ಏಷ್ಯಾದ ಸುಂದರ ತಾಣಗಳ ಪಟ್ಟಿಯಲ್ಲಿ “ತಾಜ್ ಮಹಲ್”

ವಿಶ್ವ ಪ್ರಸಿದ್ದ ತಾಜ್ ಮಹಲ್ ಈಗ ಮತ್ತೊಂದ ಗರಿಗೆ ಪಾತ್ರವಾಗಿದೆ. ಕೊಂಡೆ ನಾಸ್ಟ್ ಟ್ರಾವೆಲರ್ (ಸಿ ಎನ್ ಟಿ) ನಿಯತಕಾಲಿಕೆ ಬಿಡುಗಡೆಗೊಳಿಸಿರುವ ಏಷ್ಯಾದ 50 ಸುಂದರ ತಾಣಗಳ ಪಟ್ಟಿಯಲ್ಲಿ ಭಾರತದ ತಾಜ್ ಮಹಲ್ ಸ್ಥಾನ ಗಳಿಸಿದೆ. 1684ರಲ್ಲಿ ಷಹಜಹಾನ್ ತನ್ನ ಪತ್ನಿ ಮಮ್ತಾಜ್​ಳ ಪ್ರೀತಿಯ ಕುರುಹುಗಾಗಿ ಈ ಸುಂದರ ಸ್ಮಾರಕ ನಿರ್ಮಿಸಿದ್ದು, ವಿಶ್ವದ ಏಳು ಅದ್ಬುತಗಳಲ್ಲಿ ಸ್ಥಾನ ಪಡೆಯುವ ಮೂಲಕ ಈಗಾಗಲೇ ವಿಶ್ವದ ಗಮನ ಸೆಳೆದಿದೆ. ಇದೀಗ ಸಿಎನ್​ಟಿ ನಿಯತಕಾಲಿಕೆ ಏಷ್ಯಾದ ಸುಂದರ ತಾಣಗಳ ಸಮೀಕ್ಷೆ ನಡೆಸಿದ್ದು, ಭಾರತದ ತಾಜ್ ಸ್ಥಾನ ಪಡೆಯುವ ಮೂಲಕ ತನ್ನ ಕೀರ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ.

  • ಈ ಪಟ್ಟಿಯಲ್ಲಿ ಚೀನಾದ ಬೀಝಿಂಗ್, ಗ್ರೇಟ್ ವಾಲ್ ಆಫ್ ಚೀನಾ ಮತ್ತು ಟಿಬೆಟ್ ನ ಲಾಸ್ಹಾ ಗುರುತಿಸಿಕೊಂಡಿವೆ.

 

ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ವಿಶ್ವದ ಅತಿ ದೊಡ್ಡ ಚರಕ ಆನಾವರಣ

chakra_upವಿಶ್ವದ ಅತಿ ದೊಡ್ಡ ಚರಕದವನ್ನು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ಬಳಿ ಸ್ಥಾಪಿಸಲಾಗಿದ್ದು, ಈ ಬೃಹತ್ ಚರಕವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಆನಾವರಣಗೊಳಿದರು. ಈಗಾಗಲೇ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಟರ್ಮಿನಲ್ ಗಳಲ್ಲಿ ವೊರ್ಲಿ ಕಲೆ, ಅನೆ ಪ್ರತಿಮೆ, ಸೂರ್ಯ ವಿಗ್ರಹ, ನಿಲ್ದಾಣದ ಒಳಗೆ ಬುದ್ಧದ ಮೂರ್ತಿ ಇದ್ದು, ಚರಕ ಹೊಸ ಸೇರ್ಪಡೆ ಎನಿಸಿದೆ.

ಚರಕದ ವೈಶಿಷ್ಟ್ಯತೆ:

  • ಈ ಚರಕವು 27 ಅಡಿ ಉದ್ದ ಹಾಗೂ 15 ಅಡಿ ಎತ್ತರವಿದೆ, ಆನೆ ಚಿತ್ರ ಹಾಗೂ ಸೂರ್ಯನ ಪ್ರತಿಮೆಗಳನ್ನು ಒಳಗೊಂಡಿದೆ.
  • ಅಹಮದಾಬಾದಿನ 42 ಕಾರ್ವಿುಕರು 50 ದಿನ ಸತತ ಕೆಲಸ ಮಾಡಿ ಇದನ್ನು ನಿರ್ವಿುಸಿದ್ದಾರೆ.
  • ಈ ಚರಕವನ್ನು ಭಾರತದ ಗತವೈಭವ ಬಣ್ಣಿಸಲು ಹಾಗೂ ರಾಷ್ಟ್ರದ ಸಾಮರಸ್ಯ ಮೌಲ್ಯಗಳನ್ನು ಬಿಂಬಿಸಲು ಮತ್ತು ಮಹಾತ್ಮಾ ಗಾಂಧಿಯವರ ಆದರ್ಶ ಸಮಾನತಾವಾದ ಸಾರುವುದು ನಮ್ಮ ಉದ್ದೇಶದಿಂದ ನಿರ್ಮಿಸಲಾಗಿದೆ.