ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-22, 2016

Question 1

1.ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ “ಉಡಾನ್” ಯೋಜನೆಯ ಉದ್ದೇಶ _____?

A
ಪ್ರಾದೇಶಿಕ ವಿಮಾನ ಸಂಪರ್ಕ ಕಲ್ಪಿಸುವುದು
B
ಮೀನುಗಾರರಿಗೆ ಜಿಪಿಎಸ್ ಸೌಲಭ್ಯ ನೀಡುವುದು
C
ಗಣಿಗಾರಿಕೆ ಮೇಲೆ ನಿಗಾ ಇಡುವುದು
D
ಡ್ರೋನ್ ಮೂಲಕ ವನ್ಯಜೀವಗಳನ್ನು ಕಾಯುವುದು
Question 1 Explanation: 
ಪ್ರಾದೇಶಿಕ ವಿಮಾನ ಸಂಪರ್ಕ ಕಲ್ಪಿಸುವುದು:

ಸಣ್ಣಪುಟ್ಟ ನಗರಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸಲು ಹಾಗೂ ಜನಸಾಮಾನ್ಯರಿಗೆ ವಿಮಾನ ಸಂಚಾರ ಭಾಗ್ಯ ಒದಗಿಸಲು ಕೇಂದ್ರ ಸರ್ಕಾರ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್- ಜನಸಾಮಾನ್ಯರ ವಿಮಾನ ಹಾರಾಟಕ್ಕೆ ನೆರವು) ಹೆಸರಿನ ಯೋಜನೆ ಘೋಷಿಸಿದೆ. ಜನವರಿಯಿಂದ ಜಾರಿಗೆ ಬರುವ ಸಂಭಾವ್ಯತೆ ಇರುವ "ಉಡಾನ್‌' ಎಂಬ ಈ ಯೋಜನೆಯಡಿ ಒಂದು ತಾಸಿನ ಅವಧಿಯಲ್ಲಿ ಮುಗಿಯಬಹುದಾದ ವಿಮಾನ ಪ್ರಯಾಣಕ್ಕೆ ಗರಿಷ್ಠ 2500 ರೂ. ಪ್ರಯಾಣ ದರ ನಿಗದಿ ಮಾಡಲಾಗುತ್ತದೆ.

Question 2

2.ಯಾವ ರಾಜ್ಯ ಇತ್ತೀಚೆಗೆ ವಿದ್ಯಾರ್ಥಿಗಳಿಗಾಗಿ “ಕೌಶಲ್ಯ ಸೇತು” ಎಂಬ ಕೌಶಲ್ಯ ಅಭಿವೃದ್ದಿ ಯೋಜನೆ ಜಾರಿಗೊಳಿಸಿದೆ?

A
ಮಹಾರಾಷ್ಟ್ರ
B
ಕರ್ನಾಟಕ
C
ಗುಜರಾತ್
D
ಮಧ್ಯ ಪ್ರದೇಶ
Question 2 Explanation: 
ಮಹಾರಾಷ್ಟ್ರ:

ಮಹಾರಾಷ್ಟ್ರ ಸರ್ಕಾರ “ಕೌಶಲ್ಯ ಸೇತು (Kaushalya SETU (Self-Employment and Talent Utilisation))” ಹೆಸರಿನಡಿ ಕೌಶಲ್ಯ ಅಭಿವೃದ್ದಿ ಯೋಜನೆಯನ್ನು ಆರಂಭಿಸಿದೆ. ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ದಿಪಡಿಸುವುದು ಯೋಜನೆಯ ಮುಖ್ಯ ಉದ್ದೇಶ. ಇದರಿಂದ ರಾಜ್ಯದಲ್ಲಿ ಸುಮಾರು 7.5 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಇದಕ್ಕಾಗಿ ಮಹಾರಾಷ್ಟ್ರ ಸರ್ಕಾರ 22 ಕೈಗಾರಿಕೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

Question 3

3.ಇತ್ತೀಚೆಗೆ ನಿಧನರಾದ ಪ್ರಸಿದ್ದ ಗಾಂಧಿವಾದಿ “ಮೆವ ರಾಮ್ಗೊಬಿನ್” ಯಾವ ದೇಶದವರು?

A
ಭೂತಾನ್
B
ದಕ್ಷಿಣ ಆಫ್ರಿಕಾ
C
ಬಾಂಗ್ಲದೇಶ
D
ಚೀನಾ
Question 3 Explanation: 
ದಕ್ಷಿಣ ಆಫ್ರಿಕಾ:

ದಕ್ಷಿಣ ಆಫ್ರಿಕಾದ ಹೋರಾಟಗಾರ ಮತ್ತು ಮಾಜಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಸಂಸತ್ತ್ ಸದಸ್ಯ ಮೆವ ರಾಮ್ಗೊಬಿನ್ ನಿಧನರಾದರು. ರಾಮ್ಗೊಬಿನ್ ಅವರು ಮಹಾತ್ಮಗಾಂಧಿ ಅವರ ಮೊಮ್ಮಗಳಾದ ಇಳಾ

Question 4

4.2017 ಫಿಫಾ 17 ವರ್ಷದಳೊಗಿನವರ ಮಹಿಳಾ ವಿಶ್ವಕಪ್ ಗೆದ್ದ ದೇಶ ಯಾವುದು?

A
ದಕ್ಷಿಣ ಕೊರಿಯಾ
B
ಉತ್ತರ ಕೊರಿಯಾ
C
ಜಪಾನ್
D
ಸ್ಪೇನ್
Question 4 Explanation: 
ಉತ್ತರ ಕೊರಿಯಾ:

ಉತ್ತರ ಕೊರಿಯಾ 2017 ಫಿಫಾ 17 ವರ್ಷದಳೊಗಿನವರ ಮಹಿಳಾ ವಿಶ್ವಕಪ್ ತನ್ನದಾಗಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಉತ್ತರ ಕೊರಿಯಾ ತಂಡ ಜಪಾನ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಗೆದ್ದಿತು. ಆ ಮೂಲಕ ಎರಡು ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡ ಎಂಬ ಗೌರವಕ್ಕೆ ಉತ್ತರ ಕೊರಿಯಾ ಪಾತ್ರವಾಯಿತು. 2008 ರಲ್ಲಿ ಚೊಚ್ಚಲ ವಿಶ್ವಕಪ್ ಅನ್ನು ಈ ತಂಡ ಪಡೆದುಕೊಂಡಿತ್ತು.

Question 5

5.ಇತ್ತೀಚೆಗೆ ಬಿಡುಗಡೆಗೊಂಡ ಫಿಫಾ ಶ್ರೇಣಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
113
B
137
C
133
D
145
Question 5 Explanation: 
137:

ಫಿಫಾ ಶ್ರೇಣಿಯಲ್ಲಿ ಭಾರತ 137ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಆರು ವರ್ಷಗಳಲ್ಲಿ ಭಾರತ ಪಡೆದುಕೊಂಡ ಅತ್ಯುತ್ತಮ ಸ್ಥಾನ ಇದಾಗಿದೆ.

Question 6

6.ಎರಡನೇ ಭಾರತ ಮತ್ತು ಚೀನಾ ಜಂಟಿ ಅಭ್ಯಾಸ ಇತ್ತೀಚೆಗೆ ಎಲ್ಲಿ ನಡೆಯಿತು?

A
ಲಡಾಕ್
B
ಕಚ್
C
ಡೆಹ್ರಾಡೂನ್
D
ಜೈಸ್ಲ್ಮೇರ್
Question 6 Explanation: 
ಲಡಾಕ್:

ಲಡಾಕ್ನಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಚೀನಾ ಜಂಟಿ ಅಭ್ಯಾಸ ನಡೆಸಲಾಗಿದೆ. ಲಡಾಕ್ ಎರಡೂ ದೇಶಗಳ ನಡುವೆ ಸಂಘರ್ಷಕ್ಕೆ ಕಾರಣವಾಗುವ ಪ್ರದೇಶವಾಗಿದೆ. ಇದೇ ಪ್ರದೇಶದಲ್ಲಿ 1962ರ ಭಾರತ–ಚೀನಾ ಯುದ್ಧ ನಡೆದಿತ್ತು. ಭಾರತ–ಚೀನಾ ನಡುವಣ ವಿವಾದಾತ್ಮಕ ಗಡಿಯನ್ನು ವಾಸ್ತವ ನಿಯಂತ್ರಣ ರೇಖೆ ಎಂದು ಗುರುತಿಸಲಾಗುತ್ತದೆ. ನಿಖರವಾದ ಗಡಿ ಗುರುತುಗಳು ಇಲ್ಲದಿರುವುದರಿಂದ ಪೂರ್ವ ಲಡಾಕ್ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆಯುವುದು ಸಾಮಾನ್ಯವಾಗಿದೆ. ಅದೇ ಪ್ರದೇಶದಲ್ಲಿ ಜಂಟಿ ಅಭ್ಯಾಸ ನಡೆಸಲಾಯಿತು. ಭಾರತದ ಗಡಿ ಗ್ರಾಮವೊಂದರಲ್ಲಿ ಎರಡೂ ಸೇನೆಯ ಯೋಧರು ಭೂಕಂಪ ರಕ್ಷಣೆಯ ಅಣಕು ಕಾರ್ಯಾಚರಣೆ ನಡೆಸಿದರು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

Question 7

7.ಪೊಲೀಸ್ ಸ್ಮರಣೋತ್ಸವ ದಿನ (Police Commemoration Day)ವನ್ನು ಎಂದು ಆಚರಿಸಲಾಗುತ್ತದೆ?

A
ಅಕ್ಟೋಬರ್ 20
B
ಅಕ್ಟೋಬರ್ 21
C
ಅಕ್ಟೋಬರ್ 22
D
ಅಕ್ಟೋಬರ್ 23
Question 7 Explanation: 
ಅಕ್ಟೋಬರ್ 21:

ಪೊಲೀಸ್ ಸ್ಮರಣೋತ್ಸವ ದಿನವನ್ನು ಅಕ್ಟೋಬರ್ 21ರಂದು ಆಚರಿಸಲಾಗುವುದು. 1959ರಲ್ಲಿ ಭಾರತ-ಚೀನಾ ಗಡಿ ಭಾಗದಲ್ಲಿ ಪೊಲೀಸ್ ತುಕಡಿಯ ಮೇಲೆ ಚೀನಾ ಹಠತ್ ದಾಳಿ ನಡೆಸಿದಾಗ ಹತ್ತಕ್ಕೂ ಹೆಚ್ಚು ಪೊಲೀಸರು ಮರಣ ಹೊಂದಿದರು. ಅವರ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. 1961 ಚೀನಾ-ಭಾರತ ನಂತರ ಇದುವರೆಗೂ ಸುಮಾರು 33,000 ಪೊಲೀಸರು ದೇಶಕ್ಕಾಗಿ ಪ್ರಾಣ ಬಿಟ್ಟಿದ್ದಾರೆ.

Question 8

8.ಭಾರತೀಯ ಸೇನೆಯ ಗೋರ್ಖಾ ರೈಫಲ್ಸ್ ವಿಭಾಗ ಬ್ರಿಟಿಷ್ ಸೇನೆ ಆಯೋಜಿಸಿದ್ದ ವಿಶ್ವದ ಅತ್ಯಂತ ಯುದ್ಧ ಕೌಶಲ್ಯ ಪ್ರದರ್ಶನ ಕಾರ್ಯಾಚರಣೆಯಲ್ಲಿ ಯಾವ ಪದಕ ಪಡೆದುಕೊಂಡಿತು?

A
ಚಿನ್ನ
B
ಬೆಳ್ಳಿ
C
ಕಂಚು
D
ಅ & ಆ
Question 8 Explanation: 
ಚಿನ್ನ:

ಭಾರತೀಯ ಸೇನೆಯ ಗೋರ್ಖಾ ರೈಫಲ್ಸ್ ವಿಭಾಗ ಬ್ರಿಟಿಷ್ ಸೇನೆ ಆಯೋಜಿಸಿದ್ದ ವಿಶ್ವದ ಅತ್ಯಂತ ಯುದ್ಧ ಕೌಶಲ್ಯ ಪ್ರದರ್ಶನ ಕಾರ್ಯಾಚರಣೆಯಲ್ಲಿ ಸ್ವರ್ಣ ಪದಕ ಗೆದ್ದಿದೆ. ವಾರ್ಷಿಕವಾಗಿ ನಡೆಸಲಾಗುವ ಅಂತಾರಾಷ್ಟ್ರೀಯ ಮಟ್ಟದ ಸೇನಾ ಗಸ್ತು ಕವಾಯತು ಕ್ಯಾಂಬ್ರಿಯನ್ ಪ್ಯಾಟ್ರೋಲ್ ನ್ನು ಬ್ರಿಟಿಷ್ ಸೇನೆ ಆಯೋಜಿಸಿತ್ತು. ವಿಶ್ವದ ಅತ್ಯಂತ ಕಠಿಣ ಸಮರಾಭ್ಯಾಸ ಅಥವಾ ಗಸ್ತು ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಗೋರ್ಖಾ ರೈಫಲ್ಸ್ ವಿಭಾಗದ 2/8 ತಂಡ ಭಾಗವಹಿಸಿ ಸ್ವರ್ಣ ಪದಕ ಪಡೆದಿದೆ.

Question 9

9.ಯಾವ ದೇಶದ ಸಂಸತ್ತು ಮದ್ಯ ಮಾರಾಟ, ಆಮದು ಮತ್ತು ಉತ್ಪಾದನೆ ಮೇಲೆ ನಿಷೇಧ ಹೇರುವ ಸಲುವಾಗಿ ಕಾನೂನು ಜಾರಿಗೆ ತಂದಿದೆ?

A
ಇರಾನ್
B
ಇರಾಕ್
C
ಈಜಿಪ್ಟ್
D
ಸಿಂಗಾಪುರ
Question 9 Explanation: 
ಇರಾಕ್:

ಇರಾಕ್ ಸಂಸತ್ತು ಮದ್ಯ ಮಾರಾಟ, ಆಮದು ಮತ್ತು ಉತ್ಪಾದನೆ ಮೇಲೆ ನಿಷೇಧ ಹೇರುವ ಸಲುವಾಗಿ ಕಾನೂನು ಜಾರಿಗೆ ತಂದಿದೆ. ಸರ್ಕಾರದ ಈ ನಿರ್ಣಯವನ್ನು ಕೆಲವರು ವಿರೋಧಿಸಿದರೆ ಕೆಲವರು ಸ್ವಾಗತಿಸಿದ್ದಾರೆ. ಮದ್ಯ ಸೇವನೆ ಇಸ್ಲಾಂ ಧರ್ಮಕ್ಕೆ ವಿರುದ್ದವಾಗಿದ್ದು, ಈ ಕಾನೂನು ಜಾರಿಗೆ ತರಲಾಗಿದೆ ಎಂದು ಸರ್ಕಾರ ತಿಳಿಸಿದೆ.

Question 10

10.ಈ ಕೆಳಗಿನ ಯಾರು ರಾಷ್ಟ್ರಪತಿಗಳಿಂದ ನೇಮಕಗೊಳ್ಳುತ್ತಾರೆ?

A
ಮುಖ್ಯ ಚುನಾವಣಾಧಿಕಾರಿ
B
ಲೋಕಸಭಾ ಸ್ಪೀಕರ್
C
ರಾಜ್ಯಸಭಾದ ಉಪಸಭಾಪತಿ
D
ಮೇಲಿನ ಎಲ್ಲರೂ
Question 10 Explanation: 
ಮುಖ್ಯ ಚುನಾವಣಾಧಿಕಾರಿ
There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-22.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-22, 2016”

  1. ಸಂತೋಷ್ ಗೌಡರ

    ಧನ್ಯವಾದ ಸರ್

  2. Satish

    Answers for all questions are either 1 or 2 🙂
    Remove 3rd and 4th options coz no answers are listed on these options.

Leave a Comment

This site uses Akismet to reduce spam. Learn how your comment data is processed.