ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಆಗಸ್ಟ್,24,25,26,2017
Question 1 |
1. ಈ ಕೆಳಗಿನ ಯಾವ ದೇಶ “ಅಂತರಾಷ್ಟ್ರೀಯ ಮಿಲಿಟರಿ ಸಂಗೀತಾ ಉತ್ಸವ”ವನ್ನು ಆಯೋಜಿಸುತ್ತಿದೆ?
ರಷ್ಯಾ | |
ಆಸ್ಟ್ರೇಲಿಯಾ | |
ಮಾರಿಷಸ್ | |
ಇರಾನ್ |
2017 ಅಂತರಾಷ್ಟ್ರೀಯ ಮಿಲಿಟರಿ ಸಂಗೀತಾ ಉತ್ಸವ "Spasskaya Tower" ರಷ್ಯಾದ ಮಾಸ್ಕೋದಲ್ಲಿ ಆಗಸ್ಟ್ 24 ರಿಂದ ಸೆಪ್ಟೆಂಬರ್ 3, 2017 ರವರೆಗೆ ನಡೆಯಲಿದೆ. ಭಾರತೀಯ ನೌಕಾಪಡೆ ಬ್ಯಾಂಡ್ "ಟ್ರೈ-ಸರ್ವಿಸಸ್" ಉತ್ಸವದಲ್ಲಿ ಭಾಗವಹಿಸುತ್ತಿದೆ.
Question 2 |
2. ಪಲಾಮು ಹುಲಿ ಸಂರಕ್ಷಿತ ಪ್ರದೇಶ ಯಾವ ರಾಜ್ಯದಲ್ಲಿದೆ?
ಗುಜರಾತ್ | |
ಜಾರ್ಖಂಡ್ | |
ಪಶ್ಚಿಮ ಬಂಗಾಳ | |
ಒಡಿಶಾ |
Question 3 |
3. ಈ ಮುಂದಿನ ಯಾರು ಏರ್ ಇಂಡಿಯಾದ ನೂತನ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಆಗಿ ನೇಮಕಗೊಂಡಿದ್ದಾರೆ?
ಅಜಯ್ ಸಿಂಗ್ | |
ನವೀನ್ ಕಿರಣ್ | |
ರಾಜೀವ್ ಬನ್ಸಾಲ್ | |
ಎಂ.ಕೆ.ಮಾಥುರ್ |
ರಾಜೀವ್ ಬನ್ಸಾಲ್, 1988 ಬ್ಯಾಚ್ ಐಎಎಸ್ ಅಧಿಕಾರಿ ಅವರನ್ನು ಏರ್ ಇಂಡಿಯಾದ ಹೊಸ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
Question 4 |
4. ಈ ಕೆಳಗಿನ ಯಾವ ರಾಜ್ಯದಲ್ಲಿ ಭಾರತದ ಮೊದಲ “ವಿದೇಶ ಭವನ” ನಿರ್ಮಾಣಗೊಂಡಿದೆ?
ಗೋವಾ | |
ಆಂಧ್ರ ಪ್ರದೇಶ | |
ಮಹಾರಾಷ್ಟ್ರ | |
ಮಧ್ಯ ಪ್ರದೇಶ |
ಮಹಾರಾಷ್ಟ್ರದ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ (ಬಿಕೆಸಿ) ಆಗಸ್ಟ್ 27, 2017ರಂದು ಭಾರತದ ಮೊದಲ ವಿದೇಶ್ ಭವನವನ್ನು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಉದ್ಘಾಟಿಸಲಿದ್ದಾರೆ. ಮುಂಬೈಯಲ್ಲಿರುವ "ವಿದೇಶ್ ಭವನ" ಭಾರತದ ಯಾವುದೇ ರಾಜ್ಯದಲ್ಲಿ ಸ್ಥಾಪನೆಯಾದ ವಿದೇಶಾಂಗ ಸಚಿವಾಲಯದ ಮೊದಲ ಏಕೀಕೃತ ಕಚೇರಿ ಸಂಕೀರ್ಣವಾಗಿದೆ.
Question 5 |
5. I Do What I Do” ಪುಸಕ್ತವನ್ನು ಬರೆದಿರುವ ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಯಾರು?
ಡಿ ಸುಬ್ಬುರಾವ್ | |
ರಘುರಾಮ್ ರಾಜನ್ | |
ಬೀಮಲ್ ಜಲಂದ್ | |
ಬಿ ವಿ ರೆಡ್ಡಿ |
RBIನ ಮಾಜಿ ಗವರ್ನರ್ ರಘುರಾಮ್ ರಾಜನ್ ರವರು "ಐ ಡೂ ವಾಟ್ ಐ ಡೂ" ಎಂಬ ಪುಸ್ತಕವನ್ನು ಬರೆದಿದ್ದಾರೆ.
Question 6 |
6. ಯಾವ ರಾಜ್ಯ ಸರ್ಕಾರ ಶಾಲೆಗಳಲ್ಲಿ 'ಇ-ತ್ಯಾಜ್ಯ ವಿಲೇವಾರಿ' ಯೋಜನೆಯನ್ನು ಪ್ರಾರಂಭಿಸಿದೆ?
ತಮಿಳುನಾಡು | |
ಕೇರಳ | |
ಕರ್ನಾಟಕ | |
ಗೋವಾ |
ಐಟಿ ಲ್ಯಾಬೋರೆಟರಿಗಳು ಮತ್ತು ಕಛೇರಿಗಳು ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಸಂಸ್ಕರಿಸುವ ಉದ್ದೇಶದಿಂದ ಕೇರಳ ಸರಕಾರ ತನ್ನ ರಾಜ್ಯ ಶಾಲೆಗಳಲ್ಲಿ ಹೊಸ “ಇ-ತ್ಯಾಜ್ಯ ವಿಲೇವಾರಿ” ಯೋಜನೆಯನ್ನು ಇತ್ತೀಚೆಗೆ ಆರಂಭಿಸಿದೆ. ಈ ಯೋಜನೆಯ ಮೂಲಕ, 10,000 ಕ್ಕಿಂತಲೂ ಹೆಚ್ಚಿನ ಶಾಲೆಗಳು ಮತ್ತು ಕಚೇರಿಗಳಿಂದ 1 ಕೋಟಿ ಕಿಲೋಗ್ರಾಂ ಇ-ತ್ಯಾಜ್ಯವನ್ನು ವೈಜ್ಞಾನಿಕವಾಗಿ ಮರುಬಳಕೆ ಮಾಡಲಾಗುತ್ತದೆ ಮತ್ತು ಈ ಇ-ತ್ಯಾಜ್ಯ ವಿಲೇವಾರಿ ಮೂಲಕ ಗಳಿಸಿದ ಹಣವನ್ನು ಅದೇ ಸಂಸ್ಥೆಗಳಿಗೆ ಹೊಸ ಕಂಪ್ಯೂಟರ್ಗಳನ್ನು ಖರೀದಿಸಲು ಬಳಸಲಾಗುತ್ತದೆ.
Question 7 |
7. ಯಾವ ನಗರದಲ್ಲಿ “ಗ್ರಾಮೀಣ ಖೇಲ್ ಮಹೋತ್ಸವ”ದ ಮೊದಲ ಆವೃತ್ತಿ ಪ್ರಾರಂಭವಾಗಲಿದೆ?
ಪುಣೆ | |
ನವ ದೆಹಲಿ | |
ವಡೋದರ | |
ಭೋಪಾಲ್ |
ಗ್ರಾಮೀಣ ಕ್ರೀಡೆ ಅಥವಾ ಗ್ರಾಮೀಣ ಖೇಲ್ ಮಹೋತ್ಸವದ ಮೊದಲ ಆವೃತ್ತಿಯು ದೆಹಲಿಯಲ್ಲಿ ಆಗಸ್ಟ್ 28 ರಿಂದ ಸೆಪ್ಟೆಂಬರ್ 3 ರವರೆಗೆ ನಡೆಯಲಿದೆ. ಗ್ರಾಮೀಣ ಖೇಲ್ ಮಹೋತ್ಸವದ ಉದ್ದೇಶವೆಂದರೆ ಕುಸ್ತಿ ಮತ್ತು ಅಥ್ಲೆಟಿಕ್ಸ್ ನಂತಹ ಸ್ಥಳೀಯ ಆಟಗಳನ್ನು ಜನಪ್ರಿಯಗೊಳಿಸುವುದು.
Question 8 |
8. ಬ್ಯಾಂಕ್ ಗಳ ಗೃಹ ಸಾಲದ ದರವನ್ನು ರೆಪೋ ದರಕ್ಕೆ ಲಿಂಕ್ ಮಾಡಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕಿನ ಯಾವ ಸಮಿತಿಯು ಇತ್ತೀಚೆಗೆ ಶಿಫಾರಸು ಮಾಡಿದೆ?
ತರುಣ್ ರಾಮದೊರೈ | |
ಹೆಚ್ ಆರ್ ಖಾನ್ | |
ದೇಶಮುಖ್ | |
ವಿರಳ್ ಆಚಾರ್ಯ |
ಭಾರತೀಯ ರಿಸರ್ವ್ ಬ್ಯಾಂಕ್ ನೇಮಕ ಮಾಡಿದ್ದ ಗೃಹಸಾಲಗಳ ಮೇಲಿನ ಸಮಿತಿ ಇತ್ತೀಚೆಗೆ ಶಿಫಾರಸು ಮಾಡಿದೆ. ಬ್ಯಾಂಕ್ಗಳು ತಮ್ಮ ಗೃಹ ಸಾಲ ದರವನ್ನು ಆರ್ಬಿಐ ರೆಪೋ ದರಕ್ಕೆ ಲಿಂಕ್ ಮಾಡಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಲಂಡನ್ನಲ್ಲಿರುವ ಇಂಪೀರಿಯಲ್ ಕಾಲೇಜ್ ಬಿಸಿನೆಸ್ ಸ್ಕೂಲ್ನ ಹಣಕಾಸು ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದ ಡಾ. ತರುಣ್ ರಾಮದ್ದೊರಾಯ್ ಅವರು ಸಮಿತಿಯ ಅಧ್ಯಕ್ಷರಾಗಿದ್ದರು.
Question 9 |
9. ಭಾರತದ ಆರ್ಥಿಕತೆ ರೂಪಾಂತರಕ್ಕಾಗಿ ಕೃತಕ ಬುದ್ಧಿಮತ್ತೆ (ಎಐ) ಮೇಲೆ ಕೇಂದ್ರ ಸರ್ಕಾರವು ಯಾವ ಕಾರ್ಯಪಡೆಯನ್ನು ರಚಿಸಿದೆ?
ಶರಣ್ ಚೌಧರಿ ಕಾರ್ಯಪಡೆ | |
ವಿ ಕಾಮಕೋಟಿ ಕಾರ್ಯಪಡೆ | |
ಅಮಿತ್ ಸಿಂಗ್ ಕಾರ್ಯಪಡೆ | |
ಕಾಮತ್ ಚಂದ್ರ ಕಾರ್ಯಪಡೆ |
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ರವರು ಭಾರತದ ಆರ್ಥಿಕತೆ ರೂಪಾಂತರಕ್ಕಾಗಿ ಕೃತಕ ಬುದ್ಧಿಮತ್ತೆ (ಎಐ) ಮೇಲೆ ಕಾರ್ಯಪಡೆ ರಚಿಸಿದ್ದಾರೆ. ಐಐಟಿ ಮದ್ರಾಸ್ನ ಡಾ. ವಿ. ಕಾಮಾಕೋಟಿಯ ನೇತೃತ್ವದಲ್ಲಿ 18 ಸದಸ್ಯರ ಸಮಿತಿಯು ಪರಿಣಿತರು, ಶೈಕ್ಷಣಿಕ, ಸಂಶೋಧಕರು ಮತ್ತು ಉದ್ಯಮ ಮುಖಂಡರನ್ನು ಒಳಗೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಗಾಗಿ ಕೃತಕ ಬುದ್ಧಿಮತ್ತೆ (AI) ಅನ್ನು ನಿಯಂತ್ರಿಸುವ ಸಾಧ್ಯತೆಗಳನ್ನು ಇದು ಅನ್ವೇಷಿಸುತ್ತದೆ.
Question 10 |
10. ಯಾವ ದೇಶವು 2017 ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (ಸಾಫ್) 15 ವರ್ಷದೊಳಗಿನ ಫುಟ್ಬಾಲ್ ಚಾಂಪಿಯನ್ಷಿಪ್ ಗೆದ್ದುಕೊಂಡಿತು?
ಭಾರತ | |
ಬಾಂಗ್ಲದೇಶ | |
ಶ್ರೀಲಂಕಾ | |
ನೇಪಾಳ |
ನೇಪಾಳದ ಕಠ್ಮಂಡುವಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 2-1ರಿಂದ ನೇಪಾಳವನ್ನು ಸೋಲಿಸುವ ಮೂಲಕ ಭಾರತ 2017 ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (ಸಾಫ್) ಚಾಂಪಿಯನ್ಷಿಪ್ ತನ್ನದಾಗಿಸಿಕೊಂಡಿತು. ವಿಕ್ರಮ್ ಪ್ರತಾಪ್ ಸಿಂಗ್ ಚಾಂಪಿಯನ್ಷಿಪ್ನ ಅತ್ಯುತ್ತಮ ಆಟಗಾರನೆಂದು ಘೋಷಿಸಲಾಯಿತು.
[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಆಗಸ್ಟ್2425262017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ