ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಸೆಪ್ಟೆಂಬರ್,13,14,15,2017

Question 1

1. 2017 ಗಡಿ ಭದ್ರತಾ ಪಡೆ ಕ್ರೀಡಾಕೂಟ ಆತಿಥ್ಯ ವಹಿಸಲಿರುವ ರಾಜ್ಯ ಯಾವುದು?

A
ಜಾರ್ಖಂಡ್
B
ಹರಿಯಾಣ
C
ಜಮ್ಮು & ಕಾಶ್ಮೀರ
D
ಪಂಜಾಬ್
Question 1 Explanation: 
ಜಮ್ಮು & ಕಾಶ್ಮೀರ

2017 ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಕ್ರೀಡಾಕೂಟವು ಜಮ್ಮುನಲ್ಲಿ ಸೆಪ್ಟೆಂಬರ್ 12, 2017 ರಂದು ಆರಂಭವಾಯಿತು. ಸುಮಾರು 1,200 ಸಿಬ್ಬಂದಿ ಕುಸ್ತಿ, ಬಾಕ್ಸಿಂಗ್, ಭಾರ ಎತ್ತುವ ಮತ್ತು ಕಬಡಿ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

Question 2

2. ಇತ್ತೀಚೆಗೆ ಹಾಲಿಮಾ ಯಾಕೊಬ್ ರವರು ಯಾವ ದೇಶದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?

A
ಸಿಂಗಪುರ
B
ಮಾರಿಷಸ್
C
ಮಾಲಿ
D
ಕೀನ್ಯಾ
Question 2 Explanation: 
ಸಿಂಗಪುರ

ಸಿಂಗಪುರದ ಮಾಜಿ ಸ್ಪೀಕರ್, ಹಾಲಿ ಸಂಸದೆ ಹಾಲಿಮಾ ಯಾಕೊಬ್ (63) ಅವರು ಸಿಂಗಪುರ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.ಈ ಸ್ಥಾನಕ್ಕೆ ಮಹಿಳೆಯೊಬ್ಬರು ಆಯ್ಕೆಯಾಗಿರುವುದು ಇದೇ ಮೊದಲು. ಯಾಕೊಬ್ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ನಿಗದಿಪಡಿಸಿರುವ ಯಾವುದೇ ಮಾನದಂಡಗಳಿಗೆ ಅರ್ಹರಾಗಿಲ್ಲ ಎಂದು ಅಧಿಕಾರಿಗಳು ನಿರ್ಧರಿಸಿದರು. ಇದರಿಂದ ಯಾಕೊಬ್ ಅವರ ಆಯ್ಕೆ ಸುಗಮವಾಯಿತು. ಹಾಲಿಮಾ, ಮುಸ್ಲಿಂ ಸಮುದಾಯದ ‘ಮಾಲೆ’ ಪಂಗಡಕ್ಕೆ ಸೇರಿದವರಾಗಿದ್ದಾರೆ.

Question 3

3. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್ಐಎಎಂ) 2017-18 ಸಾಲಿಗೆ ಅಧ್ಯಕ್ಷರಾಗಿ ಈ ಕೆಳಕಂಡ ಯಾರು ಆಯ್ಕೆಯಾಗಿದ್ದಾರೆ?

A
ಮಲ್ಲಿಕ ಶ್ರೀನಿವಾಸನ್
B
ಅಭಯ್ ಫಿರೋಡಿಯಾ
C
ಆನಂದ್ ಮಹೀಂದ್ರ
D
ಶ್ರೀನಿವಾಸ್ ರಾಘವನ್
Question 3 Explanation: 
ಅಭಯ್ ಫಿರೋಡಿಯಾ

ಆಟೋಮೊಬೈಲ್ ಉದ್ಯಮ ಸಂಸ್ಥೆ ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನುಫ್ಯಾಕ್ಚರರ್ಸ್ನ 2017-18ನೇ ಸಾಲಿನ ನೂತನ ಅಧ್ಯಕ್ಷರಾಗಿ ಫೋರ್ಸ್ ಮೋಟಾರ್ಸ್ನ ಚೇರ್ಮನ್ ಅಭಯ್ ಫಿರೋಡಿಯಾ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಜೊತೆಯಲ್ಲಿ, ಮಹೀಂದ್ರಾ ಮತ್ತು ಮಹೀಂದ್ರಾ ಆಟೋಮೋಟಿವ್ ಸೆಕ್ಟರ್ ಅಧ್ಯಕ್ಷ- ರಾಜಾನ್ ವಧೇರ ಅವರು ಸಂಸ್ಥೆಯ ಹೊಸ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಮಾರುತಿ ಸುಜುಕಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆನಿಚಿ ಆಯುಕಾವಾ 2017-18ರಲ್ಲಿ ಖಜಾಂಚಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Question 4

4. ಯಾವ ರಾಜ್ಯದ ಸ್ಟಾರ್ಟ್ ಆಪ್ ಗಳಿಗಾಗಿ ಏರ್ಟೆಲ್ "ಆಫೀಸ್ ಇನ್ ಎ ಬಾಕ್ಸ್" ಸಂಪರ್ಕ ಪರಿಹಾರಗಳನ್ನು ಪ್ರಾರಂಭಿಸಿದೆ?

A
ಕೇರಳ
B
ಕರ್ನಾಟಕ
C
ತಮಿಳುನಾಡು
D
ಆಂಧ್ರ ಪ್ರದೇಶ
Question 4 Explanation: 
ಕರ್ನಾಟಕ

ಕರ್ನಾಟಕ ಸರಕಾರದ ಸ್ಟಾರ್ಟ್-ಅಪ್ ಸೆಲ್ ಉಪಕ್ರಮದ ಅಡಿಯಲ್ಲಿ ಪ್ರಾರಂಭವಾದ ಅಪ್-ಅಪ್ಗಳಿಗಾಗಿ ಏರ್ಟೆಲ್ ಇತ್ತೀಚೆಗೆ 'ಆಫೀಸ್ ಇನ್ ಎ ಬಾಕ್ಸ್' ಅನ್ನು ಬಿಡುಗಡೆ ಮಾಡಿದೆ. ಸ್ಟಾರ್ಟ್-ಅಪ್ ಸೆಲ್ನಲ್ಲಿ ನೋಂದಾಯಿಸಲಾದ 100 ಕ್ಕೂ ಹೆಚ್ಚಿನ ಸ್ಟಾರ್ಟ್-ಅಪ್ಗಳಿಗೆ “ಆಫೀಸ್ ಇನ್ ಎ ಬಾಕ್ಸ್” ಲಭ್ಯವಿರಲಿದೆ.

Question 5

5. ಈ ಕೆಳಗಿನ ಯಾವ ಬಂದರಿಗೆ “2017 ಕಂಟೈನರ್ ಟರ್ಮಿನಲ್ ಆಫ್ ದಿ ಇಯರ್ ಪ್ರಶಸ್ತಿ” ಲಭಿಸಿದೆ?

A
ಮಂಗಳೂರು ಬಂದರು
B
ಜವಹಾರಲಾಲ್ ನೆಹರು ಬಂದರು
C
ವಿಶಾಖಪಟ್ಟಣ ಬಂದರು
D
ಕೊಲ್ಕತ್ತ ಬಂದರು
Question 5 Explanation: 
ಜವಹಾರಲಾಲ್ ನೆಹರು ಬಂದರು

ಮುಂಬೈನಲ್ಲಿ ನಡೆದ ಗೇಟ್ ವೇ ಅವಾರ್ಡ್ಸ್ 2017 ರಲ್ಲಿ ಜವಾಹರಲಾಲ್ ನೆಹರೂ ಪೋರ್ಟ್ ಕಂಟೇನರ್ ಟರ್ಮಿನಲ್ ವರ್ಷದ ಕಂಟೈನರ್ ಟರ್ಮಿನಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ದಟ್ಟಣೆ ನಿರ್ವಹಣೆ, ಸುಲಭ ಸಾಗಣಿಕೆ ಮತ್ತು ಪ್ರತಿಕೂಲ ಪರಿಸ್ಥಿತಿಗಳ ಮಧ್ಯೆ ವ್ಯಾಪಾರವನ್ನು ಬೆಂಬಲಿಸುವ ಮೂಲಭೂತ ಸೌಕರ್ಯಗಳ ಪುನರುಜ್ಜೀವನಕ್ಕಾಗಿ ಈ ಪ್ರಶಸ್ತಿ ಲಭಿಸಿದೆ.

Question 6

6. ಬಾಂಗ್ಲಾದೇಶದಲ್ಲಿ ರೋಹಿಂಗ್ಯಾ ನಿರಾಶ್ರಿತರಿಗೆ ಸಹಾಯ ಮಾಡಲು ಭಾರತವು ಪ್ರಾರಂಭಿಸಿದ ಕಾರ್ಯಾಚರಣೆ ಯಾವುದು?

A
Operation Human
B
Operation Insaniyat
C
Operation Sadbhavane
D
Operation Sahayhasta
Question 6 Explanation: 
Operation Insaniyat

ಮಯನ್ಮಾರ್ ನಿಂದ ಬಾಂಗ್ಲದೇಶದೊಳಗೆ ರೋಹಿಂಗ್ಯಾ ನಿರಾಶ್ರಿತರ ದೊಡ್ಡ ಪ್ರಮಾಣದಲ್ಲಿ ವಲಸೆ ಬರುತ್ತಿರುವ ಕಾರಣ ಮಾನವೀಯ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ಭಾರತವು ಬಾಂಗ್ಲಾದೇಶಕ್ಕೆ ನೆರವು ನೀಡಲು 'ಆಪರೇಷನ್ ಇನ್ಸಾನಿಯಾಟ್ (Operation Insaniyat)' ಅನ್ನು ಪ್ರಾರಂಭಿಸಿದೆ. ಇದರಡಿಯಲ್ಲಿ, ಅಕ್ಕಿ, ಬೇಳೆಕಾಳುಗಳು, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ, ಬಿಸ್ಕಟ್ಗಳು ಮತ್ತು ಸೊಳ್ಳೆ ಪರದೆಗಳನ್ನು ಒಳಗೊಂಡಿರುವ ಪರಿಹಾರ ಸಾಮಗ್ರಿಗಳನ್ನು ಪೀಡಿತ ಜನರಿಗೆ ಒದಗಿಸಲಾಗುವುದು.

Question 7

7. ಈ ಕೆಳಗಿನ ಯಾವ ನಗರದಲ್ಲಿ ಇಂಡೋ-ಶ್ರೀಲಂಕಾ ಹಿಂದಿ ಸಮ್ಮೇಳನವನ್ನು ಆಯೋಜಿಸಲಾಗಿದೆ?

A
ನವದೆಹಲಿ
B
ಚೆನ್ನೈ
C
ಜಾಪ್ನ
D
ಕೊಲೊಂಬೊ
Question 7 Explanation: 
ಕೊಲೊಂಬೊ

ಇಂಡೋ-ಶ್ರೀಲಂಕಾ ಹಿಂದಿ ಸಮ್ಮೇಳನವನ್ನು ಕೊಲಂಬೊ ಸಮೀಪದ ಕೆಳನಿಯ ವಿಶ್ವವಿದ್ಯಾಲಯದಲ್ಲಿ ಸೆಪ್ಟೆಂಬರ್ 13 ರಂದು ಹಿಂದಿ ದಿವಸ ಸಂಭ್ರಮಾಚರಣೆಗಳ ಮುನ್ನಾದಿನ 'ಹಿಂದಿ ಇ-ಲರ್ನಿಂಗ್: ಐಡೆಂಟಿಟಿ ಅಂಡ್ ಆಫಿಲಿಟೀಸ್'ನೊಂದಿಗೆ ಆಯೋಜಿಸಲಾಗಿದೆ. ಶ್ರೀಲಂಕಾಕ್ಕೆ ಭಾರತದ ಹೈ ಕಮೀಷನರ್ ಆಗಿರುವ ತಾರಂಜಿತ್ ಸಿಂಗ್ ಸಂಧು ಈ ಸಮ್ಮೇಳನದ ಮುಖ್ಯ ಅತಿಥಿ.

Question 8

8. 2024 ಮತ್ತು 2028 ಬೇಸಿಗೆ ಒಲಂಪಿಕ್ಸ್ ಕ್ರಮವಾಗಿ ಈ ಕೆಳಗಿನ ಯಾವ ನಗರಗಳಲ್ಲಿ ನಡೆಯಲಿದೆ?

A
ಪ್ಯಾರಿಸ್ ಮತ್ತು ಲಾಸ್ ಏಂಜಲೀಸ್
B
ಲಾಸ್ ಏಂಜಲೀಸ್ ಮತ್ತು ಪ್ಯಾರಿಸ್
C
ಜೂರಿಚ್ ಮತ್ತು ಬ್ರಸಿಲಿಯ
D
ಜೂರಿಚ್ ಮತ್ತು ಪ್ಯಾರಿಸ್
Question 8 Explanation: 
ಪ್ಯಾರಿಸ್ ಮತ್ತು ಲಾಸ್ ಏಂಜಲೀಸ್
Question 9

9. ಜಿಎಸ್ಟಿ ತಂತ್ರಜ್ಞಾನದ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಹಣಕಾಸು ಸಚಿವಾಲಯ ಯಾವ ಸಮಿತಿ ರಚಿಸಿದೆ?

A
ರಾಜೀವ್ ಶುಕ್ಲಾ ಸಮಿತಿ
B
ಅರವಿಂದ್ ಪನಾಗರಿಯ ಸಮಿತಿ
C
ಸುಶೀಲ್ ಮೋದಿ ಸಮಿತಿ
D
ರವೀಂದ್ರ ಜೈನ್ ಸಮಿತಿ
Question 9 Explanation: 
ಸುಶೀಲ್ ಮೋದಿ ಸಮಿತಿ

ಜಿಎಸ್ಟಿ ಅನುಷ್ಠಾನದಲ್ಲಿ ಎದುರಾದ ಐಟಿ ಸವಾಲುಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಪರಿಹರಿಸಲು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯವರ ನೇತೃತ್ವದ ಸಮಿತಿಯನ್ನು ಕೇಂದ್ರ ಹಣಕಾಸು ಸಚಿವಾಲಯ ರಚಿಸಿದೆ. ಇದಲ್ಲದೆ, ರಫ್ತು ಕಾರ್ಯದರ್ಶಿ ಡಾ ಹಸ್ಮುಖ್ ಆದಿಯಾ ಅವರು ರಫ್ತು ಕ್ಷೇತ್ರದ ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು ಜಿಎಸ್ಟಿ ಕೌನ್ಸಿಲ್ಗೆ ಜಿಎಸ್ಟಿ ನಂತರದ ರಫ್ತು ಕ್ಷೇತ್ರಕ್ಕೆ ಸಹಾಯ ಮಾಡಲು ಸೂಕ್ತ ತಂತ್ರವನ್ನು ಶಿಫಾರಸು ಮಾಡಲು ರಫ್ತುಗಳ ಸಮಿತಿಯನ್ನು ರಚಿಸಿದ್ದಾರೆ.

Question 10

10. 12ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆ ಯಾವ ರಾಜ್ಯದಲ್ಲಿ ಜರುಗಿತು?

A
ಗುಜರಾತ್
B
ಮಧ್ಯ ಪ್ರದೇಶ
C
ಮಹಾರಾಷ್ಟ್ರ
D
ಗೋವಾ
Question 10 Explanation: 
ಗುಜರಾತ್

ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯ 12ನೇ ಆವೃತ್ತಿ ಸೆಪ್ಟೆಂಬರ್ 14 ರಂದು ಗುಜರಾತಿನ ಗಾಂಧಿನಗರದಲ್ಲಿ ನಡೆಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪ್ರಧಾನಿ ಶಿಂಜೊ ಅಬೆ ನಡುವಿನ 4 ನೇ ವಾರ್ಷಿಕ ಶೃಂಗಸಭೆ ಇದಾಗಿದೆ. ಈ ಶೃಂಗಸಭೆಯಲ್ಲಿ ಹೂಡಿಕೆ ಪ್ರಚಾರ, ನಾಗರಿಕ ವಾಯುಯಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು 15 ಒಪ್ಪಂದಗಳಿಗೆ ಭಾರತ ಮತ್ತು ಜಪಾನ್ ಸಹಿ ಮಾಡಿವೆ. ಈ ವೇಳೆ ಮುಂಬೈ ಮತ್ತು ಅಹ್ಮದಾಬಾದ್ ನಡುವಿನ ದೇಶದ ಮೊದಲ ಹೈಸ್ಪೀಡ್ ರೈಲು ಕಾರಿಡಾರ್ಗೆ ಅಡಿಪಾಯ ಹಾಕಿದರು.

There are 10 questions to complete.

[button link=”http://www.karunaduexams.com/wp-content/uploads/2017/10/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಸೆಪ್ಟೆಂಬರ್1314152017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಸೆಪ್ಟೆಂಬರ್,13,14,15,2017”

  1. Arunkumargowda

    Tnk u team karunadu…….

Leave a Comment

This site uses Akismet to reduce spam. Learn how your comment data is processed.