ದಕ್ಷಿಣಾ ಆಫ್ರಿಕಾ ಸಾಹಿತಿ ಲಿಡುಡುಮಲಿಂಗನಿ (Lidudumalingani) ಗೆ ಒಲಿದೆ 2016 ಕೈನ್ ಪ್ರಶಸ್ತಿ

ದಕ್ಷಿಣಾ ಆಫ್ರಿಕಾದ ಖ್ಯಾತಿ ಸಾಹಿತಿ, ಸಿನಿಕಾರ ಹಾಗೂ ಪೋಟೊಗ್ರಾಫರ್ ಆಗಿರುವ ಲಿಡುಡುಮಲಿಂಗನಿ ರವರಿಗೆ ಪ್ರತಿಷ್ಟಿತ 2016 ನೇ ಸಾಲಿನ ಕೈನ್ ಪ್ರಶಸ್ತಿಯನ್ನು ನೀಡಲಾಗಿದೆ.

  • ಲಿಡುಡುಮಲಿಂಗನಿ ರವರ ಪ್ರಸಿದ್ದ ಸಣ್ಣ ಕಥೆ “ಮೆಮೊರೀಸ್ ವಿ ಲಾಸ್ಟ್” ಗೆ ಈ ಪ್ರಶಸ್ತಿ ಸಂದಿದೆ. ಸಾಂಪ್ರಾದಾಯಿಕ ನಂಬಿಕಗಳ ಮೂಲಕ ಸಿಝೋಪ್ರೆನಿಯಾ (Schizophrenia) ಕಾಯಿಲೆಯನ್ನು ವಾಸಿ ಮಾಡುವ ಸುತ್ತ ಬರೆಯಲಾಗಿದೆ.

ಕೈನ್ ಪ್ರಶಸ್ತಿಯ ಬಗ್ಗೆ (Caine Prize):

  • ಕೈನ್ ಪ್ರಶಸ್ತಿಯು ವಾರ್ಷಿಕ ಸಾಹಿತ್ಯ ಪ್ರಶಸ್ತಿಯಾಗಿದ್ದು, ಆಫ್ರಿಕಾದ ಸಾಹಿತಿಗಳಿಗೆ ನೀಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಆಫ್ರಿಕಾದ ಬುಕರ್ ಎಂತಲೇ ಕರೆಯಲಾಗುತ್ತಿದೆ.
  • ಆಂಗ್ಲ ಭಾಷೆಯಲ್ಲಿ ಬರೆಯಲಾದ ಸಣ್ಣ ಕಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು.
  • ಈ ಪ್ರಶಸ್ತಿಯನ್ನು 2010 ರಲ್ಲಿ ಯು.ಕೆ ಯಲ್ಲಿ ಸರ್ ಮೈಕಲ್ ಹ್ಯಾರಿಸ್ ಕೈನ್ ರವರ ಸ್ಮರಣಾರ್ಥ ಸ್ಥಾಪಿಸಲಾಗಿದೆ. ಕೈನ್ ರವರು ಬೂಕರ್ ಗ್ರೂಪ್ ನ ಮಾಜಿ ಅಧ್ಯಕ್ಷರು.

 

ಭಾರತ- ಮೊಜಾಂಬಿಕ್ ನಡುವೆ ಮೂರು ಒಪ್ಪಂದಕ್ಕೆ ಸಹಿ

in_m_upದ್ವಿದಳ ಧಾನ್ಯ ವ್ಯಾಪಾರ, ಕ್ರೀಡೆ ಹಾಗೂ ಔಷಧ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡುವ ಸಲುವಾಗಿ ಭಾರತ ಮತ್ತು ಮೊಜಾಂಬಿಕ್ ಸಹಿ ಹಾಕಿವೆ. ಆಫ್ರಿಕಾದ ನಾಲ್ಕು ದೇಶಗಳಿಗೆ ಪ್ರಯಾಣ ಬೆಳೆಸಿರುವ ಪ್ರಧಾನಿ ಮೋದಿರವರು ತಮ್ಮ ಮೊಜಾಂಬಿಕ್ ದೇಶದ ಭೇಟಿ ವೇಳೆ ಮೊಜಾಂಬಿಕ್ ನ ಅಧ್ಯಕ್ಷರಾದ ಫಿಲಿಪೆ ಯೂಸಿ ರವರ ಸಮ್ಮುಖದಲ್ಲಿ ಸಹಿ ಹಾಕಿದರು.

ಮಹತ್ವದ ಒಪ್ಪಂದಗಳು:

  • ಧಾನ್ಯಗಳ ಖರೀದಿಗೆ ಸಂಬಂಧಪಟ್ಟಂತೆ ದೀರ್ಘಾವಧಿ ಒಪ್ಪಂದ
  • ಯುವ ವ್ಯವಹಾರಗಳು ಮತ್ತು ಕ್ರೀಡೆಗಳಿಗೆ ಸಂಬಂಧ ಪಟ್ಟಂತೆ ಒಪ್ಪಂದ
  • ಮಾದಕ ದ್ರವ್ಯ ಸಾಗಣೆ ತಡೆ ನಿಟ್ಟಿನಲ್ಲಿ ಸಹಕಾರ ಒಪ್ಪಂದ

ಇವುಗಳ ಜೊತೆ ಮೊಜಾಂಬಿಕ್ ಜನರ ಆರೋಗ್ಯ ವ್ಯವಸ್ಥೆ ಸುಧಾರಿಸುವ ಸಲುವಾಗಿ ಬಾರತವು ಏಡ್ಸ್ ಚಿಕಿತ್ಸೆ ಸೇರಿದಂತೆ ವಿವಿಧ ಔಷಧಗಳನ್ನು ಮೊಜಾಂಬಿಕ್​ಗೆ ಕೊಡುಗೆಯಾಗಿ ನೀಡಲಿದೆ.