ನೇಪಾಳದ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿ ಸುಶೀಲ ಕರ್ಕಿ ಪ್ರಮಾಣ ವಚನ ಸ್ವೀಕಾರ

ಸುಶೀಲ ಕರ್ಕಿರವರು ನೇಪಾಳದ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗಿ ಅಧಿಕಾರ ವಹಿಸಿಕೊಂಡರು. ನೇಪಾಳದ ರಾಷ್ಟ್ರಪತಿ ನಿಲಯವಾದ ಶೀತಲ್ ನಿವಾಸ್ ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸುಶೀಲ ರವರಿಗೆ ರಾಷ್ಟ್ರಪತಿ ಬಿದ್ಯ ದೇವಿ ಭಂಡಾರಿ ರವರು ಪ್ರಮಾಣ ವಚನ ಬೋಧಿಸಿದರು. ಸುಶೀಲ ರವರು ಜೂನ್ 6, 2017 ರ ತನಕ ಮುಖ್ಯ ನ್ಯಾಯಮೂರ್ತಿ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಸುಶೀಲ ಕರ್ಕಿ ಬಗ್ಗೆ

  • ಸುಶೀಲ ರವರು ಬನರಸ್ ಹಿಂದೂ ವಿಶ್ವವಿದ್ಯಾಲಯ, ವಾರಾಣಾಸಿ ಯಲ್ಲಿ ಪಾಲಿಟಿಕಲ್ ಸೈನ್ಸ್ ನಲ್ಲಿ ಪದವಿ ಪಡೆದಿದ್ದಾರೆ. 1985 ರಲ್ಲಿ ಮಹೇಂದ್ರ ಮಲ್ಟಿಪಲ್ ಕ್ಯಾಂಪಸ್, ಧರನ್ ರಲ್ಲಿ ಸಹಾಯಕ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, 1979 ರಲ್ಲಿ ವಕೀಲರಾಗಿ ಕಾರ್ಯರಂಭ ಮಾಡಿದರು.
  • 2009 ರಲ್ಲಿ ಇವರು ಸುಪ್ರೀಂ ಕೋರ್ಟ್ ನ ಆಡ್-ಹಾಕ್ ನ್ಯಾಯಾಧೀಶರಾಗಿ ನೇಮಕಗೊಂಡು, ನ್ಯಾಯಾಂಗದಲ್ಲಿ ಭ್ರಷ್ಟಚಾರ ನಿರ್ಮೂಲನೆ ಮಾಡುವ ಮೂಲಕ ಪ್ರಸಿದ್ದಿ ಹೊಂದಿದ್ದಾರೆ.
  • ಸುಶೀಲ ರವರು ನವೆಂಬರ್ 2010 ರಲ್ಲಿ ಸುಪ್ರೀಂ ಕೋರ್ಟ್ ನ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು.

ಡಾ. ರಘುವೀರ್ ಚೌಧರಿಗೆ 51ನೇ ಜ್ಞಾನಪೀಠ ಪ್ರಶಸ್ತಿ ಪ್ರದಾನ

raghuveer chou_upಖ್ಯಾತ ಗುಜರಾತಿ ಸಾಹಿತಿ ಡಾ. ರಘುವೀರ್ ಚೌಧರಿ ರವರಿಗೆ 2015 ನೇ ಸಾಲಿನ ಸಾಹಿತ್ಯ ಲೋಕದ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣಭ್ ಮುಖರ್ಜಿ ರವರು ಪ್ರದಾನ ಮಾಡಿದರು. ಜ್ಞಾನಪೀಠ ಪ್ರಶಸ್ತಿಯು ನಗದು ಹಣ, ಫಲಕ ಮತ್ತು ಜ್ಞಾನದೇವತೆ ಸರಸ್ವತಿ ಮೂರ್ತಿಯನ್ನು ಒಳಗೊಂಡಿದೆ. ಚೌಧರಿರವರು ಜ್ಞಾನಪೀಠ ಪ್ರಶಸ್ತಿ ಪಡೆದ ನಾಲ್ಕನೇ ಗುಜರಾತಿ ಸಾಹಿತಿ. ಈ ಹಿಂದೆ ಉಮಾ ಶಂಕರ್ ಜೋಷಿ (1967), ಪನ್ನಲಾಲ್ ಪಟೇಲ್ (1985) ಹಾಗೂ ರಾಜೇಂದ್ರ ಷಾ (2001) ರಲ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಘುವೀರ್ ಚೌಧರಿ ಕುರಿತು

  • ರಘುವೀರ್ ಚೌಧರಿ ರವರು ಪ್ರಸಿದ್ದ ಗುಜರಾತಿ ಕಾದಂಬರಿಕಾರ, ಕವಿ, ವಿಮರ್ಶಕ ಮತ್ತು ಗಾಂಧಿವಾದಿ. ಇವರು ಡಿಸೆಂಬರ್ 5, 1938 ರಂದು, ಗುಜರಾತ್ ನ ಗಾಂಧೀನಗರದ ಬಳಿಯ ಬಪುಪುರ ಗ್ರಾಮದಲ್ಲಿ ಜನಿಸಿದರು. ವೃತ್ತಿಯಲ್ಲಿ ಶಿಕ್ಷಕರಾದ ಇವರು 1998 ರಲ್ಲಿ ನಿವೃತ್ತಿ ಹೊಂದುವ ತನಕ ಗುಜರಾತ್ ವಿಶ್ವವಿದ್ಯಾಲಯ
  • ರಘುವೀರ್ ರವರು ಸುಮಾರು 80ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಕೆಲವು ಪ್ರಸಿದ್ದ ಕಾದಂಬರಿಗಳೆಂದರೆ ಅಮೃತ, ವೆನು ವಸ್ತಲ, ಪುರ್ವರಾಗ. ಕೇವಲ ಸಾಹಿತಿ ಅಲ್ಲದೇ ಪ್ರಸಿದ್ದ ಪತ್ರಿಕೆಗಳಾದ ಸಂದೇಶ್, ಜನ್ಮಭೂಮಿ, ದಿವ್ಯ ಭಾಸ್ಕರ್ ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಜ್ಞಾನಪೀಠ ಪ್ರಶಸ್ತಿಯ ಬಗ್ಗೆ

ಜ್ಞಾನಪೀಠ ಪ್ರಶಸ್ತಿಯು ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ. ಭಾರತೀಯ ಜ್ಞಾನಪೀಠ ಟ್ರಸ್ಟ್ ನಿಂದ 1961 ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತಿದೆ. ಸಂವಿಧಾನ 8ನೇ ಷೆಡ್ಯೂಲ್ ನಲ್ಲಿ ಅಂಗೀಕೃತವಾಗಿರುವ 22 ಭಾಷೆಗಳಲ್ಲಿ ಒಂದರಲ್ಲಿ ಸಾಹಿತಿ ಆಗಿರುವ ಭಾರತೀಯ ಪ್ರಜೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು 11 ಲಕ್ಷ ನಗದು, ಫಲಕ ಮತ್ತು ಸರಸ್ವತಿ ಪ್ರತಿಮೆಯನ್ನು ಒಳಗೊಂಡಿದೆ.

ಪೋರ್ಬ್ಸ್ ಸೆಲೆಬ್ರಿಟಿ ಪಟ್ಟಿ: ಶಾರೂಖ್ ಮತ್ತು ಅಕ್ಷಯ್ ಗೆ ಸ್ಥಾನ

fobes_upವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ 100 ಸೆಲೆಬ್ರಿಟಿಗಳ ಫೋರ್ಬ್ಸ್ ಪಟ್ಟಿ ಇತ್ತೀಚೆಗೆ ಬಿಡುಗಡೆಗೊಂಡಿದೆ. 2016 ರ ಪಟ್ಟಿಯಲ್ಲಿ ಭಾರತದ ಬಾಲಿವುಡ್ ನಟರಾದ ಶಾರುಖ್ ಖಾನ್ ಹಾಗೂ ಅಕ್ಷಯ್ ಕುಮಾರ್ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ.

  • 2016ರ ಪೋರ್ಬ್ಸ್ ಸೆಲೆಬ್ರಿಟಿ ಪಟ್ಟಿಯಲ್ಲಿ ಗಾಯಕಿ ಟೇಲರ್ ಸ್ವಿಪ್ಟ್ ರವರು ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಸ್ವಿಪ್ಟ್ ರವರು 2015-16 ವರ್ಷದ ಅವಧಿಯಲ್ಲಿ ಸುಮಾರು 170 ಮಿಲಿಯನ್ ಡಾಲರ್ ಸಂಪಾದಿಸಿದ್ದಾರೆ ಎನ್ನಲಾಗಿದೆ. ಸಂಗೀತಗಾರ ಓನ್ ಡೈರೆಕ್ಷನ್ ($110 ಮಿಲಿಯನ್), ಲೇಖಕ ಜೇಮ್ಸ್ ಪ್ಯಾಟರ್ಸನ್ ($95 ಮಿಲಿಯನ್) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
  • ಭಾರತದ ಬಾಲಿವುಡ್ ನಟರಾದ ಶಾರುಖ್ ಖಾನ್ ಅವರ ವಾರ್ಷಿಕ ಆದಾಯ 221ಕೋಟಿ ರೂ. ಆಗಿದ್ದು, 86ನೇ ಸ್ಥಾನ ಪಡೆದಿದ್ದಾರೆ. ಇನ್ನೋರ್ವ ಬಾಲಿವುಡ್ ನಟ ಅಕ್ಷಯ್ ಕುಮಾರ್ ( 211 ಕೋಟಿ ರೂ.) 94ನೇ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತ-ತಾಂಜಾನಿಯ ನಡುವೆ ಐದು ಒಪ್ಪಂದಗಳಿಗೆ ಸಹಿ

Tanjania_upಭಾರತ ಮತ್ತು ತಾಂಜಾನಿಯ ನಡುವಿನ ಸಂಬಂಧವನ್ನು ಮತ್ತಷ್ಟು ಉತ್ತಮಪಡಿಸುವ ಸಲುವಾಗಿ ಉಭಯ ದೇಶಗಳ ಮಹತ್ವದ ಐದು ಒಪ್ಪಂದಗಳಿಗೆ ಸಹಿ ಹಾಕಿವೆ. ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ರವರು ತಾಂಜಾನಿಯಾ ಭೇಟಿ ವೇಳೆ ತಾಂಜಾನಿಯ ಅಧ್ಯಕ್ಷ ಜಾನ್ ಮಗುಫುಲಿ ಅವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅರು ಮಾತುಕತೆ ನಡೆಸಿದ ಬಳಿಕ ಉಭು ನಾಯಕರ ಸಮ್ಮುಖದಲ್ಲಿ ಒಪ್ಪಂದ ಪ್ರತಿಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

ಐದು ಒಪ್ಪಂದಗಳು ಯಾವುವು?

  • ತಾಂಜಾನಿಯಾದ ಝಾಂಝಿಬಾರ್ ನಲ್ಲಿ ವತ್ತಿಪರ ತರಭೇತಿ ಕೇಂದ್ರ ಸ್ಥಾಪನೆ
  • ಝಾಂಝಿಬಾರ್ ಪ್ರದೇಶದಲ್ಲಿ ನೀರು ಸರಬರಾಜು ವ್ಯವಸ್ಥೆಗಾಗಿ 920 ಲಕ್ಷ ಡಾಲರ್​ಗಳನ್ನು ಸಾಲವಾಗಿ ಒದಗಿಸುವ ಒಪ್ಪಂದಕ್ಕೆ ಸಹಿ.
  • ಜಲಸಂಪನ್ಮೂಲ ನಿರ್ವಹಣೆ ಮತ್ತು ಅಭಿವೃದ್ದಿ ಕ್ಷೇತ್ರದಲ್ಲಿ ಒಪ್ಪಂದ
  • ನ್ಯಾಷನಲ್ ಸ್ಮಾಲ್ ಇಂಡ್ಸಟ್ರೀಸ್ ಕಾರ್ಪೋರೇಷನ್ ಆಫ್ ಇಂಡಿಯಾ ಮತ್ತು ಸ್ಮಾಲ್ ಇಂಡ್ಸಟ್ರೀಸ್ ಡೆವೆಲಪ್ ಮೆಂಟ್ ಆರ್ಗನೇಷನ್, ತಾಂಜಾನಿಯಾ ನಡುವೆ ಜಂಟಿ ಕ್ರಿಯಾ ಯೋಜನೆಗೆ ಒಪ್ಪಂದ
  • ರಾಜಕೀಯ ಮತ್ತು ಅಧಿಕಾರಿ ಪಾಸ್ ಪೋರ್ಟ್ ಹೊಂದಿರುವವರ ವೀಸಾ ಮೇಲಿನ ಸಡಿಲೀಕರಣ ಒಪ್ಪಂದ

ಇವುಗಳನ್ನ ಹೊರತುಪಡಿಸಿ ಉಭಯ ದೇಶಗಳ ನಾಯಕರು ಸಾಗರಯಾನ ಕ್ಷೇತ್ರದಲ್ಲಿ ರಕ್ಷಣೆ ಮತ್ತು ಭದ್ರತಾ ಪಾಲುದಾರಿಕೆ, ದ್ವಿಪಕ್ಷೀಯವಾಗಿ, ಪ್ರಾದೇಶಿಕವಾಗಿ  ಮತ್ತು ಜಾಗತಿಕವಾಗಿ ಭಯೋತ್ಪಾದನೆ ಮತ್ತು ಪರಿಸರ ಬದಲಾವಣೆ ಬೆದರಿಕೆಗಳನ್ನು ಎದುರಿಸಲು ಉಭಯ ದೇಶಗಳ ಪರಸ್ಪರ ಸಹಕಾರ ನೀಡಲು ಸಮ್ಮತಿ ಸೂಚಿಸಿದವು.

ಭಾರತ-ಕೀನ್ಯಾ ನಡುವೆ ಏಳು ಮಹತ್ವದ ಒಪ್ಪಂದಗಳಿಗೆ ಸಹಿ

india kenya_upಭಾರತ ಮತ್ತು ಕೀನ್ಯಾ ನಡುವಿನ ಸಂಬಂಧವನ್ನು ಮತ್ತು ಸಹಕಾರವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಕೀನ್ಯಾ ಮಹತ್ವದ ಏಳು ಒಪ್ಪಂದಗಳಿಗೆ ಸಹಿ ಹಾಕಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೀನ್ಯಾ ಅಧ್ಯಕ್ಷ ಉಹುರು ಕೀನ್ಯಟ್ಟ ಅವರ ಸಮ್ಮುಖದಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಯಾವ ಯಾವ ಕ್ಷೇತ್ರದಲ್ಲಿ ಒಪ್ಪಂದ

  • ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಪ್ಪಂದ
  • ಬಾಹ್ಯಕಾಶ ಕ್ಷೇತ್ರದಲ್ಲಿ ತಂತ್ರಜ್ಞಾನ ಪಾಲುದಾರಿಕೆ
  • ದುಪ್ಪಟ ತೆರಿಗೆ ತಡೆ ಒಪ್ಪಂದ
  • ಕೀನ್ಯಾದ ರಿಪ್ಟ್ ವ್ಯಾಲಿ ಜವಳಿ ಕಾರ್ಖಾನೆ ಉನ್ನತೀಕರಣಕ್ಕೆ ಭಾರತದಿಂದ 29.95 ಮಿಲಿಯನ್ ಡಾಲರ್ ಸಾಲ
  • ಕೀನ್ಯಾದಲ್ಲಿ ಸಣ್ಣ ಮತ್ತು ಮಧ್ಯಮ ಕಾರ್ಖಾನೆ ಅಭಿವೃದ್ದಿಗೆ ಸಾಲದ ನೆರವು
  • ರಾಜತಾಂತ್ರಿಕ ಪಾಸ್ ಪೋರ್ಟ್ ಹೊಂದಿರುವವರಿಗೆ ವೀಸಾ ವಿನಾಯತಿ
  • ರಾಷ್ಟ್ರೀಯ ವಸತಿ ನಿಯಮ ಅಭಿವೃದ್ದಿ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ಪರಸ್ಪರ ಸಹಕಾರ
  • ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ ಮತ್ತು ಬ್ಯೂರೊ ಆಫ್ ಕೀನ್ಯಾ ಸ್ಟಾಂಡರ್ಡ್ ನಡುವೆ ಪರಸ್ಪರ ಮಾಹಿತಿ ವಿನಿಮಯ ಹಾಗೂ ವ್ಯಾಪಾರ ಒಪ್ಪಂದ

ಇವೆಲ್ಲದರ ಜೊತೆಗೆ ಭಾರತ 30 ಫೀಲ್ಡ್ ಅಂಬುಲೆನ್ಸ್​ಗಳನ್ನು ಕೀನ್ಯಾಕ್ಕೆ ಕೊಡುಗೆಯಾಗಿ ನೀಡಿದೆ ಹಾಗೂ ಕ್ಯಾನ್ಸರ್ ಆಸ್ಪತ್ರೆಗೆ ಆರ್ಥಿಕ ಸಹಾಯ ಮಾಡಲಿದೆ.

ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕ ನಿರ್ಮಾಣ ಒಪ್ಪಂದಕ್ಕೆ ಭಾರತ-ಬಾಂಗ್ಲ ಸಹಿ

India-Bongal_upಸುಂದರಬನ್ಸ್ ಬಳಿ ಕಲ್ಲಿದ್ದಲು ಆಧಾರಿತ 1,320 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕ ಸ್ಥಾಪಿಸುವ ಒಪ್ಪಂದಕ್ಕೆ ಭಾರತ ಮತ್ತು ಬಾಂಗ್ಲದೇಶ ಸಹಿಹಾಕಿವೆ.  ಈ ಸಂಬಂಧ ಬಾಂಗ್ಲದೇಶ-ಇಂಡಿಯಾ ಫ್ರೆಂಡ್ ಶಿಪ್ ಪವರ್ ಕಂಪನಿ ಮತತು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನಡುವೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಬಾಂಗ್ಲದ ನೈರುತ್ಯ ಭಾಗದ ಸುಂದರಬನ್ಸ್ ಬಳಿಯ ರಾಮಪಾಲ್ ಎಂಬ ಸ್ಥಳದಲ್ಲಿ ಈ ಘಟಕ ತಲೆ ಎತ್ತಲಿದೆ.

  • ಈ ವಿದ್ಯುತ್ ಘಟಕವೂ ಉಭಯ ದೇಶಗಳ ನಡುವಿನ ಅತಿ ದೊಡ್ಡ ಘಟಕವಾಗಿದೆ.
  • ಈ ಯೋಜನೆಗೆ ಭಾರತ ಮೂಲದ ಎಕ್ಸಿಂ ಬ್ಯಾಂಕ್ 1.49 ಬಿಲಿಯನ್ ಡಾಲರ್ ಆರ್ಥಿಕ ನೆರವು ನೀಡುತ್ತಿದ್ದು, 2019 ರ ವೇಳೆಗೆ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ.
  • ಈ ಯೋಜನೆಗೆ ಈಗಾಗಲೇ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದು, ವಿಶ್ವದಲ್ಲೇ ಅತಿ ದೊಡ್ಡ ಮ್ಯಾಂಗ್ರೊ ಪ್ರದೇಶ ಎನಿಸಿರುವ ಸುಂದರಬನ್ಸ್ ಗೆ ಈ ಯೋಜನೆಯಿಂದ ದಕ್ಕೆ ಆಗಲಿದೆ ಎಂಬುದು ಕಾರಣ.

ಪೊಖಾರ-ನವದೆಹಲಿ ನೇರ ಸಂಪರ್ಕ ಕಲ್ಪಿಸುವ ಬಸ್ ಗೆ ಚಾಲನೆ

pokh_dehli_upನೇಪಾಳದ ಪೊಖಾರ ಮತ್ತು ಭಾರತದ ನವದೆಹಲಿ ನಡುವೆ ನೇರ ಸಂಪರ್ಕ ಕಲ್ಪಿಸುವ ಮೊದಲ ಬಸ್ ಸೇವೆಗೆ ಚಾಲನೆ ನೀಡಲಾಯಿತು. ನೇಪಾಳದ ಗೃಹ ಸಚಿವ ಶಕ್ತಿ ಬಹದ್ದೂರ್ ಮತ್ತು ಭಾರತದ ನೇಪಾಳ ರಾಯಭಾರಿ ರಂಜಿತ್ ರೆ ರವರು ಈ ಸೇವೆಗೆ ನೇಪಾಳದ ಪೊಖಾರದಲ್ಲಿ ಚಾಲನೆ ನೀಡಿದರು. ಈ ಬಸ್ ದಕ್ಷಿಣಾ ಏಷ್ಯಾದ ಎರಡು ಪ್ರಮುಖ ನಗರಗಳ ನಡುವೆ ನೇರ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ.

  • ಈ ಬಸ್ ಸೇವೆಯನ್ನು ನೇಪಾಳ-ಭಾರತ ನಡುವೆ 2014 ರಲ್ಲಿ ಸಹಿ ಹಾಕಲಾದ ಮೋಟಾರ್ ವೆಹಿಕಲ್ ಒಪ್ಪಂದದ ಅನ್ವಯ ಆರಂಭಿಸಲಾಗಿದೆ
  • ಈ ಸೇವೆಗೆ ಉತ್ತರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ ಮೊದಲು ಪ್ರಸ್ತಾವನೆ ಸಲ್ಲಿಸಿತ್ತು.