ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಸೆಪ್ಟೆಂಬರ್,27,28,29,30,2017
Question 1 |
1. ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್ ಷಿಪ್-2017 ಆತಿಥ್ಯ ವಹಿಸಲಿರುವ ರಾಜ್ಯ ಯಾವುದು?
ತಮಿಳುನಾಡು | |
ಕೇರಳ | |
ಒಡಿಶಾ | |
ಪಂಜಾಬ್ |
57 ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ 2017 ಚೆನ್ನೈನ ಜವಹಾರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 25ರಂದು ಆರಂಭವಾಗಿದೆ. ವಿವಿಧ ರಾಜ್ಯ, ಇಲಾಖೆಗಳು ಮತ್ತು ಸಾರ್ವಜನಿಕ ವಲಯ ಸಂಸ್ಥೆಗಳಿಂದ 1200 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
Question 2 |
2. ಈ ಕೆಳಗಿನ ಯಾವ ಕ್ಷೇತ್ರದ ಅಭಿವೃದ್ದಿಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ “DPIDF” ವಿಶೇಷ ನಿಧಿಯನ್ನು ಸ್ಥಾಪಿಸಿದೆ?
ತೋಟಗಾರಿಕೆ | |
ಡೈರಿ ಉದ್ಯಮ | |
ಕೈಗಾರಿಕೆ | |
ನವೋದ್ಯಮ |
ಹೈನುಗಾರಿಕೆ ಕ್ಷೇತ್ರವನ್ನು ಅಭಿವೃದ್ದಿಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ರೂ. 10,881 ಕೋಟಿಯ “ಡೈರಿ ಪ್ರೊಸೆಸಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಫಂಡ್ (ಡಿಪಿಐಡಿಎಫ್)” ಸ್ಥಾಪಿಸಿದೆ. ಈ ಹೂಡಿಕೆಯಿಂದ ಸುಮಾರು 50,000 ಗ್ರಾಮಗಳ 95 ಲಕ್ಷ ರೈತರು ಲಾಭ ಪಡೆಯಲಿದ್ದಾರೆ. ಪರಿಣಾಮಕಾರಿ ಹಾಲು ಸಂಗ್ರಹಣಾ ವ್ಯವಸ್ಥೆ ಮತ್ತು ಇತರ ಮೂಲಭೂತ ಸೌಕರ್ಯವನ್ನು ನಿರ್ಮಿಸಲು ಸಾಲವನ್ನು ಒದಗಿಸಲು ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್ (ಎನ್ಡಿಡಿಬಿ) ಮತ್ತು ರಾಷ್ಟ್ರೀಯ ಸಹಕಾರ ಅಭಿವೃದ್ಧಿ ಸಹಕಾರ (ಎನ್ಸಿಡಿಸಿ) ಡಿಪಿಐಡಿಎಫ್ ಅನ್ನು ಬಳಸಿಕೊಳ್ಳಲಿವೆ.
Question 3 |
3. ಇತ್ತೀಚೆಗೆ “ಜೊವೊ ಲೌರೆಂಕೊ” ರವರು ಯಾವ ದೇಶದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?
ಅಂಗೋಲ | |
ಕ್ಯೂಬಾ | |
ಘಾನ | |
ಸೈಪ್ರಸ್ |
ಅಂಗೋಲಾದ ಹೊಸ ಅಧ್ಯಕ್ಷರಾಗಿ ಪೀಪಲ್ಸ್ ಮೂವ್ಮೆಂಟ್ ಫಾರ್ ದಿ ಲಿಬರೇಷನ್ ಆಫ್ ಅಂಗೋಲಾ (ಎಂಪಿಎಲ್ಎ) ಪಕ್ಷದ ಮುಖಂಡ ಜೊವೊ ಮ್ಯಾನುಯೆಲ್ ಗೊನ್ಕಾಲ್ವ್ಸ್ ಲೌರೆಂಕೊ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು.
Question 4 |
4. ಯಾವ ರಾಜ್ಯ ಗರ್ಭೀಣಿ ಮಹಿಳೆಯರಿಗಾಗಿ “ಶಿಶು ಅಬಾಂಡ್ ಮಾತೃ ಮೃತ್ಯುಹಾರ ಪೂರ್ಣ ನಿರಾಕರಣನ್ ಅಭಿಜನ್ (ಸಂಪೂರ್ಣ) ಯೋಜನೆಯನ್ನು ಪ್ರಾರಂಭಿಸಿದೆ?
ಒಡಿಶಾ | |
ತೆಲಂಗಣ | |
ಆಂಧ್ರ ಪ್ರದೇಶ | |
ಜಾರ್ಖಂಡ್ |
ಒಡಿಶಾ ಸರ್ಕಾರ ಗರ್ಭಿಣಿ ಮಹಿಳೆಯರಿಗೆ ಶಿಶು ಅಬಾಂಡ್ ಮಾತೃ ಮೃತ್ಯುಹಾರ ಪೂರ್ಣ ನಿರಾಕರಣನ್ ಅಭಿಜನ್ (ಸಂಪೂರ್ಣ) ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಗರ್ಭಿಣಿ ಮಹಿಳೆಯರಿಗೆ ಆಸ್ಪತ್ರೆಗೆ ಪ್ರಯಾಣಿಸಲು ರಾಜ್ಯ ಸರ್ಕಾರವು ಸಾರಿಗೆ ವೆಚ್ಚ ರೂ .1,000 ಒದಗಿಸುತ್ತದೆ. ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ ನವಜಾತ ಮಗು ಮತ್ತು ತಾಯಿ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು.
Question 5 |
5. 2017 ಅತ್ಯುತ್ತಮ ಪ್ರವಾಸೋದ್ಯಮ ರಾಜ್ಯ ಪ್ರಶಸ್ತಿ ಯಾವ ರಾಜ್ಯಕ್ಕೆ ಲಭಿಸಿದೆ?
ಮಧ್ಯ ಪ್ರದೇಶ | |
ಕೇರಳ | |
ತಮಿಳುನಾಡು | |
ಕರ್ನಾಟಕ |
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಮಧ್ಯಪ್ರದೇಶ ಸರ್ಕಾರ ಒಟ್ಟು 10 ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸತತ 3 ನೇ ಬಾರಿಗೆ ಅತ್ಯುತ್ತಮ ಪ್ರವಾಸೋದ್ಯಮ ರಾಜ್ಯ ಪ್ರಶಸ್ತಿಯನ್ನು ರಾಜ್ಯವು ಗೆದ್ದುಕೊಂಡಿದೆ.
Question 6 |
6. 2017 ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
25 | |
35 | |
40 | |
45 |
2017 ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ 137 ದೇಶಗಳ ಪೈಕಿ ಭಾರತ 40 ನೇ ಸ್ಥಾನವನ್ನು ಪಡೆದಿದೆ, ಈ ಸೂಚ್ಯಂಕವನ್ನು ವಿಶ್ವ ಆರ್ಥಿಕ ವೇದಿಕೆ (WEF) ಪ್ರಕಟಿಸಿದೆ. ಸೂಚ್ಯಂಕದ ಪ್ರಕಾರ, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದಲ್ಲಿ ವಿಶೇಷವಾಗಿ ಪ್ರತಿ ಬಳಕೆದಾರರಿಗೆ ಇಂಟರ್ನೆಟ್ ಬ್ಯಾಂಡ್ವಿಡ್ತ್, ಮೊಬೈಲ್ ಫೋನ್ ಮತ್ತು ಬ್ರಾಡ್ಬ್ಯಾಂಡ್ ಸಂಪರ್ಕ ಮತ್ತು ಶಾಲೆಗಳಲ್ಲಿ ಅಂತರ್ಜಾಲ ಸೇವೆಯಲ್ಲಿ ಭಾರತದ ಕಾರ್ಯಕ್ಷಮತೆ ಸುಧಾರಣೆಯಾಗಿದೆ. ಈ ಪಟ್ಟಿಯಲ್ಲಿ ಸ್ವಿಟ್ಜರ್ಲೆಂಡ್ ಅಗ್ರಸ್ಥಾನದಲ್ಲಿದೆ, ನಂತರ ಯುನೈಟೆಡ್ ಸ್ಟೇಟ್ಸ್, ಸಿಂಗಪೂರ್, ನೆದರ್ಲ್ಯಾಂಡ್ಸ್ ಮತ್ತು ಜರ್ಮನಿ ಸ್ಥಾನ ಪಡೆದುಕೊಂಡಿವೆ.
Question 7 |
7. ಈ ಕೆಳಗಿನ ಯಾವ ರಾಜ್ಯ “3ನೇ ಭಾರತ ಅಂತರಾಷ್ಟ್ರೀಯ ವಿಜ್ಞಾನ ಉತ್ಸವ -2017” ಆಯೋಜಿಸುತ್ತಿದೆ?
ಗೋವಾ | |
ಮಹಾರಾಷ್ಟ್ರ | |
ತಮಿಳುನಾಡು | |
ಗುಜರಾತ್ |
3 ನೇ ಭಾರತ ಅಂತರಾಷ್ಟ್ರೀಯ ವಿಜ್ಞಾನ ಉತ್ಸವ (ಐಐಎಸ್ಎಫ್ -2017) ತಮಿಳುನಾಡಿನ ಚೆನ್ನೈನಲ್ಲಿ ಅಕ್ಟೋಬರ್ 13 ರಿಂದ 16 ರವರೆಗೆ ನಡೆಯಲಿದೆ. ಈ ಉತ್ಸವವನ್ನು ಭೂ ವಿಜ್ಞಾನ ಸಚಿವಾಲಯ (MoES) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ (MoST) ಆಯೋಜಿಸಿದೆ.
Question 8 |
8. ಇತ್ತೀಚೆಗೆ ನಿಧನರಾದ ಹಿರಿಯ ನಟ, ನಿರ್ದೇಶಕ ಟಾಮ್ ಆಲ್ಟರ್ ರವರು ಯಾವ ದೇಶದವರು?
ಭಾರತ | |
ರಷ್ಯಾ | |
ಫ್ರಾನ್ಸ್ | |
ಜಪಾನ್ |
ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ನಟ, ನಿರ್ದೇಶಕ ಟಾಮ್ ಆಲ್ಟರ್ ನಿಧನರಾಗಿದ್ದಾರೆ. ಅಮೆರಿಕ ಮೂಲದ ಭಾರತೀಯ ನಟ ಟಾಮ್ ಆಲ್ಟರ್ ಅವರು ಕಲೆ ಮತ್ತು ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಆಧಾರಿಸಿ ಭಾರತ ಸರ್ಕಾರ 2008ರಲ್ಲಿ ಪದ್ಮ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
Question 9 |
9. 14ನೇ ಭಾರತ- ಐರೋಪ್ಯ ಒಕ್ಕೂಟ ಶೃಂಗಸಭೆ 2017 ಆತಿಥ್ಯ ವಹಿಸಲಿರುವ ನಗರ _________?
ಬ್ರಸೆಲ್ | |
ನವದೆಹಲಿ | |
ಹೈದ್ರಾಬಾದ್ | |
ಹಂಬರ್ಗ್ |
14ನೇ ಭಾರತ-ಇಯು ಶೃಂಗಸಭೆ ಅಕ್ಟೋಬರ್ 5-7, 2017 ರಂದು ನವದೆಹಲಿಯಲ್ಲಿ ನಡೆಯಲಿದೆ. ಶೃಂಗಸಭೆಯಲ್ಲಿ, ದೀರ್ಘಾವಧಿಯ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅಡಚಣೆಯನ್ನು ನಿವಾರಿಸುವ ಮಾರ್ಗಗಳು ಸೇರಿದಂತೆ ಎರಡೂ ಕಡೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ನಿರೀಕ್ಷಿಸಲಾಗಿದೆ. ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ (ಇಸಿ) ಡೊನಾಲ್ಡ್ ಫ್ರಾನ್ಸಿಜೆಕ್ ಟಸ್ಕ್ ಮತ್ತು ಯುರೋಪಿಯನ್ ಕಮಿಷನ್ (ಇಸಿ) ಅಧ್ಯಕ್ಷ ಜೀನ್-ಕ್ಲೌಡ್ ಜಂಕರ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
Question 10 |
10. ಆರ್ಥಿಕ ಕಾರ್ಯಕ್ಷಮತೆಯನ್ನು ಸುಧಾರಿಸುವ ಸಲುವಾಗಿ ಯಾವ ಬ್ಯಾಂಕ್ 'ಪ್ರಾಜೆಕ್ಟ್ ನಿಶ್ಚಯ್' ಅನ್ನು ಪ್ರಾರಂಭಿಸಿದೆ?
ICICI | |
IDBI | |
SBI | |
Axis |
ಆರ್ಥಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಬಾಡಿನ್ ಕನ್ಸಲ್ಟಿಂಗ್ ಗ್ರೂಪ್ (ಬಿ.ಸಿ.ಜಿ.) ಸಹಯೋಗದೊಂದಿಗೆ ಐಡಿಬಿಐ ಬ್ಯಾಂಕ್ 'ಪ್ರಾಜೆಕ್ಟ್ ನಿಶ್ಚಯ್” ಅನ್ನು ಆರಂಭಿಸಿದೆ.
[button link=”http://www.karunaduexams.com/wp-content/uploads/2017/10/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಸೆಪ್ಟೆಂಬರ್272829302017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ