನವದೆಹಲಿ

ರಾಷ್ಟ್ರೀಯ ಕ್ರೀಡಾ ವಸ್ತುಸಂಗ್ರಹಾಲಯವನ್ನು ನವದೆಹಲಿಯಲ್ಲಿ ಸ್ಥಾಪಿಸಲಾಗುವುದು, ಕ್ರೀಡೆಯಲ್ಲಿ ಭಾರತದ ಸಾಧನೆಗಳನ್ನು ಪ್ರದರ್ಶಿಸುವುದು ಮತ್ತು ದೇಶದಲ್ಲಿ ಸಾಂಪ್ರದಾಯಿಕ ಕ್ರೀಡಾಕೂಟಗಳತ್ತ ಕೇಂದ್ರಿಕರಿಸುವುದು ಇದರ ಉದ್ದೇಶ.

Question 10

10. ನೈಜ ಸಮಯದಲ್ಲಿ ಕೃತಕ ಬುದ್ಧಿಮತ್ತೆ (AI) ಗೆ ಯಾವ ತಂತ್ರಜ್ಞಾನದ ದೈತ್ಯ 'ಪ್ರಾಜೆಕ್ಟ್ ಬ್ರೈನ್ವೇವ್' ಅನ್ನು ಪ್ರಾರಂಭಿಸಿದೆ?

A
ಮೈಕ್ರೋಸಾಫ್ಟ್
B
ಗೂಗಲ್
C
ಫೇಸ್ ಬುಕ್
D
ಐಬಿಎಂ
Question 10 Explanation: 
ಮೈಕ್ರೋಸಾಫ್ಟ್
There are 10 questions to complete.

[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಆಗಸ್ಟ್22232017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಆಗಸ್ಟ್,22,23,2017”

Leave a Comment

This site uses Akismet to reduce spam. Learn how your comment data is processed.