ಸೆಪ್ಟೆಂಬರ್ 2017 ರಲ್ಲಿ ಕೈಗಾರಿಕೆಗಳ ಪ್ರಗತಿ ಆರು ತಿಂಗಳಲ್ಲಿ ಅಧಿಕ
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದ ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕದ ಪ್ರಕಾರ, ಮೂಲಸೌಕರ್ಯ ವಲಯದ ಪ್ರಮುಖ 8 ಕೈಗಾರಿಕೆಗಳ ಪ್ರಗತಿಯು ಸೆಪ್ಟೆಂಬರ್ನಲ್ಲಿ ಆರು ತಿಂಗಳಲ್ಲಿ ಗರಿಷ್ಠ ಬೆಳವಣಿಗೆಯಾಗಿದೆ.
ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ತೈಲಾಗಾರ ವಲಯ, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಒಳಗೊಂಡಿರುವ ಪ್ರಮುಖ ಉದ್ಯಮಗಳು ಸೆಪ್ಟಂಬರ್ ನಲ್ಲಿ ಶೇ 5.2% ರಷ್ಟು ಬೆಳವಣಿಗೆ ಕಂಡಿವೆ. ಆಗಸ್ಟ್ 2017 ರಲ್ಲಿ ಶೇ 4.4% ಬೆಳವಣಿಗೆ ದಾಖಲಾಗಿತ್ತು.
ವಲಯವಾರು ಪ್ರಗತಿ:
ಕಲ್ಲಿದ್ದಲು, ನೈಸರ್ಗಿಕ ಅನಿಲ ಮತ್ತು ಶುದ್ಧೀಕರಣ ಉತ್ಪನ್ನಗಳ ಉತ್ಪಾದನೆ ಕ್ರಮವಾಗಿ ಸೆಪ್ಟೆಂಬರ್ 2017 ರಲ್ಲಿ 10.6%, 6.3% ಮತ್ತು 8.1% ರಷ್ಟಿದೆ. ವಿದ್ಯುತ್ ಉತ್ಪಾದನೆಯು 5.2% ಮತ್ತು ಉಕ್ಕು ವಲಯ 3.7% ಬೆಳವಣಿಗೆ ದಾಖಲಾಗಿದೆ. ಕಚ್ಚಾ ಉತ್ಪಾದನೆ ಮತ್ತು ಸಿಮೆಂಟ್ ಉತ್ಪಾದನೆಯು ಶೇ 0.1 ರಷ್ಟು ಇದ್ದು, ರಸಗೊಬ್ಬರದ ಉತ್ಪಾದನೆ 7.7% ರಷ್ಟಿದೆ. ಈ ವಲಯವು ಉತ್ತಮ ಪ್ರಗತಿ ಸಾಧಿಸಿರುವುದರಿಂದ ಕೈಗಾರಿಕಾ ಪ್ರಗತಿ ಸೂಚ್ಯಂಕದ (ಐಐಪಿ) ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ನಿರೀಕ್ಷೆ ವ್ಯಕ್ತವಾಗಿದೆ. ಈ 8 ಕೈಗಾರಿಕೆಗಳು ಕೈಗಾರಿಕಾ ಪ್ರಗತಿಯಲ್ಲಿ ಶೇ 41 ರಷ್ಟು ಪಾಲು ಹೊಂದಿವೆ.
ಮೂಲ ಸೌಕರ್ಯ ವಲಯ:
ಪ್ರಮುಖ ಸೌಕರ್ಯ ವಲಯವನ್ನು ಮುಖ್ಯ ಉದ್ಯಮ ಎಂದು ವ್ಯಾಖ್ಯಾನಿಸಬಹುದು. ಭಾರತದಲ್ಲಿ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಶುದ್ಧೀಕರಣ ಉತ್ಪನ್ನಗಳು, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಸೇರಿದಂತೆ ಎಂಟು ಪ್ರಮುಖ ವಲಯಗಳಿವೆ.
ವಿದ್ಯುತ್ ಗರಿಷ್ಠ ಪ್ರಮಾಣ (10.32%), ಉಕ್ಕು (6.68%), ತೈಲಾಗಾರ (5.94%), ಕಚ್ಚಾ ತೈಲ ಉತ್ಪಾದನೆ (5.22%), ಕಲ್ಲಿದ್ದಲು ಉತ್ಪಾದನೆ (4.38%), ಸಿಮೆಂಟ್ (2.41%), ನೈಸರ್ಗಿಕ ಅನಿಲ ಉತ್ಪಾದನೆ (1.71%) ಮತ್ತು ರಸಗೊಬ್ಬರ ಉತ್ಪಾದನೆ (1.25%).
ಭಾರತದ ನೌಕಪಡೆಗೆ 111 ಹೆಲಿಕಾಪ್ಟರ್ ಖರೀದಿಸಲು ಒಪ್ಪಿಗೆ
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರವರ ನೇತೃತ್ವದ ರಕ್ಷಣಾ ಸ್ವಾಧೀನಾ ಮಂಡಳಿ111 ಹೆಲಿಕಾಪ್ಟರ್ ಗಳನ್ನು ಭಾರತೀಯ ನೌಕಪಡೆಗೆ ಖರೀದಿಸಲು ಹಸಿರು ನಿಶಾನೆ ತೋರಿದೆ. ಭಾರತೀಯ ನೌಕಾಪಡೆಗೆ 21,738 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಹೆಲಿಕಾಪ್ಟರ್ ಗಳನ್ನು ಖರೀದಿಸಲಾಗುವುದು.
- 110 ಹೆಲಿಕಾಪ್ಟರ್ ಪೈಕಿ 95 ಕಾಪ್ಟರ್ಗಳನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತದಲ್ಲಿ ತಯಾರಿಸಲಾಗುವುದು. 16 ವಿಮಾನವನ್ನು ವಿದೇಶಿ ಕಾಪ್ಟರ್ ನಿರ್ಮಾಣದಲ್ಲಿ ಖರೀದಿಸಲಾಗುವುದು.
- ಸಿಕರ್ಸ್ಕಿ, ಬೆಲ್ ಮತ್ತು ಏರ್ಬಸ್ ಸೇರಿದಂತೆ ಪ್ರಮುಖ ಸಂಸ್ಥೆಗಳು ಈ ಯೋಜನೆಯಲ್ಲಿ ಭಾಗವಹಿಸಲಿವೆ ಎಂದು ನಿರೀಕ್ಷಿಸಲಾಗಿದೆ.
- ಭಾರತೀಯ ನೌಕಾಪಡೆಯಿಂದ ಹೊರಡಿಸಿಲಾದ ಮಾಹಿತಿ ಪ್ರಕಾರ ನವೀನ ಬಳಕೆ ಹೆಲಿಕಾಪ್ಟರ್ ಗಳು ಹುಡುಕಾಟ ಮತ್ತು ರಕ್ಷಣೆ, ಕಡಲ್ಗಳ್ಳತನ ವಿರೋಧಿ ಚಟುವಟಿಕೆ, ವಿಪತ್ತು ಪರಿಹಾರ ಮತ್ತು ಸಮೀಕ್ಷೆ ಸೇರಿದಂತೆ ವಿವಿಧ ಪಾತ್ರಗಳನ್ನು ನಿರ್ವಹಿಸಬಲ್ಲದಾಗಿರಲಿವೆ.
ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ನೀಲಮಣಿ ರಾಜು ನೇಮಕ
ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ನೀಲಮಣಿ ರಾಜು ರವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೀಲಮಣಿ ರಾಜು ರವರು ಈ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎನಿಸಿದ್ದಾರೆ. ಪ್ರತಿಷ್ಠಿತ ಹುದ್ದೆಗೆ ನೀಲಮಣಿ ರಾಜು ಮತ್ತು ಎಚ್.ಸಿ. ಕಿಶೋರಚಂದ್ರ ನಡುವೆ ಪೈಪೋಟಿ ಏರ್ಪಟ್ಟಿತ್ತು.
- ನೀಲಮಣಿ ರಾಜು ರವರ ಸೇವಾ ಅವಧಿ 2020 ರ ಜ.ನವರಿ 31 ರವರೆಗೆ ಇದೆ.
- ನೀಲಮಣಿ ಅವರು ನಿವೃತ್ತ ಐಎಎಸ್ ಅಧಿಕಾರಿ ಡಿ.ಎನ್.ನರಸಿಂಹರಾಜು ರವರ ಪತ್ನಿ. ನರಸಿಂಹರಾಜು ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಅನಂತರ ಮುಖ್ಯಮಂತ್ರಿ ಕಚೇರಿಯಲ್ಲೇ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿದ್ದರು. ಬಳಿಕ ರಾಜ್ಯ ಮಾಹಿತಿ ಹಕ್ಕು ಆಯೋಗದ ಮುಖ್ಯ ಆಯುಕ್ತರಾಗಿದ್ದರು.
- 1983 ನೇ ಬ್ಯಾಚ್ಗೆ (ಕರ್ನಾಟಕ ಕೇಡರ್) ಸೇರಿದ ಐಪಿಎಸ್ ಅಧಿಕಾರಿ ನೀಲಮಣಿ ಮೂಲತಃ ಉತ್ತರಾಖಂಡದ ರೂರ್ಕಿಯವರು.
ವಿದ್ಯಾರ್ಧಿ ವಿಜ್ಞಾನ ಮಂಥನ: ರಾಷ್ಟ್ರವ್ಯಾಪಿ ವಿಜ್ಞಾನ ಪ್ರತಿಭೆ ಹುಡುಕಾಟ ಪರೀಕ್ಷೆ
ರಾಷ್ಟ್ರವ್ಯಾಪ್ತಿ ವಿಜ್ಞಾನ ಪ್ರತಿಭೆ ಹುಡುಕಾಟ ಪರೀಕ್ಷೆ ವಿದ್ಯಾರ್ಥಿ ವಿಜ್ಞಾನ ಮಂಥನ ನವೆಂಬರ್ 26 ರಂದು ನಡೆಯಲಿದೆ. ಇದು ಯುವಕರು, ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳ ನಡುವೆ ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತಶಾಸ್ತ್ರದ ಕಲಿಕೆಗೆ ಉತ್ತೇಜನ ನೀಡಲು ಅನನ್ಯ ಪ್ರಯತ್ನವಾಗಿದೆ.
ವಿದ್ಯಾರ್ಥಿ ವಿಜ್ಞಾನ ಮಂಥನ:
- ಈ ಪರೀಕ್ಷೆಯನ್ನು ಖ್ಯಾತ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ವಿಗ್ಯಾನ ಪ್ರಸಾರ್ (ವಿಪಿ) ನೊಂದಿಗೆ ಆಯೋಜಿಸಿದ್ದಾರೆ. ವಿಗ್ಯಾನ ಪ್ರಸಾರ್ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು NCERT ಅಡಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಘಟನೆ.
- ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಉತ್ತಮ ವೇದಿಕೆಯನ್ನು ಇದು ಕಲ್ಪಿಸಲಿದೆ. ಪರೀಕ್ಷೆಯನ್ನು ಆನ್ಲೈನ್ನಲ್ಲಿ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್, ಮೊಬೈಲ್, ಟ್ಯಾಬ್ಲೆಟ್ ಮುಂತಾದ ವಿವಿಧ ಡಿಜಿಟಲ್ ಕೇಂದ್ರಗಳಲ್ಲಿ 91,000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯನ್ನು ಒಂದೇ ದಿನದಂದು ಹಾಜರಾಗಲಿದ್ದಾರೆ.
- ಟೊರಾಂಟೊದಲ್ಲಿ 14ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ: 14ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ನವೆಂಬರ್ 10 ಮತ್ತು 11ರಂದು ಟೊರಾಂಟೊದಲ್ಲಿ ನಡೆಯಲಿದೆ. ಮಂಗಳೂರಿನ ಹೃದಯವಾಹಿನಿ ಸಂಸ್ಥೆಯು ಟೊರಾಂಟೊದ ಕನ್ನಡ ಕಸ್ತೂರಿ ರೇಡಿಯೊ ಮತ್ತು ಕೆನಡಾದ ಬಿ.ವಿ. ನಾಗ್ ಕಮ್ಯೂನಿಕೇಷನ್ ಇಂಕ್ ಸಹಯೋಗದೊಂದಿಗೆ ಈ ಸಮ್ಮೇಳನವನ್ನು ಆಯೋಜಿಸಿದೆ.
Tq u sir
Plz update daily
Plz upload September, Oct,nov,currentaffairs notes sir
We want monthly current affairs sir (sep,oct,nov)
Thank you so much sir