ಕೇಂದ್ರ ಸಂಪುಟ ಪುನರ್ ರಚನೆ: ಒಂದು ನೋಟ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸಚಿವ ಸಂಪುಟ ಪುನಾರಚನೆಯಾಗಿದೆ. ಹೊಸ ಸಂಪುಟಕ್ಕೆ 19 ಹೊಸ ಮುಖಗಳನ್ನು ಸೇರಿಸಿಕೊಳ್ಳಲಾಗಿದೆ. ಸಂಪುಟ ಪುನರ್ ರಚನೆಯಾಗಿ ಹೊಸ ಮುಖಗಳ ಪರಿಚಯ ಇಲ್ಲಿದೆ.
ಕ್ಯಾಬಿನೆಟ್ ಸಚಿವರು:
- ವೆಂಕಯ್ಯನಾಯ್ಡು: ನಗರಾಭಿವೃದ್ದಿ, ಬಡತನ ನಿರ್ಮೂಲನೆ ಹಾಗೂ ಮಾಹಿತಿ ಮತ್ತು ಪ್ರಸಾರ
- ಅನಂತ್ ಕುಮಾರ್: ರಸಗೊಬ್ಬರ, ಸಂಸದೀಯ ವ್ಯವಹಾರ
- ಪ್ರಕಾಶ್ ಜಾವೇದ್ಕರ್: ಮಾನವ ಸಂಪನ್ಮೂಲ ಅಭಿವೃದ್ದಿ
- ರವಿ ಶಂಕರ್: ಮಾಹಿತಿ ತಂತ್ರಜ್ಞಾನ, ಕಾನೂನು
- ನರೇಂದ್ರ ಸಿಂಗ್ ತೋಮರ್: ಗ್ರಾಮೀಣಭಿವೃದ್ದಿ
- ಸ್ಮೃತಿ ಇರಾನಿ: ಜವಳಿ ಖಾತೆ
ರಾಜ್ಯ ಸಚಿವರು:
- ಪಿ.ಪಿ ಚೌಧರಿ :ಕಾನೂನು ಮತ್ತು ನ್ಯಾಯ
- ಸಿ.ಆರ್ ಚೌಧರಿ : ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರೀಕ ಸರಬರಾಜು
- ಅನುಪ್ರಿಯಾ ಪಟೇಲ್ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- ಅಜಯ್ ತಮ್ಟಾ : ಜವಳಿ
- ಮಹೇಂದ್ರ ನಾಥ್ ಪಾಂಡೆ : ಮಾನವ ಸಂಪನ್ಮೂಲ ಅಭಿವೃದ್ದಿ
- ಅರ್ಜುನ್ ರಾಮ್ ಮೆಘ್ವಾಲ್ : ಆರ್ಥಿಕ ಮತ್ತು ಕಾರ್ಪೋರೇಟ್ ವ್ಯವಹಾರ
- ಅನಿಲ್ ಮಾಧವ್ ದಾವೆ : ಪರಿಸರ, ಅರಣ್ಯ ಮತ್ತು ಹವಾಮಾನ
- ರಮೇಶ್ ಚಂದ್ರಪ್ಪ ಜಿಗಜಿಣಗಿ : ಕುಡಿಯುವ ನೀರು ಮತ್ತು ನೈಮರ್ಲ್ಯ
- ರಾಜೇನ್ ಗೋಹೈನ್ : ರೈಲ್ವೆ
- ರಾಮದಾಸ್ ಅಥಾವುಲೆ : ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
- ವಿಜಯ್ ಗೋಯಲ್: ಯುವ ವ್ಯವಹಾರ ಮತ್ತು ಕ್ರೀಡೆ
- ಎಸ್ಎಸ್ ಅಹ್ಲುವಾಲಿಯಾ : ಸಂಸದೀಯ ವ್ಯವಹಾರ
- ಫಗುನ್ ಸಿಂಗ್ ಕುಲಸ್ತೆ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ